ಬಾಲ ಕಲಾವಿದರ ಸುರಕ್ಷತೆ: 3 ಗಂಟೆಗೊಮ್ಮೆ ಬ್ರೇಕ್,ಶೇ.20 ಫಿಕ್ಸೆಡ್ ಡೆಪಾಸಿಟ್
ರಿಯಾಲಿಟಿ ಶೋದಲ್ಲಿರುವ ಮಕ್ಕಳಿಗೂ ಅನ್ವಯ
Team Udayavani, Jun 26, 2022, 7:10 AM IST
ನವದೆಹಲಿ:ಮನರಂಜನಾ ಕ್ಷೇತ್ರದಲ್ಲಿ ಮಕ್ಕಳನ್ನು ಸತತ 27 ದಿನಗಳಿಗಿಂತ ಹೆಚ್ಚು ದಿನ ದುಡಿಸುವಂತಿಲ್ಲ, ಪ್ರತಿ 3 ಗಂಟೆಗಳಿಗೊಮ್ಮೆ ಬಾಲಕಲಾವಿದರಿಗೆ ವಿರಾಮ ನೀಡಬೇಕು, ಅವರ ಆದಾಯದ ಶೇ.20ರಷ್ಟನ್ನು ನಿಶ್ಚಿತ ಠೇವಣಿಯಲ್ಲಿ ಜಮೆ ಮಾಡಬೇಕು…
ಬಾಲಕಲಾವಿದರ ಸುರಕ್ಷತೆಯ ದೃಷ್ಟಿಯಿಂದ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ(ಎನ್‌ಸಿಪಿಸಿಆರ್) ಶನಿವಾರ ಹೊರಡಿಸಿರುವ ಹೊಸ ಕರಡು ಮಾರ್ಗಸೂಚಿಯಲ್ಲಿ ಈ ಎಲ್ಲ ಅಂಶಗಳನ್ನು ಕಡ್ಡಾಯಗೊಳಿಸಲಾಗಿದೆ.
ಶಿಕ್ಷಣಕ್ಕೆ ಅಡ್ಡಿಯಾಗಬಾರದು:
ಚಿತ್ರೀಕರಣದಲ್ಲಿ ಭಾಗಿಯಾಗಿರುವ ಮಕ್ಕಳ ಶಾಲಾ ಶಿಕ್ಷಣಕ್ಕೆ ಯಾವುದೇ ತೊಂದರೆಯಾಗದಂತೆ ನಿರ್ಮಾಪಕರೇ ನೋಡಿಕೊಳ್ಳಬೇಕು. ಮನರಂಜನಾ ಕ್ಷೇತ್ರದಲ್ಲಿ ತೊಡಗಿಸಿಕೊಂಡ ಕಾರಣ ಶಾಲೆಗೆ ಮಕ್ಕಳು ಗೈರಾಗಿದ್ದರೆ, ಅಂಥ ಮಕ್ಕಳಿಗಾಗಿ ನಿರ್ಮಾಪಕರೇ ಒಬ್ಬ ಖಾಸಗಿ ಟ್ಯೂಟರ್ ಅನ್ನು ನೇಮಕ ಮಾಡಬೇಕು. ಮಕ್ಕಳಿಗೆ ನೀಡಲಾಗುವ ವೇತನದ ಶೇ.20ರಷ್ಟನ್ನು ರಾಷ್ಟ್ರೀಕೃತ ಬ್ಯಾಂಕ್‌ನಲ್ಲಿ ಫಿಕ್ಸೆಡ್ ಡೆಪಾಸಿಟ್ ಆಗಿ ಜಮೆ ಮಾಡಬೇಕು.
ಬಾಲಕಲಾವಿದರು ಕೆಲಸ ಮಾಡುವ ಪರಿಸರವು ಸುರಕ್ಷಿತವಾಗಿದ್ದು, ಅವರ ಮೇಲೆ ಯಾವುದೇ ದೌರ್ಜನ್ಯಗಳು ಆಗದಂತೆ ನೋಡಿಕೊಳ್ಳಬೇಕು ಎಂದೂ ಮಾರ್ಗಸೂಚಿಯಲ್ಲಿ ಸೂಚಿಸಲಾಗಿದೆ.
ಯಾವೆಲ್ಲ ಕ್ಷೇತ್ರಗಳಿಗೆ ಅನ್ವಯ?
ಟಿವಿ ಕಾರ್ಯಕ್ರಮಗಳು, ರಿಯಾಲಿಟಿ ಶೋಗಳು, ಧಾರಾವಾಹಿಗಳು, ಸುದ್ದಿ ಮತ್ತು ಮಾಹಿತಿ ಮಾಧ್ಯಮ, ಸಿನಿಮಾಗಳು, ಒಟಿಟಿ ಪ್ಲಾಟ್‌ಫಾರಂಗಳು, ಸಾಮಾಜಿಕ ಜಾಲತಾಣಗಳು, ಪ್ರದರ್ಶನ ಕಲೆ, ಜಾಹೀರಾತು ಹಾಗೂ ವಾಣಿಜ್ಯ ಮನರಂಜನಾ ಚಟುವಟಿಕೆಗಳಲ್ಲಿ ತೊಡಗಿರುವ ಮಕ್ಕಳಿಗೆ ಈ ನಿಯಮಗಳು ಅನ್ವಯವಾಗುತ್ತದೆ.
ಮಾರ್ಗಸೂಚಿಯಲ್ಲಿರುವ ಕಡ್ಡಾಯ ನಿಯಮಗಳು
– ಆಯಾ ಜಿಲ್ಲಾಡಳಿತದಲ್ಲಿ ಬಾಲ ಕಲಾವಿದರ ನೋಂದಣಿ ಕಡ್ಡಾಯ
– ಮಕ್ಕಳ ಶಿಕ್ಷಣಕ್ಕೆ ತೊಂದರೆ ಆಗದಂತೆ ನಿರ್ಮಾಪಕರು ನೋಡಿಕೊಳ್ಳಬೇಕು
– ಸಮಯಕ್ಕೆ ಸರಿಯಾಗಿ ವೇತನ ಪಾವತಿಸಬೇಕು, ಶೇ.20ರಷ್ಟನ್ನು ಮಕ್ಕಳ ಹೆಸರಲ್ಲೇ ಠೇವಣಿ ಇಡಬೇಕು
– ಮಕ್ಕಳೊಂದಿಗೆ ಡ್ರೆಸ್ಸಿಂಗ್ ರೂಂ ಹಂಚಿಕೊಳ್ಳಲು ವಯಸ್ಕರಿಗೆ ಅವಕಾಶ ನೀಡಬಾರದು
– ಅಪಾಯಕಾರಿ ಬೆಳಕು, ಕಿರಿಕಿರಿ ಉಂಟುಮಾಡುವ ಅಥವಾ ಕಲುಷಿತ ಕಾಸೆ¾ಟಿಕ್‌ಗಳಿಂದ ಮಕ್ಕಳನ್ನು ದೂರವಿಡಬೇಕು
– ನಿರ್ಮಾಣ ಹಂತದಲ್ಲಿ ಮಕ್ಕಳ ಹಕ್ಕುಗಳ ನಿಯಮ ಪಾಲಿಸಲಾಗಿದೆ ಎಂದು ಪ್ರಕಟಣೆ ಹೊರಡಿಸಬೇಕು
– ಮಕ್ಕಳ ವೈದ್ಯಕೀಯ ಫಿಟೆ°ಸ್ ಪ್ರಮಾಣಪತ್ರ, ಪೊಲೀಸ್ ದೃಢೀಕರಣ ಪತ್ರವನ್ನು ಪ್ರೊಡಕ್ಷನ್ ಟೀಂ ಒದಗಿಸಬೇಕು
– 6 ವರ್ಷದೊಳಗಿನ ಮಕ್ಕಳನ್ನು ಬಳಸುವುದಿದ್ದರೆ ನೋಂದಾಯಿತ ನರ್ಸ್ ಎಲ್ಲ ಸಮಯದಲ್ಲೂ ಅಲ್ಲಿರಬೇಕು
– ಹೆತ್ತವರು ಅಥವಾ ಪೋಷಕರು ಉಪಸ್ಥಿತಿಯಿರುವಂತೆ ನೋಡಿಕೊಳ್ಳಬೇಕು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Allu Arjun ನಿವಾಸದಲ್ಲಿ ದಾಂಧಲೆ!; 8 ಮಂದಿ ಬಂಧನ: ಕೃತ್ಯ ಎಸಗಿದ್ದು ಯಾರು?
Vasundhara Raje ಬೆಂಗಾವಲು ವಾಹನ ಪಲ್ಟಿ; ನಾಲ್ವರು ಪೊಲೀಸರಿಗೆ ಗಾಯ
Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ
Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ
Mohan Bhagwat; ತಿಳಿವಳಿಕೆಯ ಕೊರತೆಯಿಂದ ಧರ್ಮದ ಹೆಸರಿನಲ್ಲಿ ಶೋಷಣೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.