10 ಲ.ರೂ. ಆರ್ಥಿಕ ನೆರವು, ವಿದ್ಯಾರ್ಥಿವೇತನ, ಮಾಸಿಕ ಸ್ಟೈಫಂಡ್
ಕೊರೊನಾದಿಂದ ತಬ್ಬಲಿಯಾದ ಮಕ್ಕಳಿಗೆ ಸೌಲಭ್ಯ ವಿತರಣೆ; ಪಿಎಂ ಕೇರ್ಸ್ ಫಾರ್ ಚಿಲ್ಡ್ರನ್ ಯೋಜನೆಯಡಿ ನೆರವು
Team Udayavani, May 31, 2022, 7:00 AM IST
ಹೊಸದಿಲ್ಲಿ: ಕೊರೊನಾದಿಂದಾಗಿ ಹೆತ್ತವರಿಬ್ಬರನ್ನೂ ಕಳೆದುಕೊಂಡು ಅನಾಥರಾದ ಮಕ್ಕಳಿಗೆ ಪಿಎಂ ಕೇರ್ಸ್ ಫಾರ್ ಚಿಲ್ಡ್ರನ್ ಯೋಜನೆಯ ಸೌಲಭ್ಯಗಳನ್ನು ಸೋಮವಾರ ಪ್ರಧಾನಿ ಮೋದಿ ಬಿಡುಗಡೆ ಮಾಡಿದ್ದಾರೆ.
ಕೇಂದ್ರ ಸರಕಾರಕ್ಕೆ ಸೋಮವಾರ 8 ವರ್ಷ ತುಂಬಿದ್ದು, ಈ ಸಂದರ್ಭದಲ್ಲಿ ಪ್ರಧಾನಿ ಈ ಮಕ್ಕಳಿಗೆ ಸ್ಕಾಲರ್‌ಶಿಪ್ ಮೊತ್ತವನ್ನು ವರ್ಗಾವಣೆ ಮಾಡಿದ್ದಾರೆ. ಜತೆಗೆ ಪಿಎಂ ಕೇರ್ಸ್ ಫಾರ್ ಚಿಲ್ಡ್ರನ್‌ನ ಪಾಸ್‌ಬುಕ್, ಆಯುಷ್ಮಾನ್ ಭಾರತ್‌ನಡಿ ಆರೋಗ್ಯ ಕಾರ್ಡ್ ನೀಡಿದ್ದಾರೆ.
ಕರ್ನಾಟಕ ಸೇರಿದಂತೆ ದೇಶದ ವಿವಿಧ ಭಾಗಗಳ ಈ ಮಕ್ಕಳೊಂದಿಗೆ ವೀಡಿಯೋ ಕಾನ್ಫರೆನ್ಸ್ ಸಂವಾದ ನಡೆಸಿದ ಪ್ರಧಾನಿ ಮೋದಿ, ಪಿಎಂ ಕೇರ್ಸ್ ಫಾರ್ ಚಿಲ್ಡ್ರನ್ ಯೋಜನೆ ದೇಶದ ಪ್ರತಿಯೊಬ್ಬ ನಾಗರಿಕನೂ ನಿಮ್ಮೊಂದಿಗಿ
ದ್ದಾನೆ ಎನ್ನುವುದಕ್ಕೆ ಸಾಕ್ಷಿ. ಎಷ್ಟೇ ಹತಾಶೆಯಿದ್ದರೂ ನಾವು ನಮ್ಮ ಮೇಲೆ ನಂಬಿಕೆ ಇರಿಸಿದರೆ ಬೆಳಕಿನ ಕಿರಣವು ಖಂಡಿತ ಗೋಚರಿಸುತ್ತದೆ. ಅದಕ್ಕೆ ನಮ್ಮ ದೇಶವೇ ಉತ್ತಮ ಉದಾಹರಣೆ ಎಂದಿದ್ದಾರೆ.
ನೀವೆಲ್ಲವೂ ಆರೋಗ್ಯವಾಗಿರಬೇಕು, ರೋಗಮುಕ್ತವಾಗಿರಬೇಕು. ಖೇಲೋ ಇಂಡಿಯಾ, ಫಿಟ್ ಇಂಡಿಯಾ ಚಳವಳಿ, ಯೋಗ ದಿನಾ ಚರಣೆಯಲ್ಲಿ ಪಾಲ್ಗೊಳ್ಳಬೇಕು ಎಂದು ಮಕ್ಕಳಿಗೆ ಕರೆ ನೀಡಿದ್ದಾರೆ.
ಕೊರೊನಾದಿಂದ ಹೊರಬಂದಿರುವ ಭಾರತ ಈಗ ವಿಶ್ವದಲ್ಲೇ ವೇಗವಾಗಿ ಬೆಳೆಯುತ್ತಿರುವ ಅರ್ಥವ್ಯವಸ್ಥೆಯಾಗಿದೆ. ಭ್ರಷ್ಟಾಚಾರ, ಹಗರಣ ಗಳು, ಭಯೋತ್ಪಾದಕ ಸಂಘಟನೆಗಳ ಹಾವಳಿಯೂ ಈಗ ಇಲ್ಲವಾಗಿದೆ ಎಂದು ಮೋದಿ ಹೇಳಿದ್ದಾರೆ.
ಯಾರಿಗೆ, ಏನು ಅನುಕೂಲ?
2020ರ ಮಾ. 11ರಿಂದ 2022ರ ಫೆ. 28ರ ಅವಧಿಯಲ್ಲಿ ಹೆತ್ತವರಿಬ್ಬರನ್ನೂ ಕಳೆದುಕೊಂಡ ಅಥವಾ ಬದುಕುಳಿದಿದ್ದ ತಂದೆ ಅಥವಾ ತಾಯಿಯನ್ನು, ಕಾನೂನಾತ್ಮಕ ಪೋಷಕರನ್ನು, ದತ್ತು ಪಡೆದು ಕೊಂಡಿದ್ದ ಪೋಷಕರನ್ನು ಕಳೆದುಕೊಂಡ ಮಕ್ಕಳು ಈ ಯೋಜನೆಯ ಫಲಾನುಭವಿಗಳು. ಇವರಿಗೆ 23 ವರ್ಷ ತುಂಬುವ ವೇಳೆ 10 ಲಕ್ಷ ರೂ., ವಿದ್ಯಾಭ್ಯಾಸದ ವೇಳೆ 20 ಸಾವಿರ ರೂ. ಸ್ಕಾಲರ್‌ಶಿಪ್ ಮತ್ತು ದೈನಂದಿನ ಅಗತ್ಯಗಳಿಗಾಗಿ ಮಾಸಿಕ 4 ಸಾವಿರ ರೂ. ಮೊತ್ತವನ್ನು ಪಿಎಂ ಕೇರ್ಸ್ ಫಾರ್ ಚಿಲ್ಡ್ರನ್‌ನಿಂದ ನೀಡಲಾಗುತ್ತದೆ. ಇದಲ್ಲದೆ ವೃತ್ತಿಪರ ಕೋರ್ಸ್‌ಗಳು ಮತ್ತು ಉನ್ನತ ಶಿಕ್ಷಣದ ವೇಳೆ ಸಾಲ ಪಡೆಯಲು ಈ ಮಕ್ಕಳು ಅರ್ಹರಾಗಿರುತ್ತಾರೆ. ಆಯುಷ್ಮಾನ್ ಕಾರ್ಡ್ ಮೂಲಕ 5 ಲಕ್ಷ ರೂ.ಗಳ ಆರೋಗ್ಯ ವಿಮೆ ಸಿಗಲಿದೆ. ಯೋಜನೆಯಡಿ 9,042 ಅರ್ಜಿ ಬಂದಿದ್ದು, ಈ ಪೈಕಿ 4,345 ಅರ್ಹತೆ ಪಡೆದಿವೆ.
ದಕ್ಷಿಣ ಕನ್ನಡ, ಉಡುಪಿಯ 14 ಮಕ್ಕಳು
ಮಂಗಳೂರು/ ಉಡುಪಿ: ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ ಕೊರೊನಾದಿಂದ ಅನಾಥರಾದ 14 ಮಕ್ಕಳಿಗೆ ಪಿಎಂ ಕೇರ್ ಫಾರ್ ಚಿಲ್ಡ್ರನ್ ಯೋಜನೆಯಡಿ ಸೋಮವಾರ ಸೌಲಭ್ಯ ವಿತರಿಸ ಲಾಯಿತು. ಇವರಲ್ಲಿ ದಕ್ಷಿಣ ಕನ್ನಡದ 11; ಉಡುಪಿಯ ಮೂವರು ಸೇರಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Hubli: ಅಯ್ಯಪ್ಪ ಶಿಬಿರದಲ್ಲಿ ಅಗ್ನಿ ಆಕಸ್ಮಿಕ: ಒಂಬತ್ತು ವೃತಧಾರಿಗಳಿಗೆ ಗಂಭೀರ ಗಾಯ
Punjab ಪೊಲೀಸರ ಮೇಲೆ ಗ್ರೆನೇಡ್ ದಾಳಿ ನಡೆಸಿದ್ದ ಮೂವರು ಖಲಿಸ್ತಾನಿ ಉ*ಗ್ರರ Encounter
Tollywood: ‘ಗೇಮ್ ಚೇಂಜರ್ʼಗೆ ರಾಮ್‌ಚರಣ್ ರಾಷ್ಟ್ರ ಪ್ರಶಸ್ತಿ ಪಡೆಯುತ್ತಾರೆ – ಸುಕುಮಾರ್
Mudigere: ಹೊರನಾಡು ದೇವರ ದರ್ಶನಕ್ಕೆ ಬರುತ್ತಿದ್ದವರ ವಾಹನ ಪಲ್ಟಿ… ನಾಲ್ವರಿಗೆ ಗಂಭೀರ ಗಾಯ
Trasi: ನಾಪತ್ತೆಯಾಗಿದ್ದ ಬೋಟ್ ರೈಡರ್ ಶವ 36 ಗಂಟೆಗಳ ಬಳಿಕ ಪತ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.