ಲಡಾಖ್ ಬಿಕ್ಕಟ್ಟಿನ ನಡುವೆ 3 ದಶಕಗಳ ನಂತರ ಭಾರತದ ಅಕ್ಕಿ ಖರೀದಿಗೆ ಮುಂದಾದ ಚೀನಾ
ಒಟ್ಟು ಒಂದು ಲಕ್ಷ ಟನ್ ಅಕ್ಕಿಯನ್ನು ಹಡಗಿನಲ್ಲಿ ಕಳುಹಿಸಲು ವ್ಯಾಪಾರಿಗಳ ಒಪ್ಪಂದ
Team Udayavani, Dec 2, 2020, 2:30 PM IST
Representative Image
ಬೀಜಿಂಗ್/ಮುಂಬೈ:ಸರಬರಾಜು ನೀತಿಯಲ್ಲಿನ ಬದಲಾವಣೆ ಹಾಗೂ ಭಾರೀ ಪ್ರಮಾಣದ ಕಡಿತದ ದರದ ಆಫರ್ ಹಿನ್ನೆಲೆಯಲ್ಲಿ ಮೂರು ದಶಕಗಳ ನಂತರ ಇದೇ ಮೊದಲ ಬಾರಿಗೆ ಚೀನಾ ಭಾರತದ ಅಕ್ಕಿಯನ್ನು ಆಮದು ಮಾಡಿಕೊಳ್ಳಲು ಆರಂಭಿಸಿದೆ ಎಂದು ಭಾರತೀಯ ಕೈಗಾರಿಕಾ ಅಧಿಕಾರಿಗಳು ರಾಯಿಟರ್ಸ್ ಗೆ ತಿಳಿಸಿದ್ದಾರೆ.
ಜಗತ್ತಿನಲ್ಲಿಯೇ ಭಾರತ ಅಕ್ಕಿ ರಫ್ತು ಮಾಡುವ ಅತೀ ದೊಡ್ಡ ದೇಶವಾಗಿದೆ. ಚೀನಾ ಅತೀ ದೊಡ್ಡ ಆಮದುದಾರ ದೇಶವಾಗಿತ್ತು. ಬೀಜಿಂಗ್ ವಾರ್ಷಿಕವಾಗಿ ಭಾರತದಿಂದ 4 ಮಿಲಿಯನ್ ಟನ್ ಗಳಷ್ಟು ಅಕ್ಕಿಯನ್ನು ಆಮದು ಮಾಡಿಕೊಳ್ಳುತ್ತಿತ್ತು. ಆದರೆ ಗುಣಮಟ್ಟದ ವಿಚಾರದಿಂದಾಗಿ ಚೀನಾ ಭಾರತದ ಅಕ್ಕಿಯನ್ನು ಆಮದು ಮಾಡಿಕೊಳ್ಳುವುದನ್ನು ನಿಲ್ಲಿಸಿತ್ತು.
ದೇಶದ ಲಡಾಖ್ ನ ಗಡಿಪ್ರದೇಶದ ವಿಚಾರದಲ್ಲಿ ಭಾರತ ಮತ್ತು ಚೀನಾ ನಡುವೆ ರಾಜಕೀಯ ಬಿಕ್ಕಟ್ಟು ಮುಂದುವರಿದಿರುವ ನಡುವೆಯೇ ಈ ಮಹತ್ವದ ಬೆಳವಣಿಗೆ ನಡೆದಿದೆ ಎಂದು ವರದಿ ತಿಳಿಸಿದೆ.
ಇದನ್ನೂ ಓಧಿ:ಪುತ್ತೂರು ಟು ಬೆಂಗಳೂರು: ಯುವತಿಯ ಚಿಕಿತ್ಸೆಗಾಗಿ ಝೀರೋ ಟ್ರಾಫಿಕ್ ನಲ್ಲಿ ಸಾಗಿದ ಆಂಬುಲೆನ್ಸ್
ಮೂರು ದಶಕಗಳ ನಂತರ ಇದೇ ಮೊದಲ ಬಾರಿಗೆ ಚೀನಾ ಅಕ್ಕಿಯನ್ನು ಖರೀದಿಸಿದೆ. ಭಾರತದ ಅಕ್ಕಿಯ ಗುಣಮಟ್ಟವನ್ನು ಪರಿಶೀಲಿಸಿದ ನಂತರ ಮುಂದಿನ ವರ್ಷದಿಂದ ಖರೀದಿಯನ್ನು ಇನ್ನಷ್ಟು ಹೆಚ್ಚಳ ಮಾಡುವ ಸಾಧ್ಯತೆ ಇದೆ ಎಂದು ಅಕ್ಕಿ ರಫ್ತುದಾರರ ಅಸೋಸಿಯೇಶನ್ ಅಧ್ಯಕ್ಷ ಬಿವಿ ಕೃಷ್ಣ ರಾವ್ ತಿಳಿಸಿದ್ದಾರೆ.
ಡಿಸೆಂಬರ್ ನಿಂದ ಫೆಬ್ರವರಿವರೆಗೆ ಪ್ರತಿ ಟನ್ ಗೆ 300 ಡಾಲರ್ ನಂತೆ ಒಟ್ಟು ಒಂದು ಲಕ್ಷ ಟನ್ ಅಕ್ಕಿಯನ್ನು ಹಡಗಿನಲ್ಲಿ ಕಳುಹಿಸಲು ವ್ಯಾಪಾರಿಗಳು ಒಪ್ಪಂದ ಮಾಡಿಕೊಂಡಿರುವುದಾಗಿ ಕೈಗಾರಿಕೆಯ ಅಧಿಕಾರಿಗಳು ತಿಳಿಸಿದ್ದಾರೆ.
ಚೀನಾಕ್ಕೆ ಥಾಯ್ ಲ್ಯಾಂಡ್, ವಿಯೆಟ್ನಾಂ, ಮ್ಯಾನ್ಮಾರ್ ಹಾಗೂ ಪಾಕಿಸ್ತಾನ ನಿಗದಿತವಾಗಿ ಹೆಚ್ಚುವರಿ ಅಕ್ಕಿ ರಫ್ತು ಮಾಡುವ ಸಾಂಪ್ರದಾಯಿಕ ದೇಶಗಳಾಗಿವೆ ಎಂದು ವರದಿ ಹೇಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bhopal: ಉಗ್ರರನ್ನು ಇರಿಸಲಾಗಿದ್ದ ಕೇಂದ್ರ ಕಾರಾಗೃಹದ ಬಳಿ ಚೀನಾ ನಿರ್ಮಿತ ಡ್ರೋನ್ ಪತ್ತೆ…
Odisha: ‘ಪ್ರವಾಸಿ ಭಾರತೀಯ ದಿವಸ್’ ಉದ್ಘಾಟಿಸಿದ ಪ್ರಧಾನಿ ಮೋದಿ; ವಿಶೇಷ ರೈಲಿಗೂ ಚಾಲನೆ
CID Crime Serial ಪ್ರಭಾವ…ಅಣ್ಣನನ್ನು ಯಾಮಾರಿಸಲು ಅಪಹರಣದ ನಾಟಕವಾಡಿ ಸಿಕ್ಕಿಬಿದ್ದ ತಮ್ಮ!
Google Map: ಗೂಗಲ್ ಮ್ಯಾಪ್ ನಂಬಿ ಗಡಿ ದಾಟಿದ ಪೊಲೀಸರನ್ನೇ ಹಿಡಿದು ಹಾಕಿದ ಗ್ರಾಮಸ್ಥರು
Wrong Spelling: ಅಪಹರಣದ ಪತ್ರದಲ್ಲಿ ಅಕ್ಷರ ತಪ್ಪು ಬರೆದು ಸಿಕ್ಕಿಬಿದ್ದ ಭೂಪ!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.