![BR-Hills](https://www.udayavani.com/wp-content/uploads/2025/02/BR-Hills-415x249.jpg)
![BR-Hills](https://www.udayavani.com/wp-content/uploads/2025/02/BR-Hills-415x249.jpg)
Team Udayavani, Jan 30, 2021, 7:53 PM IST
ಹೊಸದಿಲ್ಲಿ: ಎರಡು ನೆರೆಯ ರಾಷ್ಟ್ರಗಳಾದ ಚೀನ ಮತ್ತು ಪಾಕಿಸ್ಥಾನ ಮತ್ತೆ ಭಾರತದ ವಿರುದ್ಧ ಸಂಚು ಹೂಡುತ್ತಿವೆ. ಲಡಾಖ್‌ನಲ್ಲಿ ಭಾರತೀಯ ಸೇನೆಯಿಂದ ಮುಜುಗರಕ್ಕೀಡಾದ ಚೀನ ತನ್ನ ವಿಶೇಷ ಸ್ನೇಹಿತ ಪಾಕಿಸ್ಥಾನಕ್ಕಾಗಿ ಎರಡನೇ ನೌಕಾಯುದ್ಧ ಹಡಗು (ಫ್ರಿಗೇಟ್) ಸಿದ್ಧಪಡಿಸಿದೆ.
ಗ್ಲೋಬಲ್ ಟೈಮ್ಸ್ ವರದಿ ಮಾಡಿದಂತೆ ಚೀನದ ಈ 054ಎ ಫ್ರಿಗೇಟ್, ಸುಧಾರಿತ ರಾಡಾರ್ ವ್ಯವಸ್ಥೆಗಳು ಮತ್ತು ದೀರ್ಘ-ಶ್ರೇಣಿಯ ಕ್ಷಿಪಣಿಗಳನ್ನು ಹೊಂದಿದೆ. ಮಾಧ್ಯಮ ವರದಿಗಳ ಪ್ರಕಾರ ಇದು ಪಾಕಿಸ್ಥಾನದ ರಕ್ಷಣ ಸಾಮರ್ಥ್ಯಕ್ಕೆ ಹೊಸ ಶಕ್ತಿಯನ್ನು ತುಂಬಿದೆ.
2017ರಲ್ಲಿ ಗುತ್ತಿಗೆ
054 ಎ/ಪಿ ಮಾದರಿಯ 4 ಯುದ್ಧನೌಕೆಗಳ ನಿರ್ಮಾಣಕ್ಕಾಗಿ ಪಾಕಿಸ್ಥಾನ ನೌಕಾಪಡೆ 2017ರಲ್ಲಿ ಚೀನದಿಂದ ಒಪ್ಪಂದ ಮಾಡಿಕೊಂಡಿತು. ಮೊದಲ ಫ್ರಿಗೇಟ್ ಅನ್ನು ಆಗಸ್ಟ್ 2020ರಲ್ಲಿ ಉತ್ಪಾದಿಸಲಾಗಿತ್ತು. ಪಾಕಿಸ್ಥಾನದ ಎರಡನೇ ಯುದ್ಧ ನೌಕೆಯನ್ನು ಶುಕ್ರವಾರ ಹಸ್ತಾಂತರಿಸಲಾಯಿತು.
ಚೀನದ ಅತ್ಯಾಧುನಿಕ ಯುದ್ಧ ನೌಕೆ
ಈ ಹಡಗು ಚೀನೀ ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್‌ಎ) ನೌಕಾಪಡೆಯ ಮುಖ್ಯ ಅಸ್ತ್ರವಾಗಿದೆ. ಪಿಎಲ್‌ಎ ಅಂತಹ 30 ಹಡಗುಗಳನ್ನು ಹೊಂದಿದೆ. ನೇವಲ್ ಮಿಲಿಟರಿ ಸ್ಟಡೀಸ್ ರಿಸರ್ಚ್ ಇನ್‌ಸ್ಟಿಟ್ಯೂಟ್ ಹಿರಿಯ ಸಂಶೋಧನ ಸಹವರ್ತಿ ಜಾಂಗ್ ಅವರ ಪ್ರಕಾರ ಹೊಸ ಫ್ರಿಗೇಟ್ ಟೈಪ್ 054 ಎ ಅನ್ನು ಆಧರಿಸಿದೆ. ಇದು ಚೀನದ ಅತ್ಯಾಧುನಿಕ ಫ್ರಿಗೇಟ್‌ರೂ ಹೌದು.
ಚೀನದಿಂದ 8 ಜಲಾಂತರ್ಗಾಮಿ ನೌಕೆ
ಗ್ಲೋಬಲ್ ಟೈಮ್ಸ್ ವರದಿ ಮಾಡಿದ ಪ್ರಕಾರ ಪಾಕಿಸ್ಥಾನ ನೌಕಾಪಡೆಯು ಚೀನದಿಂದ 8 ಜಲಾಂತರ್ಗಾಮಿ ನೌಕೆಗಳನ್ನು ಖರೀದಿಸಿದೆ. ಈ ಜಲಾಂತರ್ಗಾಮಿ ಟೈಪ್ 039 ಬಿ ಯುವಾನ್ ವರ್ಗಕ್ಕೆ ಸೇರಿದ್ದಾಗಿದೆ. ಇದು ಡೀಸೆಲ್ ವಿದ್ಯುತ್ ಜಲಾಂತರ್ಗಾಮಿ. ಇದು anti-ship cruise missiles ಅನ್ನು ಒಯ್ಯುತ್ತದೆ. air independent ಪ್ರೊಪಲ್ಷನ್ ಸಿಸ್ಟಮ್‌ನಿಂದಾಗಿ ಇದು ಕಡಿಮೆ ಶಬ್ದವನ್ನು ಹೊಂದಿರುತ್ತದೆ. ಇದರಿಂದಾಗಿ ನೀರಿನ ಅಡಿಯಲ್ಲಿ ಕಂಡುಹಿಡಿಯುವುದು ತುಂಬಾ ಕಷ್ಟ.
ಜೆಎಫ್-17
ಪಾಕಿಸ್ಥಾನಕ್ಕೆ ಚೀನ ಈಗಾಗಲೇ ಅತ್ಯಾಧುನಿಕ ಜೆಎಫ್-17 ಯುದ್ಧ ವಿಮಾನವನ್ನು ಹಸ್ತಾಂತರಿಸಿದೆ. ಜೆಎಫ್ 17 ಜಗತ್ತಿನ ಅತ್ಯಾಧುನಿಕ ಯುದ್ಧ ವಿಮಾನಗಳ ಸಾಲಿನಲ್ಲಿ ಸೇರುತ್ತದೆ. ಇದಕ್ಕೆ ಸ್ಪರ್ಧೆಯೊಡ್ಡಲು ಅಮೆರಿಕ ಈಗಾಗಲೇ ಎಫ್ -16 ಅನ್ನು ಹೊಂದಿದೆ. ಭಾರತ ಅತ್ಯಾಧುನಿಕ ರಫೆಲ್ ಹೊಂದಿದ್ದು, ಜೆಎಫ್ 17ಗಿಂತ ಬಲಿಷ್ಠವಾಗಿದೆ.
Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು
RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Pariksha Pe Charcha: ಸ್ಮಾರ್ಟ್ ಫೋನ್‌ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ
You seem to have an Ad Blocker on.
To continue reading, please turn it off or whitelist Udayavani.