Myanmar ಸೇನಾನೆಲೆ ಸ್ಥಾಪಿಸುತ್ತಿದೆ ಚೀನ!
ಕೊಕೊ ದ್ವೀಪದಿಂದ ಭಾರತದ ಸೇನಾ ಕೇಂದ್ರಗಳ ಮೇಲೆ ನಿಗಾಕ್ಕೆ ಯತ್ನ
Team Udayavani, Jun 19, 2023, 6:40 AM IST
ನವದೆಹಲಿ: ಭಾರತದ್ದೇ ನೆರೆರಾಷ್ಟ್ರಗಳ ಸಹಕಾರ ಪಡೆದು ಭಾರತದ ಸುತ್ತ ಕೋಟೆಕಟ್ಟುವ ಚೀನದ ಹುನ್ನಾರ ಮತ್ತೊಮ್ಮೆ ಬಯಲಾಗಿದೆ. ಅಟಲ್ ಬಿಹಾರಿ ವಾಜಪೇಯಿ ಪ್ರಧಾನಿಯಾಗಿದ್ದಾಗಲೇ ಶುರುವಾಗಿರುವ ಈ ನಾಟಕ ಈಗ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ.
ಭಾರತದ ನೆರೆಯ ರಾಷ್ಟ್ರ ಮ್ಯಾನ್ಮಾರ್‌ನಲ್ಲಿ ಚೀನ ತನ್ನ ಸೇನಾನೆಲೆ ಸ್ಥಾಪಿಸುತ್ತಿದೆ. ಇದರ ಮೂಲಕ ಭಾರತದ ಮೇಲೆ ಸನಿಹದಿಂದ ಕಣ್ಗಾವಲಿಡಲು ಹೊರಟಿದೆ.
ಈ ಬಗ್ಗೆ ಭಾರತ ವ್ಯಕ್ತಪಡಿಸಿರುವ ಆಕ್ಷೇಪಕ್ಕೆ ಮ್ಯಾನ್ಮಾರ್ ಸೇನಾ ಆಡಳಿತ ಸೂಕ್ತ ಉತ್ತರ ನೀಡಿಲ್ಲ. ಇದು ಆತಂಕಕಾರಿ ಬೆಳವಣಿಗೆಯಾಗಿದೆ.
ವಾಜಪೇಯಿ ಪ್ರಧಾನಿಯಾಗಿದ್ದಾಗ, ಜಾರ್ಜ್ ಫೆರ್ನಾಂಡಿಸ್ ರಕ್ಷಣಾ ಸಚಿವರಾಗಿದ್ದರು. ಆಗ ಮ್ಯಾನ್ಮಾರ್‌ನ ಕೊಕೊ ದ್ವೀಪದಲ್ಲಿ ಚೀನ ತನ್ನ ಸೇನಾನೆಲೆ ಸ್ಥಾಪಿಸಲು ಯತ್ನಿಸುತ್ತಿದೆ ಎಂದು ಬಲವಾಗಿ ಆಕ್ಷೇಪಿಸಲಾಗಿತ್ತು. ಆ ಸಂದರ್ಭದಲ್ಲಿ ಭಾರತದಲ್ಲಿನ ಚೀನ ಬೆಂಬಲಿಗರು ಅದನ್ನು ಅಲ್ಲಗಳೆದಿದ್ದರು ಎನ್ನಲಾಗಿದೆ.
ಅಲ್ಲಿ ನಡೆಯುತ್ತಿರುವುದೇನು?:
ಸದ್ಯ ಮ್ಯಾನ್ಮಾರ್‌ರನ್ನು ಸೇನಾ ಜನರಲ್ ಮಿನ್ ಆಂಗ್ ಎಚ್‌ಲೈಂಗ್ ಮುನ್ನಡೆಸುತ್ತಿದ್ದಾರೆ. ಆಂಗ್ ಸಾನ್ ಸೂಕಿಯನ್ನು ಕಿತ್ತೆಸೆದು ಮತ್ತೆ ಸೇನಾಡಳಿತ ಸ್ಥಾಪಿಸಿದ್ದರಿಂದ ಮ್ಯಾನ್ಮಾರ್ ಪಾಶ್ಚಾತ್ಯ ರಾಷ್ಟ್ರಗಳ ಬೆಂಬಲ ಕಳೆದುಕೊಂಡಿದೆ. ಈ ಹಂತದಲ್ಲಿ ಚೀನ ಈ ದೇಶಕ್ಕೆ ಸಾವಿರಾರು ಕೋಟಿ ರೂ. ನೆರವು ನೀಡಿದೆ. ಅದನ್ನೇ ಬಳಸಿಕೊಂಡು ಕೊಕೊ ದ್ವೀಪದಲ್ಲಿ ಯುದ್ಧವಿಮಾನ ಸಂಚಾರಕ್ಕೆ ನೆರವಾಗಬಲ್ಲ ಒಂದು ರನ್‌ವೇ, ಬ್ಯಾರಕ್‌ಗಳು, ವಸತಿ ಕೇಂದ್ರ, ನಿಗಾಕೇಂದ್ರಗಳನ್ನು ಸ್ಥಾಪಿಸುತ್ತಿದೆ. ಪ್ರಸ್ತುತ ನಡೆಯುತ್ತಿರುವ ಚಟುವಟಿಕೆಗಳಲ್ಲಿ ಚೀನ ಪಾತ್ರವಿಲ್ಲ ಎಂದು ಮ್ಯಾನ್ಮಾರ್ ಹೇಳಿಕೊಂಡಿದ್ದರೂ, ಭಾರತದ ಗುಪ್ತಚರ ಇಲಾಖೆ ಆ ಪ್ರದೇಶದಲ್ಲಿ ಚೀನ ಯೋಧರ ಪ್ರಬಲ ಚಟುವಟಿಕೆಗಳಿಗೆ ಸಾಕ್ಷಿ ನೀಡಿದೆ!
ಕೊಕೊ ದ್ವೀಪದಿಂದ ಭಾರತದ ವಿಶಾಖಪಟ್ಟಣಂನಿಂದ 50 ಕಿ.ಮೀ. ದೂರದಲ್ಲಿರುವ ರಾಂಬಿಲ್ಲಿ ನೌಕಾನೆಲೆಯನ್ನು ಸ್ಪಷ್ಟವಾಗಿ ವೀಕ್ಷಿಸಬಹುದು. ಹಾಗೆಯೇ ಒಡಿಶಾದ ಬಾಲಸೋರ್ ಮತ್ತು ಅಬ್ದುಲ್ ಕಲಾಂ ದ್ವೀಪದಲ್ಲಿರುವ ಅಣ್ವಸ್ತ್ರಸಜ್ಜಿತ, ಸಾಂಪ್ರದಾಯಿಕ ಕ್ಷಿಪಣಿ ಪರೀಕ್ಷಾ ಕೇಂದ್ರಗಳ ಮೇಲೂ ಚೀನ ನಿಗಾ ಇಡಬಲ್ಲದು! ಇದಕ್ಕೂ ಮಿಗಿಲಾಗಿ ಬಾಂಗ್ಲಾ-ಮ್ಯಾನ್ಮಾರ್-ಚೀನ ಕಾರಿಡಾರ್ ನಿರ್ಮಾಣಕ್ಕೆ ಬೀಜಿಂಗ್ ಹವಣಿಸುತ್ತಿದೆ. ಇವೆಲ್ಲ ಭಾರತಕ್ಕೆ ಆತಂಕ ಹುಟ್ಟಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pushpa 2film : 21 ದಿನಗಳಲ್ಲಿ 1100 ಕೋಟಿ ರೂ. ಗಳಿಸಿದ “ಪುಷ್ಪ-2′ ಸಿನೆಮಾ
Uttar Pradesh: ಸಂಭಲ್‌ನ ಪ್ರಾಚೀನ ಬಾವಿಯ ಉತ್ಖನನ, ನವೀಕರಣಕ್ಕೆ ಚಾಲನೆ
Uttarakhand ಹೈಕೋರ್ಟ್ ಸಿ.ಜೆ. ಆಗಿ ನರೇಂದ್ರ ಪ್ರಮಾಣ ವಚನ ಸ್ವೀಕಾರ
PM Modi: ತಂತ್ರಜ್ಞಾನವನ್ನು ಅರಿತು ಅಳವಡಿಸಿಕೊಳ್ಳಬೇಕು: ಯವಜನಕ್ಕೆ ಮೋದಿ ಕರೆ
Waqf ಆಸ್ತಿ ವಿವಾದ: ರಾಜ್ಯಗಳು ನೀಡಿದ ಮಾಹಿತಿಗೆ ಜೆಪಿಸಿ ಅತೃಪ್ತಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Udupi: ಗೀತಾರ್ಥ ಚಿಂತನೆ 137: ಮನೆಗೆ ಬೆಂಕಿ ಬಿದ್ದರೆ ದುಃಖ ಬೆಂಕಿಗಾಗಿಯಲ್ಲ!
Christmas, ವರ್ಷಾಂತ್ಯ ಸಂಭ್ರಮ; ಬೀಚ್‌ಗಳಿಗೆ ಜೀವಕಳೆ
Captain Brijesh Chowta: ಪಿಎಂ-ವಿಶ್ವಕರ್ಮ ಯೋಜನೆ ಯಶಸ್ವಿ ಅನುಷ್ಠಾನಕ್ಕೆ ಸೂಚನೆ
Kundapura: “ಅವರು ಪ್ರತೀ ದಿನ ಫೋನ್ ಮಾಡುತ್ತಿದ್ದರು… ಅಂದು ನನ್ನ ಕರೆಗೆ ಉತ್ತರಿಸಲಿಲ್ಲ’
Pushpa 2film : 21 ದಿನಗಳಲ್ಲಿ 1100 ಕೋಟಿ ರೂ. ಗಳಿಸಿದ “ಪುಷ್ಪ-2′ ಸಿನೆಮಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.