AI ಬಳಸಿ ಲೋಕಸಭೆ ಚುನಾವಣೆ ಮೇಲೆ ಚೀನಾ ಪ್ರಭಾವ: ಮೈಕ್ರೋಸಾಫ್ಟ್ ಎಚ್ಚರಿಕೆ
Team Udayavani, Apr 6, 2024, 1:07 PM IST
ಹೊಸದಿಲ್ಲಿ: ಪ್ರಪಂಚದ ಅತಿದೊಡ್ಡ ಗಣರಾಜ್ಯವಾದ ಭಾರತದಲ್ಲಿ ಇನ್ನು ಕೆಲವೇ ದಿನಗಳಲ್ಲಿ ಲೋಕಸಭಾ ಚುನಾವಣೆ ನಡೆಯಲಿದೆ. ಏಳು ಹಂತಗಳಲ್ಲಿ ನಡೆಯಲಿರುವ ಲೋಕಸಭೆ ಚುನಾವಣೆಯ ಮೊದಲ ಹಂತದ ಮತದಾನವು ಎಪ್ರಿಲ್ 26ರಂದು ನಡೆಯಲಿದೆ. ಎಲ್ಲಾ ರಾಜಕೀಯ ಪಕ್ಷಗಳು ಬಿರುಸಿನ ಪ್ರಚಾರದಲ್ಲಿ ತೊಡಗಿದೆ. ಇದೇ ವೇಳೆ ಆತಂಕಕಾರಿ ವಿಚಾರವೊಂದನ್ನು ಟೆಕ್ ದೈತ್ಯ ಮೈಕ್ರೊಸಾಫ್ಟ್ ನ ವರದಿಯು ಬಯಲು ಮಾಡಿದೆ. ಅದುವೇ ನೆರೆ ರಾಷ್ಟ್ರ ಚೀನಾವು ಎಐ (AI) ತಂತ್ರಜ್ಞಾನವನ್ನು ಬಳಸಿ ಲೋಕಸಭೆ ಚುನಾವಣೆಯಲ್ಲಿ ಹಸ್ತಕ್ಷೇಪ ನಡೆಸಬಹುದು ಎಂಬ ವರದಿ.
ಅಮೆರಿಕ ಮತ್ತು ದಕ್ಷಿಣ ಕೊರಿಯಾದಂತಹ ದೇಶಗಳ ಚುನಾವಣೆಯಲ್ಲಿಯೂ ಚೀನಾ ಎಐ ಪ್ರಭಾವ ಬೀರಲಿದೆ ಎಂದು ವರದಿ ತಿಳಿಸಿದೆ.
ಮೈಕ್ರೋಸಾಫ್ಟ್ ಪ್ರಕಾರ, ಚೀನಾ ಪ್ರಮುಖ ಚುನಾವಣೆಗಳಲ್ಲಿ ಸಾರ್ವಜನಿಕ ಅಭಿಪ್ರಾಯವನ್ನು ತನ್ನ ಪರವಾಗಿ ತಿರುಗಿಸಲು ಸಾಮಾಜಿಕ ಮಾಧ್ಯಮ ವೇದಿಕೆಗಳ ಮೂಲಕ ಎಐ- ರಚಿತವಾದ ವಿಷಯವನ್ನು ಉತ್ಪಾದಿಸುವ ಮತ್ತು ವಿತರಿಸುವ ಸಾಧ್ಯತೆಯಿದೆ.
ಚೀನಾವನ್ನು ಬೆಂಬಲಿಸುವ ಗುರಿ ಹೊಂದಿರುವ ಮೀಮ್ ಗಳು, ವಿಡಿಯೋ- ಆಡಿಯೋಗಳ ಮಾದರಿಯಲ್ಲಿ ಕಂಟೆಂಟ್ ಗಳು ಇರಲಿದೆ. ಆದರೂ, ಈ ವಿಷಯಗಳಿಂದ ಸಾರ್ವತ್ರಿಕ ಚುನಾವಣೆಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಕಡಿಮೆ ಎಂದು ಅದು ಹೇಳಿದೆ.
ಮೈಕ್ರೋಸಾಫ್ಟ್‌ನ ‘Same targets, new playbooks: East Asia threat actors employ unique methods’ ವರದಿಯಲ್ಲಿ ಜೂನ್ 2023 ರಿಂದ ಚೀನಾ ಮತ್ತು ಉತ್ತರ ಕೊರಿಯಾದಿಂದ ಗಮನಾರ್ಹ ಸೈಬರ್ ಮತ್ತು ಇನ್ಫ್ಲುಯೆನ್ಸ್ ಪ್ರವೃತ್ತಿಯ ಬಗ್ಗೆ ವಿವರ ನೀಡಲಾಗಿದೆ.
ದಕ್ಷಿಣ ಪೆಸಿಫಿಕ್ ದ್ವೀಪಗಳಲ್ಲಿನ ದೇಶಗಳು, ದಕ್ಷಿಣ ಚೀನಾ ಸಮುದ್ರ ಪ್ರದೇಶದಲ್ಲಿನ ಪ್ರಾದೇಶಿಕ ವಿರೋಧಿಗಳು ಮತ್ತು ಯು.ಎಸ್ ರಕ್ಷಣಾ ಕೈಗಾರಿಕಾ ನೆಲೆಯನ್ನು ಒಳಗೊಂಡಂತೆ ಟಾರ್ಗೆಟ್ ಪ್ರದೇಶಗಳ ಮೇಲೆ ಪ್ರಭಾವ ಬೀರುವ ಪ್ರಯತ್ನಗಳ ಉಲ್ಬಣವನ್ನು ಸೂಚಿಸುತ್ತವೆ.
ಎಐ ರಚಿತ ಕಂಟೆಂಟ್ ಗಳ ಮೂಲಕ ಚೀನಾ ಪ್ರಭಾವಿ ಅಭಿಯಾನಗಳು ಹೆಚ್ಚುತ್ತಿದೆ. ಸಾರ್ವಜನಿಕ ಅಭಿಪ್ರಾಯಗಳ ಮೇಲೆ ಪ್ರಭಾವ ಬೀರಲು ಈ ವಿಚಾರಗಳನ್ನು ಹೆಚ್ಚು ಆಧುನಿಕವಾಗಿ ವ್ಯವಸ್ಥಿತವಾಗಿ ಮಾಡಲಾಗುತ್ತಿದೆ ಎಂದು ಮೈಕ್ರೋಸಾಫ್ಟ್ ವರದಿ ಹೇಳಿದೆ.
ವರದಿಯು ಫ್ಲಾಕ್ಸ್ ಟೈಫೂನ್ ಎಂದು ಕರೆಯಲ್ಪಡುವ ಚೀನಾದ ಸೈಬರ್ ಚಟುವಟಿಕೆಯನ್ನು ಚರ್ಚಿಸಿದೆ. ಇದು 2023 ರಲ್ಲಿ ಯುಎಸ್-ಫಿಲಿಪೈನ್ಸ್ ಮಿಲಿಟರಿ ಅಭ್ಯಾಸಗಳಿಗೆ ಸಂಬಂಧಿಸಿದ ಘಟಕಗಳನ್ನು ಗುರಿಯಾಗಿರಿಸಿಕೊಂಡಿದೆ. ಈ ಸೈಬರ್ ಚಟುವಟಿಕೆಯು ಫಿಲಿಪೈನ್ಸ್, ಹಾಂಗ್ ಕಾಂಗ್, ಭಾರತ ಮತ್ತು ಯುನೈಟೆಡ್ ಸ್ಟೇಟ್ಸ್‌ನ ಟಾರ್ಗೆಟ್ ಘಟಕಗಳಿಗೆ ಸಹ ಸಂಪರ್ಕ ಹೊಂದಿದೆ ಎಂದು ವರದಿ ಹೇಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Train ಜನಶತಾಬ್ದಿ ಎಕ್ಸ್‌ಪ್ರೆಸ್‌ನಲ್ಲಿ ಹಾವು ಪ್ರತ್ಯಕ್ಷ: ತನಿಖೆಗೆ ಆದೇಶ
Himachal Pradesh;ನಷ್ಟದಲ್ಲಿರುವ ಹೊಟೇಲ್ ಮುಚ್ಚಲು ಹೈಕೋರ್ಟ್ ಆದೇಶ
Waqf ಮಸೂದೆ ಕರಡು ವರದಿ ಸಿದ್ಧ: ಜೆಪಿಸಿ ಅಧ್ಯಕ್ಷ ಪಾಲ್ ಘೋಷಣೆ
Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!
Adani Group; ಲಂಚದ ಆರೋಪ ಆಧಾರ ರಹಿತ, ಕಾನೂನು ಕ್ರಮ ಕೈಗೊಳ್ಳುತ್ತೇವೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.