ಭಾರತ ಕೋವಿಡ್ ಸಂಕಷ್ಟದಲ್ಲಿದ್ದರೆ, ಲಡಾಖ್ ನಲ್ಲಿ ಕುತಂತ್ರವಾಡುತ್ತಿದೆ ಕಪಟಿ ಚೀನಾ!
Team Udayavani, May 1, 2021, 8:28 AM IST
ಶ್ರೀನಗರ: ಭಾರತದಲ್ಲಿ ಕೋವಿಡ್ 19 ಸೋಂಕಿನ ಎರಡನೇ ಅಲೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಮೊದಲ ಅಲೆಗಿಂತಲೂ ಎರಡನೇ ಅಲೆಯಲ್ಲಿ ಹೆಚ್ಚಿನ ಹಾನಿಯಾಗುತ್ತಿದೆ. ಇತ್ತ ಭಾರತ ಈ ರೀತಿಯ ಸಂಕಷ್ಟ ಅನುಭವಿಸುತ್ತಿದ್ದರೆ, ಅತ್ತ ನೆರೆ ರಾಷ್ಟ್ರ ಚೀನಾ ಲಡಾಖ್ ನಲ್ಲಿ ತನ್ನ ಸೇನೆಯನ್ನು ಮತ್ತಷ್ಟು ಬಲಗೊಳಿಸುತ್ತಿದೆ.
ಇಂಡಿಯಾ ಟುಡೇ ಈ ಬಗ್ಗೆ ವರದಿ ಮಾಡಿದ್ದು, ಪೂರ್ವ ಲಡಾಖ್ ನಲ್ಲಿ ಚೀನಾ ತನ್ನ ಸೇನೆಯನ್ನು ಮತ್ತಷ್ಟು ಬಲಗೊಳಿಸುತ್ತಿದೆ. ಚಳಿಗಾಲದ ನಿಯೋಜನೆಗಳನ್ನು ಮಾಡುವ ಬದಲು ಪೂರ್ವ ಲಡಾಖ್ ನ ತಗ್ಗು ಪ್ರದೇಶಗಳಲ್ಲಿ ಚೀನಾ ಶಾಶ್ವತ ವಸತಿ ವ್ಯವಸ್ಥೆಗಳಂತಹ ಕಾರ್ಯ ಮಾಡುತ್ತಿದೆ ಎಂದು ವರದಿ ಮಾಡಿದೆ.
ಇದನ್ನೂ ಓದಿ:ಹೃದಯ ಶ್ರೀಮಂತಿಕೆ : ಪತ್ನಿಯ ಆಭರಣ ಮಾರಾಟ ಮಾಡಿ ಉಚಿತ ಆಕ್ಸಿಜನ್ ನೀಡುತ್ತಿರುವ ವ್ಯಕ್ತಿ
ಫೆಬ್ರವರಿಯಲ್ಲಿ ಪಾಂಗೊಂಗ್ ತ್ಸೊ ವಲಯಗಳಿಂದ ಭಾರತೀಯ ಮತ್ತು ಚೀನಾದ ಸೈನಿಕ ಪಡೆ ಹಿಂತೆಗೆದುಕೊಳ್ಳುವಿಕೆ ನಿಧಾನವಾಗಿದ್ದರೂ, ಉತ್ತಮ ಭರವಸೆಯ ವಾತಾವರಣವನ್ನು ಸೃಷ್ಟಿಸಿತ್ತು. ಆದರೆ ಕಾಂಗ್ಕ್ಸಿವಾರ್, ಅಕ್ಸಾಯ್ ಚೀನ್‌ನ ಉತ್ತರ ಮತ್ತು ಟಿಬೆಟ್‌ನ ಲಡಾಖ್ ಗಡಿಯ ರುಡೋಕ್ ನಡುವೆ ಚೀನದಿಂದ ನಿರ್ಮಿಸಲಾದ ಹೊಸ ಶಾಶ್ವತ ವಸತಿ ಸೌಕರ್ಯಗಳು ಭಾರತದ ಎಚ್ಚರಿಕೆಗೆ ಕಾರಣವಾಗಿದೆ.
ರಾಜತಾಂತ್ರಿಕವಾಗಿ ಚೀನಾ ಒಂದು ನಡೆಯನ್ನು ಮಾಡುತ್ತಿದ್ದರೆ, ಇತ್ತ ಘರ್ಷಣೆ ಉಂಟಾಗಬಹುದಾದ ಪ್ರದೇಶಗಳನ್ನು ಚೀನಾದ ಸೈನ್ಯವು ಸದ್ದಿಲ್ಲದೆ ಬಲಪಡಿಸಿದೆ ಅಕ್ಸಾಯ್ ಚೀನಾದ ಉತ್ತರ ಭಾಗದಲ್ಲಿ ಚೀನಾ ಮಿಟಲಿರಿ ಕಟ್ಟಡಗಳು ಸೇರಿದಂತೆ ಹಲವು ಶಾಶ್ವತ ವ್ಯವಸ್ಥೆಗಳನ್ನು ಮಾಡಿಕೊಂಡಿದೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ: ಇಂಟರ್ನೆಟ್ ಸಮಸ್ಯೆಯಿಂದ ಪಡಿತರ ವಿತರಣೆ ತೊಡಕು: ಗುಡ್ಡದ ಮೇಲೆ ನೆಟ್‌ವರ್ಕ್‌ಗಾಗಿ ಹುಡುಕಾಟ
ಈ ನಡುವೆಯೇ, ಶುಕ್ರವಾರ ಭಾರತದ ವಿದೇಶಾಂಗ ಸಚಿವ ಜೈಶಂಕರ್ ಅವರು, ಚೀನಾ ವಿದೇಶಾಂಗ ಸಚಿವ ವಾಂಗ್ ಯಿ ಜೊತೆ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದಾರೆ. ಆದಷ್ಟು ಬೇಗ ಪೂರ್ವ ಲಡಾಖ್ ನಿಂದ ಸೇನೆ ಹಿಂಪಡೆಯುವ ಪ್ರಕ್ರಿಯೆ ನಡೆಯಬೇಕು. ಶಾಂತಿ-ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಮಾಡಿಕೊಂಡ ಒಪ್ಪಂದವನ್ನು ಪ್ರಾಮಾಣಿಕವಾಗಿ ಪಾಲಿಸಬೇಕು ಎಂದೂ ಚೀನಾಗೆ ಜೈಶಂಕರ್ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Manmohan Singh ಅಂತ್ಯಕ್ರಿಯೆ ಸ್ಮಾರಕ ನಿರ್ಮಿಸಬಹುದಾದ ಸ್ಥಳದಲ್ಲಿ ನಡೆಸಲು ಖರ್ಗೆ ಮನವಿ
Dr. Manmohan Singh; ನಾಳೆ ನಿಗಮಬೋಧ್ ಘಾಟ್ ಚಿತಾಗಾರದಲ್ಲಿ ಮಾಜಿ ಪ್ರಧಾನಿ ಅಂತ್ಯಕ್ರಿಯೆ
Video: ಮನಮೋಹನ್ ಸಿಂಗ್ ಹೇಳುವ ಬದಲು ಮೋದಿ ನಿಧನ ಎಂದ ನ್ಯೂಸ್ ಆ್ಯಂಕರ್.!
Punjab: ನಿಯಂತ್ರಣ ತಪ್ಪಿ ನದಿಗೆ ಬಿದ್ದ ಬಸ್… 8 ಮಂದಿ ಮೃತ್ಯು, ಹಲವರಿಗೆ ಗಾಯ
New Delhi: ಸಂಸತ್ತಿನ ಬಳಿ ಬೆಂಕಿ ಹಚ್ಚಿಕೊಂಡಿದ್ದ ಯುವಕ ಸಾ*ವು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kasaragod: ಯೂತ್ ಕಾಂಗ್ರೆಸ್ ಕಾರ್ಯಕರ್ತರಿಬ್ಬರ ಕೊ*ಲೆ; ಇಂದು ತೀರ್ಪು; ಭಾರೀ ಬಂದೋಬಸ್ತು
Surathkal: ಸಿಲಿಂಡರ್ ಸ್ಫೋ*ಟ ಪ್ರಕರಣ; ಮತ್ತೋರ್ವ ಮಹಿಳೆಯ ಸಾವು
Daily Horoscope: ದೀರ್ಘಕಾಲದ ಸಮಸ್ಯೆಗಳಿಂದ ಬಿಡುಗಡೆ, ಅಪರಿಚಿತರೊಡನೆ ವಾದ ಬೇಡ
Vijay Hazare Trophy: ಅರುಣಾಚಲ ಎದುರಾಳಿ; ರಾಜ್ಯಕ್ಕೆ 4ನೇ ಜಯದ ನಿರೀಕ್ಷೆ
Afzalpur: ಹುಂಡಿ ನೋಟಿನಲ್ಲಿ “ನಮ್ಮ ಅತ್ತೆ ಬೇಗ ಸಾಯಬೇಕು’ ಬರಹ ಪತ್ತೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.