ಭಾರತಕ್ಕೆ ಚೀನ ಮತ್ತೆ ಸೆಡ್ಡು
Team Udayavani, Jan 7, 2018, 6:35 AM IST
ಹೊಸದಿಲ್ಲಿ: ಇರಾನ್‌ನ ಚಬಾಹರ್ ಬಂದರಿನಲ್ಲಿ ತನ್ನದೇ ಹಡಗು ಕಟ್ಟೆ ಸ್ಥಾಪಿಸುವ ಮೂಲಕ ಅಫ್ಘಾನಿಸ್ಥಾನದೊಂದಿಗೆ ಹೊಸ ಜಲಮಾರ್ಗವನ್ನು ಗಟ್ಟಿ ಮಾಡಿ ಕೊಂಡು ಆ ಮೂಲಕ ಹೊಸ ರಾಜಕೀಯ ಚಾಣಾಕ್ಷತೆ ಮೆರೆದಿದ್ದ ಭಾರತಕ್ಕೆ, ಚೀನ ಮತ್ತು ಪಾಕಿಸ್ಥಾನ ಸೆಡ್ಡು ಹೊಡೆಯಲು ತೀರ್ಮಾನಿಸಿವೆ.
ಇದೇ ಚಬಾಹರ್ ಬಂದರಿಗೆ ಸಮೀಪದಲ್ಲಿರುವ, ಪಾಕಿಸ್ಥಾನ- ಇರಾನ್ ಗಡಿಭಾಗದಲ್ಲಿ ಪಾಕಿಸ್ತಾನದ ನೆಲದೊಳಗೆ ಇರುವ ಜಿವಾನಿಯಲ್ಲಿ ಚೀನ ತನ್ನದೊಂ ದು ಸೇನಾ ನೆಲೆ ಸ್ಥಾಪಿಸಲು ಮುಂದಾಗಿದೆ. ಇದಕ್ಕೆ ಪಾಕಿಸ್ಥಾನದ ಕುಮ್ಮಕ್ಕೂ ಇದೆ ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಸದ್ಯಕ್ಕೆ ಚೀನ ಹಾಗೂ ಪಾಕಿಸ್ಥಾನಗಳ ನಡುವೆ ಈ ಕುರಿತಂತೆ ಮಾತುಕತೆ ಸಾಗಿದ್ದು, ಎಲ್ಲಾ ಅಂದುಕೊಂಡಂತೆ ನಡೆದರೆ ಶೀಘ್ರವೇ ಜಿವಾನಿಯಲ್ಲಿ ಚೀನದ ಅಂತಾರಾಷ್ಟ್ರೀಯ ಸೇನಾ ನೆಲೆ ತಲೆಯೆತ್ತಲಿದೆ. ಅಂದಹಾಗೆ, ಇದು ಚೀನ ವತಿಯಿಂದ ವಿದೇಶಿ ನೆಲದಲ್ಲಿ ಸ್ಥಾಪನೆಗೊಳ್ಳಲಿರುವ 2ನೇ ಅಂತಾರಾಷ್ಟ್ರೀಯ ನೆಲೆ. ಈ ಹಿಂದೆ, ಆಫ್ರಿಕಾದ ಉತ್ತರದಲ್ಲಿರುವ ಡಿಜಿಬೌಟಿಯಲ್ಲಿ ತನ್ನ ಮೊ ದಲ ಸೇನಾ ನೆಲೆಯನ್ನು ಚೀನ ಸ್ಥಾಪಿಸಿದೆ.
ಉದ್ದೇಶವೇನು?: ಈಗಾಗಲೇ, ಅರಬ್ಬೀ ಸಮುದ್ರಕ್ಕೆ ಹೊಂದಿಕೊಂಡಂತಿರುವ ಪಾಕಿಸ್ಥಾನದ ಗ್ವಾದಾರ್ ಬಂದರಿನಲ್ಲಿ ಚೀನ ತನ್ನ ಹಡಗು ಕಟ್ಟೆ ಸ್ಥಾಪಿಸಿದೆ. ಅಲ್ಲಿಗೆ ತೀರಾ ಸಮೀಪವಿರುವ ಜಿವಾನಿಯಲ್ಲಿ ತನ್ನ ಸೇನಾ ನೆಲೆ ಸ್ಥಾಪಿಸುವ ಮೂಲಕ ತನ್ನದೇ ಮತ್ತೂಂದು ಹೊಸ ಸಮುದ್ರ ಮಾರ್ಗ ಹುಟ್ಟುಹಾಕುವುದು ಅದರ ಪ್ರ ಮು ಖ ಉದ್ದೇಶ. ಇದರೊಂದಿಗೆ, ಭಾರತದ ಗುಜ ರಾತ್ ಅಥವಾ ಮುಂಬೈ ಬಂದರು ಗಳಿಂದ ಅಫ್ಘಾ ನಿಸ್ತಾನಕ್ಕೆ ತಲುಪಲು ಇರುವ ಜಲ ಮಾರ್ಗಗಳಿಗೆ ಪ್ರತಿಸ್ಪರ್ಧೆ ಒಡ್ಡುವುದು ಹಾಗೂ ಭಾರತ-ಆಫ^ನ್ ವಾಣಿಜ್ಯ ಚಟು ವಟಿಕೆ ಮೇಲೆ ಸತತ ನಿಗಾ ಇಡುವುದು ಮತ್ತೂಂದು ಉದ್ದೇಶವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kerala: ಆ್ಯಂಬುಲೆನ್ಸ್ ಓಡಾಟಕ್ಕೆ ಅಡ್ಡಿ: ಕಾರು ಮಾಲೀಕನ ಲೈಸೆನ್ಸ್ ರದ್ದು!
Anmol Bishnoi: ಅಮೆರಿಕದಲ್ಲಿ ಲಾರೆನ್ಸ್ ಬಿಷ್ಣೋಯ್ ಸಹೋದರ ಅನ್ಮೋಲ್ ಬಿಷ್ಣೋಯ್ ಬಂಧನ
Manipur issue: ಶಾ ಸಭೆಯ ಬಳಿಕ ಮಣಿಪುರಕ್ಕೆ ಹೆಚ್ಚುವರಿ ಪಡೆಗಳನ್ನು ಕಳುಹಿಸಿದ ಕೇಂದ್ರ
ಹೋಮ್ ವರ್ಕ್ ಮಾಡದ್ದಕ್ಕೆ ಥಳಿಸಿದ ಶಿಕ್ಷಕ; ಕಣ್ಣ ದೃಷ್ಟಿಯನ್ನೇ ಕಳೆದುಕೊಂಡ ವಿದ್ಯಾರ್ಥಿ
AAP ತೊರೆದ ಬೆನ್ನಲ್ಲೇ ಬಿಜೆಪಿ ಸೇರ್ಪಡೆಗೊಂಡ ಕೇಜ್ರಿವಾಲ್ ಆಪ್ತ ಕೈಲಾಶ್ ಗೆಹ್ಲೋಟ್!
MUST WATCH
ಹೊಸ ಸೇರ್ಪಡೆ
Kerala: ಆ್ಯಂಬುಲೆನ್ಸ್ ಓಡಾಟಕ್ಕೆ ಅಡ್ಡಿ: ಕಾರು ಮಾಲೀಕನ ಲೈಸೆನ್ಸ್ ರದ್ದು!
Anmol Bishnoi: ಅಮೆರಿಕದಲ್ಲಿ ಲಾರೆನ್ಸ್ ಬಿಷ್ಣೋಯ್ ಸಹೋದರ ಅನ್ಮೋಲ್ ಬಿಷ್ಣೋಯ್ ಬಂಧನ
Manipur issue: ಶಾ ಸಭೆಯ ಬಳಿಕ ಮಣಿಪುರಕ್ಕೆ ಹೆಚ್ಚುವರಿ ಪಡೆಗಳನ್ನು ಕಳುಹಿಸಿದ ಕೇಂದ್ರ
Bidar: ಬಿಜೆಪಿಯವರು ಅಧಿಕಾರಕ್ಕಾಗಿ ಏನು ಮಾಡಲೂ ಹೇಸದವರು: ಈಶ್ವರ್ ಖಂಡ್ರೆ
Grant Fight: ಕರ್ನಾಟಕಕ್ಕೆ ಅನ್ಯಾಯವಾದಾಗ ಎಚ್‌ಡಿಡಿ, ಎಚ್‌ಡಿಕೆ ಮಾತಾಡಿದ್ದಾರಾ?: ಸಿಎಂ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.