![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Oct 23, 2023, 7:00 AM IST
ನವದೆಹಲಿ:ಭಾರತದ ಜತೆಗೆ ವಿನಾಕಾರಣ ಗಡಿ ಮತ್ತು ಇನ್ನಿತರ ವಿಚಾರವಾಗಿ ತಕರಾರು ತೆಗೆಯುತ್ತಿರುವ ಚೀನ ಈಗ ವಾಸ್ತವಿಕ ಗಡಿ ನಿಯಂತ್ರಣ ರೇಖೆ (ಎಲ್‌ಎಸಿ) ವ್ಯಾಪ್ತಿಯಲ್ಲಿ ಹಲವು ಕಾಮಗಾರಿಗಳನ್ನು ಭರದಿಂದ ನಿರ್ಮಿಸುತ್ತಿದೆ. ಹೀಗೆಂದು ಅಮೆರಿಕದ ರಕ್ಷಣಾ ಸಚಿವಾಲಯ, ಪೆಂಟಗನ್‌ನ ವರದಿ ಖಚಿತಪಡಿಸಿದೆ.
ರಸ್ತೆಗಳು, ವಿಮಾನ ನಿಲ್ದಾಣಗಳು, ಹೆಲಿಪ್ಯಾಡ್‌ಗಳನ್ನು ವ್ಯಾಪಕವಾಗಿ 2020ರ ಮೇ ತಿಂಗಳಿಂದ ನಿರ್ಮಿಸುತ್ತಾ ಬಂದಿದೆ. ಈ ಪೈಕಿ ಭೂಗತ ಸಂಗ್ರಹಣಾಗಾರಗಳೂ ಸೇರಿವೆ. ಚೀನಾ ವಿಚಾರಕ್ಕಾಗಿ 2023ನೇ ಸಾಲಿನ ಪೆಂಟಗನ್‌ನ ವರದಿಯಲ್ಲಿ ಈ ಆಘಾತಕಾರಿ ಮಾಹಿತಿಗಳು ಹೊರಬಿದ್ದಿವೆ. ಅಭಿವೃದ್ಧಿಪಡಿಸಲಾಗಿರುವ ಹೆಲಿಪ್ಯಾಡ್, ವಿಮಾನ ನಿಲ್ದಾಣಗಳು ಬಹೂಪಯೋಗಿಯಾಗಿವೆ ಎಂದು ಅದರಲ್ಲಿ ಉಲ್ಲೇಖಿಸಲಾಗಿದೆ. ವಾಸ್ತವಿಕ ಗಡಿ ನಿಯಂತ್ರಣ ರೇಖೆಯಾದ್ಯಂತ ರಕ್ಷಣಾ ಮೂಲ ಸೌಕರ್ಯಗಳನ್ನು ಅಭಿವೃದ್ಧಿಪಡಿಸಲು ಕ್ಸಿ ಜಿನ್‌ಪಿಂಗ್ ಸರ್ಕಾರ ಇನ್ನಿಲ್ಲದ ಪ್ರಯತ್ನಗಳನ್ನು ನಡೆಸಿದೆ ಎಂದು ತನ್ನ ವರದಿ ಹೇಳಿದೆ.
ಎಲ್‌ಎಸಿ ಸೇರಿದಂತೆ ಆ ದೇಶ ರಚಿಸಿಕೊಂಡಿರುವ ಪಶ್ಚಿಮ ಥಿಯೇಟರ್ ಕಮಾಂಡ್ ನೇತೃತ್ವದಲ್ಲಿಯೇ ಗಾಲ್ವಾನ್‌ನಲ್ಲಿ ಭಾರತದ ಭೂಪ್ರದೇಶಕ್ಕೆ ಸೈನಿಕರನ್ನು ನುಗ್ಗಿಸಲಾಗಿತ್ತು. ಈಗ ಎಲ್‌ಎಸಿಯಾದ್ಯಂತ ಚೀನಾ ಸೇನೆಯ ನಿಯೋಜನೆಯೂ ಹೆಚ್ಚಾಗಿದೆ ಎಂದು ವರದಿಯಲ್ಲಿ ಆತಂಕ ವ್ಯಕ್ತಪಡಿಸಲಾಗಿದೆ. ಎರಡೂ ದೇಶಗಳ ನಡುವೆ ಮಿಲಿಟರಿ ಕಮಾಂಡರ್‌ಗಳ ಮಟ್ಟದ 14 ಸುತ್ತುಗಳ ಮಾತುಕತೆಗಳು ನಡೆದಿದ್ದರೂ, ಅದರಲ್ಲಿ ನಿರೀಕ್ಷಿತ ಪ್ರಗತಿ ಸಾಧಿಸಲಾಗಿಲ್ಲ ಎಂಬುದನ್ನೂ ವರದಿ ಉಲ್ಲೇಖೀಸಿದೆ.
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
You seem to have an Ad Blocker on.
To continue reading, please turn it off or whitelist Udayavani.