ಚೀನಾ ಗಡಿ ಎಲ್‌ಎಸಿಯಿಂದ ಎಲ್‌ಒಸಿ ಆಗಬಹುದು!
ಡ್ರ್ಯಾಗನ್‌ಗೆ ಭೂಸೇನಾ ಮುಖ್ಯಸ್ಥ ಎಂ.ಎಂ. ನರವಣೆ ಎಚ್ಚರಿಕೆ
Team Udayavani, Oct 10, 2021, 6:30 AM IST
ನವದೆಹಲಿ: ಕಳೆದ ಒಂದೂವರೆ ವರ್ಷದಿಂದಲೂ ಪೂರ್ವ ಲಡಾಖ್‌ನಲ್ಲಿರುವ ಭಾರತ-ಚೀನಾ ಗಡಿ ರೇಖೆ ಬಳಿ, ಚೀನಾ ಸೇನೆ ಹೆಚ್ಚುವರಿಯಾಗಿ ಜಮಾವಣೆ ಆಗಿದೆ.
ಈ ಬಾರಿಯ ಚಳಿಗಾಲದಲ್ಲೂ ಇದೇ ಪರಿಸ್ಥಿತಿ ಮುಂದುವರಿದರೆ, ಭಾರತ- ಚೀನಾ ನಡುವಿನ ನೈಜ ಗಡಿ ರೇಖೆಯು (ಎಲ್‌ಎಸಿ), ಪಾಕಿಸ್ತಾನದ ಗಡಿ ರೇಖೆಯ ಬಳಿಯಾದಂತೆ, ಗಡಿ ನಿಯಂತ್ರಣ ರೇಖೆಯಾಗಿ (ಎಲ್‌ಒಸಿ) ಪರಿವರ್ತನೆಗೊಳ್ಳಬಹುದು. ಇಂಥ ಪರಿಸ್ಥಿತಿ ಈಗಾಗಲೇ ನಿರ್ಮಾಣವಾಗಿದೆ ಎಂದು ಭಾರತೀಯ ಭೂಸೇನೆಯ ಮುಖ್ಯಸ್ಥ ಎಂ.ಎಂ. ನರವಣೆ ತಿಳಿಸಿದ್ದಾರೆ.
ಖಾಸಗಿ ಮಾಧ್ಯಮವೊಂದು ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “”ಪೂರ್ವ ಲಡಾಖ್‌ನ ಗಡಿಯ ತೀರಾ ಸನಿಹದಲ್ಲೇ ಚೀನಾ ಸರ್ಕಾರ, ತಾನು ಜಮಾವಣೆ ಮಾಡಿರುವ ಹೆಚ್ಚುವರಿ ಸೈನಿಕರ ಆಶ್ರಯಕ್ಕಾಗಿ ಹಲವಾರು ಬಂಕರ್‌ಗಳು, ಕಟ್ಟಡಗಳನ್ನು ನಿರ್ಮಿಸಿದೆ. ಇದು ಭಾರತಕ್ಕೆ ನಿಜಕ್ಕೂ ಆತಂಕಕಾರಿ ವಿಚಾರ” ಎಂದಿದ್ದಾರೆ.
ಉಗ್ರರು ನುಗ್ಗುವ ಸಾಧ್ಯತೆ:
ಅಫ್ಘಾನಿಸ್ತಾನದಲ್ಲಿನ ಅಸ್ಥಿ ರತೆ ದೂರಾಗಿ ಅಲ್ಲಿನ ಪರಿಸ್ಥಿತಿ ಸ್ಥಿರಗೊಂಡರೆ, ಜಮ್ಮು ಕಾಶ್ಮೀರದಲ್ಲಿ ತಾಲಿಬಾನ್ ಬೆಂಬಲಿತ ಉಗ್ರರ ಒಳನುಸುಳುವಿಕೆ ಹೆಚ್ಚಾಗುವ ಸಾಧ್ಯತೆಯಿರುತ್ತದೆ. ಆದರೆ, ಭಾರತೀಯ ಸೇನೆ ಇಂಥ ಯಾವುದೇ ಸವಾಲನ್ನು ಮೆಟ್ಟಲು ಹಿಂದೆಂದಿಗಿಂತಲೂ ಸಮರ್ಥವಾಗಿದೆ” ಎಂದೂ ಅವರು ತಿಳಿಸಿದ್ದಾರೆ.
ಇಂದು 13ನೇ ಸುತ್ತಿನ ಮಾತುಕತೆ:
ಪೂರ್ವ ಲಡಾಖ್‌ನಲ್ಲಿ ಭಾರತ ಮತ್ತು ಚೀನಾ ನಡುವೆ ಏರ್ಪಟ್ಟಿರುವ ಬಿಗುವಿನ ವಾತಾವರಣ ನಿವಾರಣೆಗಾಗಿ, ಉಭಯ ದೇಶಗಳ ಉನ್ನತ ಮಟ್ಟದ ಸೇನಾಧಿಕಾರಿಗಳ ನಡುವಿನ 13ನೇ ಸುತ್ತಿನ ಸಭೆ ಇದೇ ಭಾನುವಾರ ನಡೆಯಲಿದೆ ಎಂದು ಕೇಂದ್ರ ಸರ್ಕಾರದ ಮೂಲಗಳು ತಿಳಿಸಿವೆ.
ಇದನ್ನೂ ಓದಿ:ವಿದೇಶ ಪ್ರವಾಸ,ಅಲ್ಲೇ ಸೆಟ್ಲ್ ಆಗ್ತೀರಾ? : 24 ಲಕ್ಷದವರೆಗೆ ಆರ್ಥಿಕ ಪ್ರೋತ್ಸಾಹವೂ ಇದೆ!
ಎಲ್‌ಎಸಿ, ಎಲ್‌ಒಸಿ ನಡುವಿನ ವ್ಯತ್ಯಾಸ
ನೈಜ ಗಡಿ ರೇಖೆಯಡಿ (ಎಲ್‌ಎಸಿ) ಎರಡೂ ದೇಶಗಳ ಗಡಿಯನ್ನು ನಿಖರವಾಗಿ ಗುರುತಿಸಲಾಗಿರುತ್ತದೆ. ಆದರೆ, ಎಲ್‌ಒಸಿ ರೇಖೆಯಡಿ ಗಡಿ ರೇಖೆಯ ನಿಖರತೆ ಇರುವುದಿಲ್ಲ. ಹಾಗಾಗಿ, ಎರಡೂ ದೇಶಗಳು ತಮ್ಮ ಸೇನೆಗಳ ಮೂಲಕ ಕಾರ್ಯಾಚರಣೆ ನಡೆಸಿ ತಮಗೆ ಸೇರಿದ್ದೆಂದು ಹೇಳುವ ಜಾಗವನ್ನು ಬಲವಂತವಾಗಿ ವಶಪಡಿಸಿಕೊಳ್ಳುವ ಅವಕಾಶವಿರುತ್ತದೆ. ಭಾರತ-ಚೀನಾ ನಡುವಿನ ಗಡಿ ಭಾಗದಲ್ಲಿ ಇಂಥ ಅಸ್ಪಷ್ಟತೆಯಿದೆ. ಆದರೂ ಅದನ್ನು ಈವರೆಗೆ ಎಲ್‌ಎಸಿ ಎಂದೇ ಕರೆಯಲಾಗಿದೆ. ಚೀನಾ ಉದ್ಧಟತನ ಮುಂದುವರಿದರೆ ಭಾರತ, ತನ್ನ ಸೇನಾ ಶಕ್ತಿ ಬಳಸಿ ತನಗೆ ಸೇರಬೇಕಾದ ಜಾಗವನ್ನು ಬಲವಂತಾಗಿ ಆಕ್ರಮಿಸುತ್ತದೆ ಎಂಬುದು ನರವಾಣೆ ಮಾತಿನ ಹಿಂದಿನ ತಾತ್ಪರ್ಯ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Assam Coal Mine Tragedy: ಅಸ್ಸಾಂ ಗಣಿ ದುರಂತ… ಒಬ್ಬನ ಮೃತ ದೇಹ ಪತ್ತೆ
ತಿಮ್ಮಪ್ಪನ ಸನ್ನಿಧಾನದಲ್ಲಿ ನೂಕುನುಗ್ಗಲು ಕಾಲ್ತುಳಿತ… 6 ಸಾ*ವು, ಹಲವರ ಸ್ಥಿತಿ ಗಂಭೀರ
Sheesh Mahal Row: ಶೀಶ್‌ಮಹಲ್ ವರ್ಸಸ್ ರಾಜ್ ಮಹಲ್: ದಿಲ್ಲೀಲಿ ಬಿಜೆಪಿ, ಆಪ್ ಹೈಡ್ರಾಮ
Foundation: ಆಂಧ್ರ ಅಭಿವೃದ್ಧಿಗೆ ಹೆಗಲಿಗೆ ಹೆಗಲು ಕೊಟ್ಟು ಕೆಲಸ ಮಾಡುವೆವು: ಮೋದಿ
Delhi: ಜ.15ಕ್ಕೆ ಹೊಸ ಕಟ್ಟಡಕ್ಕೆ ಕಾಂಗ್ರೆಸ್ ಪ್ರಧಾನ ಕಚೇರಿ ಸ್ಥಳಾಂತರ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.