ಬೌದ್ಧ ಧರ್ಮ ನಾಶ ಮಾಡಲು ಚೀನದ ಪ್ರಯತ್ನ, ಆದರೆ… : ದಲೈ ಲಾಮಾ
Team Udayavani, Jan 1, 2023, 6:40 PM IST
ಬೋಧಗಯಾ: ಚೀನ ಬೌದ್ಧ ಧರ್ಮವನ್ನು ನಾಶಮಾಡಲು ಪ್ರಯತ್ನಿಸುತ್ತಿದೆ ಎಂದು ಟಿಬೆಟಿಯನ್ ಆಧ್ಯಾತ್ಮಿಕ ಗುರು ದಲೈ ಲಾಮಾ ಅವರು ಆರೋಪಿಸಿದ್ದಾರೆ.
ಬೋಧಗಯಾದಲ್ಲಿ ಧಾರ್ಮಿಕ ಉಪದೇಶವನ್ನು ನೀಡುತ್ತಾ, ಚೀನದಲ್ಲಿ ಬೌದ್ಧ ಧರ್ಮವನ್ನು ನಂಬುವ ಅನೇಕ ಜನರಿರುವುದರಿಂದ ಅದರ ಯತ್ನ ವಿಫಲವಾಗಿದೆ. ಚೀನ ಬೌದ್ಧ ದೇಶವಾಗಿದೆ ಆದರೆ ಚೀನದಲ್ಲಿ ಬೌದ್ಧ ಧರ್ಮ ಮತ್ತು ಬೌದ್ಧರ ಮೇಲೆ ತುಂಬಾ ನಿಗ್ರಹ ಮತ್ತು ದಬ್ಬಾಳಿಕೆ ಇತ್ತು ಎಂದರು.
“ನಾನು ಟ್ರಾನ್ಸ್-ಹಿಮಾಲಯನ್ ಪ್ರದೇಶಗಳಿಗೆ ಭೇಟಿ ನೀಡಿದಾಗ, ಬೌದ್ಧ ಧರ್ಮಕ್ಕೆ ಮೀಸಲಾದ ಸ್ಥಳೀಯ ಜನರನ್ನು ಕಾಣುತ್ತೇನೆ. ಮಂಗೋಲಿಯಾ ಮತ್ತು ಚೀನದಲ್ಲಿಯೂ ಇದು ಒಂದೇ ಆಗಿರುತ್ತದೆ, ಆದರೂ ಚೀನೀ ಸರ್ಕಾರ ಧರ್ಮವನ್ನು ವಿಷವೆಂದು ನೋಡುತ್ತದೆ. ಅದನ್ನು ನಾಶಮಾಡಲು ಪ್ರಯತ್ನಿಸುತ್ತಿದೆ ಆದರೆ ಅವರು ಯಶಸ್ವಿಯಾಗಲಿಲ್ಲ”ಎಂದರು.
“ಚೀನ ಸರ್ಕಾರದಿಂದ ಬೌದ್ಧಧರ್ಮಕ್ಕೆ ಹಾನಿಯಾಯಿತು ಆದರೆ ಚೀನದಿಂದ ಅದನ್ನು ನಾಶ ಮಾಡಲು ಸಾಧ್ಯವಾಗಲಿಲ್ಲ. ಇಂದಿಗೂ, ಚೀನದಲ್ಲಿ ಬೌದ್ಧ ಧರ್ಮವನ್ನು ನಂಬುವ ಅನೇಕ ಜನರಿದ್ದಾರೆ”ಎಂದರು.
ಎರಡು ಸಹಸ್ರಮಾನಗಳ ಹಿಂದೆ ಬುದ್ಧನಿಗೆ ಜ್ಞಾನೋದಯವಾದ ಸ್ಥಳವಾದ ಬೋಧಗಯಾದಲ್ಲಿ 87 ವರ್ಷದ ಬೌದ್ಧ ನಾಯಕನ ದಲೈ ಲಾಮಾ ಅವರ ದೀರ್ಘಾಯುಷ್ಯಕ್ಕಾಗಿ ಸಾಂಪ್ರದಾಯಿಕ ಪ್ರಾರ್ಥನೆ “ದೀರ್ಘ ಜೀವನ ಅರ್ಪಣೆ” ಸಮಾರಂಭದ ನಂತರ ಭಕ್ತರನ್ನು ಉದ್ದೇಶಿಸಿ ಮಾತನಾಡಿದರು.ಬೋಧಗಯಾದಲ್ಲಿ ವ್ಯಾಪಕ ಕಟ್ಟೆಚ್ಚರ ಕೈಗೊಳ್ಳಲಾಗಿದೆ.
ಮಾವೋ ಝೆಡಾಂಗ್ ಅವರ ಕಮ್ಯುನಿಸ್ಟ್ ಕ್ರಾಂತಿಯ ಒಂದು ದಶಕದ ನಂತರ 1959 ರಲ್ಲಿ ಟಿಬೆಟಿಯನ್ ನಾಯಕ ದಲೈ ಲಾಮಾ ತನ್ನ ತಾಯ್ನಾಡಿನಿಂದ ದೂರವಾಗಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Train ಜನಶತಾಬ್ದಿ ಎಕ್ಸ್‌ಪ್ರೆಸ್‌ನಲ್ಲಿ ಹಾವು ಪ್ರತ್ಯಕ್ಷ: ತನಿಖೆಗೆ ಆದೇಶ
Himachal Pradesh;ನಷ್ಟದಲ್ಲಿರುವ ಹೊಟೇಲ್ ಮುಚ್ಚಲು ಹೈಕೋರ್ಟ್ ಆದೇಶ
Waqf ಮಸೂದೆ ಕರಡು ವರದಿ ಸಿದ್ಧ: ಜೆಪಿಸಿ ಅಧ್ಯಕ್ಷ ಪಾಲ್ ಘೋಷಣೆ
Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!
Adani Group; ಲಂಚದ ಆರೋಪ ಆಧಾರ ರಹಿತ, ಕಾನೂನು ಕ್ರಮ ಕೈಗೊಳ್ಳುತ್ತೇವೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.