ಚೀನ ಆ್ಯಪ್‌ಗಳ ನಿಷೇಧ ತೆರೆಯಲಿದೆ ದೇಸಿ ಬಾಗಿಲು
Team Udayavani, Jul 1, 2020, 7:15 AM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಚೀನದ ಟೆಕ್ ಕಂಪನಿಗಳ 59 ಆ್ಯಪ್‌ಗಳನ್ನು ನಿಷೇಧಿಸಿ ಕೇಂದ್ರ ಸರಕಾರ ಸೋಮವಾರ ಆದೇಶ ಹೊರಡಿಸಿದೆ.
ಭಾರತದ ಸಮಗ್ರತೆ, ಸಾರ್ವಭೌಮತ್ವ ಹಾಗೂ ದೇಶದ ರಕ್ಷಣಾ ವ್ಯವಸ್ಥೆಗೆ ಧಕ್ಕೆ ತರುವ ಚಟುವಟಿಕೆಗಳನ್ನು ನಡೆಸುತ್ತಿರುವ ಕಾರಣ ಈ ಆ್ಯಪ್‌ಗಳನ್ನು ನಿಷೇಧಿಸಲಾಗಿದೆ.
ದೇಶವಾಸಿಗಳ ಸ್ಮಾರ್ಟ್‌ಫೋನ್‌ನಲ್ಲಿ ಅವಿಭಾಜ್ಯ ಅಂಗವೇ ಆಗಿರುವ ಟಿಕ್ ಟಾಕ್ (ಟಿಟಿ), ಕ್ಯಾಮ್ ಸ್ಕ್ಯಾನರ್, ಕ್ಲಬ್ ಫ್ಯಾಕ್ಟರಿ (ಸಿಎಫ್) ಮತ್ತು ಯುಸಿ ಬ್ರೌಸರ್ (ಯುಸಿಬಿ) ರೀತಿಯ ಪ್ರಮುಖ ಆ್ಯಪ್‌ಗಳನ್ನು ಫೋನ್‌ನಿಂದ ತೆಗೆಯಲೇಬೇಕಾದ ಪರಿಸ್ಥಿತಿ ಬಂದೊದಗಿದೆ. ಇದರಿಂದ ಭಾರತ ದಲ್ಲಿ ಆತ್ಮನಿರ್ಭರತೆಯ ಭಾಗವಾಗಿ ದೇಸಿ ಆ್ಯಪ್‌ಗ್ಳಿಗೆ ಅವಕಾಶ ಹೆಚ್ಚಲಿದೆ.
ನಿಷೇಧದ ಪರಿಣಾಮಗಳೇನು?
– ದೇಶದ ಸೋಷಿಯಲ್ ಮೀಡಿಯಾ ಮಾರುಕಟ್ಟೆ ಮೇಲೆ ಕಣ್ಣಿರಿಸಿದ್ದ ಚೀನ ಕಂಪನಿಗಳಿಗೆ ನಿರಾಸೆ.
– ಬಿಗೋ ಲೈವ್ ರೀತಿಯ ವಿಡಿಯೋ ಚಾಟಿಂಗ್ ಆ್ಯಪ್‌ಗಳು ಇಂಗ್ಲಿಷ್ ಬಾರದ ಭಾರತೀಯರ ವಲಯದಲ್ಲಿ ಭಾರೀ ಜನಪ್ರಿಯವಾಗಿದ್ದವು. ಪ್ರಸ್ತುತ ಇವುಗಳ ಬಳಕೆದಾರರು ಪರ್ಯಾಯ ಆ್ಯಪ್ ಮೊರೆ ಹೋಗಬೇಕು.
– ನಿಷೇಧಗೊಂಡ ಬಹುತೇಕ ಆ್ಯಪ್‌ಗಳು ಭಾರತೀಯ ಕ್ರಿಯೇಟರ್‌ಗಳನ್ನು ಹೊಂದಿದ್ದು, ಇವರಿಗೆಲ್ಲಾ ಈ ಆ್ಯಪ್‌ಗಳೇ ಆದಾಯದ ಮೂಲ.
– ಇವುಗಳ ನಿಷೇಧದಿಂದ ಭಾರತೀಯ ಉದ್ಯಮಿ, ತಂತ್ರಜ್ಞರಿಗೆ ಇಂಥ ಆ್ಯಪ್‌ಗಳನ್ನು ಸೃಜಿಸಲು, ಮಾರ್ಕೆಟ್ ಮಾಡಲು ಅವಕಾಶ.
– ಟಿಕ್ ಟಾಕ್‌ನಲ್ಲಿ ಭಾರತೀಯರು ಕಳೆಯುತ್ತಿರುವ ಸಮಯ 11 ದೇಶಗಳ ಜನರ ಮೀಸಲಿಟ್ಟ ಸಮಯಕ್ಕೆ ಸಮ.
– ಭಾರತದಲ್ಲಿ ಅತಿ ಹೆಚ್ಚು ಡೌನ್‌ಲೋಡ್ ಆದ 10 ಪ್ರಮುಖ ಆ್ಯಪ್‌ಗಳಲ್ಲಿ ಚೀನದ 6 ಆ್ಯಪ್‌ಗಳಿವೆ.
– ನಿಷೇಧಗೊಂಡಿರುವ 59 ಆ್ಯಪ್‌ಗಳ ಪೈಕಿ ಭಾರತದಲ್ಲಿ ಅತಿ ಹೆಚ್ಚು ಬಾರಿ ಡೌನ್‌ಲೋಡ್ ಆಗಿರುವ 25 ಆ್ಯಪ್‌ಗಳಿವೆ.
2019ರಲ್ಲಿ ಭಾರತೀಯರು ಟಿಕ್‌ಟಾಕ್‌ನಲ್ಲಿ ಕಳೆದ ಸಮಯ: 550 ಕೋಟಿ ಗಂಟೆ
2014ರಿಂದ ಈವರೆಗೆ ನಿಷೇಧಿತ ಆ್ಯಪ್‌ಗಳನ್ನು ಡೌನ್‌ಲೋಡ್ ಮಾಡಿರುವವರು: 490 ಕೋಟಿ
2018ರ ಜನವರಿಯಿಂದ ಇದುವರೆಗೆ ಟಿಕ್‌ಟಾಕ್ ಡೌನ್‌ಲೋಡ್ ಮಾಡಿದವರು: 65 ಕೋಟಿ
ಮೇನಲ್ಲಿ ಟಿಟಿ, ಸಿಎಫ್, ಯುಸಿಬಿ ಆ್ಯಪ್ ಬಳಸಿದವರು: 50 ಕೋಟಿ
ಟಿಕ್‌ಟಾಕ್‌ನ ಮಾಸಿಕ ಸಕ್ರಿಯ ಬಳಕೆದಾರರು: 10 ಕೋಟಿ
2019ರಲ್ಲಿ ನಿಷೇಧಕ್ಕೊಳಗಾದಾಗ ಟಿಕ್‌ಟಾಕ್‌ಗೆ ದಿನವೊಂದಕ್ಕೆ ಆದ ನಷ್ಟ: 3.7 ಕೋಟಿ ರೂ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Choreographer ರೆಮೋ ಡಿಸೋಜಾ ವಿರುದ್ಧದ ಪ್ರಕರಣ ದೆಹಲಿ ಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ
Parliament; ಪ್ರಿಯಾಂಕಾ ಗಾಂಧಿ- ರಾಹುಲ್ ಜತೆ ಸೇರಿ ಬಿಜೆಪಿ ನಿದ್ದೆಗೆಡಿಸುತ್ತಾರೆ :ಪೈಲಟ್
Goa ಕರಾವಳಿಯಲ್ಲಿ ನೌಕಾಪಡೆಯ ಸಬ್ ಮರೈನ್ ಗೆ ಡಿಕ್ಕಿ ಹೊಡೆದ ಬೋಟ್-ಇಬ್ಬರು ನಾಪತ್ತೆ!
Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
MUST WATCH
ಹೊಸ ಸೇರ್ಪಡೆ
Mangaluru Airport; ಕೆ 9 ಹೀರೋ ಜಾಕ್ ಇನ್ನಿಲ್ಲ: ಭಾವನಾತ್ಮಕ ವಿದಾಯ
Kottigehara: ಅಪಘಾತದಿಂದ ಗಾಯಗೊಂಡ ನಾಗರಹಾವಿಗೆ ಚಿಕಿತ್ಸೆ
Road Mishap: ಶಬರಿಮಲೆ ಯಾತ್ರಿಕರಿದ್ದ ಬಸ್ ಡಿಕ್ಕಿ: ಮೊಪೆಡ್ ಸವಾರ ಸಾವು
Madhu Bangarappa ; ಟ್ರೋಲ್ ಗಳಿಗೆ ಬಗ್ಗಲ್ಲ.. ಕಿಡಿ ಕಿಡಿಯಾದ ಶಿಕ್ಷಣ ಸಚಿವ!
Vijayapura: 22 ಲಕ್ಷ ರೂ.ಮೌಲ್ಯದ ಗಾಂಜಾ ಜಪ್ತಿ, 2 ಕಾರು ವಶಕ್ಕೆ ಪಡೆದ ಪೊಲೀಸರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.