Funding; Congress-ಚೀನಾದ್ದು”ಹೊಕ್ಕುಳಬಳ್ಳಿಯ ಸಂಬಂಧ”: ಅನುರಾಗ್ ಠಾಕೂರ್
ಚೀನಾದ ಧನಸಹಾಯ ವರದಿ ಕುರಿತು ಆಕ್ರೋಶ
Team Udayavani, Aug 7, 2023, 6:31 PM IST
ಹೊಸದಿಲ್ಲಿ: ಚೀನಾದ ಕಂಪನಿಗಳು ನ್ಯೂಸ್ಕ್ಲಿಕ್ ವೆಬ್ಸೈಟ್ ಪೋರ್ಟಲ್ಗೆ ಹಣ ನೀಡುತ್ತಿವೆ ಎಂಬ ಆರೋಪದ ಸುದ್ದಿ ವರದಿಯನ್ನು ಉಲ್ಲೇಖಿಸಿದ ಬಿಜೆಪಿ ನಾಯಕ ಮತ್ತು ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್ ಸೋಮವಾರ, ”ಚೀನಾ ಮತ್ತು ಕಾಂಗ್ರೆಸ್ ಪಕ್ಷ ಭಾರತ ವಿರೋಧಿ ಧೋರಣೆಯ ವಿಚಾರದಲ್ಲಿ ಹೊಕ್ಕುಳಬಳ್ಳಿಯ ಸಂಬಂಧ ಹೊಂದಿವೆ” ಎಂದು ಹೇಳಿದ್ದಾರೆ.
ಬಿಜೆಪಿ ಪ್ರಧಾನ ಕಚೇರಿಯಲ್ಲಿ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಅವರೊಂದಿಗೆ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಠಾಕೂರ್,”ರಾಹುಲ್ ಜಿ ಅವರ ನಕಲಿ ‘ಮೊಹಬ್ಬತ್ ಕಿ ದುಕಾನ್” ನಲ್ಲಿ ಚೀನಾದ ವಸ್ತುಗಳನ್ನು ಮಾರಾಟ ಮಾಡಲಾಗುತ್ತಿದೆ. ನೀವು ನ್ಯೂಸ್ಕ್ಲಿಕ್ನ ಫಂಡಿಂಗ್ ನೆಟ್ವರ್ಕ್ ಅನ್ನು ನೋಡಿದರೆ, ಇದು ವಿದೇಶಿ ನೆವಿಲ್ಲೆ ರಾಯ್ ಸಿಂಘಮ್ನಿಂದ ಹಣವನ್ನು ಪಡೆದಿದೆ ಮತ್ತು ಅವರು ಚೀನಾದಿಂದ ಹಣವನ್ನು ಪಡೆಯುತ್ತಾರೆ” ಎಂದು ಆರೋಪಿಸಿದರು.
”ನೆವಿಲ್ಲೆ ರಾಯ್ ಸಿಂಘಮ್ ಕಮ್ಯುನಿಸ್ಟ್ ಪಾರ್ಟಿ ಆಫ್ ಚೀನಾ ಮತ್ತು ಚೀನಾದ ಮಾಧ್ಯಮ ಕಂಪನಿ ಮಕು ಗ್ರೂಪ್ನ ಪ್ರಚಾರ ವಿಭಾಗದೊಂದಿಗೆ ನೇರ ಸಂಪರ್ಕವನ್ನು ಹೊಂದಿದ್ದಾರೆ” ಎಂದರು.
ನ್ಯೂಸ್ ಪೋರ್ಟಲ್ ಹಿಂದೆ ವಿದೇಶಿ ಕೈಗಳು ಇರುವುದು 2021 ರಲ್ಲಿ ಬಹಿರಂಗವಾಯಿತು. ಅವರು ಉಚಿತ ಸುದ್ದಿಗಳ ಹೆಸರಿನಲ್ಲಿ ನಕಲಿ ಸುದ್ದಿಗಳನ್ನು ಬಿತ್ತರಿಸುತ್ತಾರೆ. ಕಾಂಗ್ರೆಸ್ ಮತ್ತು ಇತರ ಪಕ್ಷಗಳು ಅವರನ್ನು ಬೆಂಬಲಿಸುತ್ತಿವೆ,” ಎಂದು ಆರೋಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.