ಪವರ್ಗ್ರಿಡ್ ಹ್ಯಾಕ್ಗೆ ಚೀನ ಯತ್ನ!
Team Udayavani, Apr 8, 2022, 8:15 AM IST
ಹೊಸದಿಲ್ಲಿ: ಗಡಿಯಲ್ಲಿ ದುಸ್ಸಾಹಸ ಮೆರೆಯುತ್ತ ಪದೇ ಪದೆ ಭಾರತದ ತಂಟೆಗೆ ಬರುತ್ತಿರುವ ಚೀನ ವಾಮಮಾರ್ಗದ ಮೂಲಕವೂ ತೊಂದರೆ ಉಂಟುಮಾಡಲು ವಿಫಲ ಯತ್ನ ನಡೆಸಿತ್ತು ಎಂಬ ಮಾಹಿತಿ ಬಹಿರಂಗವಾಗಿದೆ.
ಚೀನ ಸರಕಾರಿ ಪ್ರಾಯೋಜಿತ ಹ್ಯಾಕರ್ಗಳು ಕಳೆದ 8 ತಿಂಗಳಿನಿಂದ ಲಡಾಖ್ ಸಮೀಪದಲ್ಲಿರುವ ಭಾರತದ ಏಳು ವಿದ್ಯುತ್ಛಕ್ತಿ ವಿತರಣ ಕೇಂದ್ರಗಳನ್ನು ಗುರಿ ಮಾಡಿದ್ದರು ಎಂದು ಅಮೆರಿಕ ಮೂಲದ “ರೆಕಾರ್ಡೆಡ್ ಫ್ಯೂಚರ್’ ಎಂಬ ಖಾಸಗಿ ಗುಪ್ತಚರ ಸಂಸ್ಥೆ ಹೇಳಿದೆ. ಪೂರ್ವ ಲಡಾಖ್ನಲ್ಲಿ ಎರಡೂ ದೇಶಗಳ ಸೇನೆಯ ನಡುವೆ ಸಂಘರ್ಷ ಮುಂದುವರಿದಿರುವಂತೆಯೇ ಈ ಬೆಳವಣಿಗೆ ನಡೆದಿದೆ. ಗುಪ್ತಚರ ಸಂಸ್ಥೆಯ ಮಾಹಿತಿಯನ್ನು ಕೇಂದ್ರ ಸರಕಾರವೂ ದೃಢಪಡಿಸಿದೆ.
ರೆಕಾರ್ಡೆಡ್ ಫ್ಯೂಚರ್ ಹೇಳಿದ್ದೇನು? :
ಕಳೆದ ವರ್ಷದ ಆಗಸ್ಟ್ನಲ್ಲಿ ಮತ್ತು ಮಾರ್ಚ್ನಲ್ಲಿ ಚೀನದ ಹ್ಯಾಕರ್ಗಳು ಉತ್ತರ ಭಾರತದಲ್ಲಿ ಇರುವ ಕನಿಷ್ಠ 7 ಇಂಡಿಯನ್ ಸ್ಟೇಟ್ ಲೋಡ್ ಡಿಸ್ಪ್ಯಾಚ್ ಸೆಂಟರ್ (ಎಸ್ಎಲ್ಡಿಸಿ)ಗಳ ಮೇಲೆ ಸೈಬರ್ ಬೇಹುಗಾರಿಕೆಗೆ ಯತ್ನಿಸಿದ್ದಾರೆ ಎಂದು ರೆಕಾರ್ಡೆಡ್ ಫ್ಯೂಚರ್ ಹೇಳಿದೆ.
ಚೀನದ ಉದ್ದೇಶವೇನು? :
- ಭಾರತದ ವಿದ್ಯುತ್ ಮೂಲ ಸೌಕರ್ಯಗಳ ಮಾಹಿತಿ ಸಂಗ್ರಹಿಸಲು ಕಾರ್ಯಾಚರಣೆ
- ಭವಿಷ್ಯದ ಕಾರ್ಯಾಚರಣೆಗಳಿಗೆ ಬೇಕಾದ ಮಾಹಿತಿ ಹಾಗೂ ದತ್ತಾಂಶಗಳ ಸಂಗ್ರಹ
- ದೇಶದ ಸೂಕ್ಷ್ಮ ಮೂಲಸೌಕರ್ಯ ವ್ಯವಸ್ಥೆಗಳನ್ನು ದುರ್ಬಲಗೊಳಿಸುವುದು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shocking: ಹೆರಿಗೆ ವೇಳೆ ಹೃದಯಾಘಾತ: ಮಹಿಳೆ ಮೃತ್ಯು, ಮಗುವನ್ನು ಉಳಿಸುವ ಯತ್ನವೂ ವಿಫಲವಾಯಿತು
Tragedy: ರೈಲು ಹಳಿ ಮೇಲೆ ಕೂತು PUBG ಆಡುತ್ತಿದ್ದ ಮೂವರು ಯುವಕರ ದೇಹ ಛಿದ್ರ ಛಿದ್ರ…
Fog: ಉತ್ತರ ಭಾರತದಲ್ಲಿ ದಟ್ಟ ಮಂಜು, ಶೂನ್ಯ ಗೋಚರತೆ: ವಿಮಾನ, ರೈಲು ಸಂಚಾರದ ಮೇಲೆ ಪರಿಣಾಮ
Video: ವೇದಿಕೆ ಮೇಲಿಂದ ಕೆಳಗೆ ಬಿದ್ದ ಕೇರಳ ಶಾಸಕಿ ಉಮಾ ಥಾಮಸ್… ಸ್ಥಿತಿ ಗಂಭೀರ
Fraud; ಯುವಕರು, ಸ್ತ್ರೀಯರನ್ನು ಗುರಿಯಾಗಿಸಿ ಹೂಡಿಕೆ ವಂಚನೆ: ಕೇಂದ್ರ ಎಚ್ಚರಿಕೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Hubli; ಅಧಿಕಾರಕ್ಕಾಗಿ ಕಾಂಗ್ರೆಸ್ ಯಾವ ಕೀಳು ಮಟ್ಟಕ್ಕೆ ಇಳಿಯಲು ಹೇಸಲ್ಲ: ಪ್ರಹ್ಲಾದ ಜೋಶಿ
Mangaluru: ಪಿಎಂ ಸ್ವನಿಧಿ ಯೋಜನೆ; ನಗರದಲ್ಲಿ 17.87 ಕೋ.ರೂ. ಸಾಲ ವಿತರಣೆ
Shimoga; ಕಾಂಗ್ರೆಸ್ ಸರಕಾರ ಹಿಂದೂ ಸಮಾಜದ ತಾಳ್ಮೆ ಪರೀಕ್ಷೆ ಮಾಡುತ್ತಿದೆ: ಈಶ್ವರಪ್ಪ
Shimoga; ತೇಜೋವಧೆ ಮಾಡಲು ನನ್ನ ಹೆಸರಲ್ಲಿ ಕಳಪೆ ಸ್ವೀಟ್ ಹಂಚಿಕೆ; ಡಾ.ಸರ್ಜಿ
Father of the Nation: ಬಾಂಗ್ಲಾ ರಾಷ್ಟ್ರಪಿತನಿಗೆ ಪಠ್ಯದಿಂದಲೇ ಕೊಕ್!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.