ಚೀನ ಕಿಡ್ನ್ಯಾಪ್ ಡ್ರಾಮಾ; ಅರುಣಾಚಲ ಪ್ರದೇಶದ ಬಗ್ಗೆ ಚೀನ ಸಚಿವ ಝೆವೊ ಹಗುರ ಮಾತು
Team Udayavani, Sep 8, 2020, 6:15 AM IST
ಆಗಸ್ಟ್ ಕೊನೆಯ ವಾರ ಹುತಾತ್ಮರಾಗಿದ್ದ ಯೋಧ ನ್ಯಿಮಾ ಟೆನ್ಷನ್‌ರ ಅಂತ್ಯಕ್ರಿಯೆ ಲೇಹ್‌ನ ದೆವಾಚನ್ನಲ್ಲಿ ನೆರವೇರಿತು.
ಹೊಸದಿಲ್ಲಿ: “ಅರುಣಾಚಲ ಪ್ರದೇಶದ ಬಗ್ಗೆ ನಮಗೆ ತಿಳಿದೇ ಇಲ್ಲ. ಚೀನ ಆ ಪ್ರದೇಶವನ್ನು ದಕ್ಷಿಣ ಟಿಬೆಟ್ ಪ್ರಾಂತ್ಯ ಅಂತಲೇ ಗುರುತಿಸಿದೆ’!
ಲಡಾಖ್ ಬಿಕ್ಕಟ್ಟಿನ ನಡುವೆ ಚೀನ ಇಂಥದ್ದೊಂದು ಉದ್ಧಟತನದ ಹೇಳಿಕೆ ಕೊಟ್ಟಿದೆ. ಅರುಣಾಚಲ ಪ್ರದೇಶದ ಐವರು ಪ್ರಜೆಗಳನ್ನು ಅಪಹರಿಸಿ ಹೈಡ್ರಾಮಾ ಸೃಷ್ಟಿಸುತ್ತಿರುವ ಚೀನ ಈ ಪ್ರಕರಣವನ್ನು ರಹಸ್ಯವಾಗಿ ಮುಚ್ಚಿಡಲೆತ್ನಿಸುತ್ತಿದೆ. “ಐವರನ್ನು ಸುರಕ್ಷಿತವಾಗಿ ಬಿಡುಗಡೆ ಮಾಡಿ’ ಎಂಬ ಭಾರತೀಯ ಸೇನೆ ಮಾಡಿರುವ ಮನವಿಗೆ ಉತ್ತರಿಸುವಾಗ, ಚೀನ ವಿದೇಶಾಂಗ ಸಚಿವ ಝಾವೊ ಲಿಜಿಯಾನ್ ಅರುಣಾಚಲದ ಬಗ್ಗೆ ಹೀಗೆ ಹಗುರವಾಗಿ ಹೇಳಿದ್ದಾರೆ.
ನಮಗೆ ಗೊತ್ತೇ ಇಲ್ಲ!: ಅರಣ್ಯಕ್ಕೆ ಶಿಕಾರಿಗೆ ತೆರಳಿದ್ದ ಅರುಣಾಚಲದ ಅಪ್ಪರ್ ಸುಬನ್ಸಿರಿ ಜಿಲ್ಲೆಯ ಐವರು ಯುವಕರನ್ನು ನಚೊ ಸರ್ಕಲ್‌ನ ಸೆರಾ 7 ಗಸ್ತು ಪಾಯಿಂಟ್‌ನಿಂದ ಅಪಹರಿಸಲಾಗಿದೆ. ಕಿಡ್ನ್ಯಾಪ್ ವೇಳೆ ತಪ್ಪಿಸಿಕೊಂಡ ಇಬ್ಬರು ಗಡಿಪೋಸ್ಟ್‌ನ ಅಧಿಕಾರಿಗಳಿಗೆ ದೂರು ನೀಡಿ ದ್ದರು. ಐವರನ್ನು ಸುರಕ್ಷಿತವಾಗಿ ಬಿಡು ಗಡೆ ಮಾಡುವಂತೆ ಭಾರತದ ಗಡಿ ಪೋಸ್ಟ್‌ನ ಅಧಿಕಾರಿಗಳು ಚೀನ ಕ್ಕೆ ಮನವಿ ಮಾಡಿ ದ್ದರು. ಆದರೆ, “ಕಿಡ್ನ್ಯಾಪ್ ಆದ ವಿಚಾರವೇ ನಮಗೆ ತಿಳಿದಿಲ್ಲ. ಇನ್ನು ಬಿಡುಗಡೆ ಮಾಡುವ ಮಾತೆ ಲ್ಲಿಂದ?’ ಎಂದು ಲಿಜಿಯಾನ್ ಉದ್ಧಟತನದಲ್ಲಿ ಪ್ರಶ್ನಿಸಿ ದ್ದಾರೆ. “ನಾವು ಪಿಎಲ್‌ಎ ಅಧಿಕಾರಿಗ ಳೊಂ ದಿಗೆ ಗಡಿಪೋಸ್ಟ್‌ನಲ್ಲಿ ಮಾತನಾಡಿದ್ದೇವೆ. ಐವರು ಆಕಸ್ಮಿಕವಾಗಿ ನಿಮ್ಮ ಕಡೆ ಬಂದಿರಬಹುದು. ನೀವು ಅವರನ್ನು ಹಸ್ತಾಂತರಿ ಸಿದರೆ ನಾವು ಕೃತಜ್ಞರಾಗುತ್ತೇವೆ ಎಂದಿದ್ದೇವೆ’ ಎಂದು ಲೆ| ಕರ್ನಲ್ ಹರ್ಷವರ್ಧನ್ ಪಾಂಡೆ ತಿಳಿಸಿದ್ದಾರೆ.
ಕಾದು ನೋಡುವ ತಂತ್ರ: “ಈ ಪ್ರಕರಣ ಇನ್ನೂ ರಾಜತಾಂತ್ರಿಕ ಮಟ್ಟಕ್ಕೆ ಬಂದಿಲ್ಲ. ಸ್ಥಳೀಯ ಗಡಿಭದ್ರತಾ ಪೋಸ್ಟ್‌ನ ಅಧಿಕಾರಿಗಳ ಮಟ್ಟದಲ್ಲಿದೆ. ಸ್ಪಷ್ಟ ವರದಿ ಸಂಗ್ರಹಿಸಿದ ಬಳಿಕ ಭಾರತ ಮುಂದಿನ ಕ್ರಮ ಕೈಗೊಳ್ಳಲಿದೆ’ ಎಂದು ಕೇಂದ್ರದ ಮೂಲಗಳು ತಿಳಿಸಿವೆ.
400 ಉಗ್ರರನ್ನು ಛೂಬಿಟ್ಟ ಪಾಕ್
ಭಾರತ- ಚೀನ ಬಿಕ್ಕಟ್ಟಿನ ನಡುವೆ ಬೃಹತ್ ಸಂಖ್ಯೆಯ ಉಗ್ರರನ್ನು ಎಲ್‌ಒಸಿ ಮೂಲಕ ಕಾಶ್ಮೀರಕ್ಕೆ ನುಗ್ಗಿಸಲು ಪಾಕಿಸ್ಥಾನ ಯತ್ನಿ ಸುತ್ತಿದೆ ಎಂದು “ನ್ಯೂಸ್ 18′ ವರದಿ ಮಾಡಿದೆ. ಪ್ರಸ್ತುತ 400ಕ್ಕೂ ಹೆಚ್ಚು ಉಗ್ರ ರನ್ನು ಎಲ್‌ಒಸಿ ಬಳಿಯ ವಿವಿಧ ಲಾಂಚ್‌ಪ್ಯಾಡ್‌ಗಳಲ್ಲಿ ಪಾಕಿಸ್ಥಾನ ಒಟ್ಟುಗೂಡಿಸಿದೆ. ಈ ಉಗ್ರರಿಗೆ ಎಲ್‌ಒಸಿ ದಾಟಲು ಸಹಾಯ ಮಾಡಲೆಂದೇ ಪಾಕಿ ಸ್ತಾನ ಸೇನೆಯ ಎಸ್‌ಎಸ್‌ಐ ವಿಶೇಷ ತಂಡ ವನ್ನು ರಚಿಸಿದೆ ಎಂದು ವರದಿ ತಿಳಿಸಿದೆ.
ಬಿಪಿಸಿಎಲ್ ಬಿಡ್‌ನಲ್ಲೂ ಚೀನ ಮೇಲೆ ನಿಗಾ
ಸರಕಾರಿ ಸ್ವಾಮ್ಯದಲ್ಲಿದ್ದ ಭಾರತ್ ಪೆಟ್ರೋಲಿಯಂ ಕಾರ್ಪೋರೇಶನ್ ಲಿಮಿಟೆಡ್ ಅನ್ನು (ಬಿಪಿಸಿಎಲ್) ಖಾಸಗಿ ವಲಯಕ್ಕೆ ಮಾರುವ ವಿಚಾರದಲ್ಲಿಯೂ ಕೇಂದ್ರ ಸರಕಾರ ಚೀನದ ಮೇಲೆ ನಿಗಾ ಇಟ್ಟಿದೆ. ಬಿಪಿಸಿಎಲ್ ಬಿಡ್‌ದಾರರನ್ನು ಚೀನದೊಂದಿಗೆ ಸಂಪರ್ಕ ಹೊಂದಿದ್ದಾರೆಯೇ ಎಂಬುದನ್ನು ಪರಿಶೀಲಿಸಲು ಕೇಂದ್ರ ಮುಂದಾಗಿದೆ. ಪ್ರಸ್ತುತ ಕೇಂದ್ರ ಸರಕಾರ 2.10 ಲಕ್ಷ ಕೋಟಿ ರೂ.ಗಳಿಗೆ ಬಿಪಿಸಿಎಲ್ ಮಾರಲು ಉದ್ದೇಶಿಸಿದೆ. ಚೀನ, ಪಾಕಿಸ್ಥಾನದಂಥ ದೇಶಗಳೊಂದಿಗೆ ಸಂಬಂಧ ಹೊಂದಿದ ಬಿಡ್‌ದಾರರು ದೊಡ್ಡ ಮೊತ್ತದ ಮೂಲಕ ಬಿಡ್‌ನಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಇದೆ ಎಂದು ಸರಕಾರ ಶಂಕಿಸಿದೆ.
ಚುಶುಲ್ ಸಮೀಪ ಸೈನಿಕರನ್ನು ಹೆಚ್ಚಿಸಿದ ಚೀನ
ರಷ್ಯಾದಲ್ಲಿ ಉಭಯ ರಾಷ್ಟ್ರಗಳ ರಕ್ಷಣಾ ಸಚಿವರ ಸಭೆ ಒಮ್ಮತದ ನಿರ್ಣಯಕ್ಕೆ ಬರಲು ವಿಫಲವಾದ ಬೆನ್ನಲ್ಲೇ ಚುಶುಲ್ ವಲಯ ಸಮೀಪದ ಚೀನ ಸೇನೆ ನಿಯೋಜನೆಯನ್ನು ಹೆಚ್ಚಿಸುತ್ತಿದೆ ಎಂದು ಮೂಲಗಳು ತಿಳಿಸಿವೆ. ಪ್ಯಾಂಗಾಂಗ್‌ನ ದಕ್ಷಿಣ ದಂಡೆಯ ಸಮೀಪದಲ್ಲಿ 10 ಸಾವಿರ ಸೈನಿಕರನ್ನು ಪಿಎಲ್‌ಎ ಪಡೆ ನಿಯೋಜಿಸುವ ಪ್ರಕ್ರಿಯೆ ಆರಂಭಿಸಿದೆ. ಕಾಲಾಳುಪಡೆ ವಾಹನಗಳು, ಭಾರೀ ಫಿರಂಗಿಗಳನ್ನು ನಿಯೋಜಿಸುತ್ತಿರುವ ದೃಶ್ಯಗಳು ಉಪಗ್ರಹ ತೆಗೆದ ಚಿತ್ರಗಳಲ್ಲಿ ಸ್ಪಷ್ಟವಾಗಿವೆ.
ಸೆ. 10ಕ್ಕೆ ರಷ್ಯಾದಲ್ಲಿ ಮತ್ತೆ ಇಂಡೋ- ಚೀನ ಮಾತುಕತೆ
ಭಾರತ- ಚೀನ ಗಡಿಬಿಕ್ಕಟ್ಟು ಕುರಿತು ಚರ್ಚಿಸಲು ವಿದೇ ಶಾಂಗ ಸಚಿವ ಎಸ್. ಜೈಶಂಕರ್ ರಷ್ಯಾ ಪ್ರವಾಸ ಕೈಗೊಂಡಿದ್ದಾರೆ. ಸೆ.10ರಂದು ಚೀನ ವಿದೇಶಾಂಗ ಸಚಿವ ವಾಂಗ್ ಯೀ ಜತೆ ದ್ವಿಪಕ್ಷೀಯ ಮಾತುಕತೆಯಲ್ಲಿ ಅವರು ಪಾಲ್ಗೊಳ್ಳಲಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ. ರಷ್ಯಾ ಒಕ್ಕೂಟ ಆಯೋಜಿಸಿರುವ ಎಸ್‌ಸಿಒ ಶೃಂಗದ ಭಾಗವಾಗಿ ಈ ಮಾತು ಕತೆ ಜರುಗಲಿದೆ. ಇತ್ತೀಚೆಗಷ್ಟೇ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಚೀನದ ರಕ್ಷಣಾ ಮಂತ್ರಿಗಳೊಂದಿಗೆ ಇದೇ ವಿಚಾರವಾಗಿ ಮಾಸ್ಕೋದಲ್ಲಿ ಸುದೀರ್ಘ ಮಾತುಕತೆ ನಡೆಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Delhi: ಒಂದು ತಿಂಗಳ ಅಂತರದಲ್ಲಿ ಪ್ರಶಾಂತ್ ವಿಹಾರ್ ಪ್ರದೇಶದಲ್ಲಿ ಎರಡನೇ ಸ್ಫೋಟ
Lok Sabha:ರೈಲಿನಲ್ಲಿ ಪ್ರಯಾಣಿಕರಿಗೆ ನೀಡುವ ಹೊದಿಕೆ ಎಷ್ಟು ದಿನಗಳಿಗೊಮ್ಮೆ ತೊಳೆಯಲಾಗುತ್ತದೆ
Oath: ಕೇರಳ ಸೀರೆ ತೊಟ್ಟು, ಕೈಯಲ್ಲಿ ಸಂವಿಧಾನ ಹಿಡಿದು ಪ್ರಮಾಣ ವಚನ ಸ್ವೀಕರಿಸಿದ ಪ್ರಿಯಾಂಕಾ
Railway: ಪ್ರತಿ ಪ್ರಯಾಣದ ಬಳಿಕ ಹೊದಿಕೆಗಳನ್ನು ತೊಳೆಯುತ್ತಾರಾ? ಸಚಿವರು ಕೊಟ್ಟ ಉತ್ತರವೇನು?
Cyber Fraud Case: ದಾಳಿ ನಡೆಸಲು ಹೋದ ಇಡಿ ಅಧಿಕಾರಿಗಳ ಮೇಲೆಯೇ ತಂಡದಿಂದ ಹಲ್ಲೆ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
School Teacher: ಅನಾರೋಗ್ಯದಿಂದ ಉದ್ಯಾವರ ಜೂಲಿಯಾನಾ ಟೀಚರ್ ನಿಧನ
Kalaburagi: ಜಮೀನು ವ್ಯಾಜ್ಯ; ಪೆಟ್ರೋಲ್ ಸುರಿದು ಕುಟುಂಬಸ್ಥರ ಸಾಮೂಹಿಕ ಹತ್ಯೆಗೆ ಯತ್ನ
Thirthahalli: ತೀರ್ಥಹಳ್ಳಿ ವ್ಯವಸ್ಥಿತವಾಗಿ ಎರಡನೇ ಭಟ್ಕಳ ಆಗುತ್ತಿದೆ.. ಪ್ರಮೋದ್ ಮುತಾಲಿಕ್
Sirwar: ಹಳೆ ದ್ವೇಷ-ಯುವಕನ ಕೊಲೆ; ಮೂವರ ಬಂಧನ
Kannada Cinema: ಕ್ಲೈಮ್ಯಾಕ್ಸ್ ನತ್ತ ʼಕುಲದಲ್ಲಿ ಕೀಳ್ಯಾವುದೋʼ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.