ಚೀನ ಸಾಲದ ಆ್ಯಪ್ಗಳ ಹಗರಣ: 46 ಕೋಟಿ ರೂ.ಜಪ್ತಿ ಮಾಡಿದ ಇಡಿ
Team Udayavani, Sep 16, 2022, 7:49 PM IST
ಮುಂಬಯಿ: ಚೀನ ನಿಯಂತ್ರಿತ ಹೂಡಿಕೆ ಟೋಕನ್ ಅಪ್ಲಿಕೇಶನ್ ವಿರುದ್ಧ ದಾಳಿ ನಡೆಸಿದ ನಂತರ ಈಸ್ ಬಜ್ , ರೇಜರ್ ಪೇ,ಕ್ಯಾಶ್ ಫ್ರೀ ಮತ್ತು ಪೇಟಿಎಮ್ ನ ನಾಲ್ಕು ಆನ್ಲೈನ್ ಪಾವತಿ ಗೇಟ್ವೇ ಖಾತೆಗಳಲ್ಲಿ ಇರಿಸಲಾಗಿರುವ ವ್ಯಾಪಾರಿ ಘಟಕಗಳ 46.67 ಕೋಟಿ ರೂಪಾಯಿ ಹಣವನ್ನು ಜಪ್ತಿ ಮಾಡಿರುವುದಾಗಿ ಕೇಂದ್ರೀಯ ಸಂಸ್ಥೆ ಹೇಳಿದೆ.
ಜಾರಿ ನಿರ್ದೇಶನಾಲಯ ಚೀನಿ ಸಾಲದ ಅಪ್ಲಿಕೇಶನ್ಗಳ ಹಗರಣವನ್ನು ತನಿಖೆ ನಡೆಸುತ್ತಿದೆ ಮತ್ತು ಪೇಟಿಎಮ್, ರೇಜರ್ ಪೇ, ಈಸ್ ಬಜ್ ಮತ್ತು ಕ್ಯಾಶ್ ಫ್ರೀ ನಂತಹ ವ್ಯಾಪಕವಾಗಿ ಬಳಸಲಾಗುವ ಪಾವತಿ ಗೇಟ್ವೇ ಪ್ಲಾಟ್ಫಾರ್ಮ್ಗಳಿಗೆ ತನ್ನ ತನಿಖೆಯನ್ನು ವಿಸ್ತರಿಸಿ, ಕಚೇರಿಗಳಲ್ಲಿ ದಾಳಿಗಳನ್ನು ಪ್ರಾರಂಭಿಸಿತ್ತು.
ಆ್ಯಪ್ ಆಧಾರಿತ ಸಾಲ ನೀಡುವ ಕಂಪನಿಗಳ ಕಾರ್ಯಾಚರಣೆಯಲ್ಲಿನ ಅಕ್ರಮಗಳ ಕುರಿತು ಬೆಂಗಳೂರಿನ ರೇಜರ್ಪೇ, ಪೇಟಿಎಂ ಮತ್ತು ಕ್ಯಾಶ್ಫ್ರೀ ಕಚೇರಿಗಳ ಮೇಲೆ ದಾಳಿ ನಡೆಸಿದ ಕೆಲವೇ ದಿನಗಳ ನಂತರ ಹಣವನ್ನು ಇಡಿ ಮನಿ ಲಾಂಡರಿಂಗ್ ವಿರೋಧಿ ಕಾನೂನಿನಡಿಯಲ್ಲಿ ಜಪ್ತಿ ಮಾಡಲಾಗಿದೆ. ವ್ಯಕ್ತಿಗಳು ಮತ್ತು ನಂತರ ಅವರ ಖಾತೆಗಳಲ್ಲಿ ಇರಿಸಲಾಗಿದ್ದ 17 ಕೋಟಿ ರೂ. ಹಣವನ್ನು ವಶಪಡಿಸಿಕೊಳ್ಳುವ ಆದೇಶವನ್ನು ನೀಡಲಾಗಿದೆ.
ಚೀನಿ ಸಾಲದ ಅಪ್ಲಿಕೇಶನ್ ಹಗರಣದ ತನಿಖೆಯು ದೇಶಾದ್ಯಂತ ಹಲವಾರು ಆತ್ಮಹತ್ಯೆ ಪ್ರಕರಣಗಳು ಬಯಲಿಗೆ ಬಂದಾಗ ಪ್ರಾರಂಭವಾಗಿದ್ದು, ಅಲ್ಲಿ ಜನರು ಸಾಲವನ್ನು ಮರುಪಾವತಿಸಲು ಸಾಧ್ಯವಾಗದೆ ಮತ್ತು ಕಂಪನಿಗಳಿಂದ ನಿರಂತರವಾಗಿ ಪೀಡಿಸಲ್ಪಟ್ಟಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ
Mumbai: ಕಾರು ಢಿಕ್ಕಿ; ರಸ್ತೆ ಬದಿ ಆಡುತ್ತಿದ್ದ 4ರ ಬಾಲಕ ಸ್ಥಳದಲ್ಲೇ ಮೃ*ತ್ಯು
Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!
Mohali: ನಾಲ್ಕಂತಸ್ತಿನ ಕಟ್ಟಡ ಕುಸಿದು 20 ವರ್ಷದ ಯುವತಿ ಸಾವು
Ayyappa Temple: ಶಬರಿಮಲೆಗೆ ಭಕ್ತರ ಪ್ರವಾಹ: ಸ್ಪಾಟ್ ಬುಕ್ಕಿಂಗ್ ತಾತ್ಕಾಲಿಕ ರದ್ದು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Malpe: ಮನೆ ಮನೆಗಳಲ್ಲಿ ಕ್ಯಾರೋಲ್ ಗಾಯನ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Mangaluru: ಕ್ರಿಸ್ಮಸ್ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು
Health: ಶೀಘ್ರ ಕ್ಯಾನ್ಸರ್ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.