ಲಡಾಖ್ ಗಡಿಯುದ್ದಕ್ಕೂ ಡೇರೆ ಹೂಡಿದ ಚೀನ ಸೈನಿಕರು
ಕ್ಷಣ ಕ್ಷಣದ ಮಾಹಿತಿ ಕಲೆ ಹಾಕುತ್ತಿರುವ ಅಜಿತ್ ದೋವಲ್ ; ಗಲ್ವಾನ್ ನದಿ ದಡದಲ್ಲಿ 80 ಡೇರೆ, ಸೈನಿಕರಿಂದ ಶಸ್ತ್ರಾಭ್ಯಾಸ
Team Udayavani, May 21, 2020, 6:23 AM IST
ಪ್ಯಾಂಗಾಂಗ್ ತ್ಸೋ ಸರೋವರದಂಥ ಸಣ್ಣ ಜಾಗದಲ್ಲೂ ಮೋಟಾರ್ ದೋಣಿಗಳಲ್ಲಿ ಗಸ್ತು.
ಹೊಸದಿಲ್ಲಿ: ಲಡಾಖ್ ಗಡಿಯಲ್ಲಿ ಚೀನವು ಹೆಚ್ಚುವರಿ ಸೈನಿಕರ ಜಮಾವಣೆ ಮಾಡಿರುವುದನ್ನು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಸೇರಿದಂತೆ, ಉನ್ನತಾಧಿಕಾರಿಗಳ ತಂಡ ಸೂಕ್ಷ್ಮವಾಗಿ ಗಮನಿಸುತ್ತಿದೆ.
ಗಡಿಯಲ್ಲಿ ಡೇರೆ ಹೂಡಿರುವ ಚೀನ ಸೈನಿಕರ ಕ್ಷಣಕ್ಷಣದ ಮಾಹಿತಿಗಳನ್ನು ದೋವಲ್ ಪಡೆಯುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. ಒಂದು ವಾರದಿಂದ ಚೀನ ಪಡೆ, ಈ ವಲಯದಲ್ಲಿ ಮಿಲಿಟರಿ ಶಸ್ತ್ರಾಭ್ಯಾಸ ಆರಂಭಿಸಿದೆ.
ಸಾಕಷ್ಟು ಯುದ್ಧೋಪಕರಣಗಳನ್ನೂ ಗಡಿ ಪ್ರದೇಶಕ್ಕೆ ಸಾಗಿಸಿದೆ. ಪ್ಯಾಂಗಾಂಗ್ ತ್ಸೋ ಸರೋವರದಂಥ ಸಣ್ಣ ಜಾಗದಲ್ಲೂ ಮೋಟಾರ್ ದೋಣಿಗಳಲ್ಲಿ ಗಸ್ತು ಆರಂಭಿಸಿದೆ.
ಗಲ್ವಾನ್ ದಡದಲ್ಲಿ 80 ಡೇರೆ: ಗಲ್ವಾನ್ ನದಿಪಾತ್ರದಲ್ಲಿ ಚೀನ ಸೈನಿಕರು 80 ಡೇರೆಗಳನ್ನು ಹೂಡಿದ್ದಾರೆ. ಇದಕ್ಕೆ ಪ್ರತ್ಯುತ್ತರವಾಗಿ ಭಾರತ ಕೂಡ, ನದಿ ಪಾತ್ರದಲ್ಲಿ ಸೈನಿಕರ ಟೆಂಟ್ ಹಾಕಿ, ಚೀನ ಸೇನೆಯ ಚಲನವಲನಗಳನ್ನು ಸಮೀಪದಿಂದ ವೀಕ್ಷಿಸುತ್ತಿದೆ.
1962ರಲ್ಲಿ ಇದೇ ವಿಚಾರಕ್ಕೆ ಚೀನ, ಭಾರತದ ಮೇಲೆ ಯುದ್ಧ ಸಾರಿತ್ತು. ಮತ್ತೆ ಚೀನಗೆ ಗಲ್ವಾನ್ ತೀರದ ಮೇಲೆ ಕಣ್ಣು ಬಿದ್ದಂತಿದೆ.
ಭಾರತದ ರಸ್ತೆ ಟಾರ್ಗೆಟ್: ಭಾರತ ಕಳೆದ ವರ್ಷವಷ್ಟೇ ನಿರ್ಮಿಸಿದ್ದ, 254 ಕಿ.ಮೀ. ದೂರದ ದೌಲತ್ ಬೇಗ್ ಓಲ್ಡಿ ರಸ್ತೆಯ ಸಂಪರ್ಕ ಕಡಿದು ಹಾಕಲು ಚೀನ ತಂತ್ರ ರೂಪಿಸುತ್ತಿದೆ.
ಈ ರಸ್ತೆ ನಿರ್ಮಾಣ ಆದಾಗಿನಿಂದಲೂ ಚೀನ, ತಂಟೆ ಮಾಡುತ್ತಲೇ ಬಂದಿದೆ. ರಸ್ತೆಯ ಇಕ್ಕೆಲಗಳಲ್ಲಿ ಭಾರತೀಯ ಸೈನಿಕರೂ ನಿರಂತರವಾಗಿ ಗಸ್ತು ತಿರುಗುತ್ತಿದ್ದಾರೆ.
ನೇಪಾಲ ಪ್ರಧಾನಿಯಿಂದ ವಿವಾದಿತ ನಕ್ಷೆಗೆ ಸಮರ್ಥನೆ
ನೇಪಾಳ ಸಂಸತ್ ಅನುಮೋದಿಸಿರುವ ವಿವಾದಿತ ನಕ್ಷೆಯನ್ನು ಪ್ರಧಾನಿ ಕೆ.ಪಿ. ಶರ್ಮಾ ಒಲಿ ಸಮರ್ಥಿಸಿಕೊಂಡಿದ್ದಾರೆ.
‘ಪ್ರಧಾನಿ ಹುದ್ದೆಯಂಥ ಜವಾಬ್ದಾರಿಯುತ ಸ್ಥಾನದಲ್ಲಿದ್ದು ನಾನು ಲಿಪುಲೆಖ್, ಲಿಂಪಿಯಾಧುರಾ, ಕಾಲಾಪಾನಿ ಪ್ರದೇಶಗಳನ್ನು ನಕ್ಷೆಯಿಂದ ಕಣ್ಮರೆಯಾಗಲು ಬಿಡುವುದಿಲ್ಲ. ಇವುಗಳ ಮೇಲೆ ಹಕ್ಕು ಸ್ಥಾಪಿಸುವುದಕ್ಕಾಗಿ, ಸಂವಿಧಾನ ತಿದ್ದುಪಡಿ ಮಾಡಲಾಗುವುದು’ ಎಂದಿದ್ದಾರೆ.
ಭಾರತ ಸ್ಪಷ್ಟನೆ: ನೇಪಾಳ ತೆಗೆದಿರುವ ಈ ಹೊಸ ಕ್ಯಾತೆಗೆ ಭಾರತದ ವಿದೇಶಾಂಗ ಸಚಿವಾಲಯ ಸ್ಪಷ್ಟನೆ ನೀಡಿದೆ. ‘ಲಿಪುಲೆಖ್, ಲಿಂಪಿಯಾಧುರಾ, ಕಾಲಾಪಾನಿ ಭಾರತಕ್ಕೆ ಸೇರಿದ ಭಾಗಗಳು. ಇವುಗಳ ಮೂಲಕವೇ ಮಾನಸ ಸರೋವರಕ್ಕೆ ರಸ್ತೆ ನಿರ್ಮಿಸಿದ್ದೇವೆ. ಯಾತ್ರಾರ್ಥಿಗಳೂ ಈ ಮಾರ್ಗವನ್ನೇ ಅನುಸರಿಸುತ್ತಿದ್ದಾರೆ’ ಎಂದು ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Poll code violations ; ಖರ್ಗೆ, ನಡ್ಡಾ ಪ್ರತಿಕ್ರಿಯೆ ಕೇಳಿದ ಚುನಾವಣ ಆಯೋಗ
Rahul Gandhi ಭರವಸೆಗಳನ್ನು ನೀಡುತ್ತಾರೆ ಮತ್ತು ವಿದೇಶಕ್ಕೆ ಹಾರುತ್ತಾರೆ: ಶಾ ವಾಗ್ದಾಳಿ
PM Modi ಅವರು ಜೋ ಬೈಡೆನ್ ಅವರಂತೆ ನೆನಪಿನ ಶಕ್ತಿ ಕಳೆದುಕೊಳ್ಳುತ್ತಿದ್ದಾರೆ: ರಾಹುಲ್ ಗಾಂಧಿ
Resign: ಶಿರೋಮಣಿ ಅಕಾಲಿದಳದ ಅಧ್ಯಕ್ಷ ಸ್ಥಾನಕ್ಕೆ ಸುಖಬೀರ್ ಸಿಂಗ್ ಬಾದಲ್ ರಾಜೀನಾಮೆ
Maharashtra; ನಮ್ಮ ಮೈತ್ರಿ ಕೂಟ ಗೆದ್ದು ಮಹಾರಾಷ್ಟ್ರ ಉಳಿಸಲಿದೆ: ಡಿ.ಕೆ. ಶಿವಕುಮಾರ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.