ಬಗೆದಷ್ಟೂ ನಿಗೂಢ! ಚಿತ್ರಾ ರಾಮಕೃಷ್ಣ
Team Udayavani, Feb 20, 2022, 6:20 AM IST
ನ್ಯಾಶನಲ್ ಸ್ಟಾಕ್ ಎಕ್ಸ್ಚೇಂಜ್ನ (ಎನ್ಎಸ್ಇ) ಮಾಜಿ ಮುಖ್ಯಸ್ಥೆ ಚಿತ್ರಾ ರಾಮಕೃಷ್ಣ ಅವರ ಪ್ರಕರಣ ಅಪರೂಪದ್ದು . ಇಲ್ಲಿ ಮೂರು ಪಾತ್ರಗಳಿವೆ. ಒಂದು ಚಿತ್ರಾ ರಾಮಕೃಷ್ಣ, ಮತ್ತೊಬ್ಬರು ಅವರ ಸಲಹೆಗಾರರಾಗಿದ್ದ ಆನಂದ್ ಸುಬ್ರಹ್ಮಣ್ಯನ್. ಮೂರನೆಯ ಪಾತ್ರ – ಹಿಮಾಲಯದ ಯೋಗಿ! ಈ ಮೂರರ ನಡುವಿನ ಘಟನಾವಳಿಗಳು ತನಿಖಾಧಿಕಾರಿಗಳ ನಿದ್ದೆಗೆಡಿಸಿವೆ.
ಚಿತ್ರಾ ವಿರುದ್ಧದ ಆರೋಪಗಳೇನು?
2013ರಿಂದ 2016ರ ವರೆಗೆ ಎನ್ಎಸ್ಇ ಮುಖ್ಯಸ್ಥೆಯಾಗಿದ್ದ ಚಿತ್ರಾ, ತಾವು ಕೈಗೊಂಡ ಪ್ರತಿಯೊಂದು ಆಡಳಿತಾತ್ಮಕ ನಿರ್ಧಾರವನ್ನು ಹಿಮಾಲಯದ ಯೋಗಿಯೊಬ್ಬರ ಆಣತಿ ಮೇರೆಗೆ ಕೈಗೊಳ್ಳುತ್ತಿದ್ದರು ಎಂಬ ಆರೋಪ ವಿದೆ. ಎನ್ಎಸ್ಸಿಯ ಗೌಪ್ಯ ಮಾಹಿತಿಗಳನ್ನು ಯೋಗಿ ಬಳಿ ಹಂಚಿಕೊಂಡಿದ್ದಾರೆನ್ನಲಾಗಿದೆ. ಎನ್ಎಸ್ಇ ವತಿಯಿಂದ ಕೈಗೊಳ್ಳಬೇಕಾದ ವಾಣಿಜ್ಯ ಕಾರ್ಯತಂತ್ರಗಳು, ಸಂಸ್ಥೆಯ ಆಂತರಿಕ ವಿಚಾರಗಳ ಬಗ್ಗೆ ಯೋಗಿಯವರ ಬಳಿ ಚರ್ಚಿಸಿ ಚಿತ್ರಾ ನಿರ್ಧಾರ ಕೈಗೊಳ್ಳು ತ್ತಿದ್ದರು. ಅಷ್ಟೇ ಏಕೆ, ಎನ್ಎಸ್ಇ ಸಿಬಂದಿಯ ವೇತನ ಹೆಚ್ಚಳ ಪ್ರಸ್ತಾವನೆಯನ್ನೂ ಅವರ ಮುಂದಿಟ್ಟೇ ನಿರ್ಧಾರ ಮಾಡುತ್ತಿದ್ದರು ಚಿತ್ರಾ.
ಎಲ್ಲವೂ ನಿಗೂಢ!
ಚಿತ್ರಾರಿಗೆ ಯೋಗಿ ಎಂದು ಕರೆಯಿಸಿಕೊಂಡಾತ ಕಳಿಸಿರುವ ಇ-ಮೇಲ್ಗಳು ಅವರ ಬಗ್ಗೆ ಹೊಸ ಸಂಶಯಗಳನ್ನು ಹುಟ್ಟುಹಾಕಿವೆ. 2017ರ ಫೆಬ್ರವರಿಯಲ್ಲಿ ಯೋಗಿ ಕಳಿಸಿದ ಇ-ಮೇಲ್ನಲ್ಲಿ, ನಾನು ಮುಂದಿನ ತಿಂಗಳು ಸೀಶೆಲ್ಗೆ ಹೊರಡುತ್ತಿದ್ದೇನೆ. ನೀನು (ಚಿತ್ರಾ) ಬರುವುದಾದರೆ ಲಗೇಜ್ ಸಿದ್ಧವಾಗಿಟ್ಟುಕೋ. ಕಾಂಚನಾ, ಭಾರ್ಗವ ಜತೆೆ ಕಂಚನ್ ಲಂಡನ್ಗೆ ಹೋಗುವ ಮುನ್ನ ಹಾಗೂ ನೀನು ನಿನ್ನ ಇಬ್ಬರು ಮಕ್ಕಳೊಂದಿಗೆ ನ್ಯೂಜಿಲೆಂಡ್ಗೆ ಹೋಗುವ ಮುನ್ನ ನೀನು ಬರಬಹುದು ಎಂದಿದ್ದಾರೆ. ಇಲ್ಲಿ ಕಾಂಚನಾ, ಕಂಚನ್ ಎಂದರೆ ಸುಬ್ರಹ್ಮಣ್ಯನ್ ಹಾಗೂ ಎನ್ಎಸ್ಇಯ ಚೆನ್ನೈ ಕಚೇರಿಯಲ್ಲಿ ಸೇವೆ ಸಲ್ಲಿಸುತ್ತಿದ್ದ ಅವರ ಪತ್ನಿ ಇರಬಹುದು ಎನ್ನಲಾಗಿದೆ. ಇನ್ನು, ಮಕ್ಕಳ ವಿಚಾರಕ್ಕೆ ಬರುವುದಾದರೆ, ಎನ್ಎಸ್ಇ ಆಂತರಿಕ ಮಾಹಿತಿ ಪ್ರಕಾರ ಚಿತ್ರಾರಿಗೆ ಕೇವಲ ಒಬ್ಬ ಮಗಳಿದ್ದಳು. ಆದರೆ ಇ-ಮೇಲ್ನಲ್ಲಿ ಇಬ್ಬರು ಮಕ್ಕಳು ಎಂದು ಪ್ರಸ್ತಾವವಾಗಿದೆ. ಇದು ಹಲವಾರು ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಕೋಡ್ ವರ್ಡ್ನಲ್ಲಿ ಬರುತ್ತಿತ್ತು ಸೂಚನೆ!
ಚಿತ್ರಾ, ಯೋಗಿ ನಡುವೆ ಕೋಡ್ ವರ್ಡ್ಗಳಲ್ಲಿ ಇ-ಮೇಲ್ ವ್ಯವಹಾರ ನಡೆದಿದೆ. ಎನ್ಎಸ್ಸಿ ಮುಖ್ಯಸ್ಥರಿಗೆ ಸಲಹೆಗಾರರಾಗಿ ನೇಮಕಗೊಳ್ಳಲು ಅರ್ಹತೆ ಇಲ್ಲದ ಆನಂದ್ ಸುಬ್ರಹ್ಮಣ್ಯನ್ ಅವರನ್ನು ಚಿತ್ರಾ ಅವರು ನೇಮಿಸಿ ಕೊಂಡಿದ್ದಕ್ಕೂ ಇದೇ ಯೋಗಿ ಕಾರಣ ಎನ್ನಲಾಗಿದೆ. ಈ ಕುರಿತಂತೆ ಚಿತ್ರಾಗೆ ಯೋಗಿ ಕಳಿಸಿರುವ ಇ-ಮೇಲ್ನಲ್ಲಿ, ನೀರನ್ನು ಹೀರಿಕೊಳ್ಳುವ ಶಕ್ತಿ “ಸ್ಟ್ರಾ’ಗೆ ಇರುತ್ತದೆ. ಕಂಚನ್ ಒಂದು ಸ್ಟ್ರಾ ಇದ್ದಂತೆ, ನಾನು ಹೀರಿಕೊಳ್ಳುವ ಶಕ್ತಿ ಎಂದು ಹೇಳಿದ್ದಾರೆ. ಈ ಮೇಲ್ ಬಂದ ಮೇಲೆ ಆನಂದ್ರವರ ನೇಮಕಾತಿಯಾಗಿದೆ. ಕಂಚನ್ ಎಂದರೆ ಆನಂದ್ ಅವರೇ? ಎಂಬ ಪ್ರಶ್ನೆ ಎದ್ದಿದೆ. ಇದಕ್ಕಿನ್ನೂ ಉತ್ತರ ಸಿಕ್ಕಿಲ್ಲ.
ಸುಬ್ರಹ್ಮಣ್ಯನ್ ಡಬಲ್ ರೋಲ್?
ಚಿತ್ರಾರ ಸಲಹೆಗಾರರಾಗಿದ್ದ ಆನಂದ್ ಸುಬ್ರಹ್ಮಣ್ಯನ್ ಅವರನ್ನು ಆ ಸ್ಥಾನಕ್ಕೆ ನೇಮಿಸಿದ್ದು ಯೋಗಿಯ ಸಲಹೆ ಯಿಂದ. ಅವರಿಗೆ ವಾರ್ಷಿಕವಾಗಿ ಕೋಟ್ಯಂತರ ರೂ. ಸಂಬಳ ಕೊಡಿಸಿದ್ದು ಯೋಗಿ! ಇಲ್ಲಿ ಹೆಚ್ಚು ಲಾಭ ಪಡೆದಿರುವುದು ಸುಬ್ರಹ್ಮಣ್ಯನ್. ಹಾಗಾಗಿ ಈ ಸುಬ್ರಹ್ಮಣ್ಯನ್ ಹಾಗೂ ಯೋಗಿ ಇಬ್ಬರೂ ಒಂದೇ ಆಗಿರಬಹುದೇ ಎಂಬ ಅನುಮಾನಗಳೂ ಎದ್ದಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ
New Year: ಸ್ನೇಹಿತರ ಮನೆಗೆ ಪಾರ್ಟಿಗೆಂದು ಹೋದ ಬಾಲಕಿಯ ಮೇಲೆ ಅತ್ಯಾ*ಚಾರ
Miraculous; ಎರಡು ಬಸ್ ಗಳ ಮಧ್ಯ ಸಿಲುಕಿದರೂ ವ್ಯಕ್ತಿ ಬಚಾವ್: ವೈರಲ್ ವಿಡಿಯೋ
China; ಭಾರತದ ಭೂಭಾಗದಲ್ಲಿ ಎರಡು ಕೌಂಟಿಗಳು: ಕೇಂದ್ರದಿಂದ ಬಲವಾದ ಪ್ರತಿಭಟನೆ
16 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಛೋಟಾ ರಾಜನ್ ಗ್ಯಾಂಗ್ನ ಸದಸ್ಯ ಅರೆಸ್ಟ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Madikeri: ಬೈಕ್ನಲ್ಲಿ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ; ಇಬ್ಬರಿಗೆ ಗಾಯ
Madikeri ಅಪರಿಚಿತ ವಾಹನ ಡಿಕ್ಕಿ: ಚಿಕಿತ್ಸೆ ಫಲಿಸದೆ ವ್ಯಕ್ತಿ ಸಾವು
Madikeri: ಲಾರಿಯಿಂದ ಹಾರಿದ ಚಾಲಕ: ಚಕ್ರದಡಿಗೆ ಸಿಲುಕಿ ಸಾವು
Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ
Suraj Revanna ಎಲ್ಲೇ ಹೋದ್ರೂ ಕಿತಾಪತಿ ಮಾಡಿ ಬರ್ತಾರೆ: ಶ್ರೇಯಸ್ ಪಟೇಲ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.