ರಾಜೀವ್ ಅಪ್ರಬುದ್ಧ, ಇಂದಿರಾ ಉತ್ತರಾಧಿಕಾರತ್ವಕ್ಕೆ ಅನರ್ಹ: CIA ವರದಿ
Team Udayavani, Aug 9, 2017, 3:33 PM IST
ಹೊಸದಿಲ್ಲಿ : ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರ ಹತ್ಯೆಗೆ ಸುಮಾರು ಎರಡು ವರ್ಷಗಳ ಮೊದಲೇ ಅಮೆರಿಕದ ಗುಪ್ತಚರ ಸಂಸ್ಥೆ ಸಿಐಎ, ಇಂದಿರಾ ಅವರ ಉತ್ತರಾಧಿಕಾರಿಯಾಗಲಿದ್ದ ಆಕೆಯ ಪುತ್ರ ರಾಜೀವ್ ಗಾಂಧಿ “ರಾಜಕೀಯವಾಗಿ ಅಪ್ರಬುದ್ಧ” ಎಂದು ಹೇಳಿತ್ತಲ್ಲದೆ, “ಒಂದೊಮ್ಮೆ ಇಂದಿರಾ ಗಾಂಧಿ ಆಕಸ್ಮಿಕವಾಗಿ ನಿಧನ ಹೊಂದಿದರೆ ರಾಜೀವ್ ಗಾಂಧಿ ಆಕೆಯ ಉತ್ತರಾಧಿಕಾರಿ ಆಗಲಾರ” ಎಂದೇ ಹೇಳಿತ್ತು.
“ರಾಜೀವ್ ಗಾಂಧಿ ತನ್ನ ಪಕ್ಷವನ್ನಾಗಲೀ, ದೇಶದ ಜನರನ್ನಾಗಲೀ, ಹುರಿದುಂಬಿಸುವಲ್ಲಿ ವಿಫಲನಾಗಿದ್ದ’ ಎಂದು ಕೂಡ ಸಿಐಎ ಹೇಳಿತ್ತು.
ಅಮೆರಿಕದ ಸಿಐಎ ಬಹಿರಂಗಪಡಿಸಿರುವ ರಹಸ್ಯ ವರದಿಯನ್ನು ಉಲ್ಲೇಖೀಸಿ ಪಿಟಿಐ ಈ ವಿಷಯಗಳನ್ನು ಬಹಿರಂಗಪಡಿಸಿದೆ. 1983ರ ಜನವರಿ 14ರ ದಿನಾಂಕವನ್ನು ಹೊಂದಿರುವ ಸಿಐಎ ವರದಿಯು “ಒಂದೊಮ್ಮೆ ಇಂದಿರಾ ಆಕಸ್ಮಿಕವಾಗಿ ನಿಧನಹೊಂದಿದಲ್ಲಿ ಮತ್ತು ಪಕ್ಷದ ಉತ್ತರಾಧಿಕಾರತ್ವದ ಹೊಣೆಯನ್ನು ಆಕೆಯ ಪುತ್ರ ರಾಜೀವ್ ಗಾಂಧಿ ವಹಿಸಿಕೊಂಡಲ್ಲಿ ಕಾಂಗ್ರೆಸ್ ಪಕ್ಷ ದುರ್ಬಲವಾಗುತ್ತದೆ” ಎಂದು ಹೇಳಿತ್ತು.
1984ರಲ್ಲಿ ಅಕ್ಟೋಬರ್‌ನಲ್ಲಿ ಪ್ರಧಾನಿ ಇಂದಿರಾ ಗಾಂಧಿ ಅವರ ಹತ್ಯೆಯಾದಾಗ, ಸಿಐಎ ಲೆಕ್ಕಾಚಾರಕ್ಕೆ ವ್ಯತಿರಿಕ್ತವಾಗಿ, ರಾಜೀವ್ ಗಾಂಧಿಯೇ ಪ್ರಧಾನಿಯಾದರು ಮತ್ತು ಕೆಲವೇ ತಿಂಗಳಲ್ಲಿ ಅನುಕಂಪದ ಅಲೆಯಲ್ಲಿ ಅಭೂತಪೂರ್ವ ಜನಾದೇಶದೊಂದಿಗೆ ಮರು ಆಯ್ಕೆಯಾದರು.
ಭಾರತದಲ್ಲಿರುವ ಮಾಹಿತಿ ಹಕ್ಕು ಕಾಯಿದೆಯ ರೀತಿಯಲ್ಲೇ ಅಮೆರಿಕದಲ್ಲಿರುವ ಮಾಹಿತಿ ಹಕ್ಕು ಸ್ವಾತಂತ್ರ್ಯ ಕಾಯಿದೆಯಡಿ ಸಿಐಎ “1980ರ ದಶಕದ ಮಧ್ಯಭಾಗದ ಭಾರತ; ಗುರಿಗಳು ಮತ್ತು ಸವಾಲುಗಳು’ ಎಂಬ ಸಂಕ್ಷಿಪ್ತ ವರದಿಯನ್ನು ಸಿಐಎ ಬಿಡುಗಡೆ ಮಾಡಿದೆ. ಈ ವರದಿಯು ಸುಮಾರು 30 ಪುಟಗಳಷ್ಟಿದೆ.
ಈ ವರದಿಯಲ್ಲಿ ಸಿಐಎ 1980ರ ದಶಕದ ಮಧ್ಯದ ಭಾರತದ ಭವಿಷ್ಯವನ್ನು ಚರ್ಚಿಸಲಾಗಿದೆಯಲ್ಲದೆ ಅನೇಕ ಬಗೆಯ ರಾಜಕೀಯ ಸನ್ನಿವೇಶಗಳನ್ನು ಅವಲೋಕಿಸಿದೆ. 1985ರ ಮಹಾ ಚುನಾವಣೆಯಲ್ಲಿ ಕ್ಷೀಣ ಬಹುತಮದೊಂದಿಗೆ ಇಂದಿರಾ ಗಾಂಧಿಯವರ ಪುನರಾಯ್ಕೆಯ ಸಂಭಾವ್ಯತೆ ಮತ್ತು ಒಂದೊಮ್ಮೆ ಆಕೆಯ ಆಕಸ್ಮಿಕ ಸಾವು ಸಂಭವಿಸಿದಲ್ಲಿ ದೇಶದಲ್ಲಿ ಏನೇನಾದೀತು ಎಂಬಿತ್ಯಾದಿ ವಿಷಯಗಳನ್ನು ಚರ್ಚಿಸಿದೆ.
ಇಂದಿರಾ ಗಾಂಧಿಯವರ ಬಳಿಕ ಒಂದೊಮ್ಮೆ ರಾಜೀವ್ ಗಾಂಧಿ ಅಲ್ಲದಿದ್ದರೆ ಸಂಪುಟ ಮಟ್ಟದ ರಾಜಕೀಯ ಮುತ್ಸದ್ದಿಗಳಾಗಿರುವ ರಕ್ಷಣಾ ಸಚಿವ ಆರ್ ವೆಂಕಟರಾಮನ್, ವಿದೇಶ ಸಚಿವ ಪಿ ವಿ ನರಸಿಂಹ ರಾವ್, ಹಣಕಾಸು ಸಚಿವ ಪ್ರಣವ್ ಮುಖರ್ಜಿ ಮತ್ತು ಕೈಗಾರಿಕಾ ಸಚಿವ ಎನ್ ಡಿ ತಿವಾರಿ ಅವರ ಪ್ರಧಾನಿಯಾಗುವ ಸಂಭಾವ್ಯತೆಯನ್ನೂ ಸಿಐಎ ತನ್ನ ವರದಿಯಲ್ಲಿ ಚರ್ಚಿಸಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mangaluru: ಕರಾವಳಿ ಉತ್ಸವ; ಮತ್ಸ್ಯ ಲೋಕದೊಳಗೆ ನಾವು!
Kundapura: ಮೆಟ್ಟಿಲು ಹತ್ತುವಾಗಲೇ ಶುಚಿಯಾಗುವ ಶೌಚಾಲಯ!
ಮಾನಸಿಕ ಅಸ್ವಸ್ಥ ಬಾಲಕಿ ಮೇಲೆ ಲೈಂಗಿಕದೌರ್ಜನ್ಯ: ಆರೋಪಿ ವಿಚಾರಣೆ ರದ್ದತಿಗೆ ಹೈಕೋರ್ಟ್ ನಕಾರ
ICC ಏಕದಿನ, ಟಿ20 ಕ್ರಿಕೆಟಿಗ ಪ್ರಶಸ್ತಿ ನಾಮಿನೇಶನ್ ಪಟ್ಟಿ ಬಿಡುಗಡೆ; ಬುಮ್ರಾ ಹೆಸರಿಲ್ಲ
Bronchiolitis: ಮಕ್ಕಳಲ್ಲಿ ಬ್ರೊಂಕೊಲೈಟಿಸ್; ಹೆತ್ತವರು ತಿಳಿದಿರಬೇಕಾದ ಅಂಶಗಳು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.