ಎಸ್ ಐ ಐ ನೊಂದಿಗೆ ಸಿಐಐ ಒಪ್ಪಂದ ..!
ಹಳ್ಳಿ ಹಳ್ಳಿಗಳಲ್ಲಿಯೂ ಲಸಿಕೆ ಲಭ್ಯವಾಗುವಂತೆ ಮಾಡುವುದೇ ಪ್ರಧಾನ ಉದ್ದೇಶ : ಎಸ್ ಐ ಐ, ಸಿಐಐ
Team Udayavani, Jul 30, 2021, 1:27 PM IST
ನವ ದೆಹಲಿ : ಕೋವಿಡ್ 19 ಸೋಂಕಿನ ಉತ್ಪಾದನೆ ಹಾಗೂ ಪೂರೈಕೆಯಲ್ಲಿನ ವೇಗವನ್ನು ವೃದ್ಧಿಸುವ ಉದ್ದೇಶದಿಂದ ಕಾನ್ಫಿಡರೇಷನ್ ಆಫ್ ಇಂಡಿಯನ್ ಇಂಡಸ್ಟ್ರಿ (ಸಿಐಐ) ಭಾರತದ ಸೀರಮ್ ಇನ್ ಸ್ಟಿಟ್ಯೂಟ್ (ಎಸ್ ಐ ಐ)ನೊಂದಿಗೆ ಒಪ್ಪಂದ ಮಾಡಿಕೊಂಡಿದೆ.
ದೇಶದಾದ್ಯಂತ ಲಸಿಕಾ ಅಭಿಯಾನಕ್ಕೆ ವೇಗ ನೀಡುವ ಉದ್ದೇಶದಿಂದ ಈ ಒಪ್ಪಂದ ನಡೆದಿದ್ದು, ದೇಶದ ಹಳ್ಳಿ ಹಳ್ಳಿಗಳಿಗೂ ಲಸಿಕೆಗಳು ಲಭ್ಯವಾಗಬೇಕು ಎನ್ನುವುದೇ ನಮ್ಮ ಪ್ರಧಾನ ಉದ್ದೇಶ ಎಂದು ಉಭಯ ಸಂಸ್ಥೆಗಳು ಹೇಳಿವೆ.
ಇದನ್ನೂ ಓದಿ : ಟೋಕಿಯೊ ಒಲಿಂಪಿಕ್ಸ್: ಪದಕದ ಭರವಸೆ ಮೂಡಿಸಿದ ದೀಪಿಕಾ ಕುಮಾರಿಗೆ ಸೋಲು!
ಈ ಬಗ್ಗೆ ಪ್ರತಿಕ್ರಿಯಿಸದ ಸಿಐಐ ಅಧ್ಯಕ್ಷರಾದ ಟಿ. ವಿ ನರೇಂದ್ರನ್, ಲಸಿಕೆ ಪೂರೈಕೆ ಆರ್ಥಿಕ ಸ್ಥಿತಿ ಹೇಗೆ ಸುಧಾರಿಸುತ್ತದೆ ಎನ್ನುವುದರ ಮೇಲೆ ಆಧಾರವಾಗಿದೆ ಎಂದಿದ್ದಾರೆ.
ಸಿಐಐ, ಮತ್ತು ಸೀರಮ್ ಇನ್ ಸ್ಟಿಟ್ಯೂಟ್ ನೊಂದಿಗಿನ ಪಾಲುದಾರಿಕೆಯು ವ್ಯಾಕ್ಸಿನೇಷನ್ ಟ್ರ್ಯಾಕ್, ಉದ್ಯಮದ ಭಾಗವಹಿಸುವಿಕೆಯು ಹೆಚ್ಚಿನ ಸಮುದಾಯಗಳಿಗೆ ತಲುಪಲು ಸಹಕಾರಿಯಾಗಿರಲಿದೆ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.
ಇನ್ನು, ಈ ಒಪ್ಪಂದದ ಬಗ್ಗೆ ಪ್ರತಿಕ್ರಿಯಿಸಿದ ಸೀರಮ್ ಇನ್ಸ್ ಸ್ಟಿಟ್ಯೂಟ್ ನ ಕಾರ್ಯ ನಿರ್ವಾಹಕ ಅಧಿಕಾರಿ ಅದರ್ ಪೂನಾವಾಲ, ಕಾನ್ಫಿಡರೇಷನ್ ಆಫ್ ಇಂಡಿಯನ್ ಇಂಡಸ್ಟ್ರಿ ಯೊಂದಿಗಿನ ಒಪ್ಪಂದದಿಂದ ದೇಶದಾದ್ಯಂತ ಕೋವಿಡ್ ಲಸಿಕೆಗಳ ಪೂರೈಕೆಯಲ್ಲಿ ಹೆಚ್ಚಿನ ಸಾಮರ್ಥ್ಯ ಲಭಿಸಿದಂತಾಗಿದೆ. ದೇಶದ ಎಲ್ಲಾ ಸಮುದಾಯಗಳಿಗೆ ಲಸಿಕೆಗಳು ತಲುಪುವುದಕ್ಕೆ ಸಹಕಾರಿಯಾಗಲಿದೆ ಎಂದು ಅವರು ಹೇಳಿದರು.
ಸಿಐಐ ಲಸಿಕೆಯ ಬೇಡಿಕೆಯ ಬಗ್ಗೆ ದೇಶದ 196 ನಗರ ಪ್ರದೇಶಗಳಲ್ಲಿ ಸಮೀಕ್ಷೆಯೊಂದನ್ನು ಮಾಡಿದ್ದು, ಆ ಸಮೀಕ್ಷೆಯನ್ವಯ ದೇಶದಾದ್ಯಂತ ಏಳು ದಶಲಕ್ಷಕ್ಕೂ ಅಧಿಕ ಲಸಿಕೆಗಳ ಅಗತ್ಯವಿದೆ ಎಂದು ತಿಳಿಸಿದೆ.
23 ಜುಲೈ 2021 ರ ವೇಳೆಗೆ, ಸಿಐಐ ಮತ್ತು ಸಿಐಐ ಫೌಂಡೇಶನ್ ನಿಂದ ದೇಶಾದ್ಯಂತ ನಡೆದ 430 ಶಿಬಿರಗಳ ಮೂಲಕ ಒಟ್ಟು 3.4 ಮಿಲಿಯನ್ ಸಿಂಗಲ್ ಡೋಸ್ ಗಳನ್ನು ನೀಡಲಾಗಿದೆ ಎಂದು ಸಿಐಐ ಬಿಡುಗಡೆ ಮಾಡಿದೆ ಎಂದು ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ.
ಇದನ್ನೂ ಓದಿ : ಶಿಶುಕಾಮ/ಮಕ್ಕಳ ಕಳ್ಳ ಸಾಗಾಣಿಕೆ; ಸತ್ಯ ಘಟನೆ ಆಧರಿತ ಚಿತ್ರ “ಐ ಯಾಮ್ ಆಲ್ ಗರ್ಲ್ಸ್”
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.