ಚಿನ್ನಮ್ಮ, ದಿನಕರನ್‌ಗೆ ಗೇಟ್‌ಪಾಸ್
Team Udayavani, Apr 19, 2017, 3:45 AM IST
ಚೆನ್ನೈ/ನವದೆಹಲಿ: ಎಐಎಡಿಎಂಕೆಯಿಂದ ವಿ.ಕೆ.ಶಶಿಕಲಾ ಮತ್ತು ಕುಟುಂಬ ಸದಸ್ಯರನ್ನು ಹೊರಗಿಡಬೇಕು ಎಂಬ ಮಾಜಿ ಸಿಎಂ ಓ.ಪನ್ನೀರ್‌ಸೆಲ್ವಂ ಬಣದ ಹಟ ಗೆದ್ದಿದೆ. ಅದಕ್ಕೆ ಪೂರಕವಾಗಿ ಮಂಗಳವಾರ ಚೆನ್ನೈನಲ್ಲಿ ನಡೆದ ಪಕ್ಷದ ಶಾಸಕರು, ಸಂಸದರು ಮತ್ತು ಇತರ ನಾಯಕರ ಸಭೆಯಲ್ಲಿ ಶಶಿಕಲಾ ನಟರಾಜನ್ ಮತ್ತು ಟಿ.ಟಿ.ವಿ.ದಿನಕರನ್ ಅವರನ್ನು ಸಂಪೂರ್ಣವಾಗಿ ಹೊರಹಾಕುವ ನಿರ್ಧಾರ ಕೈಗೊಂಡಿದ್ದಾರೆ. ಈ ಪಟ್ಟಿಯಲ್ಲಿ ಮುಖ್ಯಮಂತ್ರಿ ಎಡಪ್ಪಾಡಿ ಕೆ.ಪಳನಿಸ್ವಾಮಿ ಸಂಪುಟದ 20 ಮಂದಿ ಸಚಿವರೂ ಇದ್ದಾರೆ ಎನ್ನುವುದು ಗಮನಾರ್ಹ ಅಂಶ.
ಇದಕ್ಕೂ ಮೊದಲು ಚೆನ್ನೈನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ಮಾಜಿ ಮುಖ್ಯಮಂತ್ರಿ ಪನ್ನೀರ್‌ಸೆಲ್ವಂ ಶಶಿಕಲಾ ಮತ್ತು ದಿನಕರನ್ ಪಕ್ಷದಲ್ಲಿ ಯಾವುದೇ ಹಂತದಲ್ಲಿ ಇರಬಾರದು ಎಂದು ಹೇಳಿದ್ದರು. ಹೀಗಿದ್ದರೆ ಮಾತ್ರ ಮುಖ್ಯಮಂತ್ರಿ ಪಳನಿಸ್ವಾಮಿಗೆ ನಿಷ್ಠರಾಗಿರುವ ನಾಯಕರ ನೇತೃತ್ವದ ಸಮಿತಿ ಜತೆಗೆ ಮಾತುಕತೆ ನಡೆಸುವುದಾಗಿ ಹೇಳಿದ್ದರು. ಜತೆಗೆ ದಿ.ಜಯ ಲಲಿತಾ ಅವರ ಸಾವಿನ ಬಗ್ಗೆ ಸಂದೇಹಗಳು ಇವೆ. ಅವುಗಳ ನಿವಾರಣೆಗಾಗಿ ತನಿಖೆ ನಡೆಸ ಬೇಕು ಎಂದು ಒತ್ತಾಯಿಸಿದ್ದರು. ಈ ಎಲ್ಲ ಬೆಳವಣಿಗೆಗಳ ಬಗ್ಗೆ ದಿನಕರನ್‌ಗೆ ಆಮೂಲಾಗ್ರ ಮಾಹಿತಿಯನ್ನೂ ನೀಡಲಾಗಿತ್ತು.
ಈ ನಡುವೆ ನವದೆಹಲಿಯಲ್ಲಿ 50 ಕೋಟಿ ರೂ. ಡೀಲ್‌ಗೆ ಸಂಬಂಧಿಸಿದಂತೆ ಬಂಧಿತನಾಗಿರುವ ಸುಕೇಶ್ ಚಂದ್ರಶೇಖರನ್‌ನ ವೈದ್ಯಕೀಯ ಪರೀಕ್ಷೆ ನಡೆಸುವಂತೆ ವಿಶೇಷ ನ್ಯಾಯಾಲಯ ಪೊಲೀಸರಿಗೆ ಆದೇಶ ನೀಡಿದೆ. ಆತ 25ರ ವರೆಗೆ ದೆಹಲಿ ಪೊಲೀಸ್ ವಶದಲ್ಲಿ ಇರಲಿದ್ದಾನೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Notice: ಸಂಗೀತ ಕಾರ್ಯಕ್ರಮಕ್ಕೂ ಮೊದಲು ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
Marriage: ಕ್ರಿಸ್ಮಸ್‌ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.