ICSE, ISC Result ಪ್ರಕಟ ; ಉತ್ತರ ಪ್ರದೇಶ ಮೇಲುಗೈ

Team Udayavani, May 14, 2023, 7:11 PM IST

1-asds

ಟಾಪರ್ ಗಳಾದ ಮೊಹಮ್ಮದ್ ಆರ್ಯನ್ ತಾರಿಕ್ ಮತ್ತು ಅವಿಶಿ ಸಿಂಗ್

ಹೊಸದಿಲ್ಲಿ: ಕೌನ್ಸಿಲ್ ಫಾರ್ ದ ಇಂಡಿಯನ್ ಸ್ಕೂಲ್ ಸರ್ಟಿಫಿಕೇಟ್ ಎಕ್ಸಾಮಿನೇಷನ್ಸ್ ICSE 10 ಮತ್ತು ISC 12ನೇ ತರಗತಿಯ ಫಲಿತಾಂಶಗಳನ್ನು ಭಾನುವಾರ ಮೇ 14 ರಂದು ಪ್ರಕಟಿಸಲಾಗಿದೆ. ಭಾರತೀಯ ಶಾಲಾ ಪ್ರಮಾಣಪತ್ರ (ISC), ಮತ್ತು ಇಂಡಿಯನ್ ಸರ್ಟಿಫಿಕೇಟ್ ಆಫ್ ಸೆಕೆಂಡರಿ ಎಜುಕೇಶನ್ (ICSE) ಫಲಿತಾಂಶಗಳನ್ನು ಪತ್ರಿಕಾಗೋಷ್ಠಿಯ ಮೂಲಕ ಪ್ರಕಟಿಸಲಾಗಿದೆ.

ಉತ್ತರ ಪ್ರದೇಶದ ವಿದ್ಯಾರ್ಥಿಗಳು ಐಸಿಎಸ್‌ಇ (10 ನೇ ತರಗತಿ) ಮತ್ತು ಐಎಸ್‌ಸಿ (12 ನೇ ತರಗತಿ) ಪರೀಕ್ಷೆಗಳ ಮೆರಿಟ್ ಪಟ್ಟಿಯಲ್ಲಿ ಪ್ರಾಬಲ್ಯ ಸಾಧಿಸಿದ್ದಾರೆ. 10ನೇ ತರಗತಿಯಲ್ಲಿ 98.94 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಬಾಲಕಿಯರು ಈ ಬಾರಿ ಬಾಲಕರಿಗಿಂತ ಮೇಲುಗೈ ಸಾಧಿಸಿದ್ದಾರೆ. ಉತ್ತೀರ್ಣ ಶೇಕಡಾ 96.93 ರಷ್ಟಿದೆ. 12 ನೇ ತರಗತಿಯಲ್ಲಿ 96.93 ಶೇಕಡಾ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

ಈ ವರ್ಷ, ವಿದ್ಯಾರ್ಥಿಗಳು ತಮ್ಮ ಫಲಿತಾಂಶಗಳನ್ನು ಡಿಜಿಲಾಕರ್ ಮತ್ತು ಎಸ್‌ಎಂಎಸ್‌ನಲ್ಲಿಯೂ ಪ್ರವೇಶಿಸಬಹುದಾಗಿದೆ. ಒಟ್ಟಾರೆಯಾಗಿ, 2023 ರ ಐಸಿಎಸ್‌ಇ, ಐಎಸ್‌ಸಿ ಪರೀಕ್ಷೆಗಳಿಗೆ 2.5 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಬರೆದಿದ್ದರು. ಫಲಿತಾಂಶಗಳ ಜತೆಗೆ, ಸಿಐಎಸ್‌ಸಿಇ 10ನೇ ಮತ್ತು 12ನೇ ಸ್ಥಾನಕ್ಕೆ ಟಾಪರ್ ಪಟ್ಟಿಯನ್ನು ಬಿಡುಗಡೆ ಮಾಡಿದೆ.

ಐಎಸ್‌ಸಿಯಲ್ಲಿ, ರಾಜಾಜಿಪುರಂನ ಸಿಟಿ ಮಾಂಟೆಸ್ಸರಿ ಇಂಟರ್ ಕಾಲೇಜಿನ ಮೊಹಮ್ಮದ್ ಆರ್ಯನ್ ತಾರಿಕ್ ಅಖಿಲ ಭಾರತ ಟಾಪರ್ ಆಗಿದ್ದು, ದೇಶದ ಇತರ ನಾಲ್ವರೊಂದಿಗೆ ಜಂಟಿಯಾಗಿ ಮೊದಲ ಸ್ಥಾನವನ್ನು ಹಂಚಿಕೊಂಡಿದ್ದಾರೆ. ಅವರು 400 ರಲ್ಲಿ 399 ಅಂಕಗಳನ್ನು ಪಡೆಡಿದ್ದಾರೆ (99.75%).

ICSE ಪರೀಕ್ಷೆಯಲ್ಲಿ, ಆಗ್ರಾದ ಸೇಂಟ್ ಆಂಥೋನಿ ಜೂನಿಯರ್ ಕಾಲೇಜಿನ ಉತ್ತರ ಪ್ರದೇಶದ ವಿದ್ಯಾರ್ಥಿನಿ ಅವಿಶಿ ಸಿಂಗ್ 500 ರಲ್ಲಿ 499 ಅಂಕಗಳನ್ನು (99.8%) ಗಳಿಸುವ ಮೂಲಕ ದೇಶದ ಇತರ ಎಂಟು ಮಂದಿಯೊಂದಿಗೆ ಮೊದಲ ರ‍್ಯಾಂಕ್ ಅನ್ನು ಹಂಚಿಕೊಂಡಿದ್ದಾರೆ.

ಐಎಸ್‌ಸಿಯಲ್ಲಿ 398 ಅಂಕಗಳನ್ನು (99.5%) ಪಡೆಯುವ ಮೂಲಕ ಉತ್ತರ ಪ್ರದೇಶದ ಐದು ವಿದ್ಯಾರ್ಥಿಗಳು ಜಂಟಿಯಾಗಿ ದೇಶದ ಇತರರೊಂದಿಗೆ ಎರಡನೇ ಶ್ರೇಣಿಯನ್ನು ಹಂಚಿಕೊಂಡಿದ್ದಾರೆ. ಅವರೆಂದರೆ ಲಕ್ನೋದ ಲಾ ಮಾರ್ಟಿನಿಯರ್ ಗರ್ಲ್ಸ್‌ನ ಯೋಗಂಜನಾ ಸಿಂಗ್, ಸಿಎಂಎಸ್ ರಾಜೇಂದ್ರ ನಗರದ ತನಿಷ್ಕ್ ಸೋಂಕರ್, ಸಿಎಂಎಸ್ ರಾಜಾಜಿಪುರಂನ ಅರ್ಪಿತಾ ಸಿಂಗ್, ಕಾನ್ಪುರದ ಚಿಂಟೆಲ್ಸ್ ಶಾಲೆಯ ಆಹಾನಾ ಅರೋರಾ ಮತ್ತು ಸಿಎಂಎಸ್ ಗೋಮತಿ ನಗರದ ಆಯೇಶಾ ಖಾನ್.

ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಪರೀಕ್ಷೆಗಳಲ್ಲಿ ವಿದ್ಯಾರ್ಥಿಗಳ ಯಶಸ್ಸಿಗೆ ಅಭಿನಂದನೆ ಸಲ್ಲಿಸಿದ್ದಾರೆ.

ಟಾಪ್ ನ್ಯೂಸ್

Aranthodu ಅಜ್ಜಾವರ: ಅಪಹರಣಕ್ಕೆ ಯತ್ನ; ದೂರು ದಾಖಲು

Aranthodu ಅಜ್ಜಾವರ: ಅಪಹರಣಕ್ಕೆ ಯತ್ನ; ದೂರು ದಾಖಲು

Manipal ಯಾವುದೇ ಮಾಹಿತಿ ನೀಡದಿದ್ದರೂ 1.57 ಲಕ್ಷ ರೂ. ವರ್ಗಾವಣೆ !

Manipal ಯಾವುದೇ ಮಾಹಿತಿ ನೀಡದಿದ್ದರೂ 1.57 ಲಕ್ಷ ರೂ. ವರ್ಗಾವಣೆ !

Road Mishap ಕೋಲ್ಪೆ: ಲಾರಿ ಚಾಲಕರಿಬ್ಬರಿಗೆ ಕಾರು ಢಿಕ್ಕಿ

Road Mishap ಕೋಲ್ಪೆ: ಲಾರಿ ಚಾಲಕರಿಬ್ಬರಿಗೆ ಕಾರು ಢಿಕ್ಕಿ

Mangaluru: ಮೆಡಿಕಲ್‌ ಶಾಪ್‌ಗೆ ತೆರಳಿದ ಯುವತಿ ನಾಪತ್ತೆ

Mangaluru: ಮೆಡಿಕಲ್‌ ಶಾಪ್‌ಗೆ ತೆರಳಿದ ಯುವತಿ ನಾಪತ್ತೆ

Kundapura ಉದ್ಯಮಿ ಸುರೇಂದ್ರ ಶೆಟ್ಟಿಗೆ ಬೆದರಿಕೆ

Kundapura ಉದ್ಯಮಿ ಸುರೇಂದ್ರ ಶೆಟ್ಟಿಗೆ ಬೆದರಿಕೆ

Thief Case ಮಲಗಿದ್ದ ವೃದ್ಧೆಯ ಕಿವಿಯ ಆಭರಣ ಕಳವು

Thief Case ಮಲಗಿದ್ದ ವೃದ್ಧೆಯ ಕಿವಿಯ ಆಭರಣ ಕಳವು

Gangolli ಪೊಲೀಸ್‌ ವಾಹನ ಪಲ್ಟಿ ; ಇಬ್ಬರಿಗೆ ಗಾಯ

Gangolli ಪೊಲೀಸ್‌ ವಾಹನ ಪಲ್ಟಿ ; ಇಬ್ಬರಿಗೆ ಗಾಯ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Russiya-Modi

Modi Russia Visit: ರಷ್ಯಾದ ಮಾಸ್ಕೊಗೆ ಬಂದಿಳಿದ ಪ್ರಧಾನಿ ಮೋದಿ

1-weewq

Hindus ಹೇಳಿಕೆ ;ರಾಹುಲ್ ಗಾಂಧಿಗೆ ಶಂಕರಾಚಾರ್ಯ ಅವಿಮುಕ್ತೇಶ್ವರಾನಂದ ಬೆಂಬಲ

Panaji ಭಾರೀ ಮಳೆ; ಗೋಡೆ ಕುಸಿದು ಮೂವರು ಕಾರ್ಮಿಕರ ಸಾವು

Panaji ಭಾರೀ ಮಳೆ; ಗೋಡೆ ಕುಸಿದು ಮೂವರು ಕಾರ್ಮಿಕರ ಸಾವು

firing

Punjab; ನೀರಿಗಾಗಿ ಗುಂಪುಗಳ ಗುಂಡಿನ ಕಾಳಗ: ನಾಲ್ವರು ಸಾವು

Militants opened fire on an army vehicle at Kathua

Kathua; ಸೇನಾ ವಾಹನದ ಮೇಲೆ ಗುಂಡಿನ ದಾಳಿ ನಡೆಸಿದ ಉಗ್ರರು

MUST WATCH

udayavani youtube

ಬೆನ್ನು ನೋವು ನಿವಾರಣೆ | ಬೆನ್ನು ನೋವಿನ ಸಮಸ್ಯೆಗೆ ಪರಿಹಾರ

udayavani youtube

ಉಡುಪಿ ಜಿಲ್ಲಾದ್ಯಂತ ಭಾರೀ ಮಳೆ – ಜಲಾವೃತಗೊಂಡ ಮುಖ್ಯ ರಸ್ತೆಗಳು

udayavani youtube

ಕೂಲ್ ಮೂಡ್ ನಲ್ಲಿ ಸ್ವಿಮ್ಮಿಂಗ್ ಮಾಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ : ಇಲ್ಲಿದೆ ವಿಡಿಯೋ

udayavani youtube

ಅಂಬಾನಿ ಕುಟುಂಬದಿಂದ ಆಟಗಾರರೊಂದಿಗೆ ವಿಶ್ವಕಪ್ ಗೆಲುವಿನ ಸಂಭ್ರಮಾಚರಣೆ

udayavani youtube

Team india

ಹೊಸ ಸೇರ್ಪಡೆ

Aranthodu ಅಜ್ಜಾವರ: ಅಪಹರಣಕ್ಕೆ ಯತ್ನ; ದೂರು ದಾಖಲು

Aranthodu ಅಜ್ಜಾವರ: ಅಪಹರಣಕ್ಕೆ ಯತ್ನ; ದೂರು ದಾಖಲು

Manipal ಯಾವುದೇ ಮಾಹಿತಿ ನೀಡದಿದ್ದರೂ 1.57 ಲಕ್ಷ ರೂ. ವರ್ಗಾವಣೆ !

Manipal ಯಾವುದೇ ಮಾಹಿತಿ ನೀಡದಿದ್ದರೂ 1.57 ಲಕ್ಷ ರೂ. ವರ್ಗಾವಣೆ !

Road Mishap ಕೋಲ್ಪೆ: ಲಾರಿ ಚಾಲಕರಿಬ್ಬರಿಗೆ ಕಾರು ಢಿಕ್ಕಿ

Road Mishap ಕೋಲ್ಪೆ: ಲಾರಿ ಚಾಲಕರಿಬ್ಬರಿಗೆ ಕಾರು ಢಿಕ್ಕಿ

Mangaluru: ಮೆಡಿಕಲ್‌ ಶಾಪ್‌ಗೆ ತೆರಳಿದ ಯುವತಿ ನಾಪತ್ತೆ

Mangaluru: ಮೆಡಿಕಲ್‌ ಶಾಪ್‌ಗೆ ತೆರಳಿದ ಯುವತಿ ನಾಪತ್ತೆ

Kundapura ಉದ್ಯಮಿ ಸುರೇಂದ್ರ ಶೆಟ್ಟಿಗೆ ಬೆದರಿಕೆ

Kundapura ಉದ್ಯಮಿ ಸುರೇಂದ್ರ ಶೆಟ್ಟಿಗೆ ಬೆದರಿಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.