ರಜೆ ಜಗಳ: ಸಿಐಎಸ್ಎಫ್ ಪೇದೆಯಿಂದ ನಾಲ್ವರು ಸಹೋದ್ಯೋಗಿಗಳ ಹತ್ಯೆ
Team Udayavani, Jan 13, 2017, 3:45 AM IST
ಔರಂಗಾಬಾದ್: ರಜೆ ವಿಷಯದಲ್ಲಿ ಏರ್ಪಟ್ಟ ವಿವಾದದಿಂದ ಸಿಟ್ಟಿಗೆದ್ದ ಸಿಐಎಸ್ಎಫ್ (ಕೇಂದ್ರೀಯ ಕೈಗಾರಿಕಾ ರಕ್ಷಣಾ ಪಡೆ) ಪೇದೆಯೊಬ್ಬರು ತಮ್ಮ ನಾಲ್ವರು ಸಹೋದ್ಯೋಗಿಗಳನ್ನು ಗುಂಡಿಟ್ಟು ಹತ್ಯೆಗೈದಿದ್ದಾರೆ. ಬಿಹಾರದ ಔರಂಗಾಬಾದ್ ಜಿಲ್ಲೆಯಲ್ಲಿರುವ ನವಿನಗರ್ ವಿದ್ಯುತ್ ಉತ್ಪಾದನೆ ಕಂಪನಿ ಆವರಣದಲ್ಲಿ ಗುರುವಾರ ಈ ಸಾಮೂಹಿಕ ಹತ್ಯೆ ನಡೆದಿದೆ.
ಕೊಲೆ ಆರೋಪಿ, ನಿರ್ಮಾಣ ಹಂತದಲ್ಲಿದ್ದ ಉಷ್ಣ ವಿದ್ಯುತ್ ಸ್ಥಾವರದ ರಕ್ಷಣೆ ಕೆಲಸಕ್ಕೆ ನಿಯೋಜಿಸಲಾಗಿದ್ದ ಉತ್ತರ ಪ್ರದೇಶದ ಅಲೀಘಡ ಮೂಲದ ಬಲವೀರ್ನನ್ನು ಬಂಧಿಸಲಾಗಿದೆ. ಯೋಗ ತರಬೇತಿ ಪಡೆದು ವಾಪಸ್ಸಾಗಿದ್ದ ಬಲವೀರ್ ರಜೆ ವಿಷಯದಲ್ಲಿ ಸಹೋದ್ಯೋಗಿಗಳೊಂದಿಗೆ ಮುನಿಸಿಕೊಂಡಿದ್ದರು. ಇದೇ ಸಿಟ್ಟಿನಿಂದ ತನ್ನ ಸರ್ವೀಸ್ ರೈಫಲ್ನಿಂದ ಬಚ್ಚಾ ಶರ್ಮಾ, ಎನ್ ಮಿಶ್ರಾ, ಅರವಿಂದ ಕುಮಾರ್ ಹಾಗೂ ಜಿ.ಎಸ್.ರಾಮ್ ಎಂಬುವರ ಮೇಲೆ ಗುಂಡು ಹಾರಿಸಿದರು.
ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟಿದ್ದು, ಇನ್ನಿಬ್ಬರು ಆಸ್ಪತ್ರೆಗೆ ಒಯ್ಯುವಾಗ ಕೊನೆಯುಸಿರೆಳೆದಿದ್ದಾರೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಸತ್ಯಪ್ರಕಾಶ್ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Odisha: ಕಾರಿಗೆ ಟ್ರಕ್ ಢಿಕ್ಕಿ ಹೊಡೆದು ಇಬ್ಬರು ಬಿಜೆಪಿ ನಾಯಕರು ಮೃ*ತ್ಯು
Delhi; ರಸ್ತೆಗಳು ಪ್ರಿಯಾಂಕಾ ಗಾಂಧಿ ಕೆನ್ನೆಯಂತಿರಬೇಕು: ಬಿಜೆಪಿ ನಾಯಕನ ಹೇಳಿಕೆಗೆ ಟೀಕೆ
Gujarat: ಕೋಸ್ಟ್ ಗಾರ್ಡ್ ಹೆಲಿಕಾಪ್ಟರ್ ಪತನ; ಮೂವರು ಮೃ*ತ್ಯು
Oyo Rooms: ಮದುವೆಯಾಗದ ಜೋಡಿಗೆ ಇನ್ಮುಂದೆ ʼಓಯೋʼ ರೂಮ್ ಸಿಗೋದು ಕಷ್ಟ – ವರದಿ
Jammu and Kashmir: ಕಮರಿಗೆ ಬಿದ್ದ ವಾಹನ; ಕನಿಷ್ಠ ನಾಲ್ವರು ಸಾವು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.