ಸರಕಾರಿ ಆಸ್ಪತ್ರೆ ರೋಗಿ ಬಾಲಕಿಗೆ ಲೈಂಗಿಕ ಕಿರುಕುಳ: ಕ್ಲೀನರ್ arrest
Team Udayavani, Dec 26, 2018, 12:07 PM IST
ಥಾಣೆ, ಮಹಾರಾಷ್ಟ್ರ : ಇಲ್ಲಿನ ಸರಕಾರಿ ಆಸ್ಪತ್ರೆಯಲ್ಲಿ 39 ವರ್ಷ ಪ್ರಾಯದ ಕ್ಲೀನರ್ ಹದಿಹರೆಯದ ಬಾಲಕಿ ರೋಗಿಯ ಕೈಗಳನ್ನು ಬೆಡ್ ಗೆ ಕಟ್ಟಿ ಆಕೆಗೆ ಲೈಂಗಿಕ ಕಿರುಕುಳ ನೀಡಿದ ಘಟನೆ ನಡೆದಿದೆ.
ಆರೋಪಿ ಕ್ಲೀನರ್ ದಿನೇಶ್ ಕೋಳಿ ಯನ್ನು ಪೊಲೀಸರು ಬಂಧಿಸಿದ್ದಾರೆ. ಥಾಣೆ ಜಿಲ್ಲೆಯ ಕಾಳ್ವಾ ಪಟ್ಟಣದಲ್ಲಿನ ಸರಕಾರಿ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದೆ.
14 ವರ್ಷ ಪ್ರಾಯದ ಬಾಲಕಿಗೆ ಫಿಟ್ಸ್ ಬಂದ್ದಿದ ಕಾರಣ ಆಕೆಯನ್ನು ಕಳೆದ ಡಿ.19ರಂದು ಆಸ್ಪತ್ರೆಗೆ ಸೇರಿಸಲಾಗಿತ್ತು. ಆಕೆಗೆ ಸೆಲೈನ್ ಕೊಡುವ ಸಲುವಾಗಿ ಆಕೆಯ ಒಂದು ಕೈಯನ್ನು ಬೆಡ್ಗೆ ಬಿಗಿಯಲಾಗಿತ್ತು.
ಅದಾಗಿ ಅಲ್ಲಿಗೆ ಬಂದ ಆರೋಪಿ ಕ್ಲೀನರ್, ಬಾಲಕಿಯ ಇನ್ನೊಂದು ಕೈಯನ್ನು ಕೂಡ ಬೆಡ್ ಗೆ ಬಿಗಿದು ಆಕೆಯ ಅಂಗಾಂಗಗಳನ್ನು ಮನಬಂದಂತೆ ಮುಟ್ಟತೊಡಗಿದ. ಇದರಿಂದ ತೀವ್ರ ಭಯಗೊಂಡಂತೆ ಕಂಡು ಬಂದ ಬಾಲಕಿಯನ್ನು ಪಕ್ಕದ ಬೆಡ್ನ ರೋಗಿ ನೋಡಿ ಒಡನೆಯೇ ವಿಷಯವನ್ನು ಇತರ ಸಿಬಂದಿಗಳಿಗೆ ತಿಳಿಸಿದ.
ಬಾಲಕಿಯ ತಂದೆ ಪೊಲೀಸರಿಗೆ ಲೈಂಗಿಕ ಕಿರುಕುಳದ ದೂರು ನೀಡಿದ ಪ್ರಕಾರ ಅವರು ಆರೋಪಿ ಕ್ಲೀನರ್ ದಿನೇಶ್ ಕೋಳಿಯನ್ನು ಬಂಧಿಸಿ ಆತನ ವಿರುದ್ಧ ಐಪಿಸಿ ಮತ್ತು ಪೋಕ್ಸೋ ಕಾಯಿದೆಯ ಪ್ರಕಾರ ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Delhi Pollution: ಅಸ್ತಮಾ, ಶ್ವಾಸಕೋಶ ಕ್ಯಾನ್ಸರ್ ಭೀತಿ!
IPL-2025: ಓಂಕಾರ್ ಸಾಳ್ವಿ ಆರ್ಸಿಬಿ ಬೌಲಿಂಗ್ ಕೋಚ್
MUDA: ಸುಮ್ನಿರಯ್ಯ ಗೊತ್ತಿಲ್ದೆ ಮಾತಾಡ್ತಿಯಾ: ಸೋಮಣ್ಣಗೆ ಸಿದ್ದರಾಮಯ್ಯ ಪ್ರೀತಿಯ ಗದರಿಕೆ!
Market: ಇಳುವರಿ ಕೊರತೆ: ತೆಂಗಿನಕಾಯಿ ಬೆಲೆ 58ರಿಂದ 60 ರೂಪಾಯಿ!
Ration Card: ಬಡವರಿಗೆ ಬಿಪಿಎಲ್ ಕಾರ್ಡ್ ತಪ್ಪದಂತೆ ನೋಡಿಕೊಳ್ಳಿ: ಸಿಎಂ ಸೂಚನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.