ಒತ್ತುವರಿ ತೆರವುಗೊಳಿಸಿ: ಹಾಜಿ ಅಲಿ ಟ್ರಸ್ಟ್ಗೆ ಸುಪ್ರೀಂ
Team Udayavani, Apr 14, 2017, 3:50 AM IST
ನವದೆಹಲಿ: ಮುಂಬೈನಲ್ಲಿರುವ ಪ್ರಸಿದ್ಧ ಹಾಜಿ ಅಲಿ ದರ್ಗಾದ ಸುತ್ತಲಿರುವ 908 ಚದರ ಮೀಟರ್ನ ಒತ್ತುವರಿಯನ್ನು ತೆರವುಗೊಳಿಸುವಂತೆ ದರ್ಗಾದ ಟ್ರಸ್ಟ್ಗೆ ಸುಪ್ರೀಂ ಕೋರ್ಟ್ ಗುರುವಾರ ಆದೇಶಿಸಿದೆ. ಮೇ 8ರೊಳಗಾಗಿ ಒತ್ತುವರಿ ತೆರವು ಕಾರ್ಯ ಪೂರ್ಣಗೊಳಿಸುವಂತೆ ಸೂಚಿಸುವ ಜೊತೆಗೆ, ದರ್ಗಾವಿರುವ ಪ್ರದೇಶವನ್ನು ರಕ್ಷಿಸುವಂತೆಯೂ ನ್ಯಾಯುಪೀಠ ತಿಳಿಸಿದೆ.
ಒತ್ತುವರಿ ತೆರವುಗೊಳಿಸುವುದಾಗಿ ಸ್ವತಃ ದರ್ಗಾ ಟ್ರಸ್ಟ್ ಮುಂದೆ ಬಂದ ಹಿನ್ನೆಲೆಯಲ್ಲಿ ಈ ಆದೇಶ ಹೊರಡಿಸಲಾಗಿದೆ. ಹಾಜಿ ಅಲಿ ದರ್ಗಾಗೆ ತೆರಳುವ ಮಾರ್ಗದಲ್ಲಿನ ಒತ್ತುವರಿಯನ್ನು ಬೃಹನ್ಮುಂಬೈ ಮಹಾನಗರ ಪಾಲಿಕೆ ಮತ್ತು ಜಿಲ್ಲಾಧಿಕಾರಿಯನ್ನು ಒಳಗೊಂಡ ಜಂಟಿ ಕಾರ್ಯಪಡೆಯನ್ನು ರಚಿಸಿ, ತೆರವು ಕಾರ್ಯ ನಡೆಸುವಂತೆ ಫೆ.10ರಂದು ಬಾಂಬೆ ಹೈಕೋರ್ಟ್ ಆದೇಶ ಹೊರಡಿಸಿತ್ತು. ಇದೀಗ ದರ್ಗಾ ಟ್ರಸ್ಟಿಗಳು ತಾವಾಗಿಯೇ ಒತ್ತುವರಿಯನ್ನು ತೆರವುಗೊಳಿಸುಧಿವುದಾಗಿ ಹೇಳುತ್ತಿದ್ದಾರೆ ಎಂದು ಅವರ ಪರ ವಕೀಲ ನ್ಯಾ. ಗೋಪಾಲ ಸುಬ್ರಮಣಿಯನ್ ನ್ಯಾಯಾಲಯಕ್ಕೆ ಮಾಹಿತಿ ನೀಡಿದರು. ಇದನ್ನು ನ್ಯಾಯಪೀಠ ಸ್ವಾಗತಿಸಿತು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.