ಮೊಬೈಲ್ನಲ್ಲಿ ಮಾತಾಡುವ ಬಸ್ ಡ್ರೈವರ್ ಪೋಟೋ ತೆಗೆದವರಿಗೆ ಇನಾಮು !
Team Udayavani, Jun 14, 2017, 11:55 AM IST
ಲಕ್ನೋ : ಸಾರ್ವಜನಿಕ ಪ್ರಯಾಣದ ಬಸ್ಸುಗಳ ಚಾಲಕರು ವಾಹನವನ್ನು ಚಲಾಯಿಸುವಾಗ ಮೊಬೈಲ್ ನಲ್ಲಿ ಮಾತನಾಡುವುದು ಎಲ್ಲೆಡೆ ಕಂಡು ಬರುವ ದೃಶ್ಯ. ಆದರೆ ಉತ್ತರ ಪ್ರದೇಶದಲ್ಲಿ ರಾಜ್ಯ ಸಾರಿಗೆ ಬಸ್ ಚಾಲಕರು ಇನ್ನು ಹಾಗೆ ಮಾಡುವಂತಿಲ್ಲ. ಏಕೆಂದರೆ ಬಸ್ ಚಲಾಯಿಸುವಾಗ ಮೊಬೈಲ್ನಲ್ಲಿ ಡ್ರೈವರ್ ಮಾತನಾಡುವುದನ್ನು ಫೋಟೋ ತೆಗೆದು ವಾಟ್ಸಾಪ್ನಲ್ಲಿ ಕಳುಹಿಸುವವರಿಗೆ ಉತ್ತರ ಪ್ರದೇಶ ಸರಕಾರ ಇನಾಮು ನೀಡಲು ಮುಂದಾಗಿದೆ. ಅಂತೆಯೇ ತಪ್ಪುಗಾರ ಚಾಲಕನಿಗೆ ಭಾರೀ ದಂಡವನ್ನೂ ಹೇರಲು ಆರಂಭಿಸಿದೆ.
“ಬಸ್ಸು ಚಲಾಯಿಸುವಾಗ ಚಾಲಕರು ಮೊಬೈಲ್ನಲ್ಲಿ ಮಾತನಾಡಬಾರದು ಎಂಬ ಬಗ್ಗೆ ಸಾಕಷ್ಟು ನಿಯಮಗಳು, ನಿರ್ಬಂಧಗಳು ಇವೆ. ಹಾಗಿದ್ದರೂ ನಮಗೆ ಪ್ರಯಾಣಿಕರಿಂದ ತಪ್ಪುಗಾರ ಚಾಲಕರ ಬಗ್ಗೆ ರಾಶಿ ರಾಶಿ ದೂರುಗಳು ಬರುತ್ತಲೇ ಇವೆ. ತಪ್ಪುಗಾರ ಡ್ರೈವರ್ಗೆ ಶಿಕ್ಷೆ ನೀಡಲು ನಾವೀಗ ಪ್ರಯಾಣಿಕರ ನೆರವನು ಕೋರಿದ್ದೇವೆ; ವಾಹನ ಚಲಾಯಿಸುವಾಗ ಮೊಬೈಲ್ನಲ್ಲಿ ಮಾತನಾಡುವ ಡ್ರೈವರ್ನ ಫೋಟೋ ತೆಗೆದು ವಾಟ್ಸಾಪ್ನಲ್ಲಿ ಕಳುಹಿಸಿ ಇನಾಮು ಪಡೆಯಿರಿ ಎಂದು ಅವರಿಗೆ ಹೇಳಿದ್ದೇವೆ’ ಎಂದು ಉತ್ತರ ಪ್ರದೇಶದ ಸಾರಿಗೆ ಸಚಿವ ಸ್ವತಂತ್ರ ದೇವ್ ಸಿಂಗ್ ಹೇಳಿದ್ದಾರೆ.
ಮೋಟಾರು ವಾಹನ ಕಾಯಿದೆಯ ಪ್ರಕಾರ ಮೊಬೈಲ್ನಲ್ಲಿ ಮಾತನಾಡುತ್ತಾ ವಾಹನ ಚಲಾಯಿಸುವ ಚಾಲಕನಿಗೆ ಆರು ತಿಂಗಳ ಜೈಲು ಮತ್ತು 1,000 ರೂ. ದಂಡ ಹೇರುವುದಕ್ಕೆ ಅವಕಾಶವಿದೆ.
ಉತ್ತರ ಪ್ರದೇಶ ಸರಕಾರದ ಈ ವಿನೂತನ ಕ್ರಮವನ್ನು ರಾಜ್ಯಾದ್ಯಂತದ ಬಸ್ ಪ್ರಯಾಣಿಕರು ಸ್ವಾಗತಿಸಿದ್ದಾರೆ. ಅಂತೆಯà ಮೊಬೈಲ್ನಲ್ಲಿ ಮಾತನಾಡುತ್ತಾ ವಾಹನ ಚಲಾಯಿಸುವವರ ಸಂಖ್ಯೆ ಬಹಳ ಬೇಗನೆ ಕಡಿಮೆಯಾಗುವುದು ನಿಶ್ಚಿತ ಎಂಬ ವಿಶ್ವಾಸವನ್ನು ರಾಜ್ಯ ಸಾರಿಗೆ ಸಚಿವ ಸ್ವತಂತ್ರ ದೇವ್ ಸಿಂಗ್ ವ್ಯಕ್ತಪಡಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Andaman: ಕೋಸ್ಟ್ ಗಾರ್ಡ್ ಕಾರ್ಯಾಚರಣೆ… ಮೀನುಗಾರಿಕಾ ದೋಣಿಯಲ್ಲಿದ್ದ 5ಟನ್ ಮಾದಕ ವಸ್ತು ವಶ
Maharashtra: ಕಾಂಗ್ರೆಸ್ ಗೆ ಕೇವಲ 16 ಸ್ಥಾನ; ಕೈ ಅಧ್ಯಕ್ಷ ಸ್ಥಾನಕ್ಕೆ ಪಟೋಲೆ ರಾಜೀನಾಮೆ
Politics: ಫಡ್ನವೀಸ್ ಗೆ ಬೆಂಬಲ ನೀಡಿದ ಅಜಿತ್; ಮಹಾರಾಷ್ಟ್ರದಲ್ಲಿ ಮುಗಿಯದ ಸಿಎಂ ತಿಕ್ಕಾಟ
Video: ನೋಟಿನ ಮಾಲೆಯ ನೋಟು ಎಗರಿಸಿದ ಕಳ್ಳ… ಮದುವೆ ಬಿಟ್ಟು ಕಳ್ಳನ ಹಿಂದೆ ಓಡಿದ ವರ
Sambhal Case Follow Up:ಹೊರಗಿನವರಿಗೆ ಸಂಭಾಲ್ ಪ್ರವೇಶಕ್ಕೆ ನಿರ್ಬಂಧ,ಜಲ್ಲಿ ಮಾರಾಟ ನಿಷೇಧ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Megha Movie: ನಾನು ಎಂಟು ಸಾರಿ ಕೇಳಿದ ಕಥೆಯಿದು…: ಕಿರಣ್ ರಾಜ್
Sirsi: ಆಂತರಿಕ ಜಗಳ, ದುರಾಡಳಿತವೇ ಬಿಜೆಪಿ ಸೋಲಿಗೆ ಕಾರಣ: ಐವನ್ ಡಿಸೋಜಾ
IPL Auction: ಕೇನ್, ಮಯಾಂಕ್, ಶಾಗಿಲ್ಲ ಬೇಡಿಕೆ; ಉತ್ತಮ ಹಣ ಪಡೆದ ದ. ಆಫ್ರಿಕಾ ವೇಗಿ
Andaman: ಕೋಸ್ಟ್ ಗಾರ್ಡ್ ಕಾರ್ಯಾಚರಣೆ… ಮೀನುಗಾರಿಕಾ ದೋಣಿಯಲ್ಲಿದ್ದ 5ಟನ್ ಮಾದಕ ವಸ್ತು ವಶ
Kundapura: ಮೋಜಿನ ತಾಣಗಳಾಗುತ್ತಿರುವ ಬೀಚ್ಗಳು-ಕಡಲಾಮೆಗೆ ಅಪಾಯ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.