ಹವಾಮಾನ ಬದಲಾವಣೆಯಿಂದ ದ. ಭಾರತದಲ್ಲಿ ಪ್ರವಾಹ?
Team Udayavani, Jan 20, 2021, 3:00 AM IST
ಹೊಸದಿಲ್ಲಿ: ಈ ವರ್ಷ ಜನವರಿ ಮೊದಲ ವಾರದವರೆಗೂ ಕಾಡಿದ ಮಳೆ, ಕಳೆದ ವರ್ಷದ ಮಳೆಗಾಲದಲ್ಲಿ ನೆರೆ, ಅದಕ್ಕೆ ಹಿಂದೆ 2018 ಮತ್ತು 2019ರಲ್ಲಿ ಕೇರಳ ಪ್ರವಾಹ, ಕೊಡಗು, ಸಂಪಾಜೆ, ಬೆಳ್ತಂಗಡಿ ಕಡೆಗಳಲ್ಲಿ ಭಾರೀ ಮಳೆಯಿಂದ ಗುಡ್ಡ ಕುಸಿತ, ಉತ್ತರ ಕರ್ನಾಟಕದಲ್ಲಿ ಪ್ರವಾಹ… ಭವಿಷ್ಯದಲ್ಲಿ ಇಂಥ ಘಟನೆಗಳು ಇನ್ನಷ್ಟು ಹೆಚ್ಚಬಹುದೇ? ಇವೆಲ್ಲ ಮಳೆಯ ವರ್ತನೆ ಸಹಿತ ಹವಾಮಾನ ಬದಲಾವಣೆಯ ಮುನ್ಸೂಚನೆಯೇ?
ಹೌದು ಎನ್ನುತ್ತದೆ ಒಂದು ಅಧ್ಯಯನ ವರದಿ. ಹವಾಮಾನ ಬದಲಾವಣೆಯಿಂದ ಭಾರತ ಸಹಿತ ಉಷ್ಣ ವಲಯದ ಮಳೆ ಸುರಿಯುವ ಪ್ರದೇಶಗಳಲ್ಲಿ ಅಸಮತೋಲನ ಉಂಟಾಗಲಿದ್ದು, ಇದು ಭಾರ ತದ ಹಲವು ಭಾಗಗಳಲ್ಲಿ ಪ್ರವಾಹವನ್ನು ತೀವ್ರಗೊಳಿ ಸಲಿದೆ ಎಂದು “ನೇಚರ್ ಕ್ಲೈಮೇಟ್ ಚೇಂಜ್’ ನಿಯತಕಾಲಿಕದಲ್ಲಿ ಪ್ರಕಟವಾದ ಅಧ್ಯಯನ ಎಚ್ಚರಿಸಿದೆ.
ಈ ಶತಮಾನದ ಅಂತ್ಯದ ವರೆಗೂ ಹಸುರುಮನೆ ಅನಿಲಗಳು ಮತ್ತು ಮಾಲಿನ್ಯದ ಪ್ರಮಾಣದಲ್ಲಿ ಏರಿಕೆಯಾದಲ್ಲಿ ಉಷ್ಣವಲಯದ ಮಳೆ ಪ್ರದೇಶಗಳು ಹೇಗೆ ಸ್ಪಂದಿಸಬಹುದು ಎನ್ನುವುದನ್ನು ಅಭ್ಯಸಿಸಲಾಗಿದೆ.
ವರದಿಯ ಪ್ರಕಾರ, ಪೂರ್ವ ಆಫ್ರಿಕ ಮತ್ತು ಹಿಂದೂ ಮಹಾಸಾಗರ ಆಸುಪಾಸಿನ ಉಷ್ಣವಲ ಯದ ಮಳೆ ಪ್ರದೇಶಗಳು ಉತ್ತರಾಭಿಮುಖವಾಗಿ ಸ್ಥಳಾಂತರವಾಗುತ್ತಿವೆ. ಇದರಿಂದ ದಕ್ಷಿಣ ಭಾರತ ದಲ್ಲಿ ಪ್ರವಾಹ ತೀವ್ರವಾಗುವ ಸಾಧ್ಯತೆಯಿದೆ. 2100ರ ವೇಳೆಗೆ ಇದರಿಂದ ಜಾಗತಿಕ ಜೀವವೈವಿಧ್ಯ ಮತ್ತು ಆಹಾರ ಭದ್ರತೆಯ ಮೇಲೂ ಪರಿಣಾಮ ಉಂಟಾಗಲಿದೆ.
ಪೂರ್ವ ಮತ್ತು ಪಶ್ಚಿಮ ಗೋಳಾರ್ಧಗಳಲ್ಲಿ ಸ್ಪಂದನೆಯನ್ನು ಪ್ರತ್ಯೇಕಿಸಿ ಭಾರತದಲ್ಲಿ ಮುಂಬ ರುವ ದಶಕಗಳಲ್ಲಾಗುವ ತೀವ್ರ ಹವಾಮಾನ ಬದಲಾವಣೆಗಳಿಗೆ ಈ ಅಧ್ಯಯನದಲ್ಲಿ ಮಹತ್ವ ನೀಡಲಾಗಿದೆ.
ಅಧ್ಯಯನದಲ್ಲಿ ಭಾರತದ ವಿವಿಧ ಹವಾಮಾನ ವಲಯಗಳಲ್ಲಿ 1901ರಿಂದ 2015ರ ವರೆಗಿನ ವಿವರಗಳನ್ನು ಪರಿಗಣಿಸಲಾಗಿದೆ. ಸಂಶೋಧ ನೆಯು ಮಳೆಯ ಬದಲಾವಣೆಗಳನ್ನು ದೀರ್ಘಕಾ ಲೀನ ಪ್ರಾದೇಶಿಕ ಮತ್ತು ತಾತ್ಕಾಲಿಕ ಆಯಾಮ ಗಳಿಂದ ಪರಿಶೀಲಿಸಿದೆ. ಅಧ್ಯಯನದ ಪ್ರಕಾರ ಭಾರತದ 34 ಹವಾಮಾನ ಉಪವಿಭಾಗಗಳ ಸಹಿತ 17 ವಲಯಗಳ ಪೈಕಿ 11ರಲ್ಲಿ ಮಳೆಯ ಪ್ರಮಾಣದಲ್ಲಿ ಗಮನಾರ್ಹ ಕುಸಿತವಾಗಿದೆ. ಮಳೆಯ ಪ್ರಮಾಣದಲ್ಲಿ ಇಳಿಕೆ 1951ರ ಬಳಿಕ ದಾಖಲಾಗಿದ್ದು, ಈ ಇಳಿಕೆ ಮುಂಬರುವ 15 ವರ್ಷಗಳಲ್ಲಿ ಎಲ್ಲ ಹವಾಮಾನ ವಲಯಗಳಿಗೂ ವಿಸ್ತರಿಸುವ ಮುನ್ಸೂಚನೆ ಇದೆ.
ಈಗಾಗಲೇ ಜಲಮೂಲಗಳ ಲಭ್ಯತೆ ಸೀಮಿತ ವಾಗಿದ್ದು, ಭವಿಷ್ಯದಲ್ಲಿ ನೀರಿನ ಬೇಡಿಕೆ ಇನ್ನೂ ಹೆಚ್ಚಲಿದೆ. ಮಳೆಯ ಪ್ರಮಾಣ, ಸಮಯದಲ್ಲಾ ಗುವ ಬದಲಾವಣೆಗಳಿಂದ ಜಲಸಂಪನ್ಮೂಲಗಳ ಲಭ್ಯತೆ, ನಿರ್ವಹಣೆಯ ಮೇಲೆ ಪ್ರತಿಕೂಲ ಪರಿಣಾಮಗಳು ಉಂಟಾಗಲಿವೆ ಎಂದು ಅಧ್ಯಯನ ಎಚ್ಚರಿಸಿದೆ.
ಎಲ್ಲೆಲ್ಲಿ, ಏನೇನು ಪರಿಣಾಮ? :
ಮಳೆಯ ಪ್ರಮಾಣದಲ್ಲಿ ಅತೀ ಹೆಚ್ಚಿನ ವ್ಯತ್ಯಯ: ಅರುಣಾಚಲ ಪ್ರದೇಶ ಉಪವಿಭಾಗದಲ್ಲಿ.ಅನಂತರದ ಸ್ಥಾನಗಳಲ್ಲಿ ಕರಾವಳಿ ಕರ್ನಾಟಕ (480.98 ಮಿ.ಮೀ.), ಕೊಂಕಣ, ಗೋವಾ (478.49 ಮಿ.ಮೀ.) ಉಪವಿಭಾಗಗಳಿವೆ. 2030ರ ವರೆಗಿನ ಅವಧಿಯಲ್ಲಿ ಕರಾವಳಿ ಕರ್ನಾಟಕ, ಕೊಂಕಣ ಮತ್ತು ಗೋವಾ ಹಾಗೂ ಕೇರಳ ಉಪವಿಭಾಗಗಳಲ್ಲಿ ಅತೀ ಹೆಚ್ಚಿನ ಮಳೆಯಾಗಲಿದೆ. (2,000 ಮಿ.ಮೀ.ಗೂ ಅಧಿಕ). ಹಾಗೆಯೇ ಪಶ್ಚಿಮ ರಾಜಸ್ಥಾನ, ಪೂರ್ವ ರಾಜಸ್ಥಾನ, ತಮಿಳು ನಾಡು ಮತ್ತು ರಾಯಲಸೀಮಾ ಉಪವಿಭಾ ಗಗಳಲ್ಲಿ ಅತೀ ಕಡಿಮೆ ಮಳೆಯಾಗಲಿದೆ (300 ಮಿ.ಮೀ.ಗೂ ಕಡಿಮೆ).
ಕೆಲವು ಉಪವಿಭಾಗಗಳಲ್ಲಿ ನಿಧಾನವಾಗಿ ಮಳೆ ಕಡಿಮೆಯಾಗಲಿದ್ದು, ಉಳಿದೆಡೆ ಹೆಚ್ಚಾಗಲಿದೆ. ತೀವ್ರ ಮಳೆಯಿಂದ ಭವಿಷ್ಯದಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗುವ ಸಂಭವವಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ
Mumbai: ಕಾರು ಢಿಕ್ಕಿ; ರಸ್ತೆ ಬದಿ ಆಡುತ್ತಿದ್ದ 4ರ ಬಾಲಕ ಸ್ಥಳದಲ್ಲೇ ಮೃ*ತ್ಯು
Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!
Mohali: ನಾಲ್ಕಂತಸ್ತಿನ ಕಟ್ಟಡ ಕುಸಿದು 20 ವರ್ಷದ ಯುವತಿ ಸಾವು
Ayyappa Temple: ಶಬರಿಮಲೆಗೆ ಭಕ್ತರ ಪ್ರವಾಹ: ಸ್ಪಾಟ್ ಬುಕ್ಕಿಂಗ್ ತಾತ್ಕಾಲಿಕ ರದ್ದು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Malpe: ಮನೆ ಮನೆಗಳಲ್ಲಿ ಕ್ಯಾರೋಲ್ ಗಾಯನ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Mangaluru: ಕ್ರಿಸ್ಮಸ್ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು
Health: ಶೀಘ್ರ ಕ್ಯಾನ್ಸರ್ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.