ಕೋಲ್ಕತ ಕಾರು ಅವಘಡ: ಅಮಿತಾಭ್ ಅದೃಷ್ಟವಶಾತ್ ಪಾರು
Team Udayavani, Nov 16, 2017, 3:58 PM IST
ಕೋಲ್ಕತ : ಮೆಗಾಸ್ಟಾರ್ ಅಮಿತಾಭ್ ಬಚ್ಚನ್ ಅವರು ಕಳೆದ ವಾರ ನಗರದಲ್ಲಿ ನಡೆದಿದ್ದ ಕಾರು ಅವಘಡದಲ್ಲಿ ಪವಾಡ ಸದೃಶರಾಗಿ ಯಾವುದೇ ಗಾಯಗಳಿಲ್ಲದೆ ಪಾರಾದ ಘಟನೆ ನಡೆದಿದೆ.
ಪಶ್ಚಿಮ ಬಂಗಾಲ ಸರಕಾರದ ಆಹ್ವಾನದ ಮೇರೆಗೆ ಅಮಿತಾಭ್ ಅವರು ಕೋಲ್ಕತಾ ಇಂಟರ್ನ್ಯಾಶನಲ್ ಪಿಲ್ಮ್ ಫೆಸ್ಟಿವಲ್ ಉದ್ಘಾಟನಾ ಸಮಾರಂಭಕ್ಕೆ ಬಂದಿದ್ದರು.
ಕಾರ್ಯಕ್ರಮ ಮುಗಿದ ಬಳಿಕ ಶನಿವಾರ ಬೆಳಗ್ಗೆ ಮುಂಬಯಿಗೆ ವಿಮಾನ ಏರಲು ಅವರನ್ನು ವಿಮಾನ ನಿಲ್ದಾಣಕ್ಕೆ ಒಯ್ಯುತ್ತಿದ್ದ ಮರ್ಸಿಡಿಸ್ ಕಾರಿನ ಚಕ್ರ ಇದ್ದಕ್ಕಿದ್ದಂತೆಯೆ ಕಳಚಿ ಹೋಯಿತು.
ಬಹುದೊಡ್ಡ ಅಪಘಾತಕ್ಕೆ ಗುರಿಯಾಗುವವರಿದ್ದ ಅಮಿತಾಭ್ ಅದೃಷ್ಟವಶಾತ್ ಕೂದಲೆಳೆಯಲ್ಲಿ ಪಾರಾದರು ಎಂದು ರಾಜ್ಯ ಸರಕಾರದ ಹಿರಿಯ ಅಧಿಕಾರಿ ಇಂದು ಗುರುವಾರ ಮಾಧ್ಯಮಕ್ಕೆ ತಿಳಿಸಿದ್ದಾರೆ.
ಅಮಿತಾಭ್ ಗಾಗಿ ಅತ್ಯಧಿಕ ಮೊತ್ತ ಬಾಡಿಗೆಗೆ ಮರ್ಸಿಡಿಸ್ ಕಾರನ್ನು ಒದಗಿಸಿದ್ದ ಟ್ರಾವಲ್ ಏಜನ್ಸಿಗೆ ಸರಕಾರ ಇದೀಗ ಶೋ ಕಾಸ್ ನೊಟೀಸ್ ಜಾರಿ ಮಾಡಿದೆ.
ಅಮಿತಾಭ್ ಅವರು ಕಾರ್ಯಕ್ರಮ ಮುಗಿದ ಬಳಿಕ ಶನಿವಾರ ಬೆಳಗ್ಗೆ ಮುಂಬಯಿ ವಿಮಾನ ಏರಲು ಈ ಕಾರನ್ನು ಏರಿದ್ದರು. ಡಫ್ರಿನ್ ರಸ್ತೆಯಲ್ಲಿ ಇದರ ಹಿಂಬದಿಯ ಚಕ್ರ ಕಳಚಿ ಅಪಘಾತಕ್ಕೆ ಗುರಿಯಾಯಿತು. ಈ ಘಟನೆಯಿಂದ ಆಘಾತಗೊಂಡರೂ ಅಮಿತಾಭ್ ವಿಚಲಿರಾಗಲಿಲ್ಲ ಎನ್ನುವುದು ವಿಶೇಷ.
ಪ್ರಾಥಮಿಕ ತನಿಖೆಯಲ್ಲಿ ಕಾರಿನ ಫಿಟ್ನೆಸ್ ಸರ್ಟಿಫಿಕೇಟ್ ಬಹಳ ಹಿಂದೆಯೇ ಮುಗಿದು ಹೋಗಿದ್ದರೂ ಅದನ್ನಿನ್ನೂ ಸೇವೆಯಲ್ಲಿ ಇರಿಸಲಾಗಿತ್ತು ಎಂದು ಗೊತ್ತಾಗಿದೆ. ಬಚ್ಚನ್ ಜತೆಗೆ ಕಾರಿನಲ್ಲಿ ರಾಜ್ಯದ ಹಿರಿಯ ಸಚಿವರೊಬ್ಬರೂ ಇದ್ದರು. ಅವರೂ ಪಾರಾಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jammu and Kashmir; ಉಗ್ರವಾದ ಪರಿಸರ ವ್ಯವಸ್ಥೆ ಬಹುತೇಕ ಕೊನೆಗೊಂಡಿದೆ: ಶಾ
BJP vs Congress; ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರು,ಕಾಂಗ್ರೆಸ್ ಪ್ರತಿದೂರು
Jagdeep Dhankhar; ರಾಜ್ಯಸಭಾ ಸಭಾಪತಿ ವಿರುದ್ದದ ಪ್ರತಿಪಕ್ಷಗಳ ಅವಿಶ್ವಾಸ ನಿರ್ಣಯ ತಿರಸ್ಕೃತ
ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜೀನಾಮೆ ನೀಡುವುದು ಉತ್ತಮ: ಲಾಲು ಪ್ರಸಾದ್ ಯಾದವ್ ಕಿಡಿ
Video: ನ್ಯಾಯ ಕೇಳಲು ಬಂದ ವ್ಯಕ್ತಿಗೆ ಖಾಕಿಯಿಂದ 41 ಸೆಕೆಂಡ್ಗಳಲ್ಲಿ 31 ಬಾರಿ ಕಪಾಳ ಮೋಕ್ಷ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.