ಕೂದಲೆಳೆ ಅಂತರದಲ್ಲಿ ಪಾರಾದ ಆಂಧ್ರ ಸಿಎಂ; ಪ್ರವಾಹ ವೀಕ್ಷಣೆ ವೇಳೆ ಪಕ್ಕದಲ್ಲೇ ಸಂಚರಿಸಿದ ರೈಲು
Team Udayavani, Sep 6, 2024, 3:09 PM IST
ಆಂಧ್ರಪ್ರದೇಶ: ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಲು ಬಂದಿದ್ದ ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ಅವರು ಹಾಗೂ ಅವರ ತಂಡ ಭಾರಿ ಅಪಘಾತದಿಂದ ಪಾರಾಗಿದ್ದಾರೆ.
ಗುರುವಾರ ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಹಾಗೂ ಅವರ ತಂಡ ವಿಜಯವಾಡದ ಬುಡಮೇರು ರೈಲ್ವೆ ಸೇತುವೆಯ ಮೇಲೆ ಪ್ರವಾಹ ಪರಿಸ್ಥಿತಿಯನ್ನು ವೀಕ್ಷಿಸಲು ಬಂದಿದ್ದಾರೆ ಈ ವೇಳೆ ಅವರ ಪಕ್ಕದಲ್ಲೇ ರೈಲೊಂದು ವೇಗವಾಗಿ ಸಂಚರಿಸಿದ್ದು ಮುಖ್ಯಮಂತ್ರಿ ಹಾಗೂ ಅವರ ಜೊತೆಗಿದ್ದ ತಂಡ ಕೂದಲೆಳೆಯ ಅಂತರದಲ್ಲಿ ಪಾರಾಗಿದ್ದಾರೆ.
ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಆಂಧ್ರಪ್ರದೇಶದ ಹಲವು ಪ್ರದೇಶಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಅದರಂತೆ ಸಿಎಂ ನಾಯ್ಡು ಅವರು ಅಧಿಕಾರಿಗಳ ಜೊತೆ ಗುರುವಾರ ಪ್ರವಾಹ ಪೀಡಿತ ಪ್ರದೇಶಗಳ ಪರಿಶೀಲನೆ ಮುಂದಾಗಿದ್ದಾರೆ, ಈ ವೇಳೆ ರೈಲು ಸಂಚಾರಕ್ಕಾಗಿ ವಿಶೇಷವಾಗಿ ವಿನ್ಯಾಸಗೊಳಿಸಲಾದ ಬುಡಮೇರು ರೈಲು ಸೇತುವೆಯ ಮೇಲೆ ಪ್ರವಾಹ ಪರಿಸ್ಥಿತಿ ಪರಿಶೀಲಿಸಲು ಸಿಎಂ ಹಾಗೂ ತಂಡ ಸಂಚರಿಸಿದ್ದಾರೆ, ಈ ಸೇತುವೆಯಲ್ಲಿ ಪಾದಚಾರಿಗಳಿಗೆ ಸಂಚರಿಸಲು ಕಡಿಮೆ ಸ್ಥಳ ಇತ್ತು ಎಂದು ಕೂಡ ಹೇಳಲಾಗಿದೆ, ಹಾಗೆ ಪ್ರವಾಹ ಪರಿಸ್ಥಿತಿ ವೀಕ್ಷಣೆ ಮಾಡುವ ವೇಳೆ ರೈಲು ಬಂದಿದೆ ಕೂಡಲೇ ಎಚ್ಚೆತ್ತ ಭದ್ರತಾ ಸಿಬಂದಿ ಮುಖ್ಯಮಂತ್ರಿಗಳನ್ನು ಸೇತುವೆಯ ಬದಿಗೆ ಎಳೆದಿದ್ದಾರೆ ಈ ವೇಳೆ ಸಿಎಂ ನಾಯ್ಡು ಪಕ್ಕದಲ್ಲೇ ರೈಲು ಹಾದು ಹೋಗಿದೆ.
ವಿಶೇಷವೆಂದರೆ ಕಳೆದ 5 ದಿನಗಳಿಂದ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡುತ್ತಿರುವ ನಾಯ್ಡು ಅವರು ಹಲವು ಬಾರಿ ಭದ್ರತಾ ಶಿಷ್ಟಾಚಾರಗಳನ್ನು ಉಲ್ಲಂಘಿಸುತ್ತಿರುವುದು ಬೆಳಕಿಗೆ ಬಂದಿದೆ ಎಂದು ಹೇಳಲಾಗಿದೆ.
ಸಿಎಂ ಪಕ್ಕದಲ್ಲೇ ರೈಲು ಹಾದು ಹೋಗುವ ವಿಡಿಯೋ ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
#AndhraPradesh CM #ChandrababuNaidu narrowly escaped a speeding #Train while inspecting flood-affected Madhuranagar, #Vijayawada on Thursday.@ncbn & his team were on a bridge near a railway track when the train approached.
The inspection resumed after the train passed. pic.twitter.com/80PtYVIyyr
— Hyderabad Netizens News (@HYDNetizensNews) September 6, 2024
#AndhraPradesh Chief Minister #ChandrababuNaidu narrowly escaped, when a speeding train passed just a few feet from him, while he was standing on a bridge beside a railway track on Thursday during an inspection of #flood affected Madhuranagar in #Vijayawada.
The incident… pic.twitter.com/fF4SwV6s4U
— Surya Reddy (@jsuryareddy) September 5, 2024
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!
Mohali: ನಾಲ್ಕಂತಸ್ತಿನ ಕಟ್ಟಡ ಕುಸಿದು 20 ವರ್ಷದ ಯುವತಿ ಸಾವು
Ayyappa Temple: ಶಬರಿಮಲೆಗೆ ಭಕ್ತರ ಪ್ರವಾಹ: ಸ್ಪಾಟ್ ಬುಕ್ಕಿಂಗ್ ತಾತ್ಕಾಲಿಕ ರದ್ದು
Old cars ಬಿಕರಿಗೆ ಶೇ.18 ಜಿಎಸ್‌ಟಿ! ; ವಿತ್ತ ಸಚಿವೆ ನೇತೃತ್ವದ ಜಿಎಸ್‌ಟಿ ಸಭೆ ತೀರ್ಮಾನ
Maharashtra; ಫಡ್ನವೀಸ್ ಬಳಿ ಗೃಹ, ಶಿಂಧೆಗೆ ನಗರಾಭಿವೃದ್ಧಿ ಸೇರಿ 3 ಪ್ರಮುಖ ಖಾತೆ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.