ರೈತರ ಸಾಲ ಮನ್ನಾ ಪ್ರಶ್ನಿಸಿದ CM ಮಮತಾ , ಕಾಂಗ್ರೆಸ್ ಜತೆ ಒಡಕು ?
Team Udayavani, Dec 26, 2018, 7:09 PM IST
ಹೊಸದಿಲ್ಲಿ : ಈಚಿನ ಪಂಚರಾಜ್ಯ ಚುನಾವಣೆಯಲ್ಲಿ ಕಾಂಗ್ರೆಸ್ ವಿಜಯಗಳಿಸಿರುವ ರಾಜಸ್ಥಾನ, ಮಧ್ಯ ಪ್ರದೇಶ ಮತ್ತು ಛತ್ತೀಸ್‌ಗಢ ರಾಜ್ಯ ಸರಕಾರಗಳು ಅಧಿಕಾರಕ್ಕೆ ಬಂದ ತತ್‌ಕ್ಷಣವೇ ರೈತರ ಸಾಲ ಮನ್ನಾ ಪ್ರಕಟಿಸಿರುವುದನ್ನು ಪರೋಕ್ಷವಾಗಿ ಟೀಕಿಸಿರುವ ಪಶ್ಚಿಮ ಬಂಗಾಲ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ “ಈ ರೀತಿಯ ಸಾಲ ಮನ್ನಾ ಕ್ರಮಗಳು ವಿವೇಚನಾಯುಕ್ತವಾಗಿವೆಯೇ; ಅವು ಆರ್ಥಿಕವಾಗಿ ಸಾಧುವೇ?’ ಎಂದು ಪ್ರಶ್ನಿಸುವ ಮೂಲಕ ಕಾಂಗ್ರೆಸ್ ಪಕ್ಷದಿಂದ ಅಂತರ ಕಾಯ್ದುಕೊಳ್ಳುವ ಸುಳಿವು ನೀಡಿದ್ದಾರೆ.
‘ಹಲವಾರು ರಾಜ್ಯಗಳು ರೈತರ ಸಾಲ ಮನ್ನಾ ಮಾಡುತ್ತಿವೆ. ಇವು ನಿಜಕ್ಕೂ ಎಷ್ಟು ಸರಿ ? ಇದರಿಂದ ರಾಜ್ಯದ ಆರ್ಥಿಕ ಸ್ಥಿತಿಗತಿಗೆ ಧಕ್ಕೆ ಉಂಟಾಗುವುದಿಲ್ಲವೇ ? ಎಂದು ಪ್ರಶ್ನಿಸಿರುವ ಮಮತಾ, ಬಿಜೆಪಿ ಸರಕಾರದ ಕೃಷಿ ವಿಮಾ ಯೋಜನೆಯನ್ನು ಕೂಡ ಟೀಕಿಸಿದ್ದಾರೆ. ಈ ರೀತಿಯ ಯೋಜನೆಗಳು ಕಾರ್ಯಸಾಧುವಲ್ಲ’ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
‘ನಾನೀಗ ರೈತರ ಸಾಲ ಮನ್ನಾ ಕುರಿತ ಅಂಕಿ ಅಂಶ, ದಾಖಲೆ ಪತ್ರಗಳನ್ನು ತರಿಸಿಕೊಂಡು ಅವಲೋಕಿಸುತ್ತಿದ್ದೇನೆ; ಕೃಷಿ ಸಾಲ ಮನ್ನಾ ಅನ್ನೋದು ಎಷ್ಟು ಸರಿ ಎಂಬ ಬಗ್ಗೆ ವಿಶ್ಲೇಷಣೆ ನಡೆಸುತ್ತಿದ್ದೇನೆ’ ಎಂದು ಮಮತಾ ಹೇಳಿದ್ದಾರೆ.
ಪಂಚ ರಾಜ್ಯಗಳ ಚುನಾವಣೆಯಲ್ಲಿ ಮಧ್ಯ ಪ್ರದೇಶ, ರಾಜಸ್ಥಾನ ಮತ್ತು ಛತ್ತೀಸ್‌ಗಢದಲ್ಲಿ ವಿಜಯ ಸಾಧಿಸಿದ್ದ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷವನ್ನು ನೇರವಾಗಿ ಅಭಿನಂದಿಸದಿದ್ದ ಮಮತಾ, ಆ ರಾಜ್ಯಗಳ ಜನತೆಯನ್ನು ಅಭಿನಂದಿಸಿದ್ದರು ಎನ್ನುವುದು ಗಮನಾರ್ಹವಾಗಿದೆ. ಆದರೆ ಆಕೆ ತೆಲಂಗಾಣದಲ್ಲಿ ಪ್ರಚಂದ ವಿಜಯ ಸಾಧಿಸಿದ್ದ ಕೆಸಿಆರ್ ಅವರನ್ನು ಮತ್ತು ಅವರ ಪಕ್ಷವನ್ನು ಅಭಿನಂದಿಸಿದ್ದರು.
ಈ ನಡುವೆ ಕೆಸಿಆರ್ ಅವರ ವಿಪಕ್ಷ ರಂಗ ರಚನೆಯ ಯತ್ನವನ್ನು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖೀಲೇಶ್ ಯಾದವ್ ಸ್ವಾಗತಿಸಿದ್ದು ತಾನು ಅವರನ್ನು ಸದ್ಯದಲ್ಲೇ ಭೇಟಿಯಾಗಿ ಮಾತುಕತೆ ನಡೆಸಲಿದ್ದೇನೆ ಎಂದು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.