ಕೊ-ವಿನ್’ ನಿರ್ವಹಣೆ ಕುರಿತು ಕೇಂದ್ರದ ಪಾಠ
Team Udayavani, Jan 11, 2021, 2:22 AM IST
ಹೊಸದಿಲ್ಲಿ: ಲಸಿಕೆ ನೀಡುವಿಕೆಗೆ ಜ.16ರ ಮುಹೂರ್ತ ಫಿಕ್ಸ್ ಆದ ಬೆನ್ನಲ್ಲೇ ಕೇಂದ್ರ ಸರಕಾರ ರವಿವಾರ ಎಲ್ಲ ರಾಜ್ಯ, ಕೇಂದ್ರಾಡಳಿತ ಪ್ರದೇಶ ಗಳ ಉನ್ನತಾಧಿಕಾರಿಗಳೊಂದಿಗೆ “ಕೊ-ವಿನ್’ ಆ್ಯಪ್ ನಿರ್ವಹಣೆ ಸಂಬಂಧ ಸಭೆ ನಡೆಸಿದ್ದು, ಅಗತ್ಯ ಮಾರ್ಗಸೂಚಿ ಬಿಡುಗಡೆ ಮಾಡಿದೆ.
ಕೋವಿಡ್ ಲಸಿಕೆ ಕಾರ್ಯಕ್ರಮದ ರಾಷ್ಟ್ರೀಯ ತಜ್ಞರ ತಂಡದ ಸದಸ್ಯ ರಾಮ್ ಸೇವಕ್ ಶರ್ಮಾ ಸಭೆಯ ನೇತೃತ್ವ ವಹಿಸಿದ್ದರು.
ಸಭೆಯ ಮುಖ್ಯಾಂಶ: ಡ್ರೈ ರನ್‌ಗಳಲ್ಲಿ ಕೊ-ವಿನ್ ತಂತ್ರಾಂಶ ನಿರ್ವಹಣೆ ವೇಳೆ ಉದ್ಭವಿಸಿದ ಸಮಸ್ಯೆ, ಸಲಹೆಗಳ ಕುರಿತು ಚರ್ಚಿಸಲಾಯಿತು. ಫಲಾನುಭವಿಗಳ ದತ್ತಾಂಶ ಸೋರಿಕೆ ಆಗದಂತೆ ವಹಿಸಬೇಕಾದ ಕ್ರಮಗಳ ಬಗ್ಗೆ ಸೇವಕ್ ಪೂರಕ ಮಾಹಿತಿ ನೀಡಿದರು. ಯಾರು, ಯಾರಿಂದ, ಯಾವಾಗ ವ್ಯಾಕ್ಸಿನ್ ಪಡೆದರು ಎಂಬುದರ ಬಗೆಗಿನ ಡಿಜಿಟಲ್ ದಾಖಲೆಗಳನ್ನು ಆ ಕ್ಷಣವೇ ಆ್ಯಪ್‌ಗೆ ದಾಖಲಿಸುವುದು, ಅವುಗಳ ದತ್ತಾಂಶ ಸಂರಕ್ಷಣೆಗೆ ಅನುಸರಿಬೇಕಾದ ವಿಧಾನಗಳನ್ನು ತಿಳಿಸಿದರು.
“ಆಧಾರ್‌ಗೆ ಲಿಂಕ್ ಆದ ಮೊಬೈಲ್ ಸಂಖ್ಯೆಗಳನ್ನು ನೀಡುವಂತೆ ಫಲಾನುಭವಿಗಳಿಗೆ ಸೂಚಿಸಿದರೆ, ನಕಲಿ ಪ್ರಜೆಗಳನ್ನು ಸುಲಭವಾಗಿ ಪತ್ತೆ ಹಚ್ಚಬಹುದು’ ಎಂದೂ ತಿಳಿಸಿದರು.
ಈ ನಡುವೆ ದೇಶಾದ್ಯಂತ 24 ಗಂಟೆಗಳಲ್ಲಿ 18,645 ಮಂದಿಗೆ ಸೋಂಕು ದೃಢಪಟಿcದೆ. ದೇಶದಲ್ಲಿ ಮರಣ ಪ್ರಮಾಣ ಶೇ.1.44ಕ್ಕೆ ಇಳಿಕೆಯಾಗಿದೆ. ಕಳೆದ 16 ದಿನಗಳಲ್ಲಿ ದೈನಂದಿನ ಸಾವಿನ ಪ್ರಕರಣ 300ಕ್ಕಿಂತಲೂ ಕಡಿಮೆ ದಾಖಲಾಗಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ಬಂಗಾಲದಲ್ಲಿ ಉಚಿತ ಲಸಿಕೆ: ಈ ನಡುವೆ ಪಶ್ಚಿಮ ಬಂಗಾಲದಲ್ಲಿ ಎಲ್ಲರಿಗೂ ಉಚಿತವಾಗಿ ಕೋವಿಡ್ ಲಸಿಕೆ ವಿತರಿಸಲಾಗುವುದು ಎಂದು ಸಿಎಂ ಮಮತಾ ಬ್ಯಾನರ್ಜಿ ಘೋಷಿಸಿದ್ದಾರೆ. ರಾಜ್ಯ ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಅವರ ಈ ಘೋಷಣೆ ಮಹತ್ವ ಪಡೆದಿದೆ.
ಡಬ್ಲ್ಯುಎಚ್ಒ ಎಡವಟ್ಟು :
ಕೋವಿಡ್ ಸೋಂಕಿತರ ಸಂಖ್ಯೆಯನ್ನು ಸೂಚಿಸಿ ವಿಶ್ವ ಆರೋಗ್ಯ ಸಂಸ್ಥೆ ರವಿವಾರ ಬಿಡುಗಡೆ ಮಾಡಿರುವ ಭೂಪಟದಲ್ಲಿ ಜಮ್ಮು-ಕಾಶ್ಮೀರ ಹಾಗೂ ಲಡಾಖ್ ಅನ್ನು ಭಾರತದ ಭೂಭಾಗದಿಂದ ಪ್ರತ್ಯೇಕಿಸಿರು ವುದು ವಿವಾದಕ್ಕೆ ಕಾರಣವಾಗಿದೆ. ಸಂಸ್ಥೆಯ ಈ ನಡೆಗೆ ಅನೇಕ ಭಾರತೀಯರು ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಭೂಪಟದಲ್ಲಿ ಭಾರತವನ್ನು ನೀಲಿ ಬಣ್ಣದಲ್ಲಿ ತೋರಿಸಲಾಗಿದ್ದು, ಜಮ್ಮು-ಕಾಶ್ಮೀರ ಹಾಗೂ ಲಡಾಖ್ ಅನ್ನು ಬೂದು ಬಣ್ಣದಲ್ಲಿ ಪ್ರತ್ಯೇಕಿಸಿ ಚಿತ್ರಿಸಲಾಗಿದೆ. ವಿಶ್ವ ಆರೋಗ್ಯ ಸಂಸ್ಥೆಯು ಚೀನ ಪರ ಮೃದು ಧೋರಣೆ ಹೊಂದಿದೆ ಎಂಬ ಆರೋಪ ಈ ಹಿಂದಿನಿಂದಲೂ ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ ಈ ವಿವಾದ ಮಹತ್ವ ಪಡೆದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹಿರಿಯ ಪರಮಾಣು ವಿಜ್ಞಾನಿ ರಾಜಗೋಪಾಲ್ ಚಿದಂಬರಂ ವಿಧಿವಶ: ಪ್ರಧಾನಿ ಮೋದಿ ಸಂತಾಪ
Tamilnadu: ಪಟಾಕಿ ತಯಾರಿಕೆ ಕಾರ್ಖಾನೆಯಲ್ಲಿ ಸ್ಫೋಟ- ಆರು ಮಂದಿ ಸಾ*ವು
Social Media A/c: ಮಕ್ಕಳ ಸೋಷಿಯಲ್ ಮೀಡಿಯಾ ಖಾತೆಗೆ ಹೆತ್ತವರ ಒಪ್ಪಿಗೆ ಕಡ್ಡಾಯ?
Chhattisgarh: ಗುತ್ತಿಗೆದಾರನ ಭ್ರಷ್ಟಾಚಾರ ಬಯಲಿಗೆಳೆದ ಯೂಟ್ಯೂಬರ್ ಶವವಾಗಿ ಪತ್ತೆ!
US Satellite: ಅಮೆರಿಕದ ಸಂವಹನ ಉಪಗ್ರಹ ಭಾರತದ ರಾಕೆಟ್‌ನಿಂದ ಲಾಂಚ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Brijesh Chowta: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾದ ಕ್ಯಾ. ಬ್ರಿಜೇಶ್ ಚೌಟ
Royal Movie; ಜ.24ರಿಂದ ʼರಾಯಲ್ʼ; ಟ್ರೇಲರ್ ರಿಲೀಸ್‌ಗೆ ತಂಡ ರೆಡಿ
Udupi: ಮಾದಕ ವಸ್ತು ಸಾಗಾಟ ಮಾಡುತ್ತಿದ್ದ ಆರೋಪಿ ಬಂಧನ: 3.25 ಲಕ್ಷ ಮೌಲ್ಯದ MDMA, ಚರಸ್ ವಶ
Bellary; ಪ್ರಿಯಾಂಕ್ ಖರ್ಗೆ ರಾಜೀನಾಮೆ ಖಂಡಿಸಿ ಬಿಜೆಪಿ ಪ್ರತಿಭಟನೆ
Contractor Sachin Case: ಎರಡನೇ ದಿನವೂ ತನಿಖೆ ಮುಂದುವರಿಸಿದ ಸಿಐಡಿ ತಂಡ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.