ತೆಂಗಿನ ಮರವೇರಲು ಕೋರ್ಸ್
Team Udayavani, Oct 7, 2018, 5:29 AM IST
ಕೊಟ್ಟಾಯಂ: ಕೇರಳ ಸೇರಿದಂತೆ ತೆಂಗಿನ ಮರಗಳು ಹೆಚ್ಚಾಗಿರುವ ದೇಶದ ಎಲ್ಲಾ ಪ್ರದೇಶಗಳಲ್ಲಿ ಮರವೇರಿ ತೆಂಗಿನಕಾಯಿ ಕೀಳುವುದು ಬಹು ಬೇಡಿಕೆಯ ಕಸುಬು. ಹಾಗಾಗಿ, ಮಹಿಳೆ ಯರನ್ನು ಈ ಕ್ಷೇತ್ರಕ್ಕಾಗಿ ಅಣಿಗೊಳಿಸಿ ಸಲು ಕೊಟ್ಟಾಯಂನ ಅಮಲಗಿರಿಯಲ್ಲಿರುವ “ದ ಬಿಷಪ್ ಕುರಿಯಲಚೇರಿ’ (ಬಿಕೆ) ಕಾಲೇಜಿನಲ್ಲಿ ಇದಕ್ಕಾಗಿಯೇ ಒಂದು ಶೈಕ್ಷಣಿಕ ಕೋರ್ಸ್ ಆರಂಭಿಸಲು ನಿರ್ಧರಿಸಲಾಗಿದೆ. ಮಹಿಳೆ ಯರ ಜೀವನಕ್ಕೊಂದು ದಾರಿ ಮಾಡಿಕೊಡುವುದೂ ಇದರ ಇನ್ನೊಂದು ಉದ್ದೇಶವಾಗಿದೆ.
ಕೋರ್ಸ್ ವೈಶಿಷ್ಟ್ಯತೆ: ಇದೊಂದು ಸರ್ಟಿಫಿಕೇಟ್ ಕೋರ್ಸ್. ಥಿಯರಿ, ಪ್ರಾಕ್ಟಿಕಲ್ ಸೇರಿ ಒಟ್ಟು 30 ಗಂಟೆಗಳ ಬೋಧನಾವಧಿ ಇರಲಿದೆ. ಯಂತ್ರಗಳ ಮೂಲಕ ತೆಂಗಿನ ಮರಗಳನ್ನು ಹತ್ತುವ ಕಲೆಯನ್ನು ಕಲಿಸುವುದರ ಜತೆಗೆ, ತೆಂಗಿನ ಮರಗಳ ಆರೈಕೆಯ ಬಗ್ಗೆಯೂ ತಿಳಿಸಿಕೊಡಲಾಗುತ್ತದೆ. ಬಿಕೆ ಕಾಲೇಜಿನಲ್ಲಿರುವ ರಾಷ್ಟ್ರೀಯ ಸೇವಾ ಯೋಜನೆ (ಎನ್‌ಎಸ್‌ಎಸ್) ಸಹಯೋಗದೊಂದಿಗೆ ಈ ಕೋರ್ಸ್ ಶುರುವಾಗಲಿದೆ. ಸದ್ಯಕ್ಕೆ ಪ್ರಾಯೋಗಿಕವಾಗಿ ಈ ಕೋರ್ಸ್ ಅನ್ನು ಆರಂಭಿಸಲಾಗುತ್ತಿದೆ. ಅಧಿಕೃತವಾಗಿ ಶುರುವಾದ ಅನಂತರ ಮೊದಲ ಬ್ಯಾಚ್‌ನಲ್ಲಿ ಕನಿಷ್ಠ 100 ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಿಕೊಡಲು ಕಾಲೇಜು ಆಡಳಿತ ಮಂಡಳಿ ನಿರ್ಧರಿಸಿದೆ.
ಭಾರೀ ಬೇಡಿಕೆ: ಕೇರಳದಲ್ಲಿ ಸದ್ಯದ ಮಟ್ಟಿಗೆ ತೆಂಗಿನ ಮರ ಹತ್ತುವ ನುರಿತ ಕೆಲಸಗಾರರ ಬರವಿದೆ. ಹೀಗಾಗಿ ನುರಿತವರಿಗೆ ಬೇಡಿಕೆ ಜಾಸ್ತಿ. ಇದನ್ನು ಮನಗಂಡ ಕಾಲೇಜಿನ ಆಡಳಿತ ಮಂಡಳಿ ಯುವತಿಯರಿಗೆ ತರಬೇತಿ ನೀಡಿ, ಸ್ವಾವಲಂಬಿಗಳನ್ನಾಗಿಸಲು ಆಲೋಚಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jharkhand; ಸಿಎಂ ಆಗಿ ಹೇಮಂತ್ ಸೊರೇನ್ ಪ್ರಮಾಣ ವಚನ ಸ್ವೀಕಾರ
Delhi: ಒಂದು ತಿಂಗಳ ಅಂತರದಲ್ಲಿ ಪ್ರಶಾಂತ್ ವಿಹಾರ್ ಪ್ರದೇಶದಲ್ಲಿ ಎರಡನೇ ಸ್ಫೋಟ
Oath: ಕೇರಳ ಸೀರೆ ತೊಟ್ಟು, ಕೈಯಲ್ಲಿ ಸಂವಿಧಾನ ಹಿಡಿದು ಪ್ರಮಾಣ ವಚನ ಸ್ವೀಕರಿಸಿದ ಪ್ರಿಯಾಂಕಾ
Railway: ಪ್ರತಿ ಪ್ರಯಾಣದ ಬಳಿಕ ಹೊದಿಕೆಗಳನ್ನು ತೊಳೆಯುತ್ತಾರಾ? ಸಚಿವರು ಕೊಟ್ಟ ಉತ್ತರವೇನು?
Cyber Fraud Case: ದಾಳಿ ನಡೆಸಲು ಹೋದ ಇಡಿ ಅಧಿಕಾರಿಗಳ ಮೇಲೆಯೇ ತಂಡದಿಂದ ಹಲ್ಲೆ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Jharkhand; ಸಿಎಂ ಆಗಿ ಹೇಮಂತ್ ಸೊರೇನ್ ಪ್ರಮಾಣ ವಚನ ಸ್ವೀಕಾರ
ಪ್ರಯಾಣಿಕರಿಗೆ ಟಿಕೆಟ್ ಅಗತ್ಯವಿಲ್ಲದ ಭಾರತದ ಏಕೈಕ ಉಚಿತ ರೈಲು ಪ್ರಯಾಣದ ಬಗ್ಗೆ ಗೊತ್ತಾ?
Renukaswamy Case:ಬೆನ್ನು ನೋವು ಬಳಿಕ ದರ್ಶನ್‌ಗೆ ಮತ್ತೊಂದು ಸಮಸ್ಯೆ; ವಕೀಲರು ಹೇಳಿದ್ದೇನು?
Karkala: ದುರ್ಗಾ ಫಾಲ್ಸ್ ಗೆ ಈಜಲು ಹೋಗಿದ್ದ ವಿದ್ಯಾರ್ಥಿ ನೀರು ಪಾಲು
School Teacher: ಅನಾರೋಗ್ಯದಿಂದ ಉದ್ಯಾವರ ಜೂಲಿಯಾನಾ ಟೀಚರ್ ನಿಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.