ನ್ಯಾಟ್ ಜಿಯೋ, ಡಿಸ್ಕವರಿಗೆ “ಡಿಡಿ ಪ್ರಕೃತಿ’ ಸೆಡ್ಡು
Team Udayavani, Oct 22, 2017, 6:10 AM IST
ನವದೆಹಲಿ: ಪ್ರಾಕೃತಿಕ ಮತ್ತು ನೈಸರ್ಗಿಕ ವಿಚಾರಗಳ ಬಗೆಗಿನ ರೋಚಕ ಸನ್ನಿವೇಶಗಳನ್ನು ಪ್ರಸಾರ ಮಾಡುವ, ವನ್ಯ ಜಗತ್ತಿನ ಅನೇಕ ಹೊಸ ಹೊಸ ಸಂಗತಿಗಳನ್ನು ತೋರಿಸುವ “ನ್ಯಾಷನಲ್ ಜಿಯಾಗ್ರಫಿ’ ಮತ್ತು “ಡಿಸ್ಕವರಿ’ ವಾಹಿನಿಗಳ ಮಾದರಿಯಲ್ಲೇ ದೇಶಿ ಚಾನೆಲ್ ಸ್ಥಾಪನೆಗೆ ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ.
ದೇಶ ವನ್ಯಜೀವಿಗಳು ಮತ್ತು ಪರಿಸರದ ಬಗ್ಗೆ ಕಾಳಜಿ ಮೂಡಿಸಲು ಕೇಂದ್ರ ಸರ್ಕಾರ ಈ ಪ್ರಯತ್ನಕ್ಕೆ ಮುಂದಾಗಿದೆ ಎಂದು “ದ ಇಂಡಿಯನ್ ಎಕ್ಸ್‌ಪ್ರೆಸ್’ ವರದಿ ಮಾಡಿದೆ. ರಾಷ್ಟ್ರೀಯ ವನ್ಯಜೀವಿ ಕಾರ್ಯಯೋಜನೆ (ಎನ್‌ಡಬ್ಲೂéಎಪಿ) ವರದಿಯಲ್ಲಿ ಈ ಬಗ್ಗೆ ಪ್ರಸ್ತಾಪಿಸಲಾಗಿದೆ. 2018ರಲ್ಲಿ ಕಾರ್ಯಾರಂಭ ಮಾಡಲಿರುವ ಈ ಚಾನೆಲ್, ಮಾಹಿತಿ ಮತ್ತು ಪ್ರಸಾರ ಖಾತೆ ಹಾಗೂ ದೂರದರ್ಶನದ ಸಹಭಾಗಿತ್ವದಲ್ಲಿ ಕಾರ್ಯನಿರ್ವಹಿಸಲಿದೆ. “ನ್ಯಾಷನಲ್ ಜಿಯಾಗ್ರಫಿ’ ಮತ್ತು “ಡಿಸ್ಕವರಿ’ ಭಾರತದ ಹೊರಗಿನ ಸ್ಥಳಗಳ ಬಗ್ಗೆ ಹೆಚ್ಚಾಗಿ ಬಿತ್ತರಿಸಲಾಗುತ್ತಿದೆ. ದೇಶದಲ್ಲಿನ ಜೀವ ಮತ್ತು ಪ್ರಕೃತಿ ವೈವಿಧ್ಯತೆಯನ್ನು ಜನರಿಗೆ ತಿಳಿಯಪಡಿಸಲು ಮತ್ತು ಅದನ್ನು ಸಂರಕ್ಷಿಸುವ ಬಗ್ಗೆ ವಾಹಿನಿಯನ್ನು ಸ್ಥಾಪಿಸುವುದು ಉತ್ತಮ ಎಂದು ರಾಷ್ಟ್ರೀಯ ವನ್ಯಜೀವಿ ಮಂಡಳಿಯ ಸದಸ್ಯ ವಿವೇಕ್ ಮೆನನ್ ಹೇಳಿದ್ದಾರೆ.
ಸಾಮಾಜಿಕ ಆರ್ಥಿಕ ಸನ್ನಿವೇಶವು ಗಮನಾರ್ಹವಾಗಿ ಬದಲಾಗುತ್ತಿದೆ. ಇದು ವನ್ಯಜೀವಿ ಸಂರಕ್ಷಣೆಯ ಮೇಲೂ ಪ್ರಭಾವ ಬೀರುತ್ತಿದೆ. ಹೀಗಾಗಿ ನಿಸರ್ಗದ ಬಗ್ಗೆ ಜಾಗೃತಿ ಮೂಡಿಸುವುದರಿಂದ ಈ ಬದಲಾವಣೆಗಳು ನಿಸರ್ಗ ವಿರೋಧಿಯಾಗದಂತೆ ತಡೆಯಬಹುದು ಎಂದು ಎನ್‌ಡಬ್ಲೂéಎಪಿ ವರದಿಯಲ್ಲಿ ವಿವರಿಸಲಾಗಿದೆ.
ಯಶಸ್ವಿಯಾಗುತ್ತಾ ಚಾನೆಲ್?: ಎನ್‌ಡಬ್ಲೂéಪಿಯಲ್ಲಿ ಚಾನೆಲ್ ಸ್ಥಾಪನೆ ಪ್ರಸ್ತಾಪ ಮಾಡಲಾಗಿದ್ದರೂ, ಈಗಾಗಲೇ ಇಂತಹ ಉದ್ದೇಶದಿಂದ ಸ್ಥಾಪಿಸಿದ ಚಾನೆಲ್‌ಗಳು ಜನರಿಗೆ ಅಷ್ಟೇನೂ ಪ್ರಿಯವಾದಂತಿಲ್ಲ. ದೇಶದ ರೈತರಿಗೆ ಮಾಹಿತಿ ಒದಗಿಸುವ ನಿಟ್ಟಿನಲ್ಲಿ 215ರಲ್ಲಿ ಸ್ಥಾಪಿಸಲಾಗಿದ್ದ ಡಿಡಿ ಕಿಸಾನ್ ವೀಕ್ಷಕರ ಸಂಖ್ಯೆಯಲ್ಲಿ ಭಾರಿ ಕುಸಿತ ಕಾಣುತ್ತಿದೆ. 2016ರ ಫೆಬ್ರವರಿಯಲ್ಲಿ 153 ಲಕ್ಷ ವೀಕ್ಷಕರಿದ್ದರೆ ಡಿಸೆಂಬರ್ ಹೊತ್ತಿಗೆ ವೀಕ್ಷಕರ ಸಂಖ್ಯೆ 58 ಲಕ್ಷಕ್ಕೆ ಕುಸಿದಿದೆ. ಕಳೆದ ವರ್ಷ ಚಾನೆಲ್ ನಿರ್ವಹಣೆಗಾಗಿ 80 ಕೋಟಿ ರೂ. ತೆಗೆದಿಡಲಾಗಿತ್ತು. ಇದರ ಜತೆಗೆ ಚಾನೆಲ್ ಹೈ ಡೆಫಿನಿಶನ್ ಮಾದರಿಯಲ್ಲಿ ಬಿತ್ತರಿಸಲೂ ನಿರ್ಧರಿಸಲಾಗಿದೆ. ಇನ್ನೊಂದೆಡೆ ಈಶಾನ್ಯ ರಾಜ್ಯಗಳನ್ನು ಗಮನದಲ್ಲಿರಿಸಿಕೊಂಡು ಡಿಡಿ ಅರುಣ ಪ್ರಭಾ ಎಂಬ ಚಾನೆಲ್ ಅನ್ನು ಕಳೆದ ಏಪ್ರಿಲ್‌ನಲ್ಲಿ ಘೋಷಿಸಲಾಗಿದೆ.
ಡಿಸ್ಕವರಿಗಿದೆ ಭಾರಿ ವೀಕ್ಷಕರ ಸಂಖ್ಯೆ: ಭಾರತದಲ್ಲಿ ಪರಿಸರ ಹಾಗೂ ವನ್ಯಜೀವಿಗೆ ಸಂಬಂಧಿಸಿದ ವಿಷಯಗಳನ್ನು ವೀಕ್ಷಿಸುವವರ ಸಂಖ್ಯೆ ಸಾಕಷ್ಟಿದೆ. ಈಗಾಗಲೇ ಡಿಸ್ಕವರಿ ಮತ್ತು ನ್ಯಾಷನಲ್ ಜಿಯೋಗ್ರಫಿಕ್ ಚಾನೆಲ್‌ಗಳು ಭಾರಿ ಸಂಖ್ಯೆಯ ವೀಕ್ಷಕರನ್ನು ಹೊಂದಿವೆ. ಆದರೆ ಈ ವೀಕ್ಷಕರನ್ನು ಡಿಡಿ ಪ್ರಕೃತಿಗೆ ತನ್ನದಾಗಿಸಿಕೊಳ್ಳಲು ಸಾಧ್ಯವಾಗುತ್ತದೆಯೇ ಎಂಬುದು ಪ್ರಮುಖ ಸಂಗತಿಯಾಗಿದೆ. ಪರಿಸರ ತಜ್ಞರ ಪ್ರಕಾರ ಅಂತಾರಾಷ್ಟ್ರೀಯ ಚಾನೆಲ್‌ಗಳು ಒದಗಿಸುವ ಉತðಷ್ಟ ಗುಣಮಟ್ಟದ ಕಂಟೆಂಟ್ ಅನ್ನು ಒದಗಿಸುವುದು ಡಿಡಿ ಪ್ರಕೃತಿ ಕಷ್ಟಕರ ಎನ್ನಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ambedkar row: ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜಕೀಯ ಬಿಟ್ಟು ಹೋಗಲಿ ಎಂದ ಲಾಲು ಪ್ರಸಾದ್
ಹೊಸ ವರ್ಷಕ್ಕೆ ಮಾರ್ಗಸೂಚಿ ಬಿಡುಗಡೆ ಮಾಡಿದ ಪೊಲೀಸರು, ಎಲ್ಲಿ…? ಇಲ್ಲಿದೆ ನೋಡಿ ಮಾಹಿತಿ
K.V.Narayana: ವಿಮರ್ಶಕ ಪ್ರೊ.ಕೆ.ವಿ.ನಾರಾಯಣಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
Alert…! ವಿಮಾನಕ್ಕೆ ಬೆದರಿಕೆ ಹಾಕಿದ್ರೆ 1 ಕೋಟಿವರೆಗೆ ದಂಡ ತೆರಲು ಸಿದ್ಧರಾಗಿ!
Supreme Court: ಬಹುಸಂಖ್ಯಾತರಂತೆ ದೇಶ ನಡೀಬೇಕು ಎಂದಿದ್ದ ಜಡ್ಜ್ಗೆ ಕೊಲಿಜಿಯಂ ಛೀಮಾರಿ
MUST WATCH
ಹೊಸ ಸೇರ್ಪಡೆ
Belthangady: ಕುತ್ಲೂರು ನಿವಾಸಿಗಳ ಕೂಗು ಅರಣ್ಯರೋದನ!
Viral Video: ಖ್ಯಾತ ನ್ಯೂಸ್ ಆ್ಯಂಕರ್ ನ ಖಾಸಗಿ ವಿಡಿಯೋ ಲೀಕ್..? ಸಿಕ್ಕಾಪಟ್ಟೆ ವೈರಲ್
Warner-Ashwin; 2024ರಲ್ಲಿ ವಿದಾಯ ಹೇಳಿದ್ದು ಬರೋಬ್ಬರಿ 28 ಕ್ರಿಕೆಟಿಗರು; ಇಲ್ಲಿದೆ ಪಟ್ಟಿ
Hunsur: ಬಸ್ ಡಿಕ್ಕಿಯಾಗಿ ಪಾದಾಚಾರಿ ಸಾವು
Upendra: ʼಯುಐʼಗೆ ಸ್ಯಾಂಡಲ್‌ವುಡ್ ಸಾಥ್; ಉಪೇಂದ್ರ ಚಿತ್ರ ನೋಡಲು ಕಾತುರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.