ಹೊಸ ವ್ಯವಸ್ಥೆಗೆ ಕಂಪೆನಿಗಳ ಸಿದ್ಧತೆ
ಈ ತಿಂಗಳೇ ಕಾರುಗಳ ದರದಲ್ಲಿ ಶೇ.15-ಶೇ.20 ಏರಿಕೆ?
Team Udayavani, Jan 1, 2020, 2:10 AM IST
ಸಾಂದರ್ಭಿಕ ಚಿತ್ರ
ಮುಂಬಯಿ: ಇನ್ನೇನು 3 ತಿಂಗಳಲ್ಲಿ ಹೊಸ ರೀತಿಯ ಪರಿಸರ ಮಾಲಿನ್ಯ ನಿಯಂತ್ರಕ ವ್ಯವಸ್ಥೆ ಇರುವ ಭಾರತ್ ಸ್ಟೇಜ್-6 (ಬಿಎಸ್-6) ನಿಯಮಗಳು ಜಾರಿಗೆ ಬರಲಿವೆ. ಹೀಗಾಗಿ, ಹೋಂಡಾ ಕಾರ್ಸ್ ಇಂಡಿಯಾ, ಟೊಯೋಟಾ ಕಿರ್ಲೊಸ್ಕರ್ ಮತ್ತು ರೆನೋ ಇಂಡಿಯಾ ಜ. 31ರ ಒಳಗಾಗಿ ಬಿಎಸ್-4 ಮಾಲಿನ್ಯ ನಿಯಂತ್ರಕ ವ್ಯವಸ್ಥೆ ಇರುವ ವಾಹನ ಗಳ ಉತ್ಪಾದನೆ ನಿಲ್ಲಿಸಲು ಮುಂದಾಗಿವೆ. ಮಹೀಂದ್ರಾ ಆ್ಯಂಡ್ ಮಹೀಂದ್ರಾ, ಟಾಟಾ ಮೋಟರ್ಸ್ ಕೂಡ ಬಿಎಸ್-4 ವಾಹನಗಳ ಉತ್ಪಾದನೆ ಸ್ಥಗಿತಗೊಳಿಸಿ ಬಿಎಸ್-6 ಮಾದರಿ ವಾಹನ ಉತ್ಪಾದನೆಯತ್ತ ಮುಂದಾಗಿವೆ. ಮಾರುತಿ ಸುಜುಕಿ ಮತ್ತು ಹ್ಯುಂಡೈ ಮೋಟರ್ಸ್ ಇಂಡಿಯಾ ಈಗಾಗಲೇ ಬಿಎಸ್-6 ಎಂಜಿನ್‌ಗಳನ್ನು ಕೆಲ ಹೊಸ ಕಾರುಗಳಲ್ಲಿ ಅಳವಡಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡಿವೆ. ಮಾರುತಿ ವತಿಯಿಂದ ಈಗಾಗಲೇ ಎಂಟು ಮಾದರಿ ವಾಹನಗಳಲ್ಲಿ ಹೊಸ ವ್ಯವಸ್ಥೆ ಅಳವಡಿಕೆಯಾಗಿದೆ.
ಡಿಸೆಂಬರ್-ಜನವರಿ ಅವಧಿಗೆ ಟೊಯೋ ಟಾದಲ್ಲಿ ಶೇ.30-40, ಹೋಂಡಾದಲ್ಲಿ ಶೇ.30- 50, ಮಹೀಂದ್ರಾದಲ್ಲಿ ಶೇ.30, ಟಾಟಾ ಮೋಟ ರ್ಸ್‌ನಲ್ಲಿ ಶೇ.20ರಷ್ಟು ಪ್ರಯಾ ಣಿಕ ವಾಹನಗಳ ಉತ್ಪಾದನೆಗಳನ್ನು ಕಡಿಮೆ ಮಾಡಲು ನಿರ್ಧ ರಿಸಿವೆ. ಟೊಯೋಟಾ ವಕ್ತಾ ರರು ನೀಡಿದ ಮಾಹಿತಿ ಪ್ರಕಾರ ಮುಂದಿನ ದಿನ ಗಳಲ್ಲಿ ಸಂಸ್ಥೆ ಬಿಎಸ್-6 ವ್ಯವಸ್ಥೆ ಹೊಂದಿ ರುವ ಕಾರುಗಳನ್ನು ಉತ್ಪಾದಿಸಲಿದೆ. ಹೊಸ ವ್ಯವಸ್ಥೆ ಜಾರಿಗೆ ಬರು ವುದರಿಂದ ವಾಹನಗಳ ದರದಲ್ಲಿ ಶೇ.15- ಶೇ. 20ರಷ್ಟು ಏರಿಕೆಯಾಗ ಲಿದೆ ಎಂಬ ಅಂಶ ವನ್ನೂ ಗ್ರಾಹಕರು ಅರಿತು ಕೊಂಡಿದ್ದಾರೆ ಎಂದು ಅವರು ಹೇಳಿದ್ದಾರೆ. ಜನವರಿ ಅಂತ್ಯಕ್ಕೆ ಹೋಂಡಾ ಕಾರ್ಸ್‌ನ ಮೊದಲ ಬಿಎಸ್-4 ಎಂಜಿನ್ ಇರುವ ಕಾರಿನ ಉತ್ಪಾದನೆಯನ್ನು ನಿಲ್ಲಿಸಲಾಗು ತ್ತದೆ ಎಂದು ಮಾರುಕಟ್ಟೆ ವಿಭಾ ಗದ ನಿರ್ದೇಶಕ ರಾಜೇಶ್ ಗೋಯಲ್ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Coconut: ಕೊಬ್ಬರಿಯ ಕನಿಷ್ಠ ಬೆಂಬಲ ಬೆಲೆ 422 ರೂ. ಹೆಚ್ಚಳ: ಕೇಂದ್ರ ಸಂಪುಟ
laws: ಕಠಿಣ ಕಾಯ್ದೆ ಇರುವುದು ಸ್ತ್ರೀ ರಕ್ಷಣೆಗೆ, ದುರ್ಬಳಕೆ ಸಲ್ಲ: ಸುಪ್ರೀಂ ಕೋರ್ಟ್
ಡಿ. 26: ಶಬರಿಮಲೆಯಲ್ಲಿ ಮಂಡಲ ಪೂಜೆ
BJP ಪೂರ್ವಾಂಚಲಿಗಳನ್ನು ರೋಹಿಂಗ್ಯಾಗಳೆಂದು ಮತಗಳನ್ನು ಅಳಿಸುತ್ತಿದೆ: ಕೇಜ್ರಿವಾಲ್ ಆರೋಪ
Gold & Cash: ಕಾಡಿನ ಬಳಿ ನಿಲ್ಲಿಸಿದ್ದ ಕಾರಿನಲ್ಲಿ 52 ಕೆ.ಜಿ ಚಿನ್ನ, 9 ಕೋಟಿ ನಗದು ಪತ್ತೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Coconut: ಕೊಬ್ಬರಿಯ ಕನಿಷ್ಠ ಬೆಂಬಲ ಬೆಲೆ 422 ರೂ. ಹೆಚ್ಚಳ: ಕೇಂದ್ರ ಸಂಪುಟ
laws: ಕಠಿಣ ಕಾಯ್ದೆ ಇರುವುದು ಸ್ತ್ರೀ ರಕ್ಷಣೆಗೆ, ದುರ್ಬಳಕೆ ಸಲ್ಲ: ಸುಪ್ರೀಂ ಕೋರ್ಟ್
Daily Horoscope: ಈ ರಾಶಿಯವರಿಗಿಂದು ಅನಿರೀಕ್ಷಿತ ಮೂಲದಿಂದ ಧನಪ್ರಾಪ್ತಿ
Mangaluru: ಬಾಲಕಿ, ಮಹಿಳೆಯ ವೀಡಿಯೋ ಚಿತ್ರೀಕರಣ: ಆರೋಪಿಗೆ 5 ವರ್ಷಗಳ ಜೈಲು ಶಿಕ್ಷೆ
World Meditation Day; ಶರೀರಕ್ಕೆ ಊಟ, ಆತ್ಮಕ್ಕೆ ಧ್ಯಾನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.