ಆಡಳಿತವನ್ನು ಹೋಲಿಕೆ ಮಾಡಿ ನೋಡಿ
Team Udayavani, Feb 26, 2018, 10:10 AM IST
ಪುದುಚೇರಿ: ಕಾಂಗ್ರೆಸ್ ನಾಲ್ಕು ದಶಕದ ಆಡಳಿತವನ್ನು ಎನ್‌ಡಿಎ ಸರಕಾರದ 48 ತಿಂಗಳ ಆಡಳಿತದೊಂದಿಗೆ ಹೋಲಿಕೆ ಮಾಡುವಂತೆ ಜನರಿಗೆ ಹೇಳಲಾಗುತ್ತಿದೆ. ಬುದ್ಧಿವಂತರು ಕಾಂಗ್ರೆಸ್ ಏನನ್ನು ಸಾಧಿಸಿದೆ ಮತ್ತು ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರ ಏನನ್ನು ಸಾಧಿಸಿದೆ ಎಂದು ಹೋಲಿಕೆ ಮಾಡಿ ಚರ್ಚಿಸಬಹುದು ಎಂದು ಪ್ರಧಾನಿ ನರೇಂದ್ರ ಮೋದಿ ಪುದುಚೇರಿಯಲ್ಲಿ ಕಿಡಿ ಕಾರಿದ್ದಾರೆ.
ಅಲ್ಲದೆ ಕೇಂದ್ರಾಡಳಿತ ಪ್ರದೇಶ ಪುದುಚೇರಿ ಕಾಂಗ್ರೆಸ್ ಸಂಸ್ಕೃತಿಯ ಸಂತ್ರಸ್ತ ಪ್ರದೇಶವಾಗಿದೆ. ಮೂಲಸೌಕರ್ಯ ಕಳಪೆ ಯಾಗಿದೆ. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಕರ್ನಾಟ ಕ ದಲ್ಲಿ ಬಿಜೆಪಿ ಅಧಿಕಾರಕ್ಕೇರಲಿದ್ದು, ಪುದುಚೇರಿಯಲ್ಲಿ ವಿ.ನಾರಾ ಯ ಣಸ್ವಾಮಿ ಸರಕಾರವನ್ನು ಮಾತ್ರ ಕಾಂಗ್ರೆಸ್ ಹೊಂದಿರಲಿದೆ. ಜೂನ್‌ನ ನಂತರ ನಾರಾಯಣಸ್ವಾಮಿ ಒಂದು ಉದಾಹರಣೆಯಾಗಿ ನಿಲ್ಲುತ್ತಾರೆ ಎಂದು ಮೋದಿ ವ್ಯಂಗ್ಯವಾಡಿದರು.
ಪುದುಚೇರಿಯಲ್ಲಿ ಅರೋವಿಲ್ಲೆ ಇಂಟರ್‌ನ್ಯಾಷನಲ್ ಟೌನ್‌ಶಿಪ್‌ನ ಸ್ವರ್ಣ ಮಹೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮೋದಿ ಮಾತನಾಡಿದರು. ವಿಶ್ವದ ಹಲವು ಧರ್ಮಗಳು ಇಲ್ಲಿ ಹುಟ್ಟಿವೆ. ಅಷ್ಟೇ ಅಲ್ಲ, ಅವು ಜೀವನದ ವಿವಿಧ ಘಟ್ಟದಲ್ಲಿ ಜನರನ್ನು ಧಾರ್ಮಿಕತೆಯತ್ತಪ್ರೋತ್ಸಾಹಿಸಿವೆ. ಅರವಿಂದರ ಧಾರ್ಮಿಕ ನಾಯಕತ್ವ ಇಂದಿಗೂ ನಮ್ಮಲ್ಲಿ ಮಹತ್ವ ಪಡೆದಿದೆ ಎಂದು ಅವರು ಹೇಳಿದರು. ಅರವಿಂದರ ಸಿದ್ಧಾಂತವನ್ನೇ ಆಧರಿಸಿದ ಅರೋವಿಲ್ಲೆ ಟೌನ್‌ಶಿಪ್ 1968ರಲ್ಲಿ ಸ್ಥಾಪನೆಯಾಗಿ, 124 ದೇಶಗಳಲ್ಲಿ ಅಸ್ತಿತ್ವ ಹೊಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
HMP: ಮತ್ತಿಬ್ಬರು ಮಕ್ಕಳಲ್ಲಿ ಎಚ್‌ಎಂಪಿ ವೈರಸ್: ದೇಶದಲ್ಲಿ 7ಕ್ಕೇರಿದ ಕೇಸ್
Assam: ಕಲ್ಲಿದ್ದಲು ಗಣಿ ಒಳಗೆ ಪ್ರವಾಹ: 3 ಸಾವು, 6 ಕಾರ್ಮಿಕರು ನಾಪತ್ತೆ!
Life threat: ಸಲ್ಮಾನ್ ಮನೆ ಬಾಲ್ಕನಿಗೆ ಬುಲೆಟ್‌ಪ್ರೂಫ್ ಗಾಜು
GDP: ಈ ವರ್ಷ ಶೇ.6.4ರಷ್ಟು ಜಿಡಿಪಿ ಪ್ರಗತಿ ನಿರೀಕ್ಷೆ: 4 ವರ್ಷಗಳ ಕನಿಷ್ಠ
Car Crash: ಕಾರು ರೇಸ್ ತರಬೇತಿ ವೇಳೆ ನಟ ಅಜಿತ್ ಕುಮಾರ್ ಕಾರು ಅಪಘಾತ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Waqf Report: ಅಮಿತ್ ಶಾ ಅಂಗಳಕ್ಕೆ ಭಿನ್ನರ ವಕ್ಫ್ ವರದಿ: ಕಿರಣ್ ರಿಜಿಜು ಮೂಲಕ ಸಲ್ಲಿಕೆ
Udupi:ಗೀತಾರ್ಥ ಚಿಂತನೆ 149: ಜಗತ್ತಿನಲ್ಲಿ ಇಷ್ಟೊಂದು ವ್ಯತ್ಯಾಸವೇಕೆ? ಪ್ರಶ್ನೆಗುತ್ತರವಿಲ್ಲ
ಮಮ್ತಾಜ್ ಅಲಿ ಆತ್ಮಹ*ತ್ಯೆ ಪ್ರಚೋದನೆ ಆರೋಪ: ಆರೋಪಿಗಳ ವಿರುದ್ದ ಆರೋಪ ಪಟ್ಟಿ ಸಲ್ಲಿಕೆ
Udupi: ಅವಕಾಶಗಳ ಸದ್ಬಳಕೆಗೆ ಮಹಿಳೆಯರು ಹಿಂಜರಿಯಬಾರದು: ಪ್ರಜ್ವಲಾ
Train; ಗೋಮಟೇಶ್ವರ ಎಕ್ಸ್‌ಪ್ರೆಸ್ ಮಂಗಳೂರು ಸೆಂಟ್ರಲ್‌ಗೆ ವಿಸ್ತರಿಸಲು ಕ್ಯಾ| ಚೌಟ ಪತ್ರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.