ಕೋವಿಡ್ 19 : ಸೋಂಕು ನಿವಾರಣೆಗೆ ಏಳು ದಿನ ಲಕ್ಷದ್ವೀಪದಲ್ಲಿ ಲಾಕ್ ಡೌನ್ ವಿಸ್ತರಣೆ
Team Udayavani, May 31, 2021, 9:22 PM IST
ಕೊಚ್ಚಿ: ಕೋವಿಡ್ ಸೋಂಕಿನ ಪ್ರಮಾಣ ಹಠಾತ್ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಲಕ್ಷದ್ವೀಪದಲ್ಲಿ ಒಂದು ವಾರ ಸಂಪೂರ್ಣ ಲಾಕ್ ಡೌನ್ ವಿಸ್ತರಿಸಲಾಗಿದೆ.
ದ್ವೀಪಗಳಲ್ಲಿ ಹೆಚ್ಚುತ್ತಿರುವ ಕೋವಿಡ್ 19 ಸೋಂಕಿನ ಪ್ರಕರಣಗಳನ್ನು ಪರಿಗಣಿಸಿ ಲಕ್ಷದ್ವೀಪ ಆಡಳಿತವು ಇಂದಿನಿಂದ(ಸೋಮವಾರ, ಮೇ 31) ಏಳು ದಿನಗಳವರೆಗೆ ಸಂಪೂರ್ಣ ಲಾಕ್ ಡೌನ್ ನನ್ನು ವಿಸ್ತರಣೆ ಮಾಡಿ ಆದೇಶ ಹೊರಡಿಸಿದೆ.
ಇದನ್ನೂ ಓದಿ : 50ಕ್ಕೂ ಹೆಚ್ಚು ಪಾಸಿಟಿವ್ ಪ್ರಕರಣಗಳಿರುವ ಗ್ರಾಮ 5ದಿನ ಲಾಕ್‌ಡೌನ್: ಉಡುಪಿ ಜಿಲ್ಲಾಧಿಕಾರಿ
ಕಳೆದ ಸೋಮವಾರ(ಮೇ 24)ದಂದು ಒಂದು ವಾರ ಸಂಪೂರ್ಣ ಲಾಕ್ ಡೌನ್ ನನ್ನು ಲಕ್ಷ ದ್ವೀಪ ಆಡಳಿತ ಘೋಷಣೆ ಮಾಡಿ ನಿರ್ಬಂಧಗಳನ್ನು ಹೇರಿತ್ತು.
ದ್ವೀಪಗಳಲ್ಲಿ ಸೋಂಕು ಹೆಚ್ಚಾಗಿ ಕಣಿಸಿಕೊಳ್ಳುತ್ತಿರುವ ಹಿನ್ನಲೆಯಲ್ಲಿ ಲಕ್ಷದ್ವೀಪದ ಜಿಲ್ಲಾಧಿಕಾರಿ ಎಸ್. ಅಸ್ಕರ್ ಅಲಿ, ಕಿಲ್ತಾನ್, ಚೆಟ್ಲಾಥ್, ಬಿತ್ರಾ, ಕದ್ಮಠ್ ಮತ್ತು ಅಗಟ್ಟಿ ಸೇರಿದಂತೆ ಐದು ದ್ವೀಪಗಳಲ್ಲಿ ರಾತ್ರಿ ಕರ್ಫ್ಯೂ ಘೋಷಣೆ ಮಾಡಿದ್ದಾರೆ.
ಲಾಕ್ ಡೌನ್ ನನ್ನು ವಿಸ್ತರಣೆ ಮಾಡಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಕೋವಿಡ್ ಸೋಂಕನ್ನು ನಿಯಂತ್ರಣ ಮಾಡಲು , ಜನರ ಅನಗತ್ಯ ಓಡಾಟವನ್ನು ನಿಲ್ಲಿಸಲು, ಕೋವಿಡ್ ಟೆಸ್ಟಿಂಗ್ ಸಾಮರ್ಥವನ್ನು ಏರಿಕೆ ಮಾಡಲು, ಗೃಹ ಸಚಿವಾಲಯದ ಕೋವಿಡ್ 19 ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಪ್ರಸ್ತುತ ಪರಿಸ್ಥಿತಿಯು ಅಗತ್ಯವಾಗಿದೆ ಎಂದವರು ಹೇಳಿದ್ದಾರೆ.
‘ನೀರು ಸರಬರಾಜು, ಅಗ್ನಿಶಾಮಕ, ವಿದ್ಯುತ್, ಪೊಲೀಸ್, ಆರೋಗ್ಯ, ವಿಪತ್ತು ನಿರ್ವಹಣೆ, ಹಡಗು ಸಾಗಣೆ, ಅತಿಥಿ ಗೃಹ, ಬಿಎಸ್‌ಎನ್‌ಎಲ್, ಕೋವಿಡ್-19 ಅನ್ನು ನಿರ್ವಹಿಸುವ ಜನರು, ಭಾರತೀಯ ನೌಕಾಪಡೆ ಮತ್ತು ಕರಾವಳಿ ಪಡೆ ಸೇರಿದಂತೆ ಹಲವು ಅಗತ್ಯ ಸೇವೆಗಳಿಗೆ ಮಾತ್ರ ಅವಕಾಶ ನೀಡಲಾಗಿದ್ದು, ಇವರೆಲ್ಲರಿಗೂ ಗುರುತಿನ ಚೀಟಿ ಹಾಗೂ ಕೋವಿಡ್ ನೆಗೆಟಿವ್ ರಪೋರ್ಟ್ ಅಗತ್ಯ’ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಇನ್ನು, ಲಾಕ್ ಡೌನ್ ನ ‘ನಿಯಮ ಉಲ್ಲಂಘನೆಯನ್ನು ಪ್ರಾಧಿಕಾರವು ಗಂಭೀರವಾಗಿ ಪರಿಗಣಿಸುತ್ತದೆ ಮತ್ತು ವಿಪತ್ತು ನಿರ್ವಹಣಾ ಕಾಯ್ದೆ 2015 ಮತ್ತು ಭಾರತೀಯ ದಂಡ ಸಂಹಿತೆಗೆ ಸಂಬಂಧಿತ ವಿಭಾಗಗಳ ಪ್ರಕಾರ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು’ ಎಂದು ಹೇಳಿದೆ.
ದ್ವೀಪಗಳಲ್ಲಿ 2,006 ಸಕ್ರಿಯ ಪ್ರಕರಣಗಳಿವೆ. ಕವರಟ್ಟಿ, ಕಲ್ಪೇನಿ, ಆಂಡ್ರೊತ್, ಅಮಿನಿ ಮತ್ತು ಮಿನಿಕೋಯ್ ಗಳಲ್ಲಿ ಪಾಸಿಟಿವಿಟಿ ರೇಟ್ ಹೆಚ್ಚಳ ಇರುವುದರಿಂದ. ಈ ನಿರ್ಧಾರಕ್ಕೆ ಬರಲಾಗಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ : ಪಾಸಿಟಿವಿಟಿ ರೇಟ್ ಶೇ.5ರೊಳಗೆ ಬರುವವರೆಗೆ ಲಾಕ್ ಡೌನ್ ಮುಂದುವರಿಸಲು ಸಿದ್ದರಾಮಯ್ಯ ಆಗ್ರಹ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
Adani ವಿರುದ್ಧ ಲಂಚ ಆರೋಪ; ಏನಿದು ಪ್ರಕರಣ? ಅಮೆರಿಕದಲ್ಲಿ ಪ್ರಕರಣ ಏಕೆ?
Mahayuti ಗೆಲುವು: ಆ್ಯಕ್ಸಿಸ್ ಮೈ ಇಂಡಿಯಾ, ಚಾಣಕ್ಯ ಸಮೀಕ್ಷೆ ಭವಿಷ್ಯ
Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.