![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Dec 10, 2022, 1:12 PM IST
ನವದೆಹಲಿ: ಅನಗತ್ಯ ಗರ್ಭಧಾರಣೆಯನ್ನು ತಪ್ಪಿಸುವ ನಿಟ್ಟಿನಲ್ಲಿ 18-25 ರಿಂದ ವರ್ಷದೊಳಗಿನ ಯುವ ಜನತೆಗೆ ಉಚಿತವಾಗಿ ಕಾಂಡೋಮ್ ನೀಡಲಾಗುವುದು ಫ್ರಾನ್ಸ್ ಸರ್ಕಾರ ಗುರುವಾರ (ಡಿ.8 ರಂದು) ಘೋಷಿಸಿದೆ.
ಗರ್ಭನಿರೋಧಕಕ್ಕೆ ಇದೊಂದು ಒಂದು ಸಣ್ಣ ಕ್ರಾಂತಿ ಎಂದು ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್ ಫಾಂಟೈನ್-ಲೆ-ಕಾಮ್ಟೆಯಲ್ಲಿ ಯುವ ಜನರೊಂದಿಗೆ ನಡೆದ ಆರೋಗ್ಯ ವಿಚಾರದ ಚರ್ಚೆಯ ವೇಳೆ ಮಾಧ್ಯಮಗಳ ಮೂಲಕ ಹೇಳಿದ್ದಾರೆ.
ಇದನ್ನೂ ಓದಿ: ಕ್ರೋವೇಷಿಯಾ ಆಘಾತ… ಬ್ರೆಜಿಲ್ ಪರ ಆಡುವುದನ್ನೇ ನಿಲ್ಲಿಸುತ್ತಾರಾ ನೇಯ್ಮರ್
ಫ್ರಾನ್ಸ್ ಸರ್ಕಾರವು ಈ ವರ್ಷದಿಂದ 25 ವರ್ಷದೊಳಗಿನ ಎಲ್ಲಾ ಮಹಿಳೆಯರಿಗೆ ಉಚಿತ ಜನನ ನಿಯಂತ್ರಣ ಮಾತ್ರೆಯನ್ನು ನೀಡಲು ಪ್ರಾರಂಭಿಸಿದೆ. ಈ ಯೋಜನೆಯನ್ನು ವಿಸ್ತರಿಸಿ 18 ವರ್ಷದವರನ್ನು ಗುರಿಯಾಗಿಸಿಕೊಂಡು ಉಚಿತ ಕಾಂಡೋಮ್ ನೀಡುವ ಯೋಜನೆಯನ್ನು ಜಾರಿಗೊಳಿಸಲಾಗುತ್ತಿದೆ ಎಂದು ಅಧ್ಯಕ್ಷರು ಹೇಳಿದ್ದಾರೆ.
ಲೈಂಗಿಕವಾಗಿ ಹರಡುವ ರೋಗಗಳನ್ನು( ಎಸ್ ಟಿಡಿ ಕಾಯಿಲ) ತಡೆಯುವ ಉದ್ದೇಶದಿಂದ ಜ.1 2023 ರಿಂದ ಎಲ್ಲಾ ಫಾರ್ಮಸಿಗಳಲ್ಲಿ 18 -25 ವರ್ಷದ ಯುವ ಜನರಿಗೆ ಉಚಿತವಾಗಿ ಕಾಂಡೋಮ್ ಗಳನ್ನು ನೀಡಲಾಗುವುದು ಎಂದು ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯೆಲ್ ಹೇಳಿದ್ದಾರೆ.
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
You seem to have an Ad Blocker on.
To continue reading, please turn it off or whitelist Udayavani.