ವಂಶಾಡಳಿತ,ವಿಕಾಸ ನಡುವಿನ ಸಂಘರ್ಷ
Team Udayavani, Nov 28, 2017, 6:35 AM IST
ಅಹ್ಮದಾಬಾದ್: “”ಈ ಬಾರಿಯ ಗುಜರಾತ್ ವಿಧಾನಸಭಾ ಚುನಾವಣೆ ಅಭಿವೃದ್ಧಿ ಮೇಲಿನ ನಂಬಿಕೆ ಹಾಗೂ ರಾಜವಂಶ ರಾಜಕೀಯದ ನಡುವಿನ ಸಂಘರ್ಷ” ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಸೋಮವಾರ ಬೆಳಗ್ಗೆ ಇಲ್ಲಿನ ಕಛ… ಜಿಲ್ಲೆಯ ಬುಜ್‌ನಲ್ಲಿ ನಡೆದ ಚುನಾವಣಾ ರ್ಯಾಲಿಯಲ್ಲಿ ಪಾಲ್ಗೊಂಡು ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ವಿರುದ್ಧ ನಿರಂತರ ಟೀಕೆ ಮಾಡಿಕೊಂಡು ಬಂದ ಕಾಂಗ್ರೆಸ್‌ಗೆ ನೀಡಿದ ಎದುರೇಟಿನ ಪರಿ ಹೀಗಿತ್ತು. ಭಾಷಣದುದ್ದಕ್ಕೂ ವಿಪಕ್ಷ ಕಾಂಗ್ರೆಸ್ ವಿರುದ್ಧ ವಾಗಾœಳಿ ನಡೆಸಿದರು. ಡಿ. 9ರಂದು ರಾಜ್ಯ ವು ಮೊದಲ ಹಂತದ ಮತ ದಾನಕ್ಕೆ ಸಾಕ್ಷಿಯಾ ಗಲಿರುವ ಹಿನ್ನೆಲೆಯಲ್ಲಿ ತಮ್ಮ ತವರು ರಾಜ್ಯದಲ್ಲಿ ಮೋದಿ ಎರಡು ದಿನಗಳ ಪ್ರಚಾರವನ್ನು ಆರಂಭಿಸಿದರು.
ಮುಂಬಯಿ ದಾಳಿಯ ಸಂಚುಕೋರ ಹಫೀಜ್ ಸಯೀದ್‌ನನ್ನು ಪಾಕಿಸ್ತಾನ ಇತ್ತೀಚೆಗೆ ಗೃಹ ಬಂಧನದಿಂದ ಬಿಡುಗಡೆ ಮಾಡಿದ್ದಕ್ಕೆ ಮೋದಿಗೆ ಟಾಂಗ್ ನೀಡಿದ್ದ ರಾಹುಲ್ ಗಾಂಧಿಗೆ ಪ್ರತ್ಯುತ್ತರ ನೀಡಿದ ಪ್ರಧಾನಿ ಮೋದಿ, “”ಹಫೀಜ್ ಬಿಡುಗಡೆಗೆ ಕಾಂಗ್ರೆಸ್ಸಿಗರೇ ಚಪ್ಪಾಳೆ ತಟ್ಟಿದ್ದಾರೆ. ಡೊಕ್ಲಾಂ ವಿವಾದದ ವೇಳೆ, ಚೀನಾ ರಾಯಭಾರಿಯನ್ನು ಭೇಟಿಯಾಗಿ (ರಾಹುಲ್) ಆಲಂಗಿಸಿ ಬಂದವರೂ ಕಾಂಗ್ರೆಸ್ಸಿಗರೆ. ಇದೆಲ್ಲವೂ ಭಾರತೀಯ ಸೈನಿಕರಿಗೆ ಮಾಡಿದ ದ್ರೋಹ ಎಂದೆನಿಸಲಿಲ್ಲವೇ? ಈಗ ನಾನು ಆಲಂಗಿಸಿದ್ದನ್ನು ಮಾತ್ರ ಏಕೆ ಪ್ರಶ್ನಿಸುತ್ತಿದ್ದೀರಿ?” ಎಂದು ಛಾಟಿ ಬೀಸಿದರು.
ಹಫೀಜ್ ಬಿಡುಗಡೆ ಬೆನ್ನಲ್ಲೇ ಟ್ವೀಟ್ ಮಾಡಿದ್ದ ರಾಹುಲ್, “”ನೀವು ಆಲಂಗಿಸಿದ್ದ ಟ್ರಂಪ್ ಕೈಯ್ಯಲ್ಲಿ ಹಫೀಜ್ ಬಿಡುಗಡೆ ತಡೆಯಲು ಸಾಧ್ಯವಾಗಲಿಲ್ಲ. ಬಹುಶಃ ಟ್ರಂಪ್ ಅವರಿಗೆ ನಿಮ್ಮ ಮತ್ತಷ್ಟು ಅಪ್ಪುಗೆ ಬೇಕಾಗಬಹುದು” ಎಂದು ಛೇಡಿಸಿದ್ದರು.
ಇನ್ನು, ರಾಫೆಲ್ ಯುದ್ಧ ವಿಮಾನ ಖರೀದಿ ಒಪ್ಪಂದ ಬದಲಾಯಿಸಿದ್ದಕ್ಕೆ ಯಾರಿಗೆ ಲಾಭ ಮಾಡಲು ಈ ಒಪ್ಪಂದ ಬದಲಾಯಿಸಿದ್ದೀರಿ ಎಂದು ಇತ್ತೀಚೆಗೆ ರಾಹುಲ್ ಗಾಂಧಿ ಕೇಳಿದ್ದ ಪ್ರಶ್ನೆಗೂ ಉತ್ತರಿಸಿದ ಅವರು, “”ಚೀನಾ ರಾಯಭಾರಿಯನ್ನು ನೀವು ಯಾರ ಲಾಭಕ್ಕಾಗಿ ಅಪ್ಪಿಕೊಂಡಿದ್ದಿರಿ?” ಎಂದು ಮರುಪ್ರಶ್ನೆ ಹಾಕಿದರು.
ಅಮೆರಿಕ ಬಳಿಕ ಪಾಕ್ ವಿರುದ್ಧ ಫ್ರಾನ್ಸ್ ಕೆಂಡ
2008ರ ಮುಂಬಯಿ ದಾಳಿ ರೂವಾರಿ, ನಿಷೇಧಿತ ಉಗ್ರ ಸಂಘಟನೆ ಜಮಾತ್ ಉಲ್ ದಾವತ್‌ನ ಮುಖ್ಯಸ್ಥ ಹಫೀಸ್ ಸಯೀದ್ ಬಿಡುಗಡೆಗೆ ಸಂಬಂಧಿಸಿದಂತೆ ಅಮೆರಿಕ ಪಾಕಿಸ್ತಾನಕ್ಕೆ ತನ್ನ ಅಸಮಾಧಾನವನ್ನು ತಿಳಿಸಿದ ಬೆನ್ನಲ್ಲೇ, ಫ್ರಾನ್ಸ್ ಕೂಡ ಈ ಕುರಿತು ಸಿಟ್ಟು ಹೊರಹಾಕಿದೆ. ಸರ್ಕಾರ ಸಯೀದ್ ಬಿಡುಗಡೆ ಕುರಿತು ತನ್ನ ಅತಂಕವನ್ನು ಪಾಕಿಸ್ತಾನಕ್ಕೆ ತಿಳಿಸಿದೆ ಎಂದು ಫ್ರಾನ್ಸ್ ರಾಜತಾಂತ್ರಿಕ ಮೂಲಗಳು ತಿಳಿಸಿವೆ. ಜೊತೆಗೆ, ಫ್ರಾನ್ಸ್ ಮತ್ತು ಭಾರತ ಜಂಟಿಯಾಗಿ ಭಯೋತ್ಪಾದನೆ ವಿರುದ್ಧ ಹೋರಾಡುವುದನ್ನು ಮುಂದುವರಿಸುತ್ತೇವೆ. 2018ರಲ್ಲಿ ಪ್ರಾನ್ಸ್ ಅಧ್ಯಕ್ಷ ಎಮ್ಯಾನ್ಯುಅಲ್ ಮ್ಯಾಕ್ರಾನ್ ಭಾರತ ಭೇಟಿ ಮಾಡುವ ಸಂದರ್ಭ “ಭಯೋತ್ಪಾದಕ ಶಕ್ತಿಗಳನ್ನು ಹಿಮ್ಮೆಟ್ಟಲು ಪರಸ್ಪರ ಸಹಕಾರ ಉತ್ತಮಪಡಿಸುವುದೇ ಮುಖ್ಯ ವಿಷಯವಾಗಲಿದೆ’ ಎಂದಿದೆ.
ನಾನು ಮಾರಿದ್ದು ಟೀಯನ್ನು, ದೇಶವನ್ನಲ್ಲ!
ತಮ್ಮನ್ನು ಚಹಾವಾಲಾ ಎಂದು ಟೀಕಿಸಿರುವ ಕಾಂಗ್ರೆಸ್ ವಿರುದ್ಧ ಸೋಮವಾರ ಮಧ್ಯಾಹ್ನ ರಾಜ್‌ಕೋಟ್‌ನಲ್ಲಿ ನಡೆದ ರ್ಯಾಲಿ ಭಾಷಣದಲ್ಲಿ ಪ್ರಧಾನಿ ಮೋದಿ ಪರೋಕ್ಷವಾಗಿ ಕುಟುಕಿದರು. “”ನಾನು ಬಡತನದ ಹಿನ್ನೆಲೆಯಿಂದ ಬಂದವನೆಂಬ ಕಾರಣಕ್ಕೆ ಕಾಂಗ್ರೆಸ್ ನನ್ನನ್ನು ಇಷ್ಟಪಡುವುದಿಲ್ಲ. ಹೌದು, ನಾನು ಹಿಂದೆ ಟೀ ಮಾರುತ್ತಿದ್ದೆ. ಆದರೆ, ದೇಶವನ್ನು ಮಾರಿರಲಿಲ್ಲ” ಎಂದು ತಿರುಗೇಟು ನೀಡಿದರು. ಇತ್ತೀಚೆಗೆ, ಸಾಮಾಜಿಕ ಜಾಲತಾಣದಲ್ಲಿ ಮೆಮೆಯೊಂದನ್ನು ಬಿಡುಗಡೆ ಮಾಡಿದ್ದ ಕಾಂಗ್ರೆಸ್, ಅದರಲ್ಲಿ ಮೋದಿ ಚಹಾ ಮಾರುತ್ತಿದ್ದ ದಿನಗಳನ್ನು ಅಪಹಾಸ್ಯ ಮಾಡಿತ್ತು.
ಮೋದಿ ಮ್ಯಾರಥಾನ್
ಗುಜರಾತ್ ಪ್ರಚಾರಕ್ಕೆ ಧುಮುಕಿರುವ ಪ್ರಧಾನಿ ಮೋದಿ, ಸೋಮವಾರ ನಾಲ್ಕು ಕಡೆ ಬೃಹತ್ ರ್ಯಾಲಿಗಳನ್ನುದ್ದೇಶಿಸಿ ಮಾತನಾಡಿದರು. ಬೆಳಗ್ಗೆ ಕಛ… ಜಿಲ್ಲೆಯ ಬುಜ್‌ನಲ್ಲಿ ಮೊದಲ ರ್ಯಾಲಿ ನಡೆಸಿದ ಅವರು, ಆನಂತರ ರಾಜ್‌ಕೋಟ್‌ನ ಜಸಾªನ್‌ಗೆ ತೆರಳಿ ರ್ಯಾಲಿಯಲ್ಲಿ ಪಾಲ್ಗೊಂಡರು. ಬಳಿಕ ಅಮ್ರೇಲಿಯಲ್ಲಿನ ಬೃಹತ್ ಬಹಿರಂಗ ಸಭೆಯಲ್ಲಿ, ಅಲ್ಲಿಂದ ಸಂಜೆ ಹೊತ್ತಿಗೆ ಸೂರತ್ ಬಳಿಯ ಕಂಡೋದರಾ ಎಂಬಲ್ಲಿ ಮತ್ತೂಂದು ರ್ಯಾಲಿಯಲ್ಲಿ ಭಾಗವಹಿಸಿದರು.
ನ. 29ರಂದು ಮೋದಿಯವರ 2ನೇ ಸುತ್ತಿನ ಪ್ರಚಾರ ಆರಂಭವಾಗಲಿದೆ. ಅಂದು, ಸೋಮನಾ ಥಪುರ ಬಳಿಯ ಮೊರ್ಬಿ, ಪ್ರಾಚಿ ಹಳ್ಳಿಗಳ ಸಮೀಪ ಮೊದಲ ರ್ಯಾಲಿ ನಡೆಯಲಿದೆ. ಅದೇ ದಿನ ಭಾವ್‌ನಗರ್‌ನ ಪಟಿಯಾಲಾ, ದಕ್ಷಿಣ ಗುಜರಾತ್‌ನ ನವ್‌ಸಾರಿಗಳಲ್ಲಿ ರ್ಯಾಲಿಗಳು ನಡೆಯಲಿವೆ. ಸುಮಾರು ಐದಾರು ವಿಧಾನಸಭಾ ಕ್ಷೇತ್ರಗಳಿಗೆ ಒಂದರಂತೆ ಈ ರ್ಯಾಲಿಗಳನ್ನು ಏರ್ಪಡಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Delhi Assembly Elections: ಬಿಜೆಪಿ ಗೆದ್ದರಷ್ಟೇ ದಿಲ್ಲಿ ನಂ.1 ರಾಜಧಾನಿ: ಪ್ರಧಾನಿ ಮೋದಿ
PM ಮೋದಿ ಉದ್ಘಾಟಿಸಿದ್ದೆಲ್ಲ ಆಪ್‌ನ ಜಂಟಿ ಯೋಜನೆಗಳು: ಕೇಜ್ರಿವಾಲ್
Uttar Pradesh: ಮಹಾಕುಂಭದಲ್ಲಿ ಮುಸ್ಲಿಮರ ಮತಾಂತರ: ಯೋಗಿಗೆ ಮೌಲ್ವಿ ಪತ್ರ
Bhopal: ಭಕ್ತರು ನೀಡಿದ್ದ ದೇಣಿಗೆ ಜತೆಗೆ ಇಸ್ಕಾನ್ ಸಿಬಂದಿ ಪರಾರಿ: ದೂರು
Garlic: ಚೀನದಿಂದ ಕದ್ದು ಸಾಗಿಸುತ್ತಿದ್ದ 300 ಬ್ಯಾಗ್ ಬೆಳ್ಳುಳ್ಳಿ ವಶಕ್ಕೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Delhi Assembly Elections: ಬಿಜೆಪಿ ಗೆದ್ದರಷ್ಟೇ ದಿಲ್ಲಿ ನಂ.1 ರಾಜಧಾನಿ: ಪ್ರಧಾನಿ ಮೋದಿ
PM ಮೋದಿ ಉದ್ಘಾಟಿಸಿದ್ದೆಲ್ಲ ಆಪ್‌ನ ಜಂಟಿ ಯೋಜನೆಗಳು: ಕೇಜ್ರಿವಾಲ್
Uttar Pradesh: ಮಹಾಕುಂಭದಲ್ಲಿ ಮುಸ್ಲಿಮರ ಮತಾಂತರ: ಯೋಗಿಗೆ ಮೌಲ್ವಿ ಪತ್ರ
Bangladesh ನ್ಯಾಯಾಂಗ ಸಿಬಂದಿಯ ಭಾರತದಲ್ಲಿನ ತರಬೇತಿ ರದ್ದು
Bhopal: ಭಕ್ತರು ನೀಡಿದ್ದ ದೇಣಿಗೆ ಜತೆಗೆ ಇಸ್ಕಾನ್ ಸಿಬಂದಿ ಪರಾರಿ: ದೂರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.