ಕಾಂಗ್ರೆಸ್ ವೋಟಲ್ಲಿ ಸುಷ್ಮಾಗೆ ಗೆಲುವು
Team Udayavani, Mar 28, 2018, 9:05 AM IST
ಹೊಸದಿಲ್ಲಿ: ಟ್ವಿಟರ್‌ನಲ್ಲಿ ಸಚಿವೆ ಸುಷ್ಮಾ ಸ್ವರಾಜ್ ವಿರುದ್ಧ ಜನಾಭಿಪ್ರಾಯ ಸೃಷ್ಟಿಸಲು ಹೋದ ಕಾಂಗ್ರೆಸ್ ತೀವ್ರ ಮುಜುಗರಕ್ಕೆ ಒಳಗಾಗಿದೆ. ಏಕೆಂದರೆ, ಕಾಂಗ್ರೆಸ್ ನಡೆಸಿದ ಸಮೀಕ್ಷೆಯಲ್ಲಿ ವಿದೇಶಾಂಗ ಸಚಿವೆಯೇ ಗೆದ್ದಿದ್ದಾರೆ.
ಇರಾಕ್‌ನಲ್ಲಿ ಐಸಿಸ್ ಉಗ್ರರು ಭಾರತೀಯರನ್ನು ಹತ್ಯೆ ಮಾಡಿದ ಘಟನೆ ಸಂಬಂಧ ವಿದೇಶಾಂಗ ಸಚಿವೆ ಸುಷ್ಮಾ ಸ್ಮರಾಜ್ ಇತ್ತೀಚೆಗೆ ಸಂಸತ್‌ನಲ್ಲಿ ನೀಡಿದ್ದ ಹೇಳಿಕೆ ಕುರಿತು ಜನಾಭಿಪ್ರಾಯ ಸಂಗ್ರಹಿಸಲು ಕಾಂಗ್ರೆಸ್ ನಿರ್ಧರಿಸಿತ್ತು. ಅದರಂತೆ, ತನ್ನ ಅಧಿಕೃತ ಟ್ವಿಟರ್ ಖಾತೆಯಾದ ‘INCಇಂಡಿಯಾ’ದಲ್ಲಿ ಸೋಮವಾರ ಬೆಳಗ್ಗೆ 10.49ಕ್ಕೆ ‘ಇರಾಕ್‌ನಲ್ಲಿ 39 ಭಾರತೀಯರು ಮೃತಪಟ್ಟಿರುವ ಘಟನೆಯು ವಿದೇಶಾಂಗ ಸಚಿವೆಯಾಗಿ ಸುಷ್ಮಾ ಸ್ವರಾಜ್ ಅವರ “ದೊಡ್ಡ ವೈಫಲ್ಯ’ ಅನಿಸುವುದಿಲ್ಲವೇ?’ ಎಂದು ಪ್ರಶ್ನಿಸಿತ್ತು. ಇದಕ್ಕೆ ಹೌದು ಅಥವಾ ಇಲ್ಲ ಎಂದು ಉತ್ತರಿಸುವಂತೆ ಪೋಸ್ಟ್ ಹಾಕಿತ್ತು. ಇದು ವೈರಲ್ ಆಗಿ ಸುಮಾರು 3,300 ಮಂದಿ ರಿಟ್ವೀಟ್ ಮಾಡಿದ್ದು, ಒಟ್ಟು 33 ಸಾವಿರ ಮಂದಿ ಓಟ್ ಮಾಡಿದ್ದರು.
ಈ ಪ್ರಶ್ನೆಗೆ ಶೇ.24 ಮಂದಿ “ಹೌದು’ ಎಂದರೆ, ಶೇ.76 ಮಂದಿ ‘ಇಲ್ಲ’ ಎನ್ನುವ ಮೂಲಕ ಸುಷ್ಮಾ ಅವರನ್ನು ಬೆಂಬಲಿಸಿದ್ದಾರೆ. ಅಷ್ಟೇ ಅಲ್ಲದೆ, ಸುಷ್ಮಾರನ್ನು ಬೆಂಬಲಿಸಿ ಅನೇಕರು ಕಾಂಗ್ರೆಸ್ ವಿರುದ್ಧವೇ ಕಮೆಂಟ್‌ಗಳನ್ನು ಹಾಕಿದ್ದಾರೆ. ಈಗ ಸುಷ್ಮಾ ಅವರು, ಕಾಂಗ್ರೆಸ್‌ನ ಸಮೀಕ್ಷೆಯ ಟ್ವೀಟ್ ಅನ್ನು ರಿಟ್ವೀಟ್ ಮಾಡಿದ್ದಾರೆ. ಇದಕ್ಕೂ ಹಲವರಿಂದ ಪ್ರತಿಕ್ರಿಯೆಗಳು ಬಂದಿದೆ.
Do you think the death of 39 Indians in Iraq is Sushma Swaraj’s biggest failure as Foreign Minister? #IndiaSpeaks
— Congress (@INCIndia) March 26, 2018
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ambedkar Remarks: ಕನಸಲ್ಲೂ ಅಂಬೇಡ್ಕರ್‌ರನ್ನು ಅವಮಾನಿಸಿಲ್ಲ: ಅಮಿತ್ ಶಾ
Hydarabad: ಪುಷ್ಪ-2 ಚಿತ್ರದ ಪ್ರದರ್ಶನ ವೇಳೆ ಗಾಯಗೊಂಡಿದ್ದ ಬಾಲಕನ ಸ್ಥಿತಿ ಗಂಭೀರ
ನಾವು ಅಧಿಕಾರಕ್ಕೆ ಬಂದರೆ 60 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ಚಿಕಿತ್ಸೆ: ಕೇಜ್ರಿವಾಲ್
Noida: ಟಾಯ್ಲೆಟಲ್ಲಿ ರಹಸ್ಯ ಕ್ಯಾಮರಾ ಇಟ್ಟಿದ್ದ ಶಾಲಾ ನಿರ್ದೇಶಕ… ಪತ್ತೆ ಹಚ್ಚಿದ ಶಿಕ್ಷಕಿ
Mumbai: ಗೇಟ್‌ವೇ ಆಫ್ ಇಂಡಿಯಾ ಬಳಿ ಮುಳುಗಿದ 67 ಪ್ರಯಾಣಿಕರಿದ್ದ ಬೋಟ್… ರಕ್ಷಣಾ ತಂಡ ದೌಡು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.