ಗುಜರಾತ್ ವಿಧಾನಸಭೆಯಲ್ಲಿ ಬಿಜೆಪಿ-ಕೈ ಶಾಸಕರ ಮಾರಾಮಾರಿ
Team Udayavani, Mar 15, 2018, 7:30 AM IST
ಅಹಮದಾಬಾದ್: ಗುಜರಾತ್ ವಿಧಾನಸಭೆಯಲ್ಲಿ ಪ್ರತಿಪಕ್ಷ ಕಾಂಗ್ರೆಸ್ ಮತ್ತು ಆಡಳಿತಾರೂಢ ಬಿಜೆಪಿ ಶಾಸಕರ ನಡುವೆ ಮಾರಾಮಾರಿ ಸಂಭವಿಸಿದೆ. ಪ್ರತಿಪಕ್ಷ ಕಾಂಗ್ರೆಸ್ ಶಾಸಕ ಅಮರೀಶ್ ದರ್ ಬಿಜೆಪಿ ಶಾಸಕ ಜಗದೀಶ್ ಪಾಂಚಾಲ್‌ಗೆ ಮೈಕ್ರೋಫೋನ್ ಬಳಿ ಇದ್ದ ರಾಡ್‌ನಿಂದ ಹಲ್ಲೆ ನಡೆಸಿದ್ದಾರೆ. ಇದಾದ ಬಳಿಕ ಕೋಲಾಹಲ ಉಂಟಾಗಿದೆ. ಹೀಗಾಗಿ ಕಾಂಗ್ರೆ ಸ್‌ನ ಇಬ್ಬರು ಶಾಸ ಕ ರನ್ನು ಮೂರು ವರ್ಷ ಗಳ ಹಾಗೂ ಒಬ್ಬ ಶಾಸ ಕ ರನ್ನು ಒಂದು ವರ್ಷ ಕಾಲ ಅಮಾನತು ಮಾಡಿ ಸ್ಪೀಕರ್ ರಾಜೇಂದ್ರ ತ್ರಿವೇದಿ ಆದೇಶ ಹೊರಡಿಸಿದ್ದಾರೆ.
ಸದ್ಯ ಗುಜರಾತ್ ವಿಧಾನಸಭೆಯಲ್ಲಿ ಬಜೆಟ್ ಅಧಿವೇಶನ ನಡೆಯುತ್ತಿದ್ದು, ಪ್ರಶ್ನೋತ್ತರ ವೇಳೆಯಲ್ಲಿ ಜಾಮ್‌ನಗರ ಕ್ಷೇತ್ರದ ಕಾಂಗ್ರೆಸ್ ಶಾಸಕ ವಿಕ್ರಮ್ ಮಾಡಮ್ ಅವರು ಮಧ್ಯಪ್ರವೇಶಿಸಿ ಮಾತನಾಡಲು ಮುಂದಾದರು. ಅದಕ್ಕೆ ಸ್ಪೀಕರ್ ರಾಜೇಂದ್ರ ತಿವಾರಿ ಆಕ್ಷೇಪ ವ್ಯಕ್ತಪಡಿಸಿದರು. ಅದಕ್ಕೆ ಕಾಂಗ್ರೆಸ್‌ನ ವಿರ್ಜಿ ಥುಮ್ಮರ್ ಆಕ್ಷೇಪಿಸಿ ಗದ್ದಲವೆಬ್ಬಿಸಿದರು.ಅಮರೇಶ್ ಧರ್ ಜತೆಗೆ ಸದನ ಬಾವಿಗೆ ಬಂದು ಘೋಷಣೆ ಕೂಗುತ್ತಾ ಪ್ರತಿಭಟನೆ ನಡೆಸಿದರು. ಇದರಿಂದ ಕ್ರುದ್ಧಗೊಂಡ ಸ್ಪೀಕರ್ ರಾಜೇಂದ್ರ ತಿವಾರಿ ಅವರನ್ನು ಬುಧವಾರ ಮಟ್ಟಿಗೆ ಸಸ್ಪೆಂಡ್ ಮಾಡಿದರು. ಇದರಿಂದ ಆಕ್ರೋಶಗೊಂಡ ಕಾಂಗ್ರೆಸ್ ಶಾಸಕ ಪ್ರತಾಪ್ ಧುದತ್ ಬಿಜೆಪಿ ಶಾಸಕರತ್ತ ನುಗ್ಗಿದರು. ಇದೇ ಸಂದರ್ಭದಲ್ಲಿ ಸಸ್ಪೆಂಡ್ ಆದ ಕಾಂಗ್ರೆಸ್ ಶಾಸಕ ಅಮರೀಶ್ ಧರ್ ಮೈಕ್ರೋಫೋನ್ ಬಳಿ ಇದ್ದ ರಾಡ್ ಅನ್ನು ಕಿತ್ತುಕೊಂಡು ಆಡಳಿತ ಪಕ್ಷದ ಶಾಸಕ ಪಾಂಚಾಲ್‌ಗೆ ಹಲ್ಲೆ ಮಾಡಿದ್ದಾರೆ. ಇದರಿಂದಾಗಿ ಸದನವೇ ಕೋಲಾಹಲದಲ್ಲಿ ಮುಳುಗಿತು. ಘಟನೆ ನಡೆದ ಕೂಡಲೇ ಬಿಜೆಪಿ ಶಾಸಕರು ಪಾಂಚಾಲ್‌ರ ರಕ್ಷಣೆಗೆ ಧಾವಿಸಿದರು. ಸ್ಪೀಕರ್ ಅಧಿವೇಶನವನ್ನು ಹತ್ತು ನಿಮಿಷಗಳ ಕಾಲ ಮುಂದೂಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Baby Boy: ಎರಡನೇ ಮಗುವಿಗೆ ತಂದೆಯಾದ ಖುಷಿಯಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ
Waqf Notice: ಬಸನಗೌಡ ಪಾಟೀಲ್ ಯತ್ನಾಳ್ ತಂಡದಿಂದ 1 ತಿಂಗಳು ಜನ ಜಾಗೃತಿ
Waqf Issue: ಕಾಂಗ್ರೆಸ್ ಸರಕಾರದ ವಿರುದ್ಧ ಬಿಜೆಪಿಯಿಂದ “ನಮ್ಮ ಭೂಮಿ ನಮ್ಮ ಹಕ್ಕು” ಹೋರಾಟ
Employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ
Black Days: ಜಮೀರ್+ ನಾಲ್ವರು ಕೊಚ್ಚೆ, ದೂರ ಇಟ್ಟಿದ್ದೇನೆ: ಎಚ್.ಡಿ.ಕುಮಾರಸ್ವಾಮಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.