Katchatheevu ದ್ವೀಪ ಲಂಕಾಕ್ಕೆ ಬಿಟ್ಟು ಕೊಟ್ಟ ಕಾಂಗ್ರೆಸ್: ಪ್ರಧಾನಿ ಮೋದಿ ಆಕ್ರೋಶ
ಆರ್‌ಟಿಐ ವರದಿ ಬಹಿರಂಗಪಡಿಸಿದ ಬೆನ್ನಲ್ಲೇ ಪ್ರತಿಕ್ರಿಯೆ...ಡಿಎಂಕೆ ತಿರುಗೇಟು...
Team Udayavani, Mar 31, 2024, 4:32 PM IST
ಹೊಸದಿಲ್ಲಿ: 1970 ರ ದಶಕದಲ್ಲಿ ಆಯಕಟ್ಟಿನ ಕಚ್ಚಥೀವು ದ್ವೀಪವನ್ನು ಶ್ರೀಲಂಕಾಕ್ಕೆ ಹಸ್ತಾಂತರಿಸುವ ನಿರ್ಧಾರ ಕೈಗೊಂಡು ದೇಶದ ಸಮಗ್ರತೆ ಮತ್ತು ಹಿತಾಸಕ್ತಿಗಳನ್ನು ಕಾಂಗ್ರೆಸ್ ಪಕ್ಷ ದುರ್ಬಲಗೊಳಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಭಾನುವಾರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
1974 ರಲ್ಲಿ ಅಂದಿನ ಪ್ರಧಾನಿ ಇಂದಿರಾ ಗಾಂಧಿ ನೇತೃತ್ವದ ಕಾಂಗ್ರೆಸ್ ಸರ್ಕಾರವು ಕಚ್ಚಥೀವು ದ್ವೀಪವನ್ನು ಶ್ರೀಲಂಕಾಕ್ಕೆ ಹೇಗೆ ಹಸ್ತಾಂತರಿಸಿತು ಎಂಬುದನ್ನು ಆರ್‌ಟಿಐ ವರದಿ ಬಹಿರಂಗಪಡಿಸಿದ ಬೆನ್ನಲ್ಲೇ ಪ್ರಧಾನಿ ವಾಗ್ದಾಳಿ ನಡೆಸಿದ್ದಾರೆ.
ಆರ್‌ಟಿಐ ವರದಿ “ಕಣ್ಣು ತೆರೆಸುವ ಮತ್ತು ಆಶ್ಚರ್ಯಕರ” ಎಂದ ಪ್ರಧಾನಿ ಮೋದಿ, ಈ ಕ್ರಮವು ಜನರನ್ನು ಆಕ್ರೋಶಗೊಳಿಸಿದೆ. ಕಾಂಗ್ರೆಸ್ ಅನ್ನು ಎಂದಿಗೂ ನಂಬಲು ಸಾಧ್ಯವಿಲ್ಲ” ಎಂದು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
1974 ರಲ್ಲಿ ಆಗಿನ ಇಂದಿರಾ ಗಾಂಧಿ ಸರಕಾರವು ಪಾಕ್ ಜಲಸಂಧಿಯಲ್ಲಿನ ಪ್ರದೇಶವನ್ನು ನೆರೆಯ ದೇಶಕ್ಕೆ ಹಸ್ತಾಂತರಿಸುವ ನಿರ್ಧಾರದ ಬಗ್ಗೆ ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ ಅಣ್ಣಾಮಲೈ ಅವರು ಕೋರಿದ್ದ ಆರ್‌ಟಿಐ ಅರ್ಜಿ ಸಲ್ಲಿಸಿದ್ದರು. ಜೂನ್ 1974 ರಲ್ಲಿ, ಕಚ್ಚತೀವು ಹಸ್ತಾಂತರದ ನಿರ್ಧಾರವನ್ನು ಆಗಿನ ವಿದೇಶಾಂಗ ಕಾರ್ಯದರ್ಶಿ ಕೇವಲ್ ಸಿಂಗ್ ಅವರು ತಮಿಳುನಾಡು ಮುಖ್ಯಮಂತ್ರಿ ಎಂ ಕರುಣಾನಿಧಿ ಅವರಿಗೆ ತಿಳಿಸಿದ್ದರು.
ಮತ್ತೊಂದೆಡೆ, ಭಾರತದ ಮೊದಲ ಪ್ರಧಾನ ಮಂತ್ರಿ ಜವಾಹರಲಾಲ್ ನೆಹರು ಅವರು 1961 ಮೇ 10 ರಂದು ದ್ವೀಪದ ಸಮಸ್ಯೆಯನ್ನು “ಅಸಂಗತ” ಎಂದು ತಳ್ಳಿಹಾಕಿದ್ದರು. ಸಿಲೋನ್ ಏರ್ ಫೋರ್ಸ್ ಅನುಮತಿಯಿಲ್ಲದೆ ಭಾರತೀಯ ನೌಕಾಪಡೆಗೆ ಕಚ್ಚಥೀವುನಲ್ಲಿ ಸಮರಾಭ್ಯಾಸ ನಡೆಸಲು ಅನುಮತಿ ನೀಡದ ಹಿನ್ನೆಲೆಯಲ್ಲಿ ಈ ತೀರ್ಮಾನ ಕೈಗೊಂಡಿದ್ದರು.
‘ಕಾಂಗ್ರೆಸ್‌ಗೆ ಕಪಾಳ ಮೋಕ್ಷ ! ಅವರು ಸ್ವಇಚ್ಛೆಯಿಂದ ಕಚ್ಚಥೀವುವನ್ನು ಬಿಟ್ಟುಕೊಟ್ಟರು ಮತ್ತು ಅದರ ಬಗ್ಗೆ ಪಶ್ಚಾತ್ತಾಪ ಪಡಲಿಲ್ಲ. ಕೆಲವೊಮ್ಮೆ ಕಾಂಗ್ರೆಸ್ ಸಂಸದರೊಬ್ಬರು ರಾಷ್ಟ್ರವನ್ನು ವಿಭಜಿಸುವ ಬಗ್ಗೆ ಮಾತನಾಡುತ್ತಾರೆ. ಕೆಲವೊಮ್ಮೆ ಅವರು ಭಾರತೀಯ ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ಅವಹೇಳನ ಮಾಡುತ್ತಾರೆ. ಇದು ಅವರು ಭಾರತದ ಏಕತೆ ಮತ್ತು ಸಮಗ್ರತೆಗೆ ವಿರುದ್ಧವಾಗಿರುವುದನ್ನು ತೋರಿಸುತ್ತದೆ. ಅವರು ನಮ್ಮ ರಾಷ್ಟ್ರವನ್ನು ವಿಭಜಿಸಲು ಅಥವಾ ಒಡೆಯಲು ಮಾತ್ರ ಬಯಸುತ್ತಾರೆ” ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಎಕ್ಸ್ ಪೋಸ್ಟ್ ಮಾಡಿದ್ದಾರೆ.
ಡಿಎಂಕೆ ತಿರುಗೇಟು
ಪ್ರಧಾನಿ ನರೇಂದ್ರ ಮೋದಿಯವರಿಗೆ ಡಿಎಂಕೆ ತಿರುಗೇಟು ನೀಡಿದ್ದು,ಹತ್ತು ವರ್ಷಗಳ ಸಾಧನೆಗಳ ಬಗ್ಗೆ ಪ್ರಚಾರ ಮಾಡಲು ಹೆದರಿದ ಬಿಜೆಪಿಯು ಪ್ರತಿಪಕ್ಷಗಳ ಜತೆ ದೂಷಣೆ ಆಟ ಆಡುವುದರಲ್ಲಿ ನಿರತವಾಗಿದೆ. ಈ ವಿಷಯವು ದುಃಖದಾಯಕ ಮತ್ತು ಕಳೆದುಹೋದ ವಿಚಾರದಲ್ಲಿ ಮಾಡುವ ರಾಜಕೀಯ ಪ್ರಚಾರ ಎಂದು ಡಿಎಂಕೆ ವಕ್ತಾರ ಮನುರಾಜ್ ಎಸ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಆರ್‌ಟಿಐ ಮಾಹಿತಿಯಲ್ಲಿ ಏನಿದೆ?
1948ರವರೆಗೆ ಕಚ್ಚಥೀವು ದ್ವೀಪವು ರಾಮ ನಾಡಿನ ರಾಜಮನೆತನದ ಒಡೆತನದಲ್ಲಿತ್ತು.
ಜಮೀನ್ದಾರಿ ಪದ್ಧತಿ ಕೊನೆಗೊಂಡ ಬಳಿಕ ಅದು ಮದ್ರಾಸ್ ಸರಕಾರದ ಅಧೀನಕ್ಕೆ ಬಂದಿತ್ತು.
ಅನಂತರ ಶ್ರೀಲಂಕಾವು ತನ್ನ ವ್ಯಾಪ್ತಿ ಹೆಚ್ಚಿಸಿಕೊಳ್ಳುವುದಕ್ಕಾಗಿ ದ್ವೀಪ ತನ್ನದೆಂದು ತಗಾದೆ ತೆಗೆಯಿತು
1961ರ ಮೇ10ರಂದು ನಮಗೆ ದ್ವೀಪ ಬಿಟ್ಟುಕೊಡಲು ಹಿಂಜರಿಕೆಯು ಇಲ್ಲವೆಂದು ಆಗಿನ ಪ್ರಧಾನಿ ನೆಹರೂ ಸಹಿ ಮಾಡಿದರು
1968ರಲ್ಲಿ ಶ್ರೀಲಂಕಾವು ತನ್ನ ನಕ್ಷೆಯಲ್ಲಿ ದ್ವೀಪ ತನ್ನದೆಂದು ನಮೂದಿಸಿತು
ಇಂದಿರಾ ಗಾಂಧಿ ಪ್ರಧಾನಿಯಾಗಿದ್ದಾಗ ಸಂಸತ್‌ನಲ್ಲಿ ವಿಪಕ್ಷಗಲ್ಲಿ ಈ ವಿಚಾರ ಪ್ರಸ್ತಾವಿಸಿದವು
ಉಭಯ ರಾಷ್ಟ್ರಗಳು ದ್ವೀಪದ ಮೇಲೆ ಸಮಾನ ಹಕ್ಕುಗಳನ್ನು ಪ್ರತಿಪಾದಿಸುವ ಒಪ್ಪಂದ ಮಾಡಿಕೊಂಡಿದೆ ಎಂದ ಸರಕಾರ
1973ರಲ್ಲಿ ವಿದೇಶಾಂಗ ಕಾರ್ಯದರ್ಶಿ ಮಟ್ಟದ ಸಭೆ, 1974ರಲ್ಲಿ ದ್ವೀಪವನ್ನು ಲಂಕೆಗೆ ಬಿಟ್ಟುಕೊಟ್ಟ ಭಾರತ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ
Mumbai: ಕಾರು ಢಿಕ್ಕಿ; ರಸ್ತೆ ಬದಿ ಆಡುತ್ತಿದ್ದ 4ರ ಬಾಲಕ ಸ್ಥಳದಲ್ಲೇ ಮೃ*ತ್ಯು
Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!
Mohali: ನಾಲ್ಕಂತಸ್ತಿನ ಕಟ್ಟಡ ಕುಸಿದು 20 ವರ್ಷದ ಯುವತಿ ಸಾವು
Ayyappa Temple: ಶಬರಿಮಲೆಗೆ ಭಕ್ತರ ಪ್ರವಾಹ: ಸ್ಪಾಟ್ ಬುಕ್ಕಿಂಗ್ ತಾತ್ಕಾಲಿಕ ರದ್ದು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Mangaluru: ಕ್ರಿಸ್ಮಸ್ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು
Health: ಶೀಘ್ರ ಕ್ಯಾನ್ಸರ್ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?
ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.