ಕಾಂಗ್ರೆಸ್‌ ಮಂದಿರ ಜಪಕ್ಕೆ ಟೀಕೆ; ಸುನ್ನಿ ನಿಲುವಿಗೆ ಮೋದಿ ಶ್ಲಾಘನೆ

Team Udayavani, Dec 7, 2017, 6:25 AM IST

teeke.jpg

ಧಂಡುಕಾ (ಗುಜರಾತ್‌)/ಮುಂಬಯಿ: ಗುಜರಾತ್‌ ವಿಧಾನಸಭೆ ಚುನಾವಣೆಯ ಮೊದಲ ಹಂತಕ್ಕೆ ಎರಡು ದಿನಗಳು ಬಾಕಿ ಇರುವಾಗಲೇ ಪ್ರಚಾರದ ಅಬ್ಬರ ಬಿರು ಸಾಗಿದೆ. ಅಯೋಧ್ಯೆಯ ರಾಮ ಮಂದಿರ ವಿಚಾರಣೆ ಮತ್ತು ಚುನಾವಣೆಗೆ ಸಂಬಂಧ ಏಕೆ ಕಲ್ಪಿಸುತ್ತೀರಿ ಎಂದು ಕೇಳುವ ಮೂಲಕ ಪ್ರಧಾನಿ ಮೋದಿ ಅವರು ಕಾಂಗ್ರೆಸ್‌ ನಾಯಕ ಕಪಿಲ್‌ ಸಿಬಲ್‌ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಜತೆಗೆ ಸಿಬಲ್‌ ಸುಪ್ರೀಂ ಕೋರ್ಟಲ್ಲಿ ಮಾಡಿದ ಮನವಿಯಿಂದ ದೂರ ಸರಿದ ಸುನ್ನಿ ವಕ್ಫ್ ಬೋರ್ಡ್‌ನ ನಿಲುವನ್ನು  ಮೋದಿ ಶ್ಲಾ ಸಿದ್ದಾರೆ.

ಆದರೆ, ಇದಕ್ಕೆ ಪ್ರತಿಕ್ರಿಯಿಸಿರುವ ಸಿಬಲ್‌, “ನಾನು ಸುಪ್ರೀಂ ಕೋರ್ಟ್‌ನಲ್ಲಿ ಸುನ್ನಿ ವಕ್ಫ್ ಬೋರ್ಡ್‌ ಅನ್ನು ಪ್ರತಿನಿಧಿಸಿಯೇ ಇಲ್ಲ. ಪ್ರಧಾನಿ ಮತ್ತು ಅಮಿತ್‌ ಶಾ ಅವರು ತಮ್ಮ ಮಾಹಿತಿ ಮೂಲವನ್ನು ಅರಿತುಕೊಂಡರೆ ಒಳ್ಳೆಯದು’ ಎಂದಿದ್ದಾರೆ.

ಗುಜರಾತ್‌ ವಿಧಾನಸಭೆ ಚುನಾವಣೆಯ ಮೊದಲ ಹಂತದ ಮತದಾನ ಡಿ. 9ಕ್ಕೆ ನಡೆಯಲಿರುವಂತೆಯೇ ಧಂಡುಕಾದಲ್ಲಿ ಬುಧವಾರ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ  ಮೋದಿ, ಸುಪ್ರೀಂಕೋರ್ಟ್‌ ನಲ್ಲಿ 2019ರ ಚುನಾವಣೆ ಬಳಿಕ ರಾಮ ಮಂದಿರ ವಿಚಾರಣೆ ಆರಂಭಿಸುವಂತೆ ಕಾಂಗ್ರೆಸ್‌ ನಾಯಕ, ಮುಸ್ಲಿಂ ಸಂಘಟನೆಗಳ ಪರ ವಕೀಲ ಕಪಿಲ್‌ ಸಿಬಲ್‌ ಮಾಡಿದ ಮನವಿಯನ್ನು ಟೀಕಿಸಿದ್ದಾರೆ.  ಸಿಬಲ್‌ ಮುಸ್ಲಿಮರ ಪರ ವಾದ ಮಾಡುವುದಕ್ಕೆ ಆಕ್ಷೇಪವಿಲ್ಲ. ಆದರೆ ಪ್ರಕರಣದ ವಿಚಾರಣೆ ಮತ್ತು ಚುನಾವಣೆಗಳಿಗೆ ಸಂಬಂಧ ಏಕೆ ಕಲ್ಪಿಸುತ್ತೀರಿ ಎಂದು ಪ್ರಶ್ನಿಸಿದ್ದಾರೆ.

“ಸುಪ್ರೀಂ ಕೋರ್ಟಲ್ಲಿ ಮಂಗಳವಾರ ಸಿಬಲ್‌, ಬಾಬರಿ ಮಸೀದಿ ಧ್ವಂಸ ಪ್ರಕ ರಣದ ವಿರುದ್ಧ ವಾದಿಸುತ್ತಿದ್ದರು. ವಾದಿಸು ವುದಕ್ಕೆ ನನ್ನ ಅಭ್ಯಂತರವಿಲ್ಲ. ಆದರೆ, ವಿಚಾರಣೆಯನ್ನು 2019ರ ಅನಂತರ ನಡೆಸಿ ಎಂದು ಪ್ರತಿಪಾದಿಸಿದ್ದು ಸರಿಯಲ್ಲ. ಈಗ ಕಾಂಗ್ರೆಸ್‌ ರಾಮ ಮಂದಿರ ಮತ್ತು ಚುನಾವಣೆ ಜತೆಗೆ ಸಂಬಂಧ ಕಲ್ಪಿಸುತ್ತಿದೆ. ಅವರಿಗೆ ದೇಶದ ಬಗ್ಗೆ ಚಿಂತೆ ಇಲ್ಲ’ ಎಂದಿ ದ್ದಾರೆ ಪ್ರಧಾನಿ. ಚುನಾವಣೆಗಾಗಿ ಮಂದಿರ ಪ್ರಕರಣದ ವಿಚಾರಣೆಯನ್ನೇ ನಿಲ್ಲಿಸಲು ಬಯಸುತ್ತೀರಾ ಎಂದು ಕಾಂಗ್ರೆಸ್‌ ನಾಯಕ ರನ್ನು ನೇರವಾಗಿ ಪ್ರಶ್ನಿಸಿದ್ದಾರೆ. ಪ್ರಕರಣದಿಂದ ಲಾಭ ಪಡೆಯಲೋಸುಗವೇ ಕಾಂಗ್ರೆಸ್‌ ವಿಚಾರಣೆ ಮುಂದೂಡಲು ಯತ್ನಿಸುತ್ತಿದೆ ಎನ್ನುವುದನ್ನು ನಾವು ತಿಳಿದುಕೊಳ್ಳಬೇಕಾಗಿದೆ ಎಂದು ಲೇವಡಿ ಮಾಡಿದ್ದಾರೆ ಮೋದಿ.

ಸಿಬಲ್‌ ವಿರುದ್ಧ ವಾಗ್ಧಾಳಿ ಮುಂದು ವರಿಸಿದ ಪ್ರಧಾನಿ ಲಕ್ನೋದ ಅಖೀಲ ಭಾರತ ಸುನ್ನಿ ವಕ್ಫ್ ಮಂಡಳಿ ಸಿಬಲ್‌ ನಿಲುವಿನಿಂದ ದೂರ ಸರಿದ ಬಗ್ಗೆ ಹರ್ಷ ವ್ಯಕ್ತಪಡಿಸಿದ್ದಾರೆ. ನಿಗದಿತ ಕಾಲಮಿತಿಯಲ್ಲಿ ವಿವಾದ ಪರಿಹಾರವನ್ನು ಎಲ್ಲರೂ ಬಯಸಿದ್ದಾರೆ. ಅದನ್ನೇ ಮಂಡಳಿ ಪುಷ್ಟೀಕರಿಸಿದೆ ಎಂದಿದ್ದಾರೆ. ಇದೇ ವೇಳೆ ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಿಗೆ ಒಂದೇ ಹಂತದಲ್ಲಿ ಚುನಾವಣೆ ನಡೆಯಬೇಕು ಎಂದೂ ಪ್ರತಿಪಾದಿಸಿದ್ದಾರೆ.

ಶಿಶು ಮರಣ, ಅಪೌಷ್ಟಿಕತೆ ಹೆಚ್ಚೇಕೆ?: ಈ ನಡುವೆ ಸರಣಿ ಟ್ವೀಟ್‌ ಮಾಡಿ ಪ್ರಧಾನಿಯವರನ್ನು ಪ್ರಶ್ನಿಸಿರುವ ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ ಗಾಂಧಿ, ಗುಜರಾತ್‌ನಲ್ಲಿ ಶಿಶು ಮರಣ ಪ್ರಮಾಣ ಹೆಚ್ಚೇಕೆ? ಅಪೌಷ್ಟಿಕತೆಯ ಪ್ರಮಾಣ ಏಕೆ ಏರುತ್ತಿದೆ ಎಂದು ಕೇಳಿದ್ದಾರೆ. ಏಳು ದಿನಗಳಿಂದ ಪ್ರತಿ ದಿನ ಒಂದೊಂದು ವಿಚಾರವನ್ನೆತ್ತಿ ಪ್ರಶ್ನಿಸುತ್ತಿರುವ ರಾಹುಲ್‌ ಬುಧವಾರ ಅಪೌಷ್ಟಿಕತೆಯ ಬಗ್ಗೆ ಪ್ರಸ್ತಾಪಿಸಿದ್ದಾರೆ. ಗುಜರಾತ್‌ನ ಶೇ.39 ಮಂದಿ ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ವೈದ್ಯರ ಕೊರತೆ ನಡುವೆ ವೈದ್ಯಕೀಯ ವೆಚ್ಚ ಕೂಡ ಏರುತ್ತಿದೆ. ಭುಜ್‌ನಲ್ಲಿರುವ ಸರ್ಕಾರಿ ಆಸ್ಪತ್ರೆಯನ್ನು “ಸ್ನೇಹಿತ’ರೊಬ್ಬರಿಗೆ 99 ವರ್ಷ ಕಾಲ ಗುತ್ತಿಗೆ ನೀಡಲಾಗಿದೆ.  22 ವರ್ಷಗಳ ಕಾಲದ ಆಡಳಿತದ ಬಗ್ಗೆ ಬಿಜೆಪಿಯಿಂದ ಗುಜರಾತ್‌ ಜನತೆ ಉತ್ತರ ಬಯಸಿದ್ದಾರೆ ಎಂದು ಹೇಳಿದ್ದಾರೆ ರಾಹುಲ್‌.

ಮೋದಿಯಂತಲ್ಲ; ನಾನೊಬ್ಬ ಮನುಷ್ಯ: “ನಾನು ನರೇಂದ್ರ ಭಾಯಿಯಂತೆ ಅಲ್ಲ. ಮನುಷ್ಯ ನಾಗಿರುವ ನನ್ನಿಂದ ಕೆಲವೊಂದು ತಪ್ಪುಗಳೂ ಆಗುತ್ತವೆ. ಇದರಿಂದಾ ಗಿಯೇ ಜೀವನ ಹೆಚ್ಚು ಆಸಕ್ತಿದಾಯಕವಾಗಿ ರುತ್ತದೆ. ಬಿಜೆಪಿ ನಾಯಕರು ನನ್ನ ತಪ್ಪನ್ನು ಎತ್ತಿತೋರಿಸಿದ್ದಕ್ಕೆ ಧನ್ಯವಾದ.’ ಹೀಗೆಂದು ರಾಹುಲ್‌ ಗಾಂಧಿ ಬುಧವಾರ ಟ್ವೀಟ್‌ ಮಾಡಿದ್ದಾರೆ. ಗುಜರಾತ್‌ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಟ್ವಿಟರ್‌ನಲ್ಲಿ “ಬಿಜೆಪಿಗೆ ದಿನಕ್ಕೊಂದು ಪ್ರಶ್ನೆ’ ಎಂಬ ಸರಣಿಯಲ್ಲಿ ಬೆಲೆಯೇರಿಕೆ ಬಗ್ಗೆ ರಾಹುಲ್‌ ಮಾಡಿದ್ದ ಸಾಂಖೀÂಕ ಮಾಹಿತಿಯ ವಿವರಣೆ ತಪ್ಪಾಗಿತ್ತು. ಅದಕ್ಕೆ ಟ್ವೀಟಿಗರಿಂದ ಮತ್ತು ಬಿಜೆಪಿ ನಾಯಕರಿಂದ ಪ್ರಬಲ ಟೀಕೆ ವ್ಯಕ್ತವಾಗಿತ್ತು. ಅದಕ್ಕಾಗಿ ರಾಹುಲ್‌ ಗಾಂಧಿ ಸ್ಪಷ್ಟನೆ ನೀಡಿದ್ದಾರೆ.

ಟಾಪ್ ನ್ಯೂಸ್

Hunsur: ಹೊಸ ವರ್ಷಾಚರಣೆ: ಕೇಕ್‌ ತಿಂದ 45ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ

Hunsur: ಹೊಸ ವರ್ಷಾಚರಣೆ: ಕೇಕ್‌ ತಿಂದ 45ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ

“ನಿಮ್ಹಾನ್ಸ್‌ ನಡೆ ದೇಶದಲ್ಲೇ ಮುಂಚೂಣಿಯದು’: ರಾಷ್ಟ್ರಪತಿ ದ್ರೌಪದಿ ಮುರ್ಮು

“ನಿಮ್ಹಾನ್ಸ್‌ ನಡೆ ದೇಶದಲ್ಲೇ ಮುಂಚೂಣಿಯದು’: ರಾಷ್ಟ್ರಪತಿ ದ್ರೌಪದಿ ಮುರ್ಮು

ಪತ್ನಿ ಜತೆ ಸಂಬಂಧ ಮುರಿದಿದ್ದ ಸೈಬರ್‌ ಟ್ರಕ್‌ ಸ್ಫೋ*ಟದ ವ್ಯಕ್ತಿ!

ಪತ್ನಿ ಜತೆ ಸಂಬಂಧ ಮುರಿದಿದ್ದ ಸೈಬರ್‌ ಟ್ರಕ್‌ ಸ್ಫೋ*ಟದ ವ್ಯಕ್ತಿ!

Formula E race corruption case: ಜ.6ರಂದು ಕೆಟಿಆರ್‌ ವಿಚಾರಣೆ

Formula E race corruption case: ಜ.6ರಂದು ಕೆಟಿಆರ್‌ ವಿಚಾರಣೆ

Bangladesh ಸುಧಾರಿಸುವವರೆಗೂ ಪ್ರಾರ್ಥನೆ ನಿಲ್ಲದು: ಇಸ್ಕಾನ್‌

Bangladesh ಸುಧಾರಿಸುವವರೆಗೂ ಪ್ರಾರ್ಥನೆ ನಿಲ್ಲದು: ಇಸ್ಕಾನ್‌

ಸನಾತನ ಅರ್ಥ ತಿಳಿಯದೆ ತಪ್ಪು ದಾರಿಗೆ ಸಮಾಜ: ಧನಕರ್‌

ಸನಾತನ ಅರ್ಥ ತಿಳಿಯದೆ ತಪ್ಪು ದಾರಿಗೆ ಸಮಾಜ: ಧನಕರ್‌

Arvind Kejriwal: ಕೇಂದ್ರ ಸರಕಾರ‌ ದಿಲ್ಲಿಯಲ್ಲಿ ಏನೂ ಮಾಡಿಲ್ಲ

Arvind Kejriwal: ಕೇಂದ್ರ ಸರಕಾರ‌ ದಿಲ್ಲಿಯಲ್ಲಿ ಏನೂ ಮಾಡಿಲ್ಲ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

RSS; ಶಿಸ್ತು, ಧೈರ್ಯ ತುಂಬಲು ಆರೆಸ್ಸೆಸ್‌ನಲ್ಲಿ ಲಾಠಿ ಬಳಕೆ: ಮೋಹನ್‌ ಭಾಗವತ್‌

RSS; ಶಿಸ್ತು, ಧೈರ್ಯ ತುಂಬಲು ಆರೆಸ್ಸೆಸ್‌ನಲ್ಲಿ ಲಾಠಿ ಬಳಕೆ: ಮೋಹನ್‌ ಭಾಗವತ್‌

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Hunsur: ಹೊಸ ವರ್ಷಾಚರಣೆ: ಕೇಕ್‌ ತಿಂದ 45ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ

Hunsur: ಹೊಸ ವರ್ಷಾಚರಣೆ: ಕೇಕ್‌ ತಿಂದ 45ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ

“ನಿಮ್ಹಾನ್ಸ್‌ ನಡೆ ದೇಶದಲ್ಲೇ ಮುಂಚೂಣಿಯದು’: ರಾಷ್ಟ್ರಪತಿ ದ್ರೌಪದಿ ಮುರ್ಮು

“ನಿಮ್ಹಾನ್ಸ್‌ ನಡೆ ದೇಶದಲ್ಲೇ ಮುಂಚೂಣಿಯದು’: ರಾಷ್ಟ್ರಪತಿ ದ್ರೌಪದಿ ಮುರ್ಮು

puttige-2

Udupi; ಗೀತಾರ್ಥ ಚಿಂತನೆ 145: ವೇದಪ್ರಾಮಾಣ್ಯದ ಚರ್ಚೆ

crime

Kasaragod: ಘರ್ಷಣೆಯಿಂದ ಮೂವರಿಗೆ ಗಾಯ

1-weewq

Baindur: ಬಟ್ಟೆ ವ್ಯಾಪಾರಿ ನಾಪತ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.