ಮಧ್ಯವರ್ತಿಗಳ ಪರ ಕೆಲಸ ಮಾಡುವ ಕಾಂಗ್ರೆಸ್
Team Udayavani, Jan 6, 2019, 12:30 AM IST
ಭುವನೇಶ್ವರ: ಯುಪಿಎ ಆಡಳಿತದ ಅವಧಿಯಲ್ಲಿ ಜನರ ಪರವಾಗಿ ಕೆಲಸ ಮಾಡದ ಕಾಂಗ್ರೆಸ್ ಈಗ ವಿರೋಧ ಪಕ್ಷವಾಗಿ ರಕ್ಷಣಾ ವಲಯದ ದಲ್ಲಾಳಿಗಳ ಪರ ಕೆಲಸ ಮಾಡುತ್ತಿದೆ ಎಂದು ಒಡಿಶಾದಲ್ಲಿ ಪ್ರಧಾನಿ ನರೇಂದ್ರ ಮೋದಿ ವಾಗ್ಧಾಳಿ ನಡೆಸಿದ್ದಾರೆ.
ಒಡಿಶಾದ ಬರಿಪಾಡದಲ್ಲಿ ರ್ಯಾಲಿಯಲ್ಲಿ ಮಾತನಾಡಿದ ಅವರು, 2004 ರಿಂದ 2014ರ ವೇಳೆ ದೇಶದ ರಕ್ಷಣಾ ವಲಯವನ್ನು ಕ್ಷೀಣಗೊಳಿಸುವ ಹುನ್ನಾರ ನಡೆಸಲಾಗಿತ್ತು. ಅದರ ವಾಸ್ತವಾಂಶಗಳು ಈಗ ಬಹಿರಂಗಗೊಳ್ಳು ತ್ತಿರುವುದ ರಿಂದ ಕಾಂಗ್ರೆಸ್‌ಗೆ ನೋವಾಗುತ್ತಿದೆ. ಹೀಗಾಗಿಯೇ ಅವರು ಚೌಕಿದಾರನನ್ನು ಕೆಳಗಿಳಿಸಬೇಕು ಎಂದು ಬಯಸಿವೆ. ಸಮಾಜದಲ್ಲೇ ಇರಲಿ ಅಥವಾ ಫ್ಯಾಕ್ಟರಿಯಲ್ಲೇ ಇರಲಿ, ಚೌಕಿದಾರ ಹೊರಗೆ ಹೋಗುವುದನ್ನೇ ಕಳ್ಳರು ಕಾಯುತ್ತಿರುತ್ತಾರೆ. ಯಾಕೆಂದರೆ ಚೌಕಿದಾರ ನಿಲ್ಲದಿದ್ದಾಗಲೇ ಅವರು ದರೋಡೆ ಮಾಡ ಬಹುದು ಎಂದು ಮೋದಿ ಕಿಡಿಕಾರಿದ್ದಾರೆ.
ಅಗಸ್ಟಾ ವೆಸ್ಟ್‌ಲ್ಯಾಂಡ್ ಕಾಪ್ಟರ್ ಹಗರಣ ದಲ್ಲಿ ದಲ್ಲಾಳಿ ಕ್ರಿಶ್ಚಿಯನ್ ಮೈಕೆಲ್‌ಗೆ ಪ್ರಧಾನಿ ಕಚೇರಿಯಲ್ಲಿನ ಎಲ್ಲ ವಹಿವಾಟುಗಳ ಬಗ್ಗೆಯೂ ಮಾಹಿತಿ ಸಿಗುತ್ತಿತ್ತು. ಸಂಪುಟದಲ್ಲಿ ನಡೆದ ಚರ್ಚೆಗಳ ಬಗ್ಗೆಯೂ ಮಾಹಿತಿ ಲಭ್ಯ ವಾಗುತ್ತಿತ್ತು. ಪ್ರಧಾನಿಗಿಂತಲೂ ಹೆಚ್ಚಿನ ಮಾಹಿತಿ ದಲ್ಲಾಳಿಗೆ ತಿಳಿದಿರುತ್ತಿತ್ತು ಎಂದು ಮೋದಿ ಹೇಳಿದ್ದಾರೆ.
ಕಾಂಗ್ರೆಸ್‌ನ ಸಾಲ ಮನ್ನಾಗೆ ಟೀಕೆ: ಕಾಂಗ್ರೆಸ್ ಘೋಷಿಸಿದ ಸಾಲ ಮನ್ನಾ ರೈತ ರನ್ನು ತಪ್ಪುದಾರಿಗೆಳೆಯುತ್ತಿದೆ. ಅವರನ್ನು ಕೇವಲ ಮತ ಬ್ಯಾಂಕ್ ರೀತಿ ಕಾಂಗ್ರೆಸ್ ನೋಡು ತ್ತಿದೆ. ಆದರೆ ಬಿಜೆಪಿಗೆ ರೈತರು ನಿಜ ವಾದ ಅನ್ನದಾತರು. ವೋಟ್‌ಬ್ಯಾಂಕ್ ರಾಜಕೀಯ ಮಾಡಬೇಕೆಂದಿದ್ದರೆ ನಾನೂ ರೈತರ 1 ಲಕ್ಷ ಕೋಟಿ ರೂ. ಸಾಲ ಮನ್ನಾ ಮಾಡುತ್ತಿದ್ದೆ. ಆದರೆ, ನಾನು ಹಳೆಯ ವ್ಯವಸ್ಥೆ ಬದಲಿಸಲು ಹೊರಟಿದ್ದೇವೆ. ರೈತರ ಕಲ್ಯಾಣಕ್ಕಾಗಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿ ದ್ದೇವೆ ಎಂದು ಜಾರ್ಖಂಡ್‌ನಲ್ಲಿ ವಿವಿಧ ನೀರಾವರಿ ಯೋಜನೆಗಳನ್ನು ಉದ್ಘಾಟಿಸಿ ಘೋಷಿಸಿದ್ದಾರೆ. ಈ ಯೋಜನೆಗಳಿಂದ 19 ಸಾವಿರ ಹೆಕ್ಟೇರ್ ಪ್ರದೇಶಕ್ಕೆ ನೀರು ಒದಗಲಿದೆ. ಅಲ್ಲದೆ ಮಂಡಲ್ ಆಣೆಕಟ್ಟೆ ಯೋಜನೆಗೂ ಅವರು ಚಾಲನೆ ನೀಡಿದ್ದಾರೆ. ಆಣೆಕಟ್ಟೆ ಯೋಜನೆ 1972 ರಲ್ಲೇ ಆರಂಭವಾಗಿದ್ದರೂ, ಸ್ಥಗಿತಗೊಂಡಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
RJD ಜೊತೆ ಮೈತ್ರಿ ಮಾಡಿಕೊಂಡು 2 ಬಾರಿ ತಪ್ಪೆಸಗಿದ್ದೆ: ನಿತೀಶ್ ಕುಮಾರ್
Odisha: ಕಾರಿಗೆ ಟ್ರಕ್ ಢಿಕ್ಕಿ ಹೊಡೆದು ಇಬ್ಬರು ಬಿಜೆಪಿ ನಾಯಕರು ಮೃ*ತ್ಯು
Delhi; ರಸ್ತೆಗಳು ಪ್ರಿಯಾಂಕಾ ಗಾಂಧಿ ಕೆನ್ನೆಯಂತಿರಬೇಕು: ಬಿಜೆಪಿ ನಾಯಕನ ಹೇಳಿಕೆಗೆ ಟೀಕೆ
Gujarat: ಕೋಸ್ಟ್ ಗಾರ್ಡ್ ಹೆಲಿಕಾಪ್ಟರ್ ಪತನ; ಮೂವರು ಮೃ*ತ್ಯು
Oyo Rooms: ಮದುವೆಯಾಗದ ಜೋಡಿಗೆ ಇನ್ಮುಂದೆ ʼಓಯೋʼ ರೂಮ್ ಸಿಗೋದು ಕಷ್ಟ – ವರದಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
RJD ಜೊತೆ ಮೈತ್ರಿ ಮಾಡಿಕೊಂಡು 2 ಬಾರಿ ತಪ್ಪೆಸಗಿದ್ದೆ: ನಿತೀಶ್ ಕುಮಾರ್
Kanaka Jayanthi: ಮುಂದಿನ ಮೂರುವರೆ ವರ್ಷವೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ: ಸಚಿವ ಭೈರತಿ
Theatre stampede case: ಪೊಲೀಸರ ಮುಂದೆ ಹಾಜರಾದ ಅಲ್ಲು ಅರ್ಜುನ್, ಆಸ್ಪತ್ರೆಗೆ ಭೇಟಿ ರದ್ದು
Gambhir; ಕೊಹ್ಲಿ, ರೋಹಿತ್ ಶರ್ಮ ಟೆಸ್ಟ್ ಭವಿಷ್ಯದ ಬಗ್ಗೆ ಗಂಭೀರ್ ಪ್ರತಿಕ್ರಿಯೆ
Kasaragod: ಬಟ್ಟಿಪದವು; ಪ್ಲೈವುಡ್ ಮಿಲ್ಲಿಗೆ ಬೆಂಕಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.