ವಸುಂಧರಾ vs ಮಾನ್ವೇಂದ್ರ
Team Udayavani, Nov 18, 2018, 6:00 AM IST
ಹೊಸದಿಲ್ಲಿ: ರಾಜಸ್ಥಾನದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿಗೆ ಪ್ರತಿಷ್ಠೆಯ ಕಣವಾಗಿರುವ ಝಲರಾ ಪಾಟನ್‌ನಲ್ಲಿ ಮುಖ್ಯಮಂತ್ರಿ ವಸುಂಧರಾ ರಾಜೇ ವಿರುದ್ಧ ಬಿಜೆಪಿಯ ಮಾಜಿ ನಾಯಕ ಜಸ್ವಂತ್ ಸಿಂಗ್ ಅವರ ಪುತ್ರ ಮಾನ್ವೇಂದ್ರ ಸಿಂಗ್‌ರನ್ನು ಕಾಂಗ್ರೆಸ್ ಕಣಕ್ಕಿಳಿಸಿದೆ. ಶನಿವಾರ ಬಿಡುಗಡೆ ಮಾಡಲಾದ 32 ಅಭ್ಯರ್ಥಿಗಳ 2ನೇ ಪಟ್ಟಿಯಲ್ಲಿ ಸಿಂಗ್ ಹೆಸರನ್ನು ಸೇರಿಸಲಾಗಿದೆ.
ಬಾರ್ಮರ್ ಜಿಲ್ಲೆಯ ಶಿಯೋ ಶಾಸಕರಾಗಿರುವ ಮಾನ್ವೇಂದ್ರ ಅವರು ಕಳೆದ ತಿಂಗಳಷ್ಟೇ ಬಿಜೆಪಿಗೆ ರಾಜೀನಾಮೆ ನೀಡಿ, ಕಾಂಗ್ರೆಸ್ ಸೇರ್ಪಡೆ ಯಾಗಿ ದ್ದರು. ಕಳೆದ ಕೆಲವು ವರ್ಷಗಳಿಂದ ಕೋಮಾದಲ್ಲಿ ರುವ ತಮ್ಮ ತಂದೆಯನ್ನು ಬಿಜೆಪಿ ಸರಿಯಾಗಿ ನಡೆಸಿಕೊಂಡಿಲ್ಲ ಎಂದು ಆರೋಪಿಸಿದ್ದ ಮಾನ್ವೇಂದ್ರ ಈಗ ಸಿಎಂ ರಾಜೇ ವಿರುದ್ಧ ಸ್ಪರ್ಧೆಗಿಳಿದಿದ್ದಾರೆ. ಜಾಲರಾಪಟಣ್ ಬಿಜೆಪಿಯ ಭದ್ರ ಕೋಟ ೆ ಯಾಗಿದ್ದು, 2003ರಿಂದಲೂ ರಾಜೇ ಅವರು ಈ ಕ್ಷೇತ್ರದಿಂದ ಗೆದ್ದು ಬಂದಿದ್ದಾರೆ.
ಕಾಂಗ್ರೆಸ್ ಪಟ್ಟಿ ಬಿಡುಗಡೆ ಯಾಗುತ್ತಿದ್ದಂತೆಯೇ ಪ್ರತಿಕ್ರಿಯಿಸಿದ ಸಿಎಂ ರಾಜೇ, ಕಾಂಗ್ರೆಸ್‌ಗೆ ಬೇರೆ ಯಾವ ಅಭ್ಯ ರ್ಥಿಯೂ ಸಿಗದ ಕಾರಣ ಮಾನ್ವೇಂದ್ರಗೆ ಟಿಕೆಟ್ ನೀಡಿದೆ ಎಂದಿದ್ದಾರೆ. ಇನ್ನೊಂದೆಡೆ ಬಿಜೆಪಿ 8 ಅಭ್ಯರ್ಥಿಗಳ 3ನೇ ಪಟ್ಟಿ ಬಿಡುಗಡೆ ಮಾಡಿದೆ.
10 ದಿನದಲ್ಲಿ ಮನ್ನಾ: ಛತ್ತೀಸ್‌ಗಡದ ರಾಯು³ರ ದಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ರ್ಯಾಲಿ ನಡೆಸಿದ್ದು, ರಾಜ್ಯದಲ್ಲಿ ಅಧಿಕಾರಕ್ಕೆ ಬಂದ 10 ದಿನದ ಒಳಗಾಗಿ ಕೃಷಿ ಸಾಲ ಮನ್ನಾ ಮಾಡು ವುದಾಗಿ ಘೋಷಿಸಿದ್ದಾರೆ. ಅಲ್ಲದೆ, ಸಾಲ ಮನ್ನಾಗೆ ವಿಜಯ ಮಲ್ಯ, ನೀರವ್, ಅನಿಲ್ ಅಂಬಾನಿಯಂಥವರಿಂದ ಹಣ ಬರುತ್ತದೆ ಎಂದೂ ಹೇಳಿದ್ದಾರೆ.
10 ಲಕ್ಷ ಉದ್ಯೋಗ, ಸ್ಕೂಟರ್: ಮಧ್ಯ ಪ್ರದೇಶದಲ್ಲಿ ಬಿಜೆಪಿ ಪ್ರಣಾಳಿಕೆಯನ್ನು ಕೇಂದ್ರ ಸಚಿವ ಅರುಣ್ ಜೇಟ್ಲಿ ಹಾಗೂ ಸಿಎಂ ಶಿವರಾಜ್ ಸಿಂಗ್ ಬಿಡುಗಡೆ ಮಾಡಿದ್ದಾರೆ. ಅಧಿಕಾರಕ್ಕೆ ಬಂದರೆ 10 ಲಕ್ಷ ಹೊಸ ಉದ್ಯೋಗ ಸೃಷ್ಟಿ, ಗ್ವಾಲಿಯರ್, ಜಬಲ್ಪುರದಲ್ಲಿ ಮೆಟ್ರೋ, 12ನೇ ತರಗತಿಯಲ್ಲಿ ಶೇ.75 ಅಂಕ ಗಳಿಸಿದ ವಿದ್ಯಾರ್ಥಿನಿಯರಿಗೆ ಸ್ಕೂಟರ್ ಸೇರಿದಂತೆ ಹಲವು ಆಶ್ವಾಸನೆಗಳನ್ನು ಘೋಷಿಸಲಾಗಿದೆ.
46 ವರ್ಷಗಳ ಸಂಪ್ರದಾಯ ಮುರಿದ ಕಾಂಗ್ರೆಸ್: ರಾಜಸ್ಥಾನದ ಮುಸ್ಲಿಂ ಬಾಹುಳ್ಯದ ಟಾಂಕ್ ಕ್ಷೇತ್ರ ದಲ್ಲಿ ರಾಜ್ಯಾಧ್ಯಕ್ಷ ಸಚಿನ್ ಪೈಲಟ್ ಅವರನ್ನು ಕಣ ಕ್ಕಿಳಿಸುವ ಮೂಲಕ ಕಾಂಗ್ರೆಸ್ ತನ್ನ 46 ವರ್ಷ ಗಳ ಸಂಪ್ರದಾಯ ವನ್ನು ಮುರಿದಿದೆ. 1972ರಿಂದಲೂ ಈ ಕ್ಷೇತ್ರದಲ್ಲಿ ಮುಸ್ಲಿಂ ಅಭ್ಯರ್ಥಿಯನ್ನೇ ಕಣಕ್ಕಿಳಿ ಸುತ್ತಿದ್ದ ಕಾಂಗ್ರೆಸ್ ಇದೇ ಮೊದಲ ಬಾರಿಗೆ ಪೈಲಟ್‌ರನ್ನು ಕಣಕ್ಕಿಳಿಸುವ ಮೂಲಕ ಅಚ್ಚರಿ ಮೂಡಿಸಿದೆ. ಟೊಂಕ್‌ನಲ್ಲಿ 2.22 ಲಕ್ಷ ಮತದಾರರ ಪೈಕಿ 50 ಸಾವಿರ ಮಂದಿ ಮುಸ್ಲಿಮರು. ಹೀಗಾಗಿ ಇಲ್ಲಿ ಮುಸ್ಲಿ ಮರನ್ನೇ ಕಣಕ್ಕಿಳಿಸಲಾಗುತ್ತಿತ್ತು. ಆದರೆ, ಈ ಬಾರಿ ಗುಜ್ಜರ್ ಸಮುದಾಯದ ಪೈಲಟ್ ಕಣಕ್ಕಿಳಿದಿದ್ದು, ಇಲ್ಲಿ ಮುಸ್ಲಿಮರು, ಗುಜ್ಜರ್‌ಗಳು ಹಾಗೂ ಎಸ್‌ಸಿ, ಎಸ್‌ಟಿಗಳ ಮತವನ್ನು ಪಡೆಯುವ ಲೆಕ್ಕಾಚಾರ ಕಾಂಗ್ರೆಸ್‌ನದ್ದಾಗಿದೆ. ಅಲ್ಲದೆ, ಪೈಲಟ್‌ರ ತಂದೆ ಹಾಗೂ ಮಾವ ಇಲ್ಲಿನ ಮುಸ್ಲಿಂ ಸಮುದಾಯದ ಪ್ರಮುಖ ಕುಟುಂಬಗಳೊಂದಿಗೆ ಉತ್ತಮ ನಂಟು ಹೊಂದಿದ್ದ ಕಾರಣ, ಮುಸ್ಲಿಮರು ಸಂಪೂರ್ಣ ಬೆಂಬಲ ಸೂಚಿಸುತ್ತಾರೆ ಎಂಬ ಭರವಸೆಯೂ ಕಾಂಗ್ರೆಸ್‌ಗಿದೆ ಎನ್ನಲಾಗಿದೆ.
ಕುಶ್ವಾಹಾ ಗಡುವು: ಏತನ್ಮಧ್ಯೆ, ಲೋಕಸಭೆ ಚುನಾ ವಣೆಗೆ ಬಿಜೆಪಿ ನಮಗೆ ಗೌರವಾನ್ವಿತ ಸೀಟುಗಳನ್ನು ಬಿಟ್ಟುಕೊಟ್ಟಿಲ್ಲ ಎಂದು ಆರೋಪಿಸಿ ಎನ್‌ಡಿಎ ಮಿತ್ರಪಕ್ಷ ಆರ್‌ಎಲ್‌ಎಸ್‌ಪಿ, ಸೀಟು ಹಂಚಿಕೆ ಬಿಕ್ಕಟ್ಟು ನಿವಾರಣೆ ಆಗದಿದ್ದರೆ ದುಬಾರಿ ಬೆಲೆ ತೆರಬೇಕಾದೀತು ಎಂದು ಎಚ್ಚರಿಕೆ ನೀಡಿದೆ. ಅಲ್ಲದೆ, ನ.30ರೊಳಗೆ ಸೂಕ್ತ ಪರಿಹಾರ ಒದಗಿಸದಿದ್ದರೆ, ಅಂದು ಅತಿದೊಡ್ಡ ಘೋಷಣೆ ಮಾಡಲಿದ್ದೇವೆ ಎನ್ನುವ ಮೂಲಕ ಪಕ್ಷದ ನಾಯಕ ಉಪೇಂದ್ರ ಖುಶ್ವಾಹಾ ಅವರು ಎನ್‌ಡಿಎಯಿಂದ ಹೊರ ಬರುವ ಸುಳಿವು ನೀಡಿದ್ದಾರೆ.
ನಿಮ್ಮ ಅಜ್ಜ-ಅಜ್ಜಿ ಬ್ರಿಟಿಷರ ಜತೆ ಕೈಜೋಡಿಸಿದ್ದರು
ಛತ್ತೀಸ್‌ಗಢದ ರ್ಯಾಲಿಯಲ್ಲಿ ಶುಕ್ರವಾರ ಪ್ರಧಾನಿ ಮೋದಿ ಮಾಡಿರುವ ಟೀಕೆಗಳಿಗೆ ಶನಿವಾರ ಕಾಂಗ್ರೆಸ್ ತಿರುಗೇಟು ನೀಡಿದೆ. “ಛತ್ತೀಸ್‌ಗಡದಲ್ಲಿ ನಿಮ್ಮ ಅಜ್ಜ-ಅಜ್ಜಿ ಬಂದು ಪೈಪ್‌ಲೈನ್ ಹಾಕಿದ್ದರಾ’ ಎಂಬ ಪ್ರಧಾನಿ ಮೋದಿ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ನಾಯಕ ಕಪಿಲ್ ಸಿಬಲ್, “ನೆಹರೂ ಆಧುನಿಕ ಭಾರತಕ್ಕೆ ಅಡಿಪಾಯ ಹಾಕುತ್ತಿದ್ದಾಗ, ನಿಮ್ಮ ಅಜ್ಜ-ಅಜ್ಜಿ ಬ್ರಿಟಿಷರೊಂದಿಗೆ ಕೈಜೋಡಿಸಿದ್ದರು’ ಎಂದು ಹೇಳಿದ್ದಾರೆ. ಇನ್ನೊಂದೆಡೆ, “ನೆಹರೂ-ಗಾಂಧಿ ಕುಟುಂಬದ ಹೊರತಾದವರನ್ನು ಕಾಂಗ್ರೆಸ್ ಅಧ್ಯಕ್ಷರನ್ನಾಗಿ ಸಲಿ’ ಎಂದು ಪ್ರಧಾನಿ ಮೋದಿ ಹಾಕಿದ್ದ ಸವಾಲಿಗೆ ಪ್ರತಿಯಾಗಿ ಕಾಂಗ್ರೆಸ್ ನಾಯಕ ಪಿ.ಚಿದಂಬರಂ ಟ್ವೀಟ್ ಮಾಡಿದ್ದು, 1947ರ ನಂತರ ನೆಹರೂ-ಗಾಂಧಿ ಕುಟುಂಬದ ಹೊರಗಿನ ಯಾರೆಲ್ಲ ಕಾಂಗ್ರೆಸ್ ಅಧ್ಯಕ್ಷರಾಗಿದ್ದರೋ, ಅವರೆಲ್ಲರ ಹೆಸರನ್ನೂ ಪಟ್ಟಿ ಮಾಡಿ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಅಲ್ಲದೆ, ಮೋದಿ ಭಾಷಣದಲ್ಲಿ ಅರ್ಧ ಸಮಯವನ್ನು ನೋಟು ಅಮಾನ್ಯ, ಜಿಎಸ್‌ಟಿ, ರಫೇಲ್, ನಿರುದ್ಯೋಗ, ರೈತರ ಆತ್ಮಹತ್ಯೆ ಬಗ್ಗೆ ಮಾತನಾಡಲು ಮೀಸಲಿಡಲಿ ಎಂದೂ ಚಿದು ಸಲಹೆ ನೀಡಿದ್ದಾರೆ.
ಮುಚ್ಚಿಟ್ಟುಕೊಂಡವರಿಗೆ ಸಿಬಿಐ ಭಯ: ಜೇಟ್ಲಿ
ಯಾರಿಗೆ ಮುಚ್ಚಿಟ್ಟುಕೊಳ್ಳುವಂಥದ್ದು ಬಹಳಷ್ಟು ಇವೆಯೋ, ಅಂಥವರು ಮಾತ್ರ ಸಿಬಿಐ ಅನ್ನು ಕಂಡರೆ ಭಯ ಪಡುತ್ತಾರೆ. ಹೀಗೆಂದು ಹೇಳಿದ್ದು ವಿತ್ತ ಸಚಿವ ಅರುಣ್ ಜೇಟ್ಲಿ. ಸಿಬಿಐಗೆ ಆಂಧ್ರ ಮತ್ತು ಪಶ್ಚಿಮ ಬಂಗಾಳ ಸರಕಾರ ನಿಷೇಧ ಹೇರಿರುವ ಕುರಿತು ಭೋಪಾಲ್‌ನಲ್ಲಿ ಪ್ರತಿಕ್ರಿಯಿಸಿದ ಜೇಟ್ಲಿ, “ಆಂಧ್ರದಲ್ಲಿನ ಬೆಳವಣಿಗೆಯು ನಿರ್ದಿಷ್ಟ ಪ್ರಕರಣಕ್ಕೆ ಸಂಬಂಧಿಸಿದ್ದಲ್ಲ. ಮುಂದೆ ಏನು ಆಗಬಹುದು ಎಂಬ ಭಯದಿಂದಾಗಿ ಸಿಬಿಐಗೆ ನಿಷೇಧ ಹೇರಲಾಗಿದೆ. ಇದಕ್ಕಿಂತ ಹೆಚ್ಚು ಏನನ್ನೂ ನಾನು ಹೇಳುವುದಿಲ್ಲ’ ಎಂದಿದ್ದಾರೆ. ಇದೇ ವೇಳೆ, ನೋಟು ಅಮಾನ್ಯವು ನೈತಿಕ ಕ್ರಮವಾಗಿತ್ತೇ ವಿನಾ ರಾಜಕೀಯ ಕ್ರಮವಲ್ಲ ಎಂದೂ ಜೇಟ್ಲಿ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Raj Thackeray ಮಹಾ ಫಲಿತಾಂಶದ ನಂತರ ಪ್ರಮುಖ ಪಾತ್ರ ವಹಿಸಲಿದ್ದಾರೆ: ನಂದಗಾಂವ್ಕರ್
Maharastra: ಚುನಾವಣಾ ರ್‍ಯಾಲಿ ರದ್ದುಗೊಳಿಸಿ ದಿಢೀರ್ ದೆಹಲಿಗೆ ವಾಪಸ್ಸಾದ ಸಚಿವ ಅಮಿತ್ ಶಾ
The Sabarmati Report ;ಸಿನಿಮಾವಾಗಿ ಗೋಧ್ರಾ ದುರಂತ: ಸತ್ಯ ಹೊರಬರುತ್ತಿದೆ ಎಂದ ಪ್ರಧಾನಿ
Kailash Gahlot: ಚುನಾವಣೆಗೂ ಮೊದಲೇ ಆಪ್ ತೊರೆದ ಸಚಿವ ಕೈಲಾಶ್ ಗೆಹ್ಲೋಟ್…
Patna: ಆಸ್ಪತ್ರೆಯಲ್ಲಿ ಮೃತಪಟ್ಟ ರೋಗಿಯ ಕಣ್ಣೇ ಮಾಯಾ… ಇಲಿ ತಿಂದಿದೆ ಎಂದ ವೈದ್ಯರು
MUST WATCH
ಹೊಸ ಸೇರ್ಪಡೆ
Pushpa 2 trailer: ಪೈಸಾ ವಸೂಲ್ ಅವತಾರದಲ್ಲಿ ʼಪುಷ್ಪರಾಜ್ʼ; ಅಲ್ಲು ಭರ್ಜರಿ ಆ್ಯಕ್ಷನ್
Chikkamagaluru: ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳ ಬಂಧನ
Raj Thackeray ಮಹಾ ಫಲಿತಾಂಶದ ನಂತರ ಪ್ರಮುಖ ಪಾತ್ರ ವಹಿಸಲಿದ್ದಾರೆ: ನಂದಗಾಂವ್ಕರ್
Ration Card: ಅನರ್ಹರಿಗೆ ಬಿಪಿಎಲ್ ಕಾರ್ಡ್ ಕೊಡಲ್ಲ, ಅರ್ಹರಿಗೆ ತಪ್ಪಿಸಲ್ಲ: ಸಿದ್ದರಾಮಯ್ಯ
ಈ ಎಲೆಯಿಂದ ಮಾಡುವ ಖಾದ್ಯ ಆರೋಗ್ಯಕ್ಕೂ ಉತ್ತಮ… ಅದ್ಯಾವ ಎಲೆ ಅಂತೀರಾ ಇಲ್ಲಿದೆ ರೆಸಿಪಿ…
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.