ಕೋವಿಡ್ ಲಸಿಕೆ ಕೊರತೆ ಇದೆ,ಕೇಂದ್ರಕ್ಕೆ ಟ್ವೀಟರ್ ಬ್ಲೂಟಿಕ್ ಚರ್ಚೆಯೇ ಹೆಚ್ಚು: ಗಾಂಧಿ ಕಿಡಿ
Team Udayavani, Jun 6, 2021, 5:15 PM IST
ನವ ದೆಹಲಿ : ದೇಶದಲ್ಲಿ ಕೋವಿಡ್ ಸೋಂಕನ್ನು ನಿಯಂತ್ರಣ ಮಾಡುವುದರ ಬಗ್ಗೆ ಚರ್ಚೆ ಮಾಡಬೇಕಾದ ಕೇಂದ್ರ ಸರ್ಕಾರ ಟ್ವೀಟರ್ ನಲ್ಲಿ ಬ್ಲೂ ಟಿಕ್ ಕುರಿತಾಗಿ ಚರ್ಚೆಯಲ್ಲಿ ತೊಡಗಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೇಂದ್ರ ವಿರುದ್ಧ ಮತ್ತೆ ವಾಗ್ಬಾಣ ಬಿಟ್ಟಿದ್ದಾರೆ.
ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಕೋವಿಡ್ ಹಾಗೂ ಟ್ವೀಟರ್ ಬ್ಲೂ ಟಿಕ್ ಬಗ್ಗೆ ಟೀಕೆ ಮಾಡಿದ ಗಾಂಧಿ, ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಟ್ವಿಟರ್ ನಲ್ಲಿ ಬ್ಲೂ ಟಿಕ್ಗಾಗಿ ಜಗಳಾಡುವುದರಲ್ಲಿ ನಿರತವಾಗಿದೆ. ಕೊವಿಡ್ ಲಸಿಕೆ ಬೇಕಾದರೆ ಅವರು ಆತ್ಮನಿರ್ಭರರಾಗಿ ಇರಬೇಕಷ್ಟೆ. ಸ್ವಾವಲಂಬಿಯಾಗಿರಬೇಕು ಅಷ್ಟೇ ಎಂದಿ ಕೇಂದ್ರದ ವಿರುದ್ಧ ತೀವ್ರವಾಗಿ ಟೀಕೆ ಮಾಡಿದ್ದಾರೆ.
ब्लू टिक के लिए मोदी सरकार लड़ रही है-
कोविड टीका चाहिए तो आत्मनिर्भर बनो!#Priorities— Rahul Gandhi (@RahulGandhi) June 6, 2021
ಇದನ್ನೂ ಓದಿ : ಗುಳೇದಗುಡ್ಡ: ರಜೆಯ ಮಜಾದಲ್ಲಿ ಕೋವಿಡ್ ಮರೆತ ಜನ, ಅಂತರವೂ ಇಲ್ಲ, ಕಾಳಜಿಯೂ ಇಲ್ಲ
ಟ್ವಿಟರ್ ನಲ್ಲಿ ಬ್ಲೂ ಟಿಕ್ ಆ ಖಾತೆಗಳು ಅಧಿಕೃತವೆಂದುಸೂಚಿಸುವ ಮಾನದಂಡವಾಗಿದೆ. ಕಳೆದೊಂದೆರಡು ದಿನಗಳಿಂಚೆಗೆ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್ ಎಸ್ ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಹಾಗೂ ಇನ್ನಿತರ ಕೆಲ ನಾಯಕರ ಟ್ವಿಟರ್ ಖಾತೆಯ ಬ್ಲೂ ಟಿಕ್ ನನ್ನು ಟ್ವಿಟರ್ ಸಂಸ್ಥೆ ತೆಗೆದಿತ್ತು.
ಕೇಂದ್ರ ಸರ್ಕಾರ, ಹೊಸ ನಿಯಮಾವಳಿಗಳನ್ನು ಅನುಮೋದಿಸುವಂತೆ ಟ್ವಿಟರ್ ಗೆ ಅಂತಿಮ ಸೂಚನೆ ಕೊಟ್ಟಿತ್ತು. ಆ ಬಳಿಕ ಈ ಘಟನೆಗಳು ನಡೆದಿದ್ದವು.
ಇನ್ನು, ಈ ಕುರಿತಾಗಿ ಟ್ವಿಟರ್ಗೆ ತಿಳಿಸಿದರೂ ಯಾವುದೇ ಪ್ರತಿಕ್ರಿಯೆ ಇಲ್ಲ ಎಂದು ರಾಜೀವ್ ತುಳಿ ಎಂಬುವರು ಟ್ವೀಟ್ ಮಾಡಿದ್ದರು.
ಟ್ವಿಟರ್ ನಲ್ಲಿ ಯಾವುದೇ ಗಣ್ಯರು ಈ ಬ್ಲೂಟಿಕ್ ಪಡೆಯಬೇಕು ಎಂದರೆ ಅವರು ಅದರಲ್ಲಿ ಸಕ್ರಿಯರಾಗಿರಬೇಕು. ಅವರದ್ದೇ ಅಧಿಕೃತ ಖಾತೆ ಎಂದು ದೃಢೀಕರಿಸಬೇಕು. ಆದರೆ ಇತ್ತೀಚೆಗೆ ಟ್ವಿಟರ್ ಪರಿಶೀಲನೆ ನಡೆಸಿದಾಗ ಕೆಲವು ಖಾತೆಗಳು ತುಂಬದಿನಗಳಿಂದ ಬಳಕೆಯಾಗಿಲ್ಲ ಎಂಬುದು ಗೊತ್ತಾಗಿದೆ. ಹಾಗಾಗಿ ಅಂತಹ ಟ್ವಿಟರ್ ಖಾತೆಗಳ ದೃಢೀಕರಣ ಅಥವಾ ಅಧಿಕೃತ ಮಾನದಂಡವಾದ ಬ್ಲೂ ಟಿಕ್ ನನ್ನು ತೆಗೆದುಹಾಕಿದೆ.
ಆರ್ಎಸ್ಎಸ್ ನ ನಾಯಕ ಮೋಹನ್ ಭಾಗವತ್, ಸುರೇಶ್ ಜೋಶಿ, ಅರುಣ್ ಕುಮಾರ್, ಕೃಷ್ಣನ್ ಗೋಪಾಲ್ ಮತ್ತಿತರರ ವೈಯಕ್ತಿಕ ಟ್ವಿಟರ್ ಖಾತೆಗೆ ಇದ್ದ ಬ್ಲೂಟಿಕ್ ಗಳು ನಿನ್ನೆ (ಜೂನ್ 5) ಬೆಳಗ್ಗೆ ಇಲ್ಲವಾಗಿತ್ತು.
ಇನ್ನು, ಟ್ವಿಟರ್ ಸಂಸ್ಥೆ ಯಾವುದೇ ಖಾತೆಗೆ ಬ್ಲೂಟಿಕ್ ದೃಢಿಕರಣವನ್ನು ನೀಡುವಾಗ ಒಂದು ಹೆಸರಿದ್ದು, ಬಳಿಕ ಆ ಬಳಕೆದಾರರು ಹೆಸರನ್ನು ಬದಲಿಸಿಕೊಂಡರೆ ತಕ್ಷಣವೇ ಅವರಿಗೆ ನೀಡಲಾಗಿದ್ದ ದೃಢೀಕರಣ ಬ್ಲೂ ಟಕ್ ನನ್ನು ಹಿಂಪಡೆಯಲಾಗುತ್ತದೆ ಎಂದು ಟ್ವಿಟರ್ ತನ್ನ ವೆರಿಫಿಕೇಶನ್ ನಿಯಮದಲ್ಲಿ ಉಲ್ಲೇಖಿಸಿದೆ.
ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರ ವೈಯಕ್ತಿಕ ಖಾತೆಯ ಬ್ಲೂಟಿಕ್ ತೆಗೆದುಹಾಕಿದ್ದ ಟ್ವಿಟರ್, ಆಕ್ಷೇಪಣೆಗಳು ವ್ಯಕ್ತವಾದ ಬೆನ್ನಲ್ಲೇ ಅದನ್ನು ಮತ್ತೆ ನೀಡಿತ್ತು.
ಇದನ್ನೂ ಓದಿ : ರಾಜ್ಯಕ್ಕೆ ತಕ್ಷಣ 50 ಸಾವಿರ ಆಂಪೋಟೆರಿಸಿನ್ ಬಿ ಪೂರೈಸಲು ಈಶ್ವರ ಖಂಡ್ರೆ ಆಗ್ರಹ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
Adani ವಿರುದ್ಧ ಲಂಚ ಆರೋಪ; ಏನಿದು ಪ್ರಕರಣ? ಅಮೆರಿಕದಲ್ಲಿ ಪ್ರಕರಣ ಏಕೆ?
Mahayuti ಗೆಲುವು: ಆ್ಯಕ್ಸಿಸ್ ಮೈ ಇಂಡಿಯಾ, ಚಾಣಕ್ಯ ಸಮೀಕ್ಷೆ ಭವಿಷ್ಯ
Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.