ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಕೋವಿಡ್ ದೃಢ
Team Udayavani, Apr 20, 2021, 3:51 PM IST
ನವ ದೆಹಲಿ : ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಕೋವಿಡ್ ಸೋಂಕು ದೃಢಗೊಂಡಿದೆ ಎಂದು ಅವರು ತಮ್ಮ ಅಧಿಕೃತ ಟ್ವೀಟರ್ ನಲ್ಲಿ ಹಂಚಿಕೊಂಡಿದ್ದಾರೆ.
ತಮ್ಮ ಅಧಿಕೃತ ಟ್ವೀಟರ್ ಖಾತೆಯಲ್ಲಿ ಈ ಬಗ್ಗೆ ಮಾಹಿತಿ ಹಂಚಿಕೊಂಡ ಗಾಂಧಿ, “ಕೋವಿಡ್ ಸೋಂಕಿನ ಸಣ್ಣ ಪುಟ್ಟ ರೋಗಲಕ್ಷಣಗಳನ್ನು ಅನುಭವಿಸಿದ ನಂತರ, ಕೋವಿಡ್ ಪರೀಕ್ಷೆಗೆ ಒಳಗಾಗಿದ್ದು, ಕೋವಿಡ್ ಸೋಂಕು ಇರುವುದಾಗಿ ವರದಿ ಬಂದಿದೆ. ಇತ್ತೀಚೆಗೆ ನನ್ನೊಂದಿಗೆ ಸಂಪರ್ಕದಲ್ಲಿದ್ದ ಎಲ್ಲರೂ ದಯವಿಟ್ಟು ಎಲ್ಲಾ ಸುರಕ್ಷತಾ ಪ್ರೋಟೋಕಾಲ್ ಗಳನ್ನು ಅನುಸರಿಸಿ ಮತ್ತು ಸುರಕ್ಷಿತವಾಗಿರಿ. ಎಂದು ಅವರು ಟ್ವೀಟರ್ ನಲ್ಲಿ ಬರೆದುಕೊಂಡಿದ್ದಾರೆ.
ಓದಿ : ಮಂಗಳೂರು : ಪಂಪ್ ವೆಲ್ ಫ್ಲೈ ಓವರ್ ಗೋಡೆ ಮೇಲೆ ಅವಹೇಳನಕಾರಿ ಬರಹ ಪತ್ತೆ
After experiencing mild symptoms, I’ve just tested positive for COVID.
All those who’ve been in contact with me recently, please follow all safety protocols and stay safe.
— Rahul Gandhi (@RahulGandhi) April 20, 2021
ಇನ್ನು, ಇಂದು ಬೆಳಗ್ಗೆಯಷ್ಟೇ, ವಲಸೆ ಕಾರ್ಮಿಕರ ಖಾತೆಗಳಿಗೆ ಹಣವನ್ನು ಹಾಕುವುದು ಕೇಂದ್ರ ಸರ್ಕಾರದ ಜವಾಬ್ದಾರಿಯಾಗಿದೆ ಎಂದು ಅವರು ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗದುಕೊಂಡಿದ್ದರು.
ತಮ್ಮ ಟ್ವೀಟರ್ ಖಾತೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, “ವಲಸಿಗರು ಮತ್ತೊಮ್ಮೆ ವಲಸೆ ಹೋಗುತ್ತಿದ್ದಾರೆ. ಅಂತಹ ಪರಿಸ್ಥಿತಿಯಲ್ಲಿ ಹಣವನ್ನು ಅವರ ಬ್ಯಾಂಕ್ ಖಾತೆಗಳಿಗೆ ಹಾಕುವುದು ಕೇಂದ್ರ ಸರ್ಕಾರದ ಜವಾಬ್ದಾರಿಯಾಗಿದೆ”. ಆದರೆ ಸರ್ಕಾರವು ಕೋವಿಡ್ ಹರಡಲು ಜನರನ್ನು ದೂಷಿಸುತ್ತಿರುವ ಕೇಂದ್ರ, ಇಂತಹ ಸಾರ್ವಜನಿಕ ನೆರವು ಕ್ರಮವನ್ನು ತೆಗೆದುಕೊಳ್ಳುತ್ತದೆಯೇ?” ಎಂದು ಅವರು ಕೇಳಿದ್ದರು.
ಸದ್ಯ, ಅವರಿಗೆ ಕೋವಿಡ್ ಸೋಂಕು ದೃಢಗೊಂಡಿದ್ದು, ಕ್ವಾರಂಟೈನ್ ಗೆ ಒಳಗಾಗಿದ್ದಾರೆ ಎಂದು ಸುದ್ದಿ ಮೂಲಗಳು ತಿಳಿಸಿವೆ.
ಓದಿ : ಕೋವಿಡ್ ಸೋಂಕು ಹೆಚ್ಚಳ: ವಾರಾಂತ್ಯದ ಲಾಕ್ ಡೌನ್ ಜಾರಿಗೊಳಿಸಿದ ಉತ್ತರಪ್ರದೇಶ ಸರಕಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Uttar Pradesh: ಆಸ್ಪತ್ರೆಯಲ್ಲಿ ಬೆಂಕಿ 10 ನವಜಾತ ಶಿಶುಗಳ ಸಾವು; 40 ಮಕ್ಕಳ ರಕ್ಷಣೆ
Delhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳು
Gujarat: 700 ಕೆ.ಜಿ. ಡ್ರಗ್ಸ್ ವಶ: 8 ಮಂದಿ ಬಂಧನ; ಕಳೆದ 1 ತಿಂಗಳಲ್ಲಿ ಭರ್ಜರಿ 3ನೇ ಬೇಟೆ
Bombay high court: ವಯಸ್ಕಳಲ್ಲದ ಪತ್ನಿ ಜತೆ ಒಪ್ಪಿತ ಲೈಂಗಿಕ ಸಂಬಂಧ ರೇ*ಪ್
Jharkhand; ವಿಮಾನದಲ್ಲಿ ತಾಂತ್ರಿಕ ದೋಷ: 2 ಗಂಟೆ ಕಾದ ಪ್ರಧಾನಿ ಮೋದಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.