![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Jun 29, 2018, 3:39 PM IST
ಹೊಸದಿಲ್ಲಿ : ಹಿರಿಯ ಕಾಂಗ್ರೆಸ್ ನಾಯಕ ಗುಲಾಂ ನಬಿ ಆಜಾದ್ ಮತ್ತು ಸೈಫುದ್ದೀನ್ ಸೋಜ್ ಸೇನೆಯನ್ನು ಅವಮಾನಿಸುವ ಹೇಳಿಕೆ ನೀಡಿರುವರೆಂಬ ಕಾರಣಕ್ಕೆ ಅವರ ವಿರುದ್ಧ ವಿರುದ್ಧ ದೇಶದ್ರೋಹದ ದೂರನ್ನು ದಾಖಲಿಸಲಾಗಿದೆ.
ವಕೀಲ ಶಶಿ ಭೂಷಣ್ ಅವರು ಪಟಿಯಾಲಾ ಹೌಸ್ ಕೋರ್ಟ್ ನಲ್ಲಿ ಈ ದೂರನ್ನು ದಾಖಲಿಸಿದ್ದಾರೆ.
ಹಿರಿಯ ಕಾಂಗ್ರೆಸ್ ನಾಯಕ ಗುಲಾಂ ನಬಿ ಆಜಾದ್ ಅವರು ಈಚೆಗೆ “ಜಮ್ಮು ಕಾಶ್ಮೀರದಲ್ಲಿ ಸೇನಾ ಕಾರ್ಯಾಚರಣೆಗೆ ಉಗ್ರರಿಗಿಂತಲೂ ಹೆಚ್ಚು ಸಂಖ್ಯೆಯಲ್ಲಿ ಪೌರರು ಬಲಿಯಾಗಿದ್ದಾರೆ’ ಎಂದು ಹೇಳಿದ್ದರು.
ಸೇನೆಯ ವಿರುದ್ಧದ ಈ ಅವಮಾನಕಾರಿ ಹೇಳಿಕೆಗಾಗಿ ಆಜಾದ್ ವಿರುದ್ಧ ಐಪಿಸಿ ಸೆ.124, 120ಬಿ ಮತುತ 505(1) ರ ಪ್ರಕಾರ ತೆಗೆದುಕೊಳ್ಳಬೇಕೆಂದು ಭಷಣ್ ಅವರು ದೂರಿನಲ್ಲಿ ಆಗ್ರಹಿಸಿದ್ದಾರೆ.
ಸೇನೆಯು ಅಮಾಯಕರ ಕೊಲೆಗಡುಕನೆಂದು ಆರೋಪಿಸಿಸುವುದು ದೇಶದ ವಿರುದ್ಧ ಯುದ್ಧ ಸಾರುವುದಕ್ಕೆ ಕಡಿಮೆ ಎನಿಸದ ಕೃತ್ಯವಾಗಿದೆ ಎಂದು ವಕೀಲ ಭೂಷಣ್ ಅವರು ದೂರಿನಲ್ಲಿ ಹೇಳಿದ್ದಾರೆ.
ಭೂಷಣ್ ಅವರು ದಾಖಲಿಸಿರುವ ಈ ದೂರು ನಾಳೆ ಶನಿವಾರ ಮ್ಯಾಜಿಸ್ಟೀರಿಯಲ್ ಕೋರ್ಟಿನಲ್ಲಿ ವಿಚಾರಣೆಗೆ ಬರಲಿದೆ.
ಮಾಜಿ ಕೇಂದ್ರ ಸಚಿವ ಸೈಫುದ್ದೀನ್ ಸೋಜ್ ಅವರು ಕಳೆದ ವಾರ “ಕಾಶ್ಮೀರದಲ್ಲಿ ಆಜಾದಿ ಅಸಾಧ್ಯ; ಎಲ್ಲ ಹಿತಾಸಕ್ತಿದಾರರು ಒಟ್ಟಿಗೇ ಕುಳಿತು ಸಂವಾದ, ಮಾತುಕತೆ ನಡೆಸುವುದರಲ್ಲೇ ಕಾಶ್ಮೀರ ವಿವಾದಕ್ಕೆ ಪರಿಹಾರವಿದೆ’ ಎಂದು ಹೇಳಿದ್ದರು.
ಸೋಜ್ ಅವರು ತಮ್ಮ ಈಚೆಗೆ ಬಿಡುಗಡೆಯಾದ ಪುಸ್ತಕದಲ್ಲಿ “ಕಾಶ್ಮೀರಿಗಳಿಗೆ ಆಯ್ಕೆಯ ಅವಕಾಶ ಕೊಟ್ಟರೆ ಅವರು ಬಯಸುವುದು ಸಂಪೂರ್ಣ ಸ್ವಾತಂತ್ರ್ಯವನ್ನೇ ಎಂದು ಪಾಕ್ ಸರ್ವಾಧಿಕಾರಿ ಪರ್ವೆಜ್ ಮುಶರಫ್ ಹೇಳಿರುವುದು ಸರಿಯೇ ಆಗಿದೆ’ ಎಂದು ಹೇಳಿದ್ದರು.
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
You seem to have an Ad Blocker on.
To continue reading, please turn it off or whitelist Udayavani.