

Team Udayavani, Jan 30, 2025, 3:08 PM IST
ಉತ್ತರಪ್ರದೇಶ: ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ಸೀತಾಪುರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಸಂಸದ ರಾಕೇಶ್ ರಾಥೋಡ್ ಅವರನ್ನು ಗುರುವಾರ(ಜ.30) ಅವರ ನಿವಾಸದಿಂದ ಪೊಲೀಸರು ಬಂಧಿಸಿದ್ದಾರೆ.
ಜನವರಿ 17 ರಂದು ಮಹಿಳೆಯೊಬ್ಬರು ನೀಡಿರುವ ದೂರಿನ ಆಧಾರದ ಮೇಲೆ ಕಾಂಗ್ರೆಸ್ ಸಂಸದ ರಾಕೇಶ್ ರಾಥೋಡ್ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಾಗಿತ್ತು ಇದರ ಬೆನ್ನಲ್ಲೇ ಸಂಸದ ರಾಕೇಶ್ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು ಅದರಂತೆ ಜಿಲ್ಲೆಯ ಎಂಪಿಎಂಎಲ್‌ಎ ನ್ಯಾಯಾಲಯ ರಾಕೇಶ್ ಸಲ್ಲಿಸಿದ ಅರ್ಜಿಯನ್ನು ರದ್ದು ಮಾಡಿದೆ ಇದಾದ ಬಳಿಕ ಸಂಸದರು ಲಕ್ನೋ ಹೈಕೋರ್ಟ್ ಮೊರೆ ಹೋಗಿದ್ದರು.
ಆದರೆ ಇಂದು ಅರ್ಜಿ ಆಲಿಸಿದ ಹೈಕೋರ್ಟ್ ನಿರೀಕ್ಷಣಾ ಜಾಮೀನು ಅರ್ಜಿಯನ್ನು ತಿರಸ್ಕರಿಸಿ ಕೂಡಲೇ ಶರಣಾಗುವಂತೆ ಸೂಚಿಸಿತ್ತು ಆದರೆ ಸಂಸದರು ಶರಣಾಗದೆ ತನ್ನ ಮನೆಯಲ್ಲೇ ಪತ್ರಿಕಾಗೋಷ್ಠಿ ನಡೆಸಲು ಮುಂದಾಗಿದ್ದಾರೆ ಈ ವೇಳೆ ಬಂದ ಪೊಲೀಸರು ಪತ್ರಿಕಾಗೋಷ್ಠಿಯ ನಡುವೆಯೇ ರಾಥೋಡ್ ಅವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.
ಮಹಿಳೆ ನೀಡಿದ ದೂರಿನಲ್ಲೇನಿದೆ:
ಪ್ರಕರಣಕ್ಕೆ ಸಂಬಂಧಿಸಿ ಮಹಿಳೆ ಪೊಲೀಸ್ ಠಾಣೆಯಲ್ಲಿ ಸಂಸದ ರಾಕೇಶ್ ರಾಥೋಡ್ ಅವರ ವಿರುದ್ಧ ದೂರು ನೀಡಿದ್ದು ಅದರಲ್ಲಿ ತನ್ನನ್ನು ಮದುವೆಯಾಗುವುದಾಗಿ ಭರವಸೆ ನೀಡಿ ಕಳೆದ ನಾಲ್ಕು ವರ್ಷಗಳಿಂದ ನನ್ನ ಮೇಲೆ ರಾಕೇಶ್ ಅತ್ಯಾಚಾರವೆಸಗಿದ್ದಾರೆ ಎಂದು ದೂರಿದ್ದಾರೆ ಅಲ್ಲದೆ ತನ್ನ ಮೊಬೈಲ್ ಗೆ ಕರೆ ಮಾಡಿರುವ ದಾಖಲೆಗಳನ್ನು ಸಹ ಮಹಿಳೆ ಪೊಲೀಸರಿಗೆ ನೀಡಿದ್ದಾರೆ.
ಇದನ್ನೂ ಓದಿ: ವಿದ್ಯಾರ್ಥಿಯನ್ನು ಮದುವೆಯಾದ ಪ್ರಾಧ್ಯಾಪಕಿ.. Video ವೈರಲ್ ಆಗುತ್ತಲೇ ಎಚ್ಚೆತ್ತ ಅಧಿಕಾರಿಗಳು
Delhi: ದೆಹಲಿಯ ನೂತನ ಮುಖ್ಯಮಂತ್ರಿಯಾಗಿ ರೇಖಾಗುಪ್ತ ಆಯ್ಕೆ… ನಾಳೆ(ಫೆ.20) ಪ್ರಮಾಣವಚನ
ಬೆಳಿಗ್ಗೆ 3 ಗಂಟೆಗೆ ಕೂಗಿ ನಿದ್ದೆ ಮಾಡಲು ಬಿಡದ ಕೋಳಿಯ ವಿರುದ್ಧವೇ ದೂರು ನೀಡಿದ ವ್ಯಕ್ತಿ
Racket: ಕಾರವಾರ ನೌಕಾನೆಲೆಯ ಸೂಕ್ಷ್ಮ ಮಾಹಿತಿ ಪಾಕ್ ಗೆ ನೀಡುತ್ತಿದ್ದ ಮತ್ತೋರ್ವನ ಬಂಧನ
Delhi stampede: ರೈಲ್ವೆ ಇಲಾಖೆಗೆ ದೆಹಲಿ ಹೈ ಕೋರ್ಟ್ ತೀವ್ರ ತರಾಟೆ!
Chhaava ಎಫೆಕ್ಟ್:ಸಂಭಾಜಿ ಮಹಾರಾಜ್ ಕುರಿತು ಆಕ್ಷೇಪಾರ್ಹ ಮಾಹಿತಿ: ವಿಕಿಪಿಡಿಯಾಗೆ ನೋಟಿಸ್
You seem to have an Ad Blocker on.
To continue reading, please turn it off or whitelist Udayavani.