ಕಾಂಗ್ರೆಸ್-ಟಿಡಿಪಿ ಮೈತ್ರಿ 2018ರ ಈಸ್ಟ್ ಇಂಡಿಯಾ ಕಂಪೆನಿ: ಓವೈಸಿ
Team Udayavani, Nov 5, 2018, 3:26 PM IST
ಹೈದರಾಬಾದ್ : ‘ಕಾಂಗ್ರೆಸ್ ಮತ್ತು ತೆಲುಗು ದೇಶಂ ನಡುವಿನ ಮೈತ್ರಿಯು 2018ರ ಈಸ್ಟ್ ಇಂಡಿಯಾ ಕಂಪೆನಿಯಾಗಿದೆ’ ಎಂದು ಆಲ್ ಇಂಡಿಯಾ ಮಜ್‌ಲಿಸ್ ಎ ಇತ್ತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ) ಪಕ್ಷದ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಟೀಕಿಸಿದ್ದಾರೆ.
‘ಕಾಂಗ್ರೆಸ್ – ಟಿಡಿಪಿ ನಡುವಿನ ಮೈತ್ರಿಯು ಮಹಾ ಕುಟುಂಬ ಅಲ್ಲ; ಇದು 2018ರ ಈಸ್ಟ್ ಇಂಡಿಯಾ ಕಂಪೆನಿ’ ಎಂದು ಓವೈಸಿ ಅವರು ಮೇಡಕ್ ಜಿಲ್ಲೆಯಲ್ಲಿನ ಸಂಗಾರೆಡ್ಡಿ ಕ್ಷೇತ್ರದ ಜಲಾಲಾ ಬಾಗ್ ಮಿಲಾದ್ ಗ್ರೌಂಡ್‌ನಲ್ಲಿ ನಡೆದ ಸಾರ್ವಜನಿಕ ಭಾಷಣ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಹೇಳಿದರು.
“ಇದು ಏಕೆ 2018ರ ಈಸ್ಟ್ ಇಂಡಿಯಾ ಕಂಪೆನಿ ಎಂಬುದನ್ನು ನಾನು ನಿಮಗೆ ಹೇಳುತ್ತೇನೆ; ತೆಲಂಗಾಣ ರಚನೆಯಾಗಿದೆ; ಈಗ ತೆಲಂಗಾಣದ ನಿರ್ಧಾರಗಳನ್ನು ನಾಯ್ಡು ಅವರು ವಿಜಯವಾಡದಲ್ಲಿ ಕುಳಿತು ತೆಗೆದುಕೊಳ್ಳುತ್ತಾರೆಯೇ ? ಅಥವಾ ನಾಗ್ಪುರದಲ್ಲಿನ ಆರ್‌ಎಸ್‌ಎಸ್ ತೆಗೆದುಕೊಳ್ಳುತ್ತದೆಯೇ ? ಅಥವಾ ದಿಲ್ಲಿಯಲ್ಲಿನ ಕಾಂಗ್ರೆಸ್ ತೆಗೆದುಕೊಳ್ಳುತ್ತದೆಯೇ ?” ಎಂದು ಓವೈಸಿ ಪ್ರಶ್ನಿಸಿದರು.
ಕಳೆದ ವಾರ ಟಿಡಿಪಿ 2019ರ ಲೋಕಸಭಾ ಚುನಾವಣೆಗಾಗಿ ಕಾಂಗ್ರೆಸ್ ಜತೆ ಕೈಜೋಡಿಸಿತ್ತು. ಅದನ್ನು ಅನುಸರಿಸಿ ಆಂಧ್ರ ಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಬಿಜೆಪಿಯೇತರ ನಾಯಕರನ್ನು ಭೇಟಿಯಾಗಿ ಹೊಸ ಮೈತ್ರಿ ಕೂಟ ರಚನೆಯ ಯತ್ನವನ್ನು ಆರಂಭಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Anmol Buffalo:1500 ಕೆಜಿ ತೂಗುವ ಈ ಕೋಣದ ಬೆಲೆ ಬರೋಬ್ಬರಿ 23 ಕೋಟಿ ರೂ!
Digital Arrest ಹೆಸರಿನಲ್ಲಿ ನಿವೃತ್ತ ಇಂಜಿನಿಯರ್ ಗೆ 10 ಕೋಟಿ ರೂಪಾಯಿ ಪಂಗನಾಮ!
Mumbai: ಲಾರೆನ್ಸ್ ಬಿಷ್ಣೋಯ್ ಹಿಟ್ ಲಿಸ್ಟ್‌ನಲ್ಲಿ ಶ್ರದ್ಧಾ ವಾಕರ್ ಹತ್ಯೆ ಆರೋಪಿ: ವರದಿ
Pollution: ದಿಲ್ಲಿಯಲ್ಲಿ ಈಗ ನಿರ್ಮಾಣಕ್ಕೆ ಬ್ರೇಕ್, ಬಸ್‌ಗಳಿಗೆ ನಿರ್ಬಂಧ
Video: ಕಾರಿನ ಟಯರ್ ಒಳಗಿತ್ತು ಒಂದಲ್ಲ, ಎರಡಲ್ಲ ಬರೋಬ್ಬರಿ 50 ಲಕ್ಷ… ದಂಗಾದ ಅಧಿಕಾರಿಗಳು
MUST WATCH
ಹೊಸ ಸೇರ್ಪಡೆ
Bengaluru: ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯ ಜೀವ ಉಳಿಸಿದ ಸಂಚಾರ ಪೊಲೀಸರು
Anmol Buffalo:1500 ಕೆಜಿ ತೂಗುವ ಈ ಕೋಣದ ಬೆಲೆ ಬರೋಬ್ಬರಿ 23 ಕೋಟಿ ರೂ!
BBK11: ಅಸಲಿ ಆಟ ಶುರು ಮಾಡಿದ ಧನರಾಜ್: ಮೋಕ್ಷಿತಾಳಿಗೆ ಅಹಂಕಾರ ಇದೆ ಎಂದ ಸೈಲೆಂಟ್ ಕಿಲಾಡಿ
Digital Arrest ಹೆಸರಿನಲ್ಲಿ ನಿವೃತ್ತ ಇಂಜಿನಿಯರ್ ಗೆ 10 ಕೋಟಿ ರೂಪಾಯಿ ಪಂಗನಾಮ!
Zebra: ಡಾಲಿ ಜೀಬ್ರಾಗೆ ಮೆಗಾಸ್ಟಾರ್ ಸಾಥ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.