BJP 5 ವರ್ಷದಲ್ಲಿ ಮಾಡಿದ ಅಭಿವೃದ್ಧಿಗೆ ಕಾಂಗ್ರೆಸ್ 20 ವರ್ಷ ತೆಗೆದುಕೊಳ್ಳುತ್ತಿತ್ತು
Team Udayavani, Mar 10, 2024, 1:17 AM IST
ಇಟಾನಗರ: ಈಶಾನ್ಯ ಭಾರತದಲ್ಲಿ ಬಿಜೆಪಿ ಸರಕಾರ 5 ವರ್ಷದಲ್ಲಿ ಮಾಡಿರುವ ಅಭಿವೃದ್ಧಿಯನ್ನು ಮಾಡಲು ಕಾಂಗ್ರೆಸ್ 20 ವರ್ಷಗಳನ್ನು ತೆಗೆದುಕೊಳ್ಳುತ್ತಿತ್ತು ಎಂದು ಪ್ರಧಾನಿ ನರೇಂದ್ರ ಮೋದಿ ಶನಿವಾರ ಹೇಳಿದ್ದಾರೆ.
ಅರುಣಾಚಲ ಪ್ರದೇಶದ ಇಟಾನಗರದಲ್ಲಿ ಆಯೋಜಿಸಲಾಗಿದ್ದ “ವಿಕಸಿತ ಭಾರತ, ವಿಕಸಿತ ಈಶಾನ್ಯ ಭಾರತ’ ಕಾರ್ಯಕ್ರಮದಲ್ಲಿ ಭಾಗಿಯಾದ ಅವರು 55600 ಕೋಟಿ ರೂ. ಮೌಲ್ಯದ ಯೋಜನೆಗಳಿಗೆ ಚಾಲನೆ ನೀಡಿದರು. ಇದೇ ವೇಳೆ ಮಾತಾನಾಡಿದ ಅವರು, ಮೋದಿ ಗ್ಯಾರಂಟಿ ಏನು ಎಂಬುದನ್ನು ಇಡೀ ಈಶಾನ್ಯ ಭಾರತ ನೋಡುತ್ತಿದೆ. ನಾನು ದೇಶ ಅಭಿವೃದ್ಧಿಗಾಗಿ ಕೆಲಸ ಮಾಡುತ್ತಿದ್ದರೆ ವಿಪಕ್ಷಗಳು ನನ್ನ ವಿರುದ್ಧ ಮಾತನಾಡುತ್ತಿವೆ. ನಾನು ಚುನಾವಣೆಗಾಗಿ ಇದನ್ನು ಮಾಡುತ್ತಿದ್ದೇನೆ ಎಂದು ಅವರು ಹೇಳುತ್ತಿದ್ದಾರೆ. ಆದರೆ ಅದು ಸುಳ್ಳು ಎಂಬುದನ್ನು ಇಂದಿನ ಕಾರ್ಯಕ್ರಮ ನಿರೂಪಿಸಿದೆ ಎಂದು ಹೇಳಿದರು.
ಪಶ್ಚಿಮ ಬಂಗಾಲದಲ್ಲಿ ಅಭಿವೃದ್ದಿ ಯೋಜನೆಗಳು ಲೋಕಾರ್ಪಣೆ
ಪ್ರಧಾನಿ ಮೋದಿ ಅವರು ಶನಿವಾರ ಪಶ್ಚಿಮ ಬಂಗಾಲದ ಸಿಲಿಗುರಿಯಲ್ಲಿ 4,500 ಕೋಟಿ ರೂ. ವೆಚ್ಚದ ಮೂಲಸೌಕರ್ಯ ಯೋಜನೆಗಳನ್ನು ಅನಾವರಣ ಮಾಡಿದರು. ಇದರಲ್ಲಿ ಬಹು ರೈಲ್ವೇ ಮಾರ್ಗಗಳು ಸೇರಿ ಕೊಂಡಿವೆ. ಜತೆಗೆ, 3,100 ಕೋಟಿ ರೂ. ವೆಚ್ಚದ 2 ರಾಷ್ಟ್ರೀಯ ಹೆದ್ದಾರಿಗಳನ್ನು ಲೋಕಾ ರ್ಪಣೆ ಮಾಡಿದರು. ಬಳಿಕ ಮಾತನಾಡಿದ ಮೋದಿ, “ಪಶ್ಚಿಮ ಬಂಗಾಲದ ಉತ್ತರ ಭಾಗದಲ್ಲಿನ ರೈಲ್ವೆ à ಮಾರ್ಗಗಳನ್ನು ವಿದ್ಯುದ್ದೀಕರಣ ಮಾಡಿದ್ದರಿಂದ ಈ ಪ್ರದೇಶ ಜನರಿಗೆ ಪರಿಸರ ಮಾಲಿನ್ಯ ತಪ್ಪಲಿದೆ’ ಎಂದು ಹೇಳಿದರು.
ಕಾಜಿರಂಗದಲ್ಲಿ ಆನೆ ಏರಿ ಸಫಾರಿ ಕೈಗೊಂಡ ಮೋದಿ
ಅಸ್ಸಾಂನ ಕಾಜಿರಂಗ ರಾಷ್ಟ್ರೀಯ ಉದ್ಯಾನವನದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಆನೆ ಹಾಗೂ ಜೀಪ್ ಸಫಾರಿ ಕೈಗೊಂಡರು. ಇದು ಯುನೆಸ್ಕೋ ವಿಶ್ವ ಪಾರಂಪರಿಕ ಸ್ಥಾನವಾ ಗಿದ್ದು, ಪ್ರಧಾನಿ ಮೋದಿ ಮೊದಲ ಬಾರಿ ಭೇಟಿ ನೀಡುತ್ತಿದ್ದಾರೆ. ಇದೇ ವೇಳೆ ಸೆಂಟ್ರಲ್ ಖೋರಾ ವಲಯದಲ್ಲಿ ಅವರು ಆನೆ ಸಫಾರಿ ನಡೆಸಿ ಘೇಂಡಾಮೃಗಗಳನ್ನು ವೀಕ್ಷಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.